ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ

By Staff
|
Google Oneindia Kannada News

K K Pai
ಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ ಜ. 14 ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಕೆ ಕೆ ಪೈ ಅವರ ಆರೋಗ್ಯ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹದಗೆಟ್ಟಿತ್ತು. ಆಧುನಿಕ ಮಣಿಪಾಲ್ ದ ಬ್ರಹ್ಮ ಡಾ ಟಿ ಎಂ ಎ ಪೈ, ಕೇಂದ್ರ ಸರ್ಕಾರದ ಮಾಜಿ ಸಚಿವ ಟಿ ಎಂ ಪೈ ಅವರ ಬಳಿಕ ಮಣಿಪಾಲ್ ಸಂಸ್ಥೆಗಳ ಚುಕ್ಕಾಣಿ ಹಿಡಿದು ಮುನ್ನೆಡೆಸಿದ ಕೆಕೆ ಪೈ ಅವರು ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಿಲ್ಲ ಎಂಬಂತೆ ತೀರಾ ಇತ್ತೀಚಿನವರೆಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕೆಕೆ ಪೈ ಉಡುಪಿಯ ಪುರಸಭೆ ಅಧ್ಯಕ್ಷರಾಗಿ, ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ, ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರ ಪ್ರಮುಖ ಕ್ಷೇತ್ರ ಬ್ಯಾಂಕಿಂಗ್ ಆಗಿದ್ದರೂ ಕೃಷಿ, ಹೈನುಗಾರಿಕೆಯಿಂದ ಕಲೆ, ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳೆಲ್ಲದರಲ್ಲೂ ಅಧಿಕಾರವಾಣಿಯಿಂದ ಮಾತನಾಡಬಲ್ಲ ಪ್ರಾಜ್ಞರಾಗಿದ್ದರು. ಕೆಕೆ ಪೈ ಅವರ ಪತ್ನಿ ಸುಗುಣ ಪೈ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಕೆಕೆ ಪೈ ಅವರ ಪುತ್ರರಾದ ಡಾ ಅರವಿಂದ ಪೈ, ಸುರೇಶ್ ಪೈ, ಮತ್ತು ಪುತ್ರಿಯರಾದ ಗೀತಾ, ಡಾ ಸುಧಾ ಪ್ರಭು ಅವರನ್ನು ಅಗಲಿದ್ದಾರೆ.

ಗುರುವಾರ ಮಧ್ಯಾಹ್ನದವರೆಗೆ ಎಂಜಿಎಂ ಕಾಲೇಜಿನ ಆವರಣದಲ್ಲಿ ಕೆಕೆ ಪೈ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ನಮನಕ್ಕಾಗಿ ಇಡಲಾಗುತ್ತಿದೆ. ಬಳಿಕ ಇಂದ್ರಾಳಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆಕೆ ಪೈ ನಿಧನಾರ್ಥ ಮಣಿಪಾಲ್ ಶಿಕ್ಷಣ ಸಮೂಹ ಸಂಸ್ಥೆಗಳ ಶಾಲಾ ಕಾಲೇಜುಗಳಿಗೆ ಜನವರಿ 15 ರಂದು ರಜೆ ಘೋಷಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X