ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಂದರ್ಯದ ಸಾಗರ ಇದುವೇ ಈ ನಯಾಗರ

By Staff
|
Google Oneindia Kannada News

*ಫಣಿಶ್ರೀ, ಸಿಲ್ವರ್‌ ಸ್ಪ್ರಿಂಗ್‌, ಮೇರಿಲ್ಯಾಂಡ್‌

Niagara fallsನಯನಗಳಿಗೆ ಮನೋಹರ
ಇದುವೆ ಈ ನಯಾಗರ

ಜಗತ್ತಿನ ವಿಸ್ಮಯಗಳಲಿ ಇದು ಒಂದು
ಇಲ್ಲವಿದರ ಹೋಲಿಕೆಗೆ ಮತ್ತೊಂದು

ಬಣ್ಣ ಬಣ್ಣದ ದೀಪಗಳಲಿ ಇದರ ನೋಟ
ನೀಡುವುದು ಕಂಗಳಿಗೆ ರಸದೂಟ

ಹಾಲ್ನೊರೆಯ ಮೀರಿಪುದಿದರ ಬಿಳುಪು
ಮೂಡಿಸುತಲಲ್ಲಲ್ಲಿ ಕಾಮನಬಿಲ್ಲಿನ ಚಾಪು

ನಿಂತಾಗ ಇದರಡಿಯಲಿ ಅರಿವಾಗುವುದಿದರ ಶಕ್ತಿ
ಬಳಸುತಲಿದನು ತಯಾರಿಸುವರು ವಿದ್ಯುಚ್ಛಕ್ತಿ

ಸುರಿವಾಗ ಭೋರ್ಗರೆವುದೀ ಜಲಪಾತದ ಶಬ್ದ
ಇದರ ರಮಣೀಯ ದೃಶ್ಯವಾಗಿಸುವುದು ಎಂತಹವರನು ಮಂತ್ರಮುಗ್ಧ

ಇದರ ಮೂರು ಮುಖ್ಯ ಭಾಗಗಳು
ಹಾರ್ಸ್‌ಶೂ, ಅಮೆರಿಕನ್‌ ಮತ್ತು ಬ್ರೆಡಲ್‌ವೇಲ್‌ ಎಂಬ ಧಾರೆಗಳು

ಮುಗಿಲೆತ್ತರಕೆ ಚಿಮ್ಮುವ ಮಂಜಿನ ಹನಿಗಳ ನೋಟ ಚೆಂದ
ವರ್ಣಿಸಿದಷ್ಟು ಸಾಲದು ಇದರ ಸೊಬಗಿನ ಅಂದ

ಸೌಂದರ್ಯದ ಸಾಗರ
ಜಲರಾಶಿಯ ಆಗರ
ಇದುವೇ ಈ ನಯಾಗರ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X