ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನೆನಪಾಗುತ್ತೇನೆ

By Staff
|
Google Oneindia Kannada News


Ashoka*ಅಶೋಕ

ಬೋರ್ಗರೆಯುವ ಮಳೆಯಿಂದ ರಕ್ಷಿಸಲು ವ್ಯರ್ಥ
ಪ್ರಯತ್ನ ಮಾಡುತ್ತಿದ್ದ ಮರದ ಜಲ್ಲಿನ ಕೊಡೆಯಾ
ಳಗಿನ ಹಾಲುಗಲ್ಲದ ಹುಡುಗನ ಮನದಲ್ಲಿ ಮುಂದಿನ
ಗುರಿಯ ಬಗೆಗೆ ಇನಿತೂ ಯೋಜನೆಯಿಲ್ಲ.


ಮರದ ಬ್ಯಾಟು, ಒರಟು ನೆಲ, ಮೂರು ಗೂಟ
ಬರುವ ಗುಂಡಿನಂತಾ ಮರದ ಚಂಡಿಗೆ
ಹೇಗೆ ಬಾರಿಸಬೇಕು ಎಂದು ಯೋಚನೆಯಿತ್ತು
ಗವಾಸ್ಕರನ ಮೊನಚು, ಕಪಿಲನ ಕನಸು ಇರಲೇ ಇಲ್ಲ.


ಆ ವರುಷ ಅತೀವೃಷ್ಟಿ, ಈ ವರ್ಷ ಅನಾವೃಷ್ಟಿ
ಹೊಸ ಬಟ್ಟೆಗೆ ಕೈ ನೀಡಿ ನಿಂತ ಮುಖದಲ್ಲಿ
ನಿರಾಶೆಯಿತ್ತೆ ವಿನಃ ಅಪ್ಪನ ದುಗುಡ,
ಸಮಸ್ಯೆ ಅರ್ಥವಾಗಿರಲೇ ಇಲ್ಲ


ಬದುಕು ಸುಂದರ ಕನಸು. ದಾರಿ ನನ್ನ
ಸುಂದರ ಕ್ರಾಪಿನಷ್ಟೇ ನೇರ. ಬಯಕೆ
ಎರಡನೆ ಬೆಂಚಿನಲಿ ಕುಳಿತ ಹುಡುಗಿಯಷ್ಟೇ
ಮೋಹಕ. ಅದೆಷ್ಟು ತವಕ ? ಅದೆಷ್ಟು ಸನಿಹ


ಕಲಿತ ಪದಗಳು, ಇರುವ ಅವಕಾಶಗಳು
ನಡುವೆ ಅದೆಷ್ಟು ಅಂತರ? ವಾಸ್ತವವೇಕೆ ಕಹಿ ?
ನಿಜವೇಕೆ ಅಪಥ್ಯ ?ಏಕೀ ಆತ್ಮವಂಚನೆ ?
ಯಾಕೋ ಸಹಿಸಲಾರದ ಸಿಟ್ಟು. ಪ್ರಪಂಚವೇ ಬೇಡ.


ಪ್ರೀತಿಯೇಕೆ ಇಲ್ಲಿ ಹೇರಿಕೆ ಅನಿಸಿದೆ ? ಬದುಕು
ಏಕೆ ಜವಾಬ್ದಾರಿಯ ಭಾರದಿಂದ ಕಂಪಿಸುತ್ತಿದೆ ?
ನನ್ನ ಆಶಯಗಳೇಕೆ ಇನ್ನೊಬ್ಬರೊಂದಿಗೆ ತಾಳೆ
ಹಾಕುತ್ತಿದೆ ? ನಾನು ಯಾರಲ್ಲಿ ಕೇಳಲಿ ?

ಬದುಕು ಮುಗಿಯುತ್ತಾ ಬಂತು... ವಸಂತ
ದಲ್ಲೂ ನಿರಾಶೆಯೇ. ಮುಗಿದೇ ಬಿಡುತ್ತದೆ
ಗುರಿಗಳು ಬದಲಾಗಿ, ಹೊಸ ಗುರಿಯೂ ಹಳತಾಗಿ
ಏನೇನೋ ಆಗಿ ನಾನು ನೆನಪಾಗಿ ಬಿಡುತ್ತೇನೆ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X