• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರು ದಳದ ನಗೆಹೂವು : ಓಸಾಮನ ದೋಸೆ ಪ್ರಕರಣ!

By Staff
|

Petal2 : Mangala kumarಚೈತ್ರೋಲ್ಲಾಸ !
ಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಶೇಷವೇ‘ಚೈತ್ರೋಲ್ಲಾಸ’. 500 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದ ಈ ಕಾರ್ಯಕ್ರಮದ ಹೈಲೈಟ್‌ ‘ಕವಯತ್ರಿಯರ ಹಾಸ್ಯ ಕವಿಗೋಷ್ಠಿ ’. ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಯುಗಾದಿ ಸಂಜೆಗೆ ಹಾಸ್ಯದ ಘಮಲೇರಿಸಿದರು. ಅಲಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯನ್ನು ನಾಗಲಕ್ಷ್ಮಿ ಅವರು ಕವಿತೆ ಓದುವುದರೊಂದಿಗೆ ಉದ್ಘಾಟಿಸಿದರು.

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಮಂಗಳ ಕುಮಾರ್‌ ಅವರು ರಚನೆ -‘ಓಸಾಮನ ದೋಸೆ ಪ್ರಕರಣ’

ಓಸಾಮನ ದೋಸೆ ಪ್ರಕರಣ*ಮಂಗಳಾ ಕುಮಾರ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

ನಮ್ಮೂರಲ್ಲೇ ಇದಾನಂತೆ ಗಡ್ಡ ಮೀಸೆ ಹೆರಕೊಂಡು
ದಾಸಪ್ರಕಾಶ್‌ಗೂ ಹೋಗಿದ್ನಂತೆ ಬೇರೆ ವೇಷ ಹಾಕ್ಕೊಂಡು
ಬುರ್ಖಾ ಹಾಕ್ಕೊಂಡು ಕೂತಿದ್ನಂತೆ ಹೆಂಗ್ಸು ಅಂತ ಹೇಳ್ಕೊಂಡು
ಚಪ್ಪರಿಸ್ಕೊಂಡು ತಿಂತಿದ್ನಂತೆ ಮಸಾಲ್ದೋಸೆ ಮುರ್ಕೊಂಡು


‘ಚಟ್ನಿ ಕೊಡೋದ್‌ ಎರಡೇ ಸರ್ತಿ’ ಅಂತ ವೈಟರ್‌ ಹೇಳಿದ್ದಕ್ಕೆ
ಪರ್ಸೊಳಗಿಂದ ಗನ್ನನ್‌ ಎತ್ತಿ ಹೊರಟಿದ್ನಂತೆ ಕೊಲ್ಲಕ್ಕೆ
ಟಿಯರ್‌ ಗ್ಯಾಸ್‌ ಉರಿಸಿ, ಜನರನ್‌ ಹೆದರ್ಸಿ ಓಡ್‌ ಹೋದ್ನಂತೆ ಕಾರಲ್ಲಿ
ಕಟ್ಟಿಸ್‌ ಕೊಂಡಿದ್‌ ಪೂರಿ ಸಾಗು ಬಿಟ್‌ ಹೋದ್ನಂತೆ ಬೀದೀಲಿ


ಮುಂದೆ ಬಂದ್ರೆ ಹಾಯ್ತಾನೆ, ಹಿಂದೆ ಬಂದ್ರೆ ಒದೀತಾನೆ
ಸ್ವಲ್ಪೇನಾದ್ರೂ ಏಮಾರಿದ್ರೆ ಪೂರ್ತಿ ಪ್ರಾಣ ಹಿಂಡ್ತಾನೆ
ಮಸಾಲ್ದೋಸೆ ರುಚಿ ಹತ್ತಿ ಮತ್ತೆ ಬರ್ತಾನ್‌ ನೋಡ್ತಿರಿ
ಕೆಣಕಿ ಕೆದಕಿ ಮಾಡೋ ಬದ್ಲು ನಿಂ ಹುಷಾರೀಲ್‌ ನೀವಿರಿ


ಕಾವ್ಯ ಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more