ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕ ಭೈರವಮೂರ್ತಿಗೆ ಅಭಿನಂದನೆ

By Prasad
|
Google Oneindia Kannada News

Congratulatory volume on K Bhairava Murthy
ಪ್ರೊ| ಕೆ. ಭೈರವಮೂರ್ತಿಗಳಿಗೆ ಅರವತ್ತು ವರ್ಷ ತುಂಬಿದ ಸವಿನೆನಪಿನಲ್ಲಿ ಸಮರ್ಪಿಸುತ್ತಿರುವ ಎರಡನೆಯ ಅಭಿನಂದನಾ ಗ್ರಂಥ ಅಕ್ಷಯ' ಜ.31ರಂದು ರಾಜೇಂದ್ರ ಭವನ, ಅಗ್ರಹಾರ ಮೈಸೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಅಭಿನಂದನಾ ಗ್ರಂಥ ಅಕ್ಷಯ'ದ ಪ್ರಧಾನ ಸಂಪಾದಕರು ಶಿಕಾರಿಪುರ ಹರಿಹರೇಶ್ವರ, ಅಮೆರಿಕನ್ನಡ ಸಂಪಾದಕ. ಸಂಪಾದಕರು ಜಯಪ್ಪ ಹೊನ್ನಾಳಿ. ಅಕ್ಷಯ ಗ್ರಂಥದ ಪ್ರಕಾಶಕರು ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ (ನೋಂ), ನಂ. 132, 5ನೇ ಎ ಮುಖ್ಯರಸ್ತೆ, 2ನೇ ಹಂತ, ಬೃಂದಾವನ ಬಡಾವಣೆ, ಮೈಸೂರು-20.

ಈ ಅಕ್ಷಯ' ಅಭಿನಂದನಾ ಗ್ರಂಥದದಲ್ಲಿ 1342 ಪುಟಗಳು, ಹನ್ನೊಂದು ವಿಭಾಗಗಳು, ತೊಂಬತ್ತಮೂರು ಲೇಖಕರು, ಒಂದು ನೂರ ಮೂವತ್ತು ಲೇಖನಗಳು, ಭೈರವಮೂರ್ತಿಯವರ ಬಗ್ಗೆ ಹನ್ನೊಂದು ಕವನಗಳು, ಅವರ ಬದುಕು ಬರೆಹದ ಬಗ್ಗೆ ಲೇಖನಗಳು ಐದು, ಅವರ ಪ್ರಾತಿನಿಧಿಕ ಕೃತಿಗಳ ಕೆಲವು ಮುನ್ನುಡಿಗಳು ಹತ್ತು, ಗೌತಮ ಬುದ್ಧನ ಬಗ್ಗೆ ಲೇಖನಗಳು ಏಳು, ಬಸವಣ್ಣನವರ ಬಗ್ಗೆ ಲೇಖನಗಳು ಹದಿನೆಂಟು, ಮಹಾತ್ಮಾ ಗಾಂಧಿಯವರ ಬಗ್ಗೆ ಲೇಖನಗಳು ಆರು, ಡಾ| ಅಂಬೇಡ್ಕರ್ ಅವರ ಬಗ್ಗೆ ಲೇಖನಗಳು ಎಂಟು, ಕುವೆಂಪು ಅವರ ಬಗ್ಗೆ ಲೇಖನಗಳು ಇಪ್ಪತ್ತೊಂದು, ಬೇಂದ್ರೆಯವರ ಬಗ್ಗೆ ಲೇಖನಗಳು ಹನ್ನೆರಡು, ಪುತಿನ ಅವರ ಬಗ್ಗೆ ಲೇಖನಗಳು ಹನ್ನೆರಡು, ಸಂಕೀರ್ಣ ವಿಷಯಗಳ ಲೇಖನಗಳು ಇಪ್ಪತ್ತೊಂದು, ಮತ್ತು ಭಾವಚಿತ್ರಗಳ ಎಂಟು ಪುಟಗಳಿವೆ.

ದಣಿವಿಲ್ಲದ ಲೇಖಕ : ಕೆ. ಭೈರವಮೂರ್ತಿ (ಕಾವ್ಯನಾಮ ಕಾಶಿ ವಿಶ್ವೇಶ್ವರ') ಮೇ 30 1945ರಲ್ಲಿ ಸಂತೆಕಸಲಗೆರೆ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ಜಿಲ್ಲೆಯಲ್ಲಿ ಕೆ.ಎನ್. ಕೃಷ್ಣಮೂರ್ತಿ ಮತ್ತು ಗೌರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರ ಧರ್ಮಪತ್ನಿ ಡಾ| ಡಿ.ಎಲ್. ವಿಜಯಕುಮಾರಿ. ಈಗ ದೈವಧೀನರಾಗಿದ್ದಾರೆ. ಒಬ್ಬ ಪುತ್ರ ಬಿ. ಮನೋಜ್ ಇವರು ಹಾಲಿ ಸಾಫ್ಟ್‌ವೇರ್ ಇಂಜಿನಿಯರ್, ಹ್ಯೂಸ್ಟನ್, ಟೆಕ್ಸಸ್, ಅಮೆರಿಕಾದಲ್ಲಿ ಜನಿಸಿದ್ದಾರೆ.

ಭೈರವಮೂರ್ತಿ ರವರು ಸರ್ಕಾರಿ ಪ್ರಾಥಮಿಕ ಶಾಲೆ, ಮಂಡ್ಯದಲ್ಲಿ ಪ್ರಾಥಮಿಕ ಶಿಕ್ಷಣ, ಶಾರದಾ ವಿಲಾಸ ಕಾಲೇಜು, ಮೈಸೂರು (ಪಿ.ಯು.ಸಿ. 1961); ಮಹಾರಾಜಾ ಕಾಲೇಜು, ಮೈಸೂರು (ಬಿ.ಎ. ಕನ್ನಡ-ಮನಃಶಾಸ್ತ್ರ-ಇಂಗ್ಲಿಷ್, 1964); ಮೈಸೂರು ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು (ಕನ್ನಡ ಎಂ.ಎ., ಮೂರನೇಯ ರ್‍ಯಾಂಕ್, 1969) ಕಾಲೇಜು ಶಿಕ್ಷಣ ನಡೆಸಿದ್ದಾರೆ.

ಇವರ ವೃತ್ತಿ ಜೀವನ ಪ್ರಾರಂಭವಾಗಿದ್ದು ಮಳವಳ್ಳಿಯ ಪೂರಿಗಾಲಿ ಗ್ರಾಮದಲ್ಲಿ ಸಾರ್ವಜನಿಕ ಪ್ರೌಢಶಾಲೆಯ ಕನ್ನಡ ಶಿಕ್ಷಕನಾಗಿ. ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1969ರಿಂದ ಆರಂಭ. ಅಧ್ಯಾಪಕ, ಉಪಪ್ರಾಧ್ಯಾಪಕ, ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನಲ್ಲಿ ಮೂವತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಿಂದಲೇ ಅಸಂಖ್ಯಾತ ಸಂಘಸಂಸ್ಥೆಗಳಲ್ಲಿ ವಿವಿಧ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ಅಖಿಲಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು, ಅಧ್ಯಕ್ಷರು, ಅಖಿಲ ಭಾರತ ದೇಜಗೌ ಸಾಂಸ್ಕೃತಿಕ ಟ್ರಸ್ಟ್, ಮೈಸೂರು ಇತ್ಯಾದಿಗಳಲ್ಲಿ ಸಂಸ್ಥಾಪಕರೂ ಕೂಡ ಆಗಿದ್ದಾರೆ.

ಭೈರವಮೂರ್ತಿ ಯವರ ಕೃತಿಗಳು : ಕವನ ಸಂಕಲನ: ಚಿತ್ರಾಂಗಿಣಿ' (ಕಾವ್ಯಶ್ರೀ ಪ್ರಕಾಶನ, ಮಂಡ್ಯ 1964), ಗೌರಿಶಂಕರ' (ಬಿಎ ವಿದ್ಯಾರ್ಥಿ ಆಗಿದ್ದಾಗ 1967), ಮಹಾತ್ಮ', ಪ್ರೇಮಸೋನೆ' ಆಧುನಿಕ ವಚನಗಳು: ಮೊರೆ', ಚೈತನ್ಯ ವಚನ ವಿಹಾರ', ತುಂತುರು'. ಶಿಶು ಸಾಹಿತ್ಯ: ಮಕ್ಕಳಬಾಪು, ಶಿಶುವಚನಾಂಜಲಿ, ಮೋತಿಲಾಲ್ ನೆಹರು', ಡಾ| ಬಿ.ಆರ್. ಅಂಬೇಡ್ಕರ್', ಕೆ.ಎಫ್. ಪಾಟೀಲ್' ಚಿಂತನ ಬರೆಹಗಳು: ಚಿಂತನ ತೋರಣ'. ಹಸಿರು ವಾಣಿ' ಸಾಹಿತ್ಯ ವಿಮರ್ಶೆ: ಪ್ರತಿಫಲನ', ಸ್ವೋಪಜ್ಞತೆ', ಸಂಜೀವನ', ಸಾಹಿತ್ಯಪೂಜನ', ಕಾವ್ಯಪೂಜನ', ಗುರುಚಿಂತನ', ವಿಭೂತಿಯೋಗ', ಕಾವ್ಯಾನುಭೂತಿ', ಸಂಯೋಜನೆ', ಯಯಾತಿ-ಒಂದು ಇಣುಕು ನೋಟ'. ಅಂಕಣ ಸಾಹಿತ್ಯ: ಅಮೃತಬಿಂದು', ಸಮರಸ', ಜ್ಞಾನವಿಹಾರ', ಅಂಗಣ ಸಿಂಗಾರಿ'. ಜೀವನ ಚರಿತ್ರೆ: ಕೆ.ಎಫ್. ಪಾಟೀಲ್ ಅವರ ಬದುಕು-ಬರೆಹ' ವೈಚಾರಿಕ ಗ್ರಂಥಗಳು: ಮಹಾತ್ಮಾ ಗಾಂಧಿ ವಿಚಾರಧಾರೆ', ಡಾ| ಬಿ.ಆರ್. ಅಂಬೇಡ್ಕರ್ ವಿಚಾರಧಾರೆ', ಡಾ| ದೇಜಗೌ ಅವರ ಗದ್ಯ ಸಾಹಿತ್ಯ ಸಮಗ್ರ ನೋಟ' ಸಂಪಾದಿತ ಕೃತಿಗಳು: ಇಕ್ಷುಗಂಗಾ', ಸಿರಿಯೊಡಲು', ನಮ್ಮ ಕನ್ನಡ, ಪುಣ್ಯಸಂಗಮ', ಕರ್ನಾಟಕ ಸಂಸ್ಕೃತಿ ದೀಪಮಾಲೆ', ಬೆಳ್ಳಿಬೆಳಕು'; ಪ್ರಕಟಣೆಯ ವಿವಿಧ ಹಂತಗಳಲ್ಲಿ: ಕವಿಗಳು ಕಂಡ ಡಾ| ಎಚ್. ತಿಪ್ಪೇರುದ್ರಸ್ವಾಮಿ, ಕವಿಗಳು ಕಂಡ ಡಾ| ದೇಜಗೌ, ಕವಿಗಳು ಕಂಡ ಡಾ| ಎಚ್‌ಎಸ್‌ಕೆ, ಕವಿಗಳು ಕಂಡ ಡಾ| ಸಿಪಿಕೆ.

ಪ್ರಶಸ್ತಿಗಳು ಮತ್ತು ಸನ್ಮಾನಗಳು : ಅಂಬರೀಶ್ ಗೌರವ ಸಾಹಿತ್ಯ ಪ್ರಶಸ್ತಿ, ದ.ರಾ. ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾರಸ್ವತಲೋಕ ಕಾವ್ಯರತ್ನ ಪ್ರಶಸ್ತಿ, ಉಜ್ವಲ ಸಾಹಿತ್ಯ ರಂಗರತ್ನ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಯುವ ವೇದಿಕೆ ಪ್ರಶಸ್ತಿ, ಭುವನೇಶ್ವರಿ ಕನ್ನಡ ಸಂಘ ಪ್ರಶಸ್ತಿ, ಕನ್ನಡ ಸಾಹಿತ್ಯ ಕಲಾ ಕೂಟ ಪ್ರಶಸ್ತಿ, ಕಸ್ತೂರಿ ಕನ್ನಡ ಬಳಗ ಪ್ರಶಸ್ತಿ, ಮಂಗಳ ಕಲಾ ಸಾಹಿತ್ಯ ವೇದಿಕೆ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ಆದರ್ಶ ದಂಪತಿ ಪ್ರಶಸ್ತಿ, ಬುದ್ಧಶಾಂತಿ ಪ್ರಶಸ್ತಿ, ಕರ್ನಾಟಕ ಸರ್ಕಾರ ಮಂಡ್ಯ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ, ಹೊಯ್ಸಳ ಪ್ರಸಶ್ತಿ, ವಿಶ್ವಮಾನ್ಯ ವಿವೇಕರತ್ನ ಪ್ರಶಸ್ತಿ, ಮೈಸೂರು ರತ್ನ ಪ್ರಶಸ್ತಿ, ಕಲಾನಿಧಿ ಪ್ರಶಸ್ತಿ, ಪ್ರತಿಭಾ ಸಂಪತ್ ಸುವರ್ಣ ಕರ್ನಾಟಕ ಪ್ರಶಸ್ತಿ, ಬಸವಕೇಂದ್ರ ಬಸವಾನುಭವ ಪ್ರಶಸ್ತಿ, ಕನ್ನಡ ಚೇತನ, ಕನ್ನಡ ಕ್ರಾಂತಿದಳ ಪ್ರಶಸ್ತಿ ಇತ್ಯಾದಿ. ಇತ್ಯಾದಿ.

ಪ್ರಭಾವ ಬೀರಿದ ಗುರುವರ್ಯರು: ಡಾ| ಜಿ.ಎಸ್. ಶಿವರುದ್ರಪ್ಪ, ಡಾ| ಎಂ. ಚಿದಾನಂದಮೂರ್ತಿ, ಡಾ| ದೇಜಗೌ. ಡಾ| ಎಲ್. ಬಸವರಾಜು, ಡಾ| ಎಚ್. ತಿಪ್ಪೇರುದ್ರಸ್ವಾಮಿ, ಡಾ| ಹಾ.ಮ. ನಾಯಕ, ಡಾ| ಸಿಪಿಕೆ, ಪ್ರೊ| ಸುಜನಾ, ಡಾ| ಟಿ.ವಿ. ವೆಂಕಟಾಚಲಶಾಸ್ತ್ರಿ ಮೊದಲಾದವರು.

ವಿಶೇಷ ಅಧ್ಯಯನ: ಕುವೆಂಪು ಸಾಹಿತ್ಯ, ಗಾಂಧಿಸಾಹಿತ್ಯ, ದೇಜಗೌ ಸಾಹಿತ್ಯ.

ಅಭಿನಂದನಾಗ್ರಂಥ-1: ಶಿವಮಯ' (ಪ್ರೊ| ಕೆ. ಭೈರವಮೂರ್ತಿಗಳಿಗೆ ಸಮರ್ಪಿಸಿದ ಮೊದಲ ಅಭಿನಂದನ ಗ್ರಂಥ, ಸಂಪಾದಕರು: ಪ್ರೊ| ಎಚ್‌ಎಸ್‌ಕೆ, ಪ್ರೊ| ತ.ಚಿ. ಚಲುವೇಗೌಡ, ಡಾ| ಲತಾ ರಾಜಶೇಖರ್, 1178 ಪುಟಗಳು, 1999, ಅಭಿನಂದನಾ ಸಮಿತಿ ಮತ್ತು ತಳಗವಾಡಿ ಪ್ರಕಾಶನ, ಮೈಸೂರು-570009)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X