ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.25ರಂದು ಸಂಗೀತ ಮಾಂತ್ರಿಕರ 'ಭ್ರಮೆ' ಅನಾವರಣ

By Prasad
|
Google Oneindia Kannada News

ದಶಕಗಳ ಹಿಂದೆ ಕಟ್ಟಿಗೆಯ ಸ್ಟ್ಯಾಂಡ್ ಮೇಲೆ ವಿರಾಜಮಾನವಾಗಿ ಕುಳಿತಿರುತ್ತಿದ್ದ 'ಧ್ವನಿ ಪೆಟ್ಟಿಗೆ' ಅರ್ಥಾತ್ ರೇಡಿಯೋದಿಂದ ಸುಮಧುರವಾದ ಕನ್ನಡ ಅಥವಾ ಹಿಂದಿ ಗೀತೆ ಬರುತ್ತಿದ್ದರೆ ಕೈಯಿಟ್ಟ ಕೆಲಸವನ್ನು ಬಿಟ್ಟು ಕಟ್ಟಿಗೆಯ ಮೇಲೆ ಕುಳಿತ ರೇಡಿಯೋ ಕಿವಿಗಂಟಿಕೊಳ್ಳುತ್ತಿತ್ತು. ಅಂದಿನ ರೇಡಿಯೋ ಇಂದಿಲ್ಲ, ಆದರೆ, ಕೇಳುಗರ ಸಂಗೀತದ ಪ್ರೇಮ ಎಳ್ಳಷ್ಟೂ ಬದಲಾಗಿಲ್ಲ. ಅದು, ಸಂಗೀತದ ತಾಕತ್ತು.

ಚಲನಚಿತ್ರ ಸಂಗೀತವಿರಲಿ, ಭಜನೆಯಿರಲಿ, ಜಾನಪದವಿರಲಿ, ಶಾಸ್ತ್ರೀಯ ಗಾಯನವಿರಲಿ, ಕವ್ವಾಯಿರಲಿ, ಭಾವಗೀತೆಯಿರಲಿ, ಶಾಯರಿಗಳಿರಲಿ, ಪಾಶ್ಚಿಮಾತ್ಯ ಸಂಗೀತವಿರಲಿ... ಸುಶ್ರಾವ್ಯವಾಗಿ ಹಾಡೊಂದು ಕೇಳಿಬರುತ್ತಿದ್ದರೆ ಮನಸು ಹಕ್ಕಿಯಾಗುತ್ತದೆ, ಅರಿವಿಲ್ಲದೆ ಗುನುಗಲು ಪ್ರಾರಂಭಿಸುತ್ತದೆ, ಧ್ಯಾನಸ್ಥರನ್ನಾಗಿ ಮಾಡುತ್ತದೆ, ಚುಕ್ಕೂಬಡಿದು ಲಾಲಿಸುತ್ತದೆ, ಪರಿಶುದ್ಧ ಮನಸ್ಸಿನಿಂದ ಆಸ್ವಾದಿಸಿದರೆ ಮನಸ್ಸಿಗೆ ಮಾತ್ರವಲ್ಲ ಆತ್ಮಕ್ಕೂ ತಟ್ಟುತ್ತದೆ.

ಸಂಗೀತವಿಂದು ನಾನಾ ಸ್ವರೂಪದಲ್ಲಿ ಲಭ್ಯವಿದೆ. ಕ್ಯಾಸೆಟ್ಟುಗಳು ಮಕಾಡೆ ಮಲಗಿದ್ದರೆ, ಮೊಬೈಲಿನ ಮೆಮೊರಿ ಕಾರ್ಡಿನಲ್ಲಿ ಸಾವಿರಾರು ಹಾಡುಗಳನ್ನು ಹುದುಗಿಸಿಡಲು ಸಾಧ್ಯವಿದೆ. ಪ್ರತಿದಿನವೂ ಪ್ರಾಜೆಕ್ಟು, ಟಾರ್ಗೆಟ್ಟು, ಮಣ್ಣುಮಸಿ ಅಂತೆಲ್ಲ ಚಿತ್ರಾನ್ನವಾಗಿರುವ ತಲೆ ಸ್ವಲ್ಪವಾದರೂ ಹಗುರವಾಗಲು ಸಂಗೀತ ಕೇಳಬೇಕಿದೆ. ವಾಸ್ತವ ಲೋಕದಿಂದ ಎಳೆದುಕೊಂಡು ಭ್ರಮಾಲೋಕದಲ್ಲಿ ತೇಲಾಡಿಸುವ ಮಾಂತ್ರಿಕತೆ ಸಂಗೀತದಲ್ಲಿದೆ.

Bhrame - Musical illusionists launching in Bangalore

'ಭ್ರಮೆ' ಅಂದರೆ ತಿರುಗಾಟ, 'ಭ್ರಮೆ' ಅಂದರೆ ಭ್ರಾಂತಿ, 'ಭ್ರಮೆ'ಯೇ ವಾಸ್ತವ ಅನ್ನುತ್ತ ಸಂಗೀತ ಪ್ರೇಮಿಗಳನ್ನು 'ಭ್ರಾಮಾಲೋಕ'ದಲ್ಲಿ ತೇಲಾಡಿಸಲು ಬರುತ್ತಿದ್ದಾರೆ 'ಭ್ರಮೆ' ಎಂಬ ತಂಡ ಕಟ್ಟಿಕೊಂಡಿರುವ ಪ್ರತಿಭಾವಂತ ಯುವ ಸಂಗೀತ ಮಾಂತ್ರಿಕರು. ಅತ್ಯುತ್ತಮ ಸಂಗೀತದ ಬ್ಲೆಂಡ್ ನೊಂದಿಗೆ ಹೊಸ ಟ್ರೆಂಡ್ ಸೃಷ್ಟಿ ಮಾಡಲು ಬರುತ್ತಿದ್ದಾರೆ ಸರಸ್ವತಿ ಆರಾಧಕರಾದ ವಿಕಾಸ್ ವಸಿಷ್ಠ, ಸ್ಪರ್ಶ ಆರ್.ಕೆ., ವಿಶ್ವಾಸ್ ವಸಿಷ್ಠ, ಅಲಕಾ ಸುಬ್ರಮಣ್ಯ, ಸಂದೀಪ್ ರವಿಕುಮಾರ್.

ಸಂಗೀತ ಪ್ರೇಮಿಗಳಿಗೆ ಹೊಸದೇನನ್ನಾದರೂ ಕೊಡಬೇಕಂಬ ತುಡಿತವಿರುವ, ಸ್ಫೂರ್ತಿಯ ಚಿಲುಮೆಯಂತಿರುವ, ಸಂಗೀತವನ್ನೇ ಜೀವನನ್ನಾಗಿಸಿಕೊಂಡಿರುವ, ಒಂದೇ ವೇದಿಕೆಯಲ್ಲಿ ಶಾಸ್ತ್ರೀಯ, ಜಾನಪದ, ಸುಗಮ, ಪಾಶ್ಚಿಮಾತ್ಯ, ಫ್ಯೂಷನ್, ಗಝಲ್, ಕವ್ವಾಲಿ, ಚಲನಚಿತ್ರ ಸಂಗೀತವನ್ನು ನೀಡಲಿದೆ ಈ ಐದು ಸಂಗೀತ ಮಾಂತ್ರಿಕರು ಕಟ್ಟಿಕೊಂಡಿರುವ ತಂಡ 'ಭ್ರಮೆ', ಅಕ್ಟೋಬರ್ 25ರಂದು ಶನಿವಾರ, ಬೆಂಗಳೂರಿನ ಜಯನಗರದಲ್ಲಿರುವ ಜೆಎಸ್ಎಸ್ ಆಡಿಟೋರಿಯಂನಲ್ಲಿ ಸಂಜೆ 6.30ಕ್ಕೆ ವಿಧ್ಯುಕ್ತವಾಗಿ ಜೀವತಳೆಯಲಿದೆ.

ಸಂಗೀತದಲ್ಲಿ ಹೃದಯವಿದೆ, ಮಿದುಳಿದೆ, ಧರ್ಮವಿದೆ, ಜ್ಞಾನವಿದೆ, ಆದ್ಯಾತ್ಮವಿದೆ, ಕುಲವಿದೆ, ಗೋತ್ರವಿದೆ, ಪ್ರೇಮವಿದೆ, ರೋಗ ಗುಣಪಡಿಸುವ ಮದ್ದಿಗೆ, ಪ್ರಕೃತಿಯಿದೆ, ಸೊಬಗಿದೆ, ಮಾಧುರ್ಯವಿದೆ, ಲಾಲಿತ್ಯವಿದೆ, ಸಂಬಂಧವಿದೆ, ಮನವೀಯತೆಯಿದೆ ಎಂದು ನೀವು ನಂಬಿದ್ದರೆ, ಜೀವನದ ಜಂಝಡಗಳನ್ನು ಮರೆಸುವ ಸುಲಲಿತವಾದ ಸಂಗೀತ ಕೇಳುವ ಉಮೇದಿಯಿದ್ದರೆ, ಈ ಯುವ ಸಂಗೀತಗಾರರಿಗೆ ಬೆನ್ನುತಟ್ಟುವ ಆಕಾಂಕ್ಷೆಯಿದ್ದರೆ ಅಂದು ಸಂಜೆ ಬನ್ನಿ.

ಭ್ರಮೆ ಟೀಸರ್ ನೋಡಿ ಆನಂದಿಸಿ

English summary
Bhrame is a team of talented musical illusionists is being launched on 25th October at JSS auditorium in Jayanagar, Bangalore. Bhrame comprises of Vikas Vasisth (vocalist), Sparsha (vocalist), Vishwas Vasistha (vocalist), Alaka Subramanya (vocalist) and Sandeep Ravikumar (tabla artist).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X