ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚಾಷ್ಟಕಮ್‌

By Staff
|
Google Oneindia Kannada News



*ಸಂಗ್ರಹ : ಶಶಿರೇಖಾ ವಿ. ಪರಾಂಜಪೆ, ಮೈಸೂರುBribe
ಅಸ್ಯ ಶ್ರೀ ಲಂಚಾಷ್ಟಕ ಸ್ತೋತ್ರ ಮಂತ್ರಸ್ಯ ಲಕ್ಷ್ಮೀ ದಾಸ ಋಷಿಃ ಭ್ರಷ್ಟರಾಜಕಾರಣೀ ದೇವತಾ ಪರಿಕಲ್ಪಿತ ಛಂದಃ ಗುಳುಂ ಗುಳುಂ ಬೀಜಮ್‌ ಬ್ರೀಫ್‌ಕೇಸ್‌ ಇತಿ ಕೀಲಕಮ್‌ ಸಕಲ ಸುಖ ಸಿದ್ಧ್ಯರ್ಥೇ ಜಪೇ ವಿನಿಯೋಗಃ ।।

ಭ್ರಷ್ಟಪುಢಾರಿ ಪೋಷಿತ ಲಂಚಮ್‌
ಕೋಮಲ ಕರಗಳ ಶೋಭಿತ ಲಂಚಮ್‌ ।
ಸಕಲರ ದುಃಖ ನಿವಾರಕ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ಮಂತ್ರಿ ಕುತಂತ್ರಿ ಸುಪೂಜಿತ ಲಂಚಮ್‌
ದಾಹ ದಹನ ಕರುಣಾಕರ ಲಂಚಮ್‌ ।
ಕಾರ್ಯಸಿದ್ಧಿಯ ಮಾಡುವ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ಕಟ್ಟಿದ ಕಡತವ ಬಿಚ್ಚುವ ಲಂಚಮ್‌
ಮೇಜಿನ ಕೆಳಗಡೆ ಕಾಣುವ ಲಂಚಮ್‌ ।
ಕೈಬಿಸಿಯೆಂಬ ಕ್ಯಾಟಲಿಸ್ಟ್‌ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ಮೋಹಿನಿ ಮೋಹಕ ಮಾದಕ ಲಂಚಮ್‌
ಮಡದಿಯ ಕೋಪ ನಿವಾರಕ ಲಂಚಮ್‌
ಮಂತ್ರಿಯ ಮನವನು ಗೆಲ್ಲುವ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ರಸ್ತೆಯ ಕಾಂಕ್ರೀಟ್‌ ನುಂಗುವ ಲಂಚಮ್‌
ಆಸ್ತಿ ಹರಾಜು ತಡೆಯುವ ಲಂಚಮ್‌ ।
ವಸ್ತು ನಿಷ್ಟರಿಗೆ ಕಂಟಕ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ಬೋಫೋರ್ಸ್‌ ತೋಪಿನ ಬುಲ್ಲೆಟ್‌ ಲಂಚಮ್‌।
ಹರ್ಷದ್‌ ಮೆಹ್ತಾ ಸೂಟ್‌ಕೇಸ್‌ ಲಂಚಮ್‌
ಜಾಖಂಡ್‌ ಮುಕ್ತಿ ಮೋರ್ಚಾ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ಸರ್ವ ಸುಗಂಧಿ ಸುಲೇಪಿತ ಲಂಚಮ್‌
ಬುದ್ಧಿ ವಿನಾಶನ ಕಾರಣ ಲಂಚಮ್‌ ।
ಸಿದ್ಧ ಸುರಾಪ್ರಿಯ ವಂದಿತ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌।।

ಯುಗ ಬದಲಾದರೂ ಬಗ್ಗದ ಲಂಚಮ್‌
ಜಗ ಬದಲಾದರೂ ಜಗ್ಗದ ಲಂಚಮ್‌ ।
ಯುಗ ಜಗವನ್ನೇ ನುಂಗಿದ ಲಂಚಮ್‌
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್‌ ।।

ಯಃ ಪಾಲಿಸೇ ಲಂಚಾಷ್ಟಕಮಿದಂ ನಿತ್ಯಂ ಸರ್ವ ಬಿಲ್ಲುಂ ಪಾಸಾಯಣಂ ।
ಯಃ ಲಾಲಿಸೇ ಲಂಚಾಷ್ಟಕಮಿದಂ ಸತ್ಯಂ ಸರ್ವ ಗುಲ್ಲುಂ ನಿವಾರಣಂ ।।
ಇತಿ ಶ್ರೀ ಲಂಚಾಷ್ಟಕ ಸ್ತೋತ್ರಂ ಸಂಪೂರ್ಣಂ

ಇನ್ನೆರಡು ತಮಾಷೆ ಪದ್ಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X