• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಟು ಪ್ರವಚನ ಖ್ಯಾತಿಯ ಮಹಂತ

By Staff
|
  • ಎಚ್‌. ಗಂಗಾಧರಯ್ಯ ಕುರಿಹಳ್ಳಿ

Munishri Tarunsagara Maharajರಾಷ್ಟ್ರ ಸಂತ, ಕ್ರಾಂತಿಕಾರಿ ಮತ್ತಿತರ ಹೆಸರಿನಿಂದ ಕರೆಯಲಾಗುವ ಮುನಿಶ್ರೀ 108 ತರುಣಸಾಗರ ಮಹಾರಾಜರು ತಮ್ಮ ಕಟು ಪ್ರವಚನಗಳ ಮೂಲಕ ಖ್ಯಾತರು. ದೇಶಾದ್ಯಂತ ಸಂಚರಿಸಿ ತಮ್ಮ ವಾಕ್‌ ಚಾತುರ್ಯದ ಮೂಲಕ ಜನರ ಮನಸೂರೆಗೊಂಡಿದ್ದಾರೆ. ಹೊಸದಿಲ್ಲಿ ಕೆಂಪುಕೋಟೆಯಿಂದ ಪ್ರವಚನ ನೀಡಿದ ಪ್ರಥಮ ಮುನಿ. 122 ದೇಶಗಳಲ್ಲಿ ಮಹಾವೀರರ ವಾಣಿಯನ್ನು ಪಸರಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

ಬರಿಗಾಲಿನಲ್ಲಿ ನಡೆದಾಡುವ ಮುನಿಗಳು ನಾಲ್ಕು ತಿಂಗಳು ಮಾತ್ರ ಒಂದೆಡೆ ಇರುತ್ತಾರೆ. ಜೈನ ಸಮಾಜವಷ್ಟೇ ಅಲ್ಲದೆ ಬೇರೆ ಸಮುದಾಯದಲ್ಲೂ ಅವರು ಜನಪ್ರಿಯತೆಗಳಿಸಿದ್ದಾರೆ.

ವಿದ್ವತ್ತು, ಪಾಂಡಿತ್ಯಕ್ಕೆ ಬದಲಾಗಿ ವಾಸ್ತವ ಅನುಭವಗಳನ್ನು ಸರಳ ಮಾತುಗಳಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ಸಮಸ್ಯೆಗಳಿಂದ ಹೊರಬರಬಹುದು ಎಂದು ಅವರ ಪ್ರವಚನ ಕೇಳುವ ಎಲ್ಲರಿಗೂ ಭಾಸವಾಗುತ್ತದೆ.

ಜೈನಧರ್ಮದ ಮೂಲ ತತ್ವ ‘ಬದುಕು ಮತ್ತು ಬದುಕಲು ಬಿಡು’ ಎಂಬುದಾಗಿದೆ. ತೀರ್ಥಂಕರರ ತೇಜಸ್ಸು, ಬುದ್ಧನ ವೈರಾಗ್ಯ, ಆದಿಶಂಕರರ ಸಾಧನೆ ಮತ್ತು ವಿವೇಕಾನಂದರ ತರ್ಕದ ಸಾರವನ್ನು ಮುನಿಶ್ರೀಗಳ ಕಟುಪ್ರವಚನ ಒಳಗೊಂಡಿರುತ್ತದೆ. ಅವರ ಬಹುಚರ್ಚಿತ ಕೃತಿ -ಕಡವೇ ಪ್ರವಚನ(ಕಹಿ ಮಾತ್ರೆಗಳು). ಆಚಾರ್ಯ ಶ್ರೀ ಪುಷ್ಪದಂತ ಮುನಿ ಮಹಾರಾಜರಿಂದ ‘ಪ್ರಜ್ಞಾ ಶ್ರಮಣ’ ಅಭಿದಾನ ಪಡೆದಿದ್ದಾರೆ. ಎಂಟು ಸಾವಿರಕ್ಕೂ ಹೆಚ್ಚು ಕಟು ಪ್ರವಚನ ನೀಡಿದ್ದಾರೆ. ಆಚಾರ್ಯ ಭಗವಂತ ಕುಂದಕುಂದರ ಅನಂತರ 13ನೇ ವಯಸ್ಸಿನಲ್ಲಿ ಜೈನ ಸನ್ಯಾಸ ಸ್ವೀಕರಿಸಿದ ಏಕಮಾತ್ರಯೋಗಿ.

ಕಟುಪ್ರವಚನ ಕೇಳುಗರಲ್ಲಿ ಹಲವರು ಅಹಂಕಾರದಿಂದ ಕೂತಿರುತ್ತಾರೆ. ಸಮುದಾಯ ಒಮ್ಮೆಲೆ ಬದಲಾಗುವುದಿಲ್ಲ ಎನ್ನುತ್ತಾರೆ ಮುನಿಶ್ರೀ.

ಮಧ್ಯಪ್ರದೇಶ ದಾಮೋಹ ಜಿಲ್ಲೆಯ ಗುಹಂಚಿ ಗ್ರಾಮದ ಶ್ರಾವಕ ಪ್ರತಾಪಚಂದ್ರಜೀ ಜೈನ್‌ ಮತ್ತು ಶಾಂತಿಬಾಯಿ ದಂಪತಿಗೆ ಮಗನಾಗಿ 1967 ಜೂ. 26ರಂದು ಜನನ. ಪವನಕುಮಾರ ಜೈನ್‌ ಎಂಬ ಜನ್ಮನಾಮ ಹೊಂದಿದ್ದ ಮುನಿಶ್ರೀ ಮಾಧ್ಯಮಿಕ ಶಿಕ್ಷಣ ಪಡೆದಿದ್ದಾರೆ. 1981 ಮಾ. 8ರಂದು ಗೃಹತ್ಯಾಗ ಮಾಡಿದರು. 1982 ಜ. 18ರಂದು ಛತ್ತೀಸ್‌ಗಢದ ಅಕಲತರಾದಲ್ಲಿ ಕ್ಷುಲ್ಲಕ ದೀಕ್ಷೆ ಹಾಗೂ ರಾಜಸ್ಥಾನದ ಬಾಗಿದೌರಾದಲ್ಲಿ 1988 ಜು. 20ರಂದು ಆಚಾರ್ಯ ಶ್ರೀ ಪುಷ್ಪದಂತ ಸಾಗರಜೀ ಮುನಿ ಅವರಿಂದ ಮುನಿ ದೀಕ್ಷೆ ಪಡೆದರು.

ನಾನು ಮಹಾವೀರನನ್ನು ಮಂದಿರದಿಂದ ಮುಕ್ತಗೊಳಿಸಬಯಸುತ್ತೇನೆ. ಇದರಿಂದಲೇ ಇತ್ತೀಚಿನ ದಿನಗಳಲ್ಲಿ ಮಂದಿರಗಳಲ್ಲಿ ಪ್ರವಚನ ನೀಡುವುದನ್ನು ನಿಲ್ಲಿಸಿದ್ದೇನೆ. ಮಹಾವೀರರು ಜೈನರಿಂದ ಮುಕ್ತರಾಗಿ ಅವರ ಸಂದೇಶ, ಆಚರಣೆ, ಆದರ್ಶ ಜಗತ್ತಿನ ಮುಂದೆ ಬರಲಿ ಎನ್ನುವುದು ನನ್ನ ಆಕಾಂಕ್ಷೆ. ಸಂತರು-ಮುನಿಗಳು ಸಾಧಾರಣ ಜನರ ಮಧ್ಯೆ ಪ್ರವಚನ ಮಾಡುವುದರ ಬದಲು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಾಡಬೇಕು. ಯಾಕೆಂದರೆ, ಭಯಾನಕ ಜನರು ಅಲ್ಲಿಯೇ ಇದ್ದಾರೆ. ದೇಶ ಮತ್ತು ರಾಜ್ಯಗಳ ರಾಜಧಾನಿಗಳಲ್ಲಿ ಕುಳಿತಿರುವ ಸುಮಾರು 10 ಸಾವಿರ ಜನರು ಸುಧಾರಿಸಿದರೆ 100 ಕೋಟಿ ಜನರು ರಾತ್ರೋರಾತ್ರಿ ಸುಧಾರಿಸುತ್ತಾರೆ.

ಪ್ರವಚನದ ಸ್ಯಾಂಪಲ್‌ ಪೀಸ್‌ :

ಮೃತ್ಯುವಿನ ಎಲ್ಲ ಸಾಮಗ್ರಿಗಳು ಸಿದ್ಧವಾಗಿವೆ. ಅಟ್ಟವೂ ಸಿದ್ಧವಾಗಿದೆ. ಆಯಿತು! ಬಟ್ಟೆ ಮತ್ತು ಹಗ್ಗವೂ ಸಿದ್ಧವಾಗಿದೆ. ಕೇವಲ ಆರ್ಡರ್‌ ಕೊಡುವುದಷ್ಟೇ ತಡ. ಸುಡುವ ಸ್ಥಳವೂ ಸಿದ್ಧವಾಗಿದೆ. ಅಳುವವರು ಸಿದ್ಧರಾಗಿದ್ದಾರೆ.

ಶ್ವಾಸ ನಿಂತು ಹೋಗುವುದಷ್ಟೇ ತಡ. ಶ್ವಾಸ ನಿಂತ ಕೂಡಲೇ ಅರ್ಧ ಗಂಟೆಯಾಳಗೆ ಎಲ್ಲ ಸಾಮಾಗ್ರಿಗಳು ಸೇರಿ ಬಿಡುತ್ತವೆ ಹಾಗೂ ಗಂಟೆಯಾಳಗಾಗಿಯೇ ಅಸ್ತಿಯನ್ನು ಕೊಟ್ಟು ಬಿಡುತ್ತಾರೆ. ಆದ್ದರಿಂದ ಅಸ್ತಿಯನ್ನು ಪಡೆಯುವ ಮುನ್ನ ಜೀವನದಲ್ಲಿ ಆಸ್ಥೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಚಿತೆ ಉರಿಯುವ ಮೊದಲೇ ನಿಮ್ಮ ಚೇತನವನ್ನು ಎಚ್ಚರಿಸಿಕೊಳ್ಳಿ ಸಾಕು! ಜೀವನ ಸಾರ್ಥಕವಾಗುತ್ತದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more