ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವವೀಣೆ

By Staff
|
Google Oneindia Kannada News


Subhadratanaya Gururaj*ಸುಭದ್ರಾತನಯ-ಗುರುರಾಜ್‌

ಯಾವ ಹಾಡು ಹೇಳಲಿ
ಯಾರ ಕುರಿತು ಬರೆಯಲಿ
ಯಾವ ಭಾವ ವೀಣೆಯಾಂದು
ಮಿಡಿಯುತಿಹುದು ಮನದಲಿ ।। ಪಲ್ಲವಿ ।।

ಯಾವ ಚೆಲುವು ಗೆಲುವಿನಲ್ಲಿ
ಯಾವ ಮನದ ಒಲವಿನಲ್ಲಿ
ಯಾವ ಸ್ವರದ ಕೊರಳಿನಲ್ಲಿ
ಹಾಡುತಿಹುದು ದಿನದಲಿ ।। 1 ।।

ಜಗದ ಬಾಳ ಬಸಿರಿನಲ್ಲಿ
ಯುಗಳ ಬಾಳಿನುಸಿರಿನಲ್ಲಿ
ಯಾವ ಛಾಯೆ ಮಾಯೆಯಾಗಿ
ಕಾಣುತಿಹುದು ನಿಜದಲಿ ।। 2 ।।

ಯಾವ ಆಶೆ-ಪಾಶೆಯಲ್ಲಿ
ಯಾವ ನಿಶೆಯ ಮುಸುಕಿನಲ್ಲಿ
ಯಾವ ಉಷೆಯ ರಾಗವೊಂದು
ತೇಲಿ ತೇಲಿ ಬರುತಲಿ ।। 3 ।।

ಯಾವ ಬಾನ ಬಿಂಬದಲ್ಲಿ
ಯಾವ ಮಂದಹಾಸದಲ್ಲಿ
ಯಾವ ಜೀವ ಕಳೆಯು ನಿಂದು
ಇಣುಕುತಿಹುದು ಕಣ್ಣಲಿ ।। 4 ।।

ಯಾವ ಕಾಲ ಗಳಿಗೆಯಲ್ಲಿ
ಯಾವ ಋತುವಿನಂಚಿನಲ್ಲಿ
ಯಾವ ಮಧುರ ಸ್ವಪ್ನವೊಂದು
ಕಾಣಬಹುದೋ ‘‘ನಾಳಿನಲಿ’’ ।। 5 ।।

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X