• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಡವ ಮುಟ್ಟಿಸಿ ಪರದ ಕಡೆಗೆ ಪಯಣಿಸಿದೆ- ನಿನ್ನ ಚೇತನಕೆ ಸಿಗಲಿ ಶಾಂತಿ!

By Staff
|

ಬುದ್ಧಿಮಾತು

*ಜ್ಯೋತಿ ಶೇಖರ್‌, ಮಿಲ್ಪಿಟಸ್‌, ಕ್ಯಾಲಿಫೋರ್ನಿಯಾJyothi Shekhar, Milpitas, California(ಪುರಂದರದಾಸರ ಮಗಳಿಗೆ ಅಮೇರಿಕದಲ್ಲಿರುವ ವರ ದೊರೆತಿದ್ದರೆ, ಅವರು ತಮ್ಮ ‘ಬುದ್ಧಿಮಾತು’ ಎಂಬ ರಚನೆಯನ್ನು ಹೀಗೆ ತಿದ್ದುತ್ತಿದ್ದರೆಂದು ನನ್ನ ಊಹೆ. )

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ,

ಮನ ಗಟ್ಟಿ ಮಾಡಿ ಅಮೇರಿಕದಲ್ಲಿ ಬಾಳಬೇಕಮ್ಮ...ಮಗಳೇ...

ಅತ್ತೆ ಮಾವರ ಅಂಜಿಕೆ ನಿನಗೆ ಅಲ್ಲಿ ಇಲ್ಲಮ್ಮ,

ಕರೆಯದೆ ಬರುವ ನೆಂಟರಿಷ್ಟರ ಕಾಟ ಇಲ್ಲಮ್ಮ,

ಕದ್ದು ಕೇಳುವ ನೆರೆಹೊರೆಯವರ ತಂಟೆ ಇಲ್ಲಮ್ಮ,

ಆದರೆ ಬೋರು ಎಂದರೆ ಕೇರು ಮಾಡುವರಲ್ಲಿ ಇಲ್ಲಮ್ಮ...

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ,

ಮನ ಗಟ್ಟಿ ಮಾಡಿ ಅಮೇರಿಕದಲ್ಲಿ ಬಾಳಬೇಕಮ್ಮ...

ಹೊತ್ತು ಹೊತ್ತಿಗೆ ಅಡಿಗೆ ತಿಂಡಿ ಗೋಜು ಇಲ್ಲಮ್ಮ,

ವಾರದಡಿಗೆ ಮಾಡಿಬಿಟ್ಟರೆ ಅಲ್ಲಿ ಸಾಕಮ್ಮ,

ಮನೆಯ ತುಂಬ ಟೀವಿ ಫ್ರಿಡ್ಜು ಡಿವಿಡಿ ಇದೆಯಮ್ಮ,

ಟಾಯಿಲೆಟ್ಟು ಕ್ಲೀನಿಂಗೊಂದು ಕಲಿತರೆ ಸಾಕಮ್ಮ...

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ,

ಮನ ಗಟ್ಟಿ ಮಾಡಿ ಅಮೇರಿಕದಲ್ಲಿ ಬಾಳಬೇಕಮ್ಮ...

ಡಿಸ್ನಿಲ್ಯಾಂಡು ನಯಾಗರ ನೋಡಬಹುದಮ್ಮ,

ಮಾಲಿನಲ್ಲಿ ವಿಂಡೊ ಶಾಪಿಂಗ್‌ ಮಾಡಬಹುದಮ್ಮ,

ಕಾರ ಮುಂದೆ ನಿಂತು ಫೋಟೊ ತೆಗೆಸಿ ಕಳಿಸಮ್ಮ,

ಆದರೆ ಡ್ರೈವಿಂಗ್‌ ಮಾತ್ರ ಗಂಡನ ಬಳಿ ಕಲಿಯಬೇಡಮ್ಮ...

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ,

ಮನ ಗಟ್ಟಿ ಮಾಡಿ ಅಮೇರಿಕದಲ್ಲಿ ಬಾಳಬೇಕಮ್ಮ...

ಅಪ್ಪ ಅಮ್ಮನ ನೆನಪು ಬಂದರೆ ಈ-ಮೇಲ್‌ ಕಳಿಸಮ್ಮ,

ಬಾರಿ ಬಾರಿ ತವರಿಗೆ ಫೋನು ದುಬಾರಿಯಮ್ಮ,

ಪರರ ರೀತಿ ನೀತಿಯನ್ನು ಅರಿತು ಬಾಳಮ್ಮ,

ವರ ಪುರಂದರವಿಠಲ ಸ್ಮರಣೆಯನ್ನು ಮರೆಯಬೇಡಮ್ಮ...

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ,

ಮನ ಗಟ್ಟಿ ಮಾಡಿ ಅಮೇರಿಕದಲ್ಲಿ ಬಾಳಬೇಕಮ್ಮ...ಮಗಳೇ...

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more