ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ಬರಾವ್‌-70 : ಇದು ಸನ್ಮಾನ ಸುಖದ ಕಾಲ !

By Super
|
Google Oneindia Kannada News

ಸುಬ್ಬರಾವ್‌-70 : ಇದು ಸನ್ಮಾನ ಸುಖದ ಕಾಲ !
ಸಿನಿತಾರೆ- ರಾಜಕಾರಣಿ- ಮಠಾಧೀಶರ ಹುಟ್ಟುಹಬ್ಬದಂತೆ ಪತ್ರಕರ್ತ ವಿ.ಎನ್‌.ಸುಬ್ಬರಾವ್‌ ಎಪ್ಪತ್ತನೇ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ಈ ಸಂಪ್ರದಾಯ ಮುಂದುವರಿಯಲಿ

ವಿಜಯಾ

V.N. Subbaraoಹಿರಿಯ ಪತ್ರಕರ್ತ ವಿ.ಎನ್‌. ಸುಬ್ಬರಾವ್‌ ಅವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಗೆಳೆಯರು ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಏಪ್ರಿಲ್‌ 26ರ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಹುಟ್ಟುಹಬ್ಬದ ಸಮಾರಂಭದಲ್ಲಿ ಸುಬ್ಬರಾವ್‌ ಅವರಿಗೆ ಸನ್ಮಾನ-ಅಭಿನಂದನೆ ಸಲ್ಲಲಿದೆ.

ಏಪ್ರಿಲ್‌ 24ರ ಗುರುವಾರವಷ್ಟೇ ವರನಟ ರಾಜ್‌ಕುಮಾರ್‌ ತಮ್ಮ ಎಪ್ಪತ್ತೆೈದನೇ ಹುಟ್ಟುಹಬ್ಬಆಚರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ನಂತರದ ಬಳಲಿಕೆಯನ್ನು ರಾಜ್‌ ಅನುಭವಿಸುತ್ತಿರುವುದರಿಂದಲೋ ಏನೋ, ಈ ಬಾರಿ ಅವರ ಹುಟ್ಟುಹಬ್ಬದ ಆಚರಣೆ ಕುಟುಂಬದ ವೈಯಕ್ತಿಕ ಸಮಾರಂಭವಾಗಿ ಪರಿಣಮಿಸಿತು. ವರನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಳಿಬರುವ ಅಭಿಮಾನಿಗಳ ಕಲರವ ಕೇಳಿಬರಲಿಲ್ಲ . ಸರಳ ಸಮಾರಂಭದಲ್ಲಿ ಎಪ್ಪತ್ತೆೈದರಂಥ ಮೈಲುಗಲ್ಲನ್ನು ರಾಜ್‌ ದಾಟಿದರು.

ಸುಬ್ಬರಾವ್‌ ಅವರಿಗೀಗ ಎಪ್ಪತ್ತು . ರಾಜ್‌ ಅವರಂತೆ ಸುಬ್ಬರಾವ್‌ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸುದ್ದಿ ಮಾಡಿದವರಲ್ಲ . ಆದರೆ, ಎಪ್ಪತ್ತರ ಸಂದರ್ಭದಲ್ಲಿ ಅವರನ್ನು ಅವರ ಖಾಸಾ ಅಭಿಮಾನಿಗಳು ಅಂಗಳದಿಂದ ವೇದಿಕೆಗೆ ಕರೆ ತಂದಿದ್ದಾರೆ. ಇಲ್ಲಿ ರಾಜ್‌ ಅವರೊಂದಿಗೆ ಸುಬ್ಬರಾವ್‌ ಅವರನ್ನು ನೆನೆಯಲಿಕ್ಕೆ ಕಾರಣವಿದೆ : ರಾಜ್‌ ಮೇರು ನಟ, ಸುಬ್ಬರಾವ್‌ ಹಿರಿಯ ಪತ್ರಕರ್ತ. ರಾಜ್‌ ಸಿನಿಮಾ ನಟ, ಸುಬ್ಬರಾವ್‌ ಸಿನಿಮಾ ಪ್ರಿಯ-ಪತ್ರಕರ್ತ. ಒಬ್ಬರು ಎಪ್ಪತ್ತೆೈದು ಇನ್ನೊಬ್ಬರು ಎಪ್ಪತ್ತು ಮುಟ್ಟಿದ್ದಾರೆ. ಅಲ್ಲದೆ, ರಾಜ್‌ ಹಾಗೂ ಸುಬ್ಬರಾವ್‌ ಹುಟ್ಟುಹಬ್ಬ ಎರಡು ದಿನಗಳ ಅಂತರದಲ್ಲಿ ನಡೆಯುತ್ತಿರುವುದು ಗಮನಾರ್ಹ.

ಸುಬ್ಬರಾವ್‌ ಅವರ ಹುಟ್ಟುಹಬ್ಬವನ್ನು ಆಚರಿಸಲಿಕ್ಕೆ ‘ಸುಬ್ಬರಾವ್‌ ಹುಟ್ಟು ಹಬ್ಬ ಆಚರಣಾ ಸಮಿತಿ' ಎನ್ನುವ ಪಡೆಯೂ ರಚನೆಯಾಗಿದೆ. ಮಾಜಿ ಸಂಸದ ಸಚ್ಚಿದಾನಂದ ಈ ಪಡೆಯ ಗೌರವಾಧ್ಯಕ್ಷರು. ನಗರದ ಕೆಲವು ಸರ್ಕಲ್ಲುಗಳಲ್ಲಿ ‘ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಜನ್ಮ ಶತಾಬ್ಧಿ' ಬ್ಯಾನರ್‌ಗಳ ಜೊತೆಯಲ್ಲಿಯೇ ಸುಬ್ಬರಾವ್‌ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಸಾರುವ ಬ್ಯಾನರ್‌ಗಳೂ ಕಾಣಿಸಿಕೊಂಡಿವೆ. ಅಲ್ಲಿಗೆ ಕಾರ್ಯಕ್ರಮ ಅದ್ದೂರಿಯಾಗಿಯೇ ಇರುತ್ತದೆ ಎಂದಾಯಿತು.

ಪತ್ರಕರ್ತರಾಗಿ ಸಿನಿಮಾ ಹಾಗೂ ರಾಜಕಾರಣ ಎರಡರಲ್ಲೂ ಸುಬ್ಬರಾವ್‌ ಪಳಗಿದವರು. ಆದರೆ, ಈ ಸನ್ಮಾನ-ಅಭಿನಂದನೆ ನಡೆಯುತ್ತಿರುವುದು ಪತ್ರಿಕಾ ಮಾಧ್ಯಮಕ್ಕೆ ಸುಬ್ಬರಾವ್‌ ಅವರು ಸಲ್ಲಿಸಿರುವ ವಿಶೇಷ ಸೇವೆಯನ್ನು ಗುರ್ತಿಸಿ. ಈ ಸಂದರ್ಭದಲ್ಲಿ ನಿಧಿ ಸಂಗ್ರಹಿಸಿ ( ಸುಮಾರು ಹತ್ತು ಲಕ್ಷ ) ಸುಬ್ಬರಾವ್‌ ಅವರಿಗೆ ಅರ್ಪಿಸಲಾಗುತ್ತಿದೆ. ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಇವರು ಸುಬ್ಬರಾವ್‌

ಸುಬ್ಬರಾವ್‌ ಪತ್ರಿಕೋದ್ಯಮಕ್ಕೆ ಕಾಲಿಟ್ಟದ್ದು ‘ಪಟಾಕಿ' ಎಂಬ ಮಕ್ಕಳ ಪತ್ರಿಕೆಯನ್ನಾರಂಭಿಸುವ ಮೂಲಕ. ಆಗವರಿಗೆ 17 ವರ್ಷ. ನಂತರದಲ್ಲಿ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಸುಬ್ಬರಾವ್‌ ಅಲಂಕರಿಸಿದರು. ‘ಸ್ಕಿೃೕನ್‌' ಪತ್ರಿಕೆಯ ಸಹಾಯಕ ಸಂಪಾದಕ, ‘ಡೆಕ್ಕನ್‌ ಹೆರಾಲ್ಡ್‌'ಪತ್ರಿಕೆಯ ಮ್ಯಾಗರಿkುೕನ್‌ ಸಂಪಾದಕ ಹುದ್ದೆಗಳನ್ನು ಅತಿ ಚಿಕ್ಕ ವಯಸ್ಸಿನಲ್ಲಿಯೇ ನಿರ್ವಹಿಸಿದ ಖ್ಯಾತಿ ಅವರದು. ‘ಇಂಡಿಯನ್‌ ಎಕ್ಸ್‌ಪ್ರೆಸ್‌' ಪತ್ರಿಕೆಯಲ್ಲಿಯೂ ಸುಬ್ಬರಾವ್‌ ಬ್ಯುರೋ ಮುಖ್ಯಸ್ಥರಾಗಿ ಅವರು ಹೆಸರುವಾಸಿ.

‘ಸಂಡೆ ಮಿಡ್ಡೆ'ಯ ರೆಸಿಡೆಂಟ್‌ ಎಡಿಟರ್‌ ಹುದ್ದೆ , ‘ಮೇನಕಾ' ಹಾಗೂ ‘ತಾರಾಲೋಕ' ಚಲನ ಚಿತ್ರಪತ್ರಿಕೆಗಳು ಸುಬ್ಬರಾವ್‌ ಪತ್ರಿಕಾ ಜೀವನದ ಇತರ ಕಾರ್ಯಕ್ಷೇತ್ರಗಳು. ದಟ್ಸ್‌ಕನ್ನಡದ ಮಾತೃಸಂಸ್ಥೆ https://www.oneindia.com ನ ಅಂಕಣಕಾರರಾಗಿ ಸುಬ್ಬರಾವ್‌ ಕೆಲಕಾಲ ಗುರ್ತಿಸಿಕೊಂಡಿದ್ದರು. ಸದ್ಯಕ್ಕೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲವರು ಸಂಪಾದಕರು.

ಸಿನಿಪ್ರಿಯ ಸುಬ್ಬರಾವ್‌ ‘ಪ್ರೇಮಾಯಣ' ಮತ್ತು ‘ಹಾವು ಏಣಿ ಆಟ' ಚಲನ ಚಿತ್ರ ನಿರ್ಮಾಣದ ಮೂಲಕ ಸಿನಿಮಾರಂಗದಲ್ಲೂ ಕೈಯಾಡಿಸಿದ್ದಾರೆ. 80 ದಶಕದಲ್ಲಿ ಕೆಲವು ಸಿನಿಸ್ಟಾರುಗಳ ಜೊತೆ ಸೇರಿಕೊಂಡು ಭಾರತೀಯ ಸಿನಿಮಾ ಉತ್ಸವವನ್ನು ಸಂಯೋಜಿಸುವ ಮೂಲಕ ಸುಬ್ಬರಾವ್‌ ಸುದ್ದಿ ಮಾಡಿದ್ದರು.

ಸರಿಯಾಗಿ ಒಂದು ವರ್ಷದ ಹಿಂದೆ ಸುಬ್ಬರಾವ್‌ ಸುದ್ದಿಯಲ್ಲಿದ್ದರು. ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಿದ ಕರ್ನಾಟಕ ಚಲನಚಿತ್ರ ಇತಿಹಾಸ ಪುಸ್ತಕದ ವಿವಾದದಲ್ಲಿ ಸುಬ್ಬರಾವ್‌ ಅವರ ಹೆಸರು ಕಾಣಿಸಿಕೊಂಡಿತ್ತು . ಸುಬ್ಬರಾವ್‌ ಅವರ ವಿರುದ್ಧ ಪಾರ್ವತಮ್ಮ ರಾಜ್‌ಕುಮಾರ್‌ ಬಹಿರಂಗವಾಗಿ ಗುಟುರು ಹಾಕಿದ್ದರು. ಅದೆಲ್ಲಾ ಈಗ ಹಳೆಯ ಕಥೆ. ಅದನ್ನು ಸುಬ್ಬರಾವ್‌ ಮರೆತಿದ್ದಾರೆ; ಪಾರ್ವತಮ್ಮನವರೂ ಮರೆತಿರಬೇಕು.

ಸುಬ್ಬರಾವ್‌ ಎಪ್ಪತ್ತರ ಹುಟ್ಟುಹಬ್ಬ-ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವವರ ಪಟ್ಟಿಯೂ ದೊಡ್ಡದಿದೆ : ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ ಕುಮಾರ್‌, ರಾಜ್ಯಸಭಾ ಸದಸ್ಯ-ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌, ವಿಧಾನ ಪರಿಷತ್‌ ಸಭಾಪತಿ ಬಿ. ಎಲ್‌. ಶಂಕರ್‌, ಕೈಗಾರಿಕಾ ಸಚಿವ ಆರ್‌. ವಿ. ದೇಶಪಾಂಡೆ, ಹಾರನ ಹಳ್ಳಿ ರಾಮಸ್ವಾಮಿ, ಪಿ. ಜಿ. ಆರ್‌. ಸಿಂಧ್ಯಾ ಮತ್ತಿತರರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಹಿರಿಯ ಪತ್ರಕರ್ತರಿಗೆ ಅಭಿನಂದನೆ- ಸನ್ಮಾನ ಕಾರ್ಯಕ್ರಮಗಳು ಆಗಾಗ ನಡೆಯುತ್ತಿವೆ. ಈಗ ಸುಬ್ಬರಾಯರ ಸರದಿ; ಈ ಸಂಪ್ರದಾಯ ಮುಂದುವರೆಯಲಿ. ರಾಜಕಾರಣಿ- ಮಠಾಧಿಪತಿಗಳಿಗಿಂತ ಸಮಾಜದ ಸ್ವಾಸ್ಥ್ಯಕ್ಕೆ ಹೆಚ್ಚು ಉಪಯುಕ್ತರಾದ ಪತ್ರಕರ್ತರಿಗೆ ಹಾರ ತುರಾಯಿಯ ಭಾಗ್ಯ ದೊರೆಯುತ್ತಿರಲಿ!

Post your views

ಡೆಡ್‌ಲೈನ್‌ ವೀರರು
ಸತ್ಯ ವರ್ಸಸ್‌ ಸುಬ್ಬರಾವ್‌

English summary
Senior journalist V. N. Subbarao to be felicitated in Bangalore on April 26th, 2003
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X