• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸೈ ಎನಿಸಿಕೊಂಡ ಪೈ

By Staff
|

Subba Rao Paiಅಮ್ಮೆಂಬಳ ಸುಬ್ಬರಾವ್‌ ಪೈ (1852-1909) ತೊಂಬತ್ತೊಂಬತ್ತು ವರ್ಷಗಳ ಹಿಂದೆ ದೇಶೀಯ ಬ್ಯಾಂಕಿಂಗ್‌ ವ್ಯವಸ್ಥೆಯ ಬಗ್ಗೆ ಕನಸು ಕಂಡವರು. ತಮ್ಮ ಕನಸನ್ನು ಕೆನರಾ ಬ್ಯಾಂಕ್‌ ಆರಂಭ ಮೂಲಕ ನನಸಾಗಿಸಿದವರು.

1852ರಲ್ಲಿ ಮಂಗಳೂರಿನ ಮುನ್ಸೀಫ್‌ ಕೋರ್ಟ್‌ ವಕೀಲ ಉಪೇಂದ್ರ ಪೈ ಮಗನಾಗಿ ಎ.ಎಸ್‌.ಪೈ. ಜನನ. ಮದ್ರಾಸ್‌ನಲ್ಲಿ ಬಿಎ, ಬಿಎಲ್‌ ಪದವಿ ಗಳಿಸಿ ವಕೀಲಿ ವೃತ್ತಿ ಆರಂಭಿಸಿದ ಎ.ಎಸ್‌. ಪೈಗೆ, ಗೌಡ ಸಾರಸ್ವತ ಸಮಾಜದ ಮೊದಲ ಡಬಲ್‌ ಗ್ರಾಜುಯೇಟ್‌ ಎಂಬ ಗರಿಮೆ.

ಎ.ಎಸ್‌. ಪೈ ಆಗಿನ ಕಾಲದಲ್ಲೇ ತಿಂಗಳಿಗೆ 1500ರಿಂದ 2 ಸಾವಿರ ರೂ.ವರೆಗೂ ಗಳಿಸಬಲ್ಲಷ್ಟು ಖ್ಯಾತ ವಕೀಲರಾಗಿದ್ದರು. ಹಾಗಿದ್ದೂ ಅವರ ಚಿಂತನೆ ಜನಸಾಮಾನ್ಯರು, ಅವರ ಕಷ್ಟದ ದುಡಿಮೆ, ಶಿಕ್ಷಣ ವಂಚಿತ ಹೆಣ್ಣುಮಕ್ಕಳು..., ಇತ್ತಲೇ ಹರಿಯುತ್ತಿತ್ತು. ಇದೇ ಮುಂದೆ ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಸ್ಥಾಪನೆಗೆ ಕಾರಣವಾಯಿತು.

Canara Bank completes 100 years1897ರ ಮೇಳೆಗಾಗಲೇ ಕೆನರಾ ಹೈಸ್ಕೂಲ್‌ ಸ್ಥಾಪಿಸಿದ್ದ ಪೈಯವರಿಗೆ ಹೆಣ್ಣು ಮಕ್ಕಳಿಗೂ ಶಿಕ್ಷಣ ಒದಗಿಸಬೇಕೆಂಬ ಹಂಬಲ ತೀವ್ರವಾಯಿತು. ಆದರೆ, ಊರಿನ ಪ್ರಮುಖರಿಂದ ಸಹಕಾರ ದೊರಕಲಿಲ್ಲ. ಆಗ ಪೈಯವರಿಗೆ ಕಂಡ ದಾರಿ ‘ಉಳಿತಾಯ’. ಹೆಣ್ಣು ಮಕ್ಕಳಿಗೂ ಓದು-ಬರಹ ಬೇಕು ಎಂಬ ತಾಯಿಯರು ಪ್ರತಿ ದಿನ ‘ಹಿಡಿ ಅಕ್ಕಿ ಉಳಿಸಿ’ ಎಂದು ಪೈ ಜಾಗೃತಿ ಮೂಡಿಸಿದರು.

ಇದು ಯಶಸ್ವಿಯಾಗಿ ಪೈಯವರನ್ನು ಬ್ಯಾಂಕ್‌ ಸ್ಥಾಪನೆಯತ್ತ ಉತ್ತೇಜಿಸಿತು. A Good bank is not only the financial heart of the cimmunity, but one with an obligation of helping in every manner possible to improve the economic condition of the common pepole ಎಂಬುದೇ ಅಮ್ಮೆಂಬಳ ಸುಬ್ಬರಾವ್‌ ಪೈ ಅವರ ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಸ್ಥಾಪನೆ ಹಿಂದಿನ ಧ್ಯೇಯವಾಗಿತ್ತು. ಲಾಭ ಗಳಿಕೆಗಿಂತ ಜನ ಸಾಮಾನ್ಯರನ್ನು ಹಣ ಉಳಿತಾಯ ಮಾಡುವತ್ತ ಪ್ರೋತ್ಸಾಹಿಸುವುದು ಅವರ ಉದ್ದೇಶವಾಗಿತ್ತು.

20ನೇ ಶತಮಾನದ ಆರಂಭದ ಕಾಲ. ಭಾರತದಲ್ಲಿನ್ನೂ ಬ್ರಿಟನ್‌ ರಾಣಿ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದುದು ಬ್ರಿಟಿಷರಿಗೆ ಸೇರಿದ ಮದ್ರಾಸ್‌ ಬ್ಯಾಂಕ್‌ನ ಶಾಖೆಯಾಂದೆ. ಸಂಪೂರ್ಣ ಬ್ರಿಟಿಷ್‌ ಅಧಿಕಾರಿಗಳೇ ಇದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನ ಮತ್ತು ಜವಾನ ಕೆಲಸಕ್ಕೆ ಮಾತ್ರ ನೇಮಕಗೊಂಡಿದ್ದರು. ಅದರಲ್ಲೂ ಈ ಬ್ಯಾಂಕ್‌ ಕೇವಲ ಶ್ರೀಮಂತರತ್ತ ಮಾತ್ರ ನೋಡುತ್ತಿತ್ತು. ಅಂದರೆ, ಅದು ವಿಧಿಸುತ್ತಿದ್ದ ಬಡ್ಡಿ ವಿಪರೀತ ಪ್ರಮಾಣದ್ದಾಗಿತ್ತು.

ಹೊಸ ಹೊಳಪು : ಜನ ಸಾಮಾನ್ಯರು ತಮ್ಮ ಕಷ್ಟದ ದುಡಿಮೆ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಪಡಿಪಾಟಲು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಪರಿ ಎ.ಎಸ್‌.ಪೈ ಅವರನ್ನು ಚಿಂತಿಸುವಂತೆ ಮಾಡಿತು. ಇದೇ ಚಿಂತೆ ಸಾರ್ವಜನಿಕರ ಹಣದಿಂದಲೇ ನಿಧಿ(ಫಂಡ್‌) ಸ್ಥಾಪಿಸಿ, ಉಳಿತಾಯ- ಸಾಲ ಬೇಡಿಕೆ ಎರಡಕ್ಕೂ ಒದಗುವಂತೆ ಮಾಡಲು ಪ್ರೇರೇಪಿಸಿತು. ಅದು ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌ ಆರಂಭದ ಬೀಜ ಬಿತ್ತಿತು.

ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50ರೂ. ಬೆಲೆಯ 2 ಸಾವಿರ ಷೇರುಪತ್ರಗಳನ್ನು ಮಾರಿ ನಿಧಿ ಸಂಗ್ರಹಿಸಿದ ಪೈ, ಕೆನರಾ ಪರ್ಮನೆಂಟ್‌ ಫಂಡ್‌ ಆರಂಭಿಸಿದರು. ಪೈಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಈ ಸಂಸ್ಥೆಯೇ ಮುಂದೆ ಕೆನರಾ ಬ್ಯಾಂಕ್‌ ಎಂಬ ವಟವೃಕ್ಷವಾಗಿ ಬೆಳೆದಿದೆ. ಅದಕ್ಕೀಗ 100ರ ಸಡಗರ. ಅದರ ಈಗಿನ ಅಧ್ಯಕ್ಷ ಎಂ.ಬಿ.ಎನ್‌. ರಾವ್‌.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more