• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂದರ್ಶನ: ಮುನಿಸುತರವೇ ಮುಗುದೆ ಜನಪ್ರಿಯತೆ ಬಗ್ಗೆ ಚೊಕ್ಕಾಡಿ

By ಗೌತಮಿ ಮಾನಸ
|

ನಾಡಿನ ಪ್ರಸಿದ್ಧ ಕವಿ, ವಿಮರ್ಶಕ, ನಾಟಕಕಾರ ಸುಬ್ರಾಯ ಚೊಕ್ಕಾಡಿ ಅವರಿಂದು 76 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಾಡು ಕಂಡ ಅತ್ಯಂತ ಸರಳ ಜೀವಿ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿರುವ ಇವರ ಸಂದರ್ಶನ ನಿಮಗಾಗಿ....

*ಚೊಕ್ಕಾಡಿಯನ್ನು ಕನ್ನಡ ಸಾಹಿತ್ಯದ ನಕ್ಷೆಗೆ ಸೇರಿಸಿದ್ದೀರಿ. ಊರು ಬಿಡಬೇಕು ಅನ್ನಿಸಲಿಲ್ಲವೇ?

ಹಾಂ! ನೀವು ಬೆಂಗಳೂರಿನಲ್ಲಿ ಬಂದು ನೆಲೆಸಿ ಎಂದು ತುಂಬಾ ಜನ ಹೇಳಿದ್ರು. ನನ್ನ ಊರಿನಲ್ಲಿ ಇರುವುದು ಚಂದ ಅಂತ ಇಲ್ಲಿದ್ದೇನೆ. ಒಬ್ಬ ಕವಿಗೆ ಪ್ರಶಾಂತವಾದ ವಾತಾವರಣ ಬೇಕು. ಅದು ಇಲ್ಲಿದೆ. ಆದ್ದರಿಂದ ನಾನು ಚೊಕ್ಕಾಢಿಯಲ್ಲೇ ನೆಲೆಸಿರುತ್ತೇನೆ. ಸಿಟಿ ಅನ್ನುವುದು ತಂಬಾ ರಾಜಕಾರಣದಿಂದ ಕೆಟ್ಟದಾಗಿದೆ. ಸಾಹಿತ್ಯ ಕ್ಷೇತ್ರ ಅಸಹ್ಯವಾಗಿರಬಾರದು.

ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ಅಲ್ಲಿ ಹೋದಮೇಲೆ ಏನು ಅಂತ ಗೊತ್ತಾಗುತ್ತದೆ.ಅದನ್ನೆಲ್ಲ ತಪ್ಪಿಸಿಕೊಂಡು ನಾನು ಇಲ್ಲಿ ವಾಸಿಸುತ್ತಿದ್ದೇನೆ. ಸಾಹಿತ್ಯ ನನಗೆ ಪ್ರೀಯವಾದ ಸಂಗತಿ . ಪಂಚಾಯತ್ ನವರ ಹಾಗೆ ನಾನು ಪಾಲ, ಸೇತುವೆ, ಕೊಳವೆಬಾಯಿ ಏನೂ ಕೊಡಲಿಲ್ಲ. ಆದರೆ ಊರಿಗೆ ಒಂದು ಹೆಸರು ಕೊಟ್ಟಿದ್ದೇನೆ. ಚೊಕ್ಕಾಡಿ ಅಂದರೆ ನನ್ನ ಹೆಸರು ಹೇಳುತ್ತಾರೆ. ಸುಳ್ಯ ಅಂದರೆ ಚೊಕ್ಕಾಡಿ ಎಂದು ಹೇಳುತ್ತಾರೆ.

*ನಿಮ್ಮ ಎಲ್ಲಾ ಕವನಗಳಿಗಿಂತ "ಮುನಿಸುತರವೇ ಮುಗುದೆ" ಹೆಚ್ಚು ಪ್ರಸಿದ್ಧಿ. ಯಾಕೆ? ವಿಶೇಷ ಕಾರಣಗಳಿದೆಯಾ?

ಹೌದು. ಬೊಂಬಾಯಿಗೆ ರೈಲಲ್ಲಿ ಹೋಗ್ತಾ ಇರಬೇಕಾದರೆ ಒಮ್ಮೆ ಆ ಹಾಡು ಹಾಡ್ತಾ ಇದ್ದರು. ಯಾಕೆ ಅಂತ ಗೊತ್ತಿಲ್ಲ. ಅವರಿಗೆ ನನ್ನ ಪರಿಚಯ ಇಲ್ಲ. ನನಗೆ ಅವರ ಪರಿಚಯ ಇಲ್ಲ. ಮತ್ತೆ ಅವನಿಗೆ ಹೇಳಿದೆ ಈ ಹಾಡು ಬರೆದ ಪುಣ್ಯಾತ್ಮ ನಾನೇ ಎಂದು.

ಒಂದು ದಿನ ನನ್ನ ಗೆಳೆಯ ಸಿ.ಅಶ್ವತ್ ಅವರು ಫೋನ್ ಮಾಡಿ ಒಂದು Tune ಕೊಡ್ತೀನಿ ಹಾಡು ಬರಿಬೋದಾ ಅಂತ ಕೇಳಿದರು. ಅದು ಮದ್ಯಮಾವತಿ ರಾಗ ಆಗಿತ್ತು. ಆದ್ದರಿಂದ "ಮುನಿಸು ತರವೇ ಮುಗುದೆ ಹಿತವಾಗಿ ನಗಲು ಬಾರದೆ" ಅಂತ ಬರ್ದೆ.

ಈ ಹಾಡಿನ ಮೂಲ ಮನೋಧರ್ಮ ಅಂದರೆ ಸಮಾಜಾಯಿಶಿ ಮಾಡುವಂತದ್ದು. ಈ ಸಮಾಜಾಯಿಶಿ ಬರಲು ಕಾರಣ ಹೊಸದಾಗಿ ಮದುವೆಯಾಗಿದ್ದಾರೆ. ಯಾವುದೋ ಕಾರಣಕ್ಕೆ ಅಸಮಾಧಾನವಾಗಿದೆ. ಅವಳನ್ನು ಸಮಾಧಾನ ಮಾಡಲು ಈ ಪದ್ಯ. ಈ ಹಾಡು ಯಾಕೆ ಪ್ರಸಿದ್ಧಿ ಅಂದರೆ ಇಡೀ ಪದ್ಯ ನಿಂತಿರುವುದು 'ವಾಗರ್ಥ' ಎನ್ನುವ ಒಂದು ಶಬ್ದದಲ್ಲಿ ಇದು ನನ್ನ ಪದ ಅಲ್ಲ ಕಾಳಿದಾಸನ ಪದ.

ಅಲ್ಲಿ ಶಿವ ಪಾರ್ವತಿಯರ ಕುರಿತು ಈ ಪದ ಬಳಸಿದ್ದಾನೆ. ವಾಕ್ ಅಂದರೆ ಮಾತು ಅರ್ಥ ಅಂದರೆ ವಿಷಯ. ಇವೆರಡು ಒಂದುಗೂಡಿದಾಗ ಬಹಳ ಅರ್ಥಪೂರ್ಣವಾಗಿರುತ್ತದೆ. ಹೀಗೆ ಗಂಡ-ಹೆಂಡತಿ ಒಂದುಗೂಡಬೇಕು. ಸುಮಾರು 30 ವರ್ಷ ಆಯ್ತು ಇದನ್ನು ಬರೆದು . ಇದು ನನ್ನ ಸಲ್ಲಾಪ ಕ್ಯಾಸೆಟ್ ನಲ್ಲಿದೆ.

* ಪ್ರಶಸ್ತಿಗಳನ್ನು ಮರಳಿಸುವ ಪ್ರಕ್ರಿಯೆ ಒಂದು ಚಳವಳಿಯಾಗಿ ಮಾರ್ಪಟ್ಟಿರುವ ಸಂದರ್ಭದಲ್ಲಿ ನಿಮಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದನ್ನು ಹೇಗೆ ನೋಡುವುದು?

ಪ್ರಶಸ್ತಿ ಎನ್ನುವುದನ್ನು ಕೊಡುವುದು ವ್ಯಕ್ತಿಗೆ ಅಲ್ಲ. ಅವನು ಎಷ್ಟೋ ವರ್ಷಗಳಿಂದ ಮಾಡಿದ ಕೆಲಸಕ್ಕೆ. ಅದನ್ನು ನಾವು ಯಾವುದೋ ಒಂದು ಕಾರಣಕ್ಕಾಗಿ ವಾಪಸ್ ಕೊಡಬೇಕಾದ ಅಗತ್ಯ ಇಲ್ಲ. ಎರಡನೆಯದಾಗಿ ಆಕಾಡೆಮಿ ಅನ್ನುವಂತದ್ದು ಸಾಹಿತಿಗಳ ನೇತೃತ್ವದಲ್ಲಿ ನಡೆಯುವ ಸಂಸ್ಥೆ. ಅದು ಸರ್ಕಾರದ್ದೇ ಅಲ್ಲ ಸರ್ಕಾರದ ನೆರವು ಇರಬಹುದು. ಅದು ಸಾಹಿತಿಗಳೇ ಕೊಡುವ ಪ್ರಶಸ್ತಿ, ಅದನ್ನು ವಾಪಸ್ಸು ಮಾಡುವ ಅಗತ್ಯ ಕಾಣಿಸುವುದಿಲ್ಲ. ಈ ವಿಚಾರ ಸರಿಯಲ್ಲ ಎಂದು ನಾನು ಹೇಳುವುದು.

ಶಿವರಾಮ ಕಾರಂತರು ಪದ್ಮಭೂಷಣ ಪ್ರಶಸ್ತಿಯನ್ನು ವಾಪಸ್ಸು ಮಾಡಿದ್ರು. ಯಾಕೆ ಅಂದ್ರೆ ಅದು ಕೇಂದ್ರ ಸರ್ಕಾರ ಕೊಡುವಂತಹ ಪ್ರಶಸ್ತಿ. ಕೇಂದ್ರ ಸರ್ಕಾರ ತುರ್ತುಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ವಿರೋಧಿಸಿ ವಾಪಸ್ಸು ಮಾಡಿದ್ದು. ಇದು ಒಂದು ಖಚಿತವಾದ ದೃಷ್ಟಿಕೋನದಿಂದ. ನಾನಂತು ಪ್ರಶಸ್ತಿ ವಾಪಸಾತಿ ಬಗ್ಗೆ ಪರವಾಗಿಲ್ಲ. ವಿರೋಧಾಂತ ಅಲ್ಲ, ಕೊಡುವವರಿಗೆ ಅವರ ಮನೋಧರ್ಮ ಅದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oneindia Kannada Special : Interview with Kannada poet Subbaraya chokkadi on his 76th birthday today(June 29). Subbaraya Chokkadi who stays in Dakshina Kananda district Sullia taluk small hamlet Chokkadi. He has penned popular songs like 'Munisu tarave...', Hogu Maleye Hogu...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more