• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗೆಪುಷ್ಪದ ಕೊನೆಯ ದಳ-5:

By Staff
|

Petal-6: Alamelu Iyengarಚೈತ್ರೋಲ್ಲಾಸ !
ಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಶೇಷವೇ‘ಚೈತ್ರೋಲ್ಲಾಸ’. 500 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದ ಈ ಕಾರ್ಯಕ್ರಮದ ಹೈಲೈಟ್‌ ‘ಕವಯತ್ರಿಯರ ಹಾಸ್ಯ ಕವಿಗೋಷ್ಠಿ ’. ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಯುಗಾದಿ ಸಂಜೆಗೆ ಹಾಸ್ಯದ ಘಮಲೇರಿಸಿದರು. ಅಲಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯನ್ನು ನಾಗಲಕ್ಷ್ಮಿ ಅವರು ಕವಿತೆ ಓದುವುದರೊಂದಿಗೆ ಉದ್ಘಾಟಿಸಿದರು.

ಚೈತ್ರೋಲ್ಲಾಸ ಸಂಜೆಯ ಐದು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ಓದಿದ್ದೀರಲ್ಲಾ ; ಇದು ಹಾಸ್ಯಪುಷ್ಪದ ಕೊನೆಯ ದಳ- ಅಲಮೇಲು ಅಯ್ಯಂಗಾರ್‌ ಅವರ - SORRY

SORRY

*ಅಲಮೇಲು ಅಯ್ಯಂಗಾರ್‌
ಸರಟೋಗಾ, ಕ್ಯಾಲಿಫೋರ್ನಿಯಾ

sorry.. ಓ.....sorry
ಕೋಪವನೆಲ್ಲವ ಕಾರಿ
ಕೇಳ್ವರನೇಕರು sorry
ಈ ಪದ ಭೃಂಗದ ಬೆನ್ನೇರಿ
ತಿರುಗುವಗೆ ಇಲ್ಲ ಯಾವುದೂ ಕಿರಿಕಿರಿ
ನೆಮ್ಮದಿಯ ಬದುಕಿಗೆ ಇದು ಪರಮೋಪಕಾರಿ




ಪಂಚಮಾತ್ರೆಯ ಎರಡಕ್ಷರದ ಈ ಆಂಗ್ಲಪದ
ನನ್ನ ಜೀವನವನಳೆವ ವಾಮನ ಪಾದ
ಕೋಪದ ಬಂಡೆಗಳನೇ ಉರುಳಿಸುವ
ಮುನಿದ ಮುಖದಲಿ ಮುಗುಳ್ನಗೆಯನರಳಿಸುವ
ರೇಗಿ ಹೋಗಿರುವ ಜನರ ಬಾಯಲ್ಲಿ
‘ಪರವಾಗಿಲ್ಲ ಬಿಡಿ’ ಎಂದೆನಿಸುವ ಈ ಪದದ ಮೋಡಿ
ನನಗಿನ್ನು ಅರ್ಥವಾಗಿಲ್ಲ ಬಿಡಿ





ಮುನಿದಿಹಳೇನು ನಿಮ್ಮ ನಾರಿ?
ನಿಮಗೆ ಕಾರಣವೂ ತಿಳಿಯದ Worry
ಉಳಿದಿಲ್ಲ ಬೇರಾವ ದಾರಿ
ಶರಣು ಹೋಗಿರಿ ಹೇಳಿsorry


Projectಉ late ಆಯ್ತೇ..?
Deadline ಉ miss ಆಯ್ತೇ..?
ತೆಗೆಯಿರಿ ಬತ್ತಳಿಕೆಯಿಂದ ಮಾರಕಾಸ್ತ್ರ
‘ sorry’ ಎಂದೊಡನೆ ಪರಮ ಶತ್ರುವೂ ನಿಶ್ಯಸ್ತ್ರ


ಓ.. ನಿಮ್ಮೊಡನೆ ‘ sorry ಮಹತ್ವ ಬಣ್ಣಿಸುತ
ಗಮನ ಕೊಡಲಿಲ್ಲ ನಾನು ಗಡಿಯಾರದತ್ತ
ಅವಧಿ ಮೀರಿದೆ.. ಕಾಲ ಉರುಳಿದ ಜಾರಿ
ಬೀಳ್ಕೊಡುವೆ ನಾನು ಹೇಳಿ Sorry.


ಕಾವ್ಯ ಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more