ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆದಳ-5: ಸಂಧ್ಯಾ ರವೀಂದ್ರನಾಥ್‌ರ ‘ಗಂಡನ

By Staff
|
Google Oneindia Kannada News

Petal-5: Sandhya Ravindranathಚೈತ್ರೋಲ್ಲಾಸ !
ಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಶೇಷವೇ‘ಚೈತ್ರೋಲ್ಲಾಸ’. 500 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದ ಈ ಕಾರ್ಯಕ್ರಮದ ಹೈಲೈಟ್‌ ‘ಕವಯತ್ರಿಯರ ಹಾಸ್ಯ ಕವಿಗೋಷ್ಠಿ ’. ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಯುಗಾದಿ ಸಂಜೆಗೆ ಹಾಸ್ಯದ ಘಮಲೇರಿಸಿದರು. ಅಲಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯನ್ನು ನಾಗಲಕ್ಷ್ಮಿ ಅವರು ಕವಿತೆ ಓದುವುದರೊಂದಿಗೆ ಉದ್ಘಾಟಿಸಿದರು.

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಸಂಧ್ಯಾ ರವೀಂದ್ರನಾಥ್‌ ಅವರ - ಗಂಡನ Promises

ಗಂಡನ Promises
(ಇದು ಯಾರನ್ನೂ ಕುರಿತು ಬರೆದದ್ದಲ್ಲ !)
ಈ ಗೀತೆಯನ್ನು ಹಿಂದಿ ಚಿತ್ರ ಗೀತೆ ಬೇಕರಾರ್‌ ಕರ್‌ಕೆ ಹಮೇ ಯೂ ನ ಜಾಯಿಯೆ ಧಾಟಿಯಲ್ಲಿ ಹಾಡಬಹುದು.*ಸಂಧ್ಯಾ ರವೀಂದ್ರನಾಥ್‌

ಗಂಡ ನೂರೆಂಟು ಪ್ರಾಮಿಸ್‌ ಮಾಡಿ ಬಿಡುವರು
ನಂಬಿ ಅದನು ನಾನು ತುಂಬ ಮೋಸ ಹೋದೆನು

garage ತುಂಬ ಧೂಳು junkಉ ಸೇರಿತೆ
weeds ಬೆಳೆದು lawn ಹಾಳಾಯಿತೆ
ವಾರಾಂತ್ಯ clean ಮಾಡ್ವೆ ಖಂಡಿತ
promise ಎಂದು ನಗುವರೆನ್ನ ನಗಿಸುತ
ಓಡೋಡಿ ಭಾನುವಾರ ಬೇಗ ಬಂದರು
ಟಿವಿ ನೋಡಿ ಪೇಪರ್‌ ಓದಿ ಕಾಲ ಕಳೆವರು

ಪಾರ್ಟಿಯಾಂದ arrange ಮಾಡ್ಲೆ ಎನ್ನಲು
ನಿನಗೆ ನಾನು help ಮಾಡ್ವೆ ಎನುವರು
vacuum ಮಾಡಿ ಎಂದು ನಾನು ಬೇಡಲು
ಟೆನ್ನಿಸ್‌ ಆಡಿ ಮೈ ಕೈ ನೋವು ಎನುವರು
ರಾಶಿ ರಾಶಿ ಪಾತ್ರೆ ಸಿಂಕ್‌ ತುಂಬ ತುಂಬಲು
ಸೋಫ ಮೇಲೆ ಮಲಗಿ ಸಣ್ಣ ನಿದ್ದೆ ಹೊಡೆವರು!

ಕಾವ್ಯ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X