• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ‘ಸ್ಪಂದನ’ ಶ್ರೀನಿವಾಸ್‌

By Staff
|
  • ದಟ್ಸ್‌ಕನ್ನಡ ಬ್ಯೂರೋ

ಅಮೆರಿಕದಲ್ಲಿ ‘ಅಕ್ಕ’ ನ ಹಿಡಿದು ಜಗ್ಗಾಡುತ್ತಾ ಧೂಳೆಬ್ಬಿಸುವುದರಲ್ಲಿ ವ್ಯಸ್ತರಾಗಿರುವವರ ನಡುವೆ ತಣ್ಣಗೆ ಎರಡು ಪುಸ್ತಕಗಳನ್ನು ಬರೆದು ಬೆಂಗಳೂರಿಗೆ ತಂದು ಕೂತಿದ್ದಾರೆ 59ರ ಹರೆಯದ ಪಿ.ಎನ್‌.ಶ್ರೀನಿವಾಸ್‌.

‘ಚಲನಚಿತ್ರ ನಿರ್ದೇಶಕ’ ಮತ್ತು ‘ನಡೆ’ ಎಂಬ ಈ ಪುಸ್ತಕಗಳು ಜೂನ್‌ 21ರ ಶನಿವಾರ ಬೆಳಗ್ಗೆ 11.30 ಗಂಟೆಗೆ ಬೆಂಗಳೂರಿನ ವುಡ್‌ಲ್ಯಾಂಡ್ಸ್‌ ಹೊಟೇಲಿನಲ್ಲಿ ಬಿಡುಗಡೆಯಾಗಲಿವೆ. ಹಿರಿಯ ವಿಮರ್ಶಕ ಎಲ್‌.ಎಸ್‌.ಶೇಷಗಿರಿ ರಾವ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸ್ವರ್ಣಕಮಲ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ‘ಚಲನಚಿತ್ರ ನಿರ್ದೇಶಕ’ ಕೃತಿಯ ಕುರಿತು ಹಾಗೂ ಪ್ರಾಧ್ಯಾಪಕ ಕೇಶವಮೂರ್ತಿ ‘ನಡೆ’ ಪುಸ್ತಕದ ಬಗೆಗೆ ಮಾತನಾಡುವರು.

1975ರಲ್ಲಿ ಇಸ್ರೋದ ಆರ್ಯಭಟ ಯೋಜನೆಯಲ್ಲಿ ಕೆಲಸ ಮಾಡಿದ ಬಾಹ್ಯಾಕಾಶ ವಿಜ್ಞಾನಿ ಪಿ.ಎನ್‌.ಶ್ರೀನಿವಾಸ್‌ ಇವತ್ತು ಮೇರಿಲ್ಯಾಂಡ್‌ನ ಕಂಪ್ಯೂಟರ್‌ ಕಂಪನಿಯಾಂದರ ಉಪಾಧ್ಯಕ್ಷ. ವೃತ್ತಿಗೂ ಪ್ರವೃತ್ತಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬಂತೆ, ಇವರು ಆರಿಸಿಕೊಂಡಿದ್ದು ತನಗೆ ಗೊತ್ತೇ ಇರದಿದ್ದ ಸಿನಿಮಾ ತೆಗೆಯುವ ಸಾಹಸವನ್ನು. 1980ರ ದಶಕದ ಶುರುವಿನಲ್ಲಿ ‘ಸ್ಪಂದನ’ ಎಂಬ ಚಿತ್ರ ತೆಗೆದರು. ಆ ನಂತರ ಸಿನಿಮಾ ಕುರಿತ ಅನೇಕ ಪುಸ್ತಕಗಳನ್ನ ಓದಿ, ಕಲಿತು ‘ಅಭಿಮಾನ’ ಎಂಬ ಸಿನಿಮಾ ಮಾಡಿದರು. ಅದಾದ ಮೇಲೆ ‘ಏನೇ ಬರಲಿ ಪ್ರೀತಿ ಇರಲಿ’ ಎಂಬ ಇನ್ನೊಂದು ಸಿನಿಮಾ ತೆಗೆದರು. ‘ಸ್ಪಂದನ’ ಹಾಗೂ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರಗಳು ಪ್ರಶಸ್ತಿಗಳನ್ನು ತಂದುಕೊಟ್ಟವೇ ಹೊರತು, ಬೇರೆ ರೀತಿಯಲ್ಲಿ ಬರಕತ್ತಾಗಲಿಲ್ಲ. ಹೀಗಾಗಿ 1986ರಲ್ಲಿ ಸಿನಿಮಾ ತೆಗೆಯುವ ಗೀಳನ್ನು ಶ್ರೀನಿವಾಸ್‌ ಬಿಟ್ಟುಬಿಟ್ಟರು.

P.N.Srinivasಸುಮಾರು 13 ವರ್ಷಗಳ ಕಾಲ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿದ್ದ ಶ್ರೀನಿವಾಸ್‌ 1999ರಲ್ಲಿ ಕನ್ನಡ ಸಾಹಿತ್ಯ ಕುರಿತ ‘ಮಾತುಗಳು’ ಎಂಬ ಪುಸ್ತಕ ಪ್ರಕಟಿಸಿದರು. ಆಮೇಲೆ ಇವರು ಓದುಗರ ವಲಯದಲ್ಲಿ ‘ಮಾತುಗಳು ಶ್ರೀನಿವಾಸ್‌’ ಅಂತಲೇ ಹೆಸರಾದರು. ಈಗ ಬಿಡುಗಡೆಗೆ ಸಿದ್ಧವಾಗಿರುವ ‘ಚಲನಚಿತ್ರ ನಿರ್ದೇಶಕ’ ಮತ್ತು ‘ನಡೆ’ ಕೃತಿಗಳನ್ನು ಬೆಂಗಳೂರಿನ ಪುರೋಗಾಮಿ ಸಾಹಿತ್ಯ ಸಂಘ ಹೊರತಂದಿದೆ. ಕಥೆಗಾರ ಮಾವಿನಕೆರೆ ರಂಗನಾಥನ್‌ ಪುಸ್ತಕಗಳ ಪ್ರಕಟಣೆಯ ಹೊಣೆ ಹೊತ್ತಿದ್ದಾರೆ.

ಚಿತ್ರ ಮಾಡುವ ಸಾಹಸ ಬಿಟ್ಟರೂ, ಸಿನಿಮಾ ಬಗೆಗಿನ ತುಡಿತ ಮಾತ್ರ ಶ್ರೀನಿವಾಸ್‌ ಅವರಲ್ಲಿ ಮಾಯವಾಗಲೇ ಇಲ್ಲ. ತಮ್ಮ ಓದು ಹಾಗೂ ಅನುಭವದಿಂದ ದಕ್ಕಿದ ವಿಷಯಗಳು ಅಕ್ಷರ ರೂಪ ತಾಳಿದವು. ಪರಿಣಾಮವಾಗಿ ‘ಚಲನಚಿತ್ರ ನಿರ್ದೇಶಕ’ ಕೃತಿ ಮೂಡಿತು. ಹಲವು ಕನ್ನಡ ಸಿನಿಮಾಗಳನ್ನು ತೆರೆಗಿರುವ ಹಿರೀಕ ಎಂ.ವಿ.ಕೃಷ್ಣಸ್ವಾಮಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಅಮೆರಿಕೆಯಲ್ಲಿ ತನ್ನ ಹೆಂಡತಿ ಮಕ್ಕಳ ಜೊತೆ ನಯಾಗರ ಜಲಪಾತ ನೋಡಲು ಹೋಗುವ ಕನ್ನಡಿಗ ಅದನ್ನು ಕ್ಯಾಮರಾ ಕಣ್ಣಿನಲ್ಲಿ ತುಂಬಿಕೊಳ್ಳುವಾಗ, ಆತನ ಮನಸ್ಸಲ್ಲಿ ನಯಾಗರವನ್ನು ಗೇರುಸೊಪ್ಪೆಗೆ ಹೋಲಿಸಿ ನೋಡುವ ಕವಿತ್ವ ಹುಟ್ಟುತ್ತದೆ. ಹೀಗಾದಾಗ ಒಳಗಣ್ಣಿಗೆ ಎಟುಕುವ ನಯಾಗರದ ಸೌಂದರ್ಯದ ಜೊತೆಗೆ ಹೊರಗಣ್ಣ ನೋಟಕ್ಕೆ ಅಮೆರಿಕೆಯ ವಾಣಿಜ್ಯೀಕರಣ, ಮುಗುಮ್ಮಾಗಿ ತಮ್ಮ ಪಾಡಿಗೆ ತಾವಿರುವ ಜನ ಕೂಡ ನಿಲುಕುತ್ತಾರೆ.... ಹೀಗೆ ಸರಳವಾಗಿ ಸಾಗುವ ಕಥಾವಸ್ತು ‘ಚಲನಚಿತ್ರ ನಿರ್ದೇಶಕ’ ಕೃತಿಯಲ್ಲಿ ಹರಳುಗಟ್ಟುತ್ತಾ ಹೋಗುತ್ತದೆ. ಚಾರ್ಲ್ಸ್‌ ಡಿಕನ್ಸನ ‘ಎ ಟೇಲ್‌ ಆಫ್‌ ಟೂ ಸಿಟೀಸ್‌’, ಫಿಟ್‌ಝೆರಾಲ್ಡನ ‘ದಿ ಗ್ರೇಟ್‌ ಗ್ಯಾಟ್ಸ್‌ಬೈ’, ಹೆನ್ರಿ ಜೇಮ್ಸನ ‘ದಿ ಟರ್ನ್‌ ಆಫ್‌ ದಿ ಸ್ಕೂೃ’ ಮತ್ತು ಜೋಸೆಫ್‌ ಕಾರ್ನಾಡನ ‘ಹಾರ್ಟ್‌ ಆಫ್‌ ಡಾರ್ಕ್‌ನೆಸ್‌’- ಇವು ಸಿನಿಮಾ ಆದಾಗ, ತಮ್ಮ ಆಶಯವನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸಲು ಏಕೆ ಸಾಧ್ಯವಾಗಲಿಲ್ಲ ಎಂಬುದನ್ನೂ ಶ್ರೀನಿವಾಸ್‌ ವಿವರಿಸುತ್ತಾ ಹೋಗುತ್ತಾರೆ. ಒಂದು ಸೃಜನಶೀಲ ಕೃತಿಯನ್ನು ಸಿನಿಮಾಗೆ ತರುವ ಹಾದಿಯ ಸವಾಲುಗಳು ಮತ್ತು ಸಿನಿಮಾ ಮಾಡಲು ಅಗತ್ಯವಿರುವ ಬೌದ್ಧಿಕ ಪ್ರಾಮಾಣಿಕತೆಯ ಕುರಿತು ‘ಚಲನಚಿತ್ರ ನಿರ್ದೇಶಕ’ ಕೃತಿ ಮಾತಾಡುತ್ತದೆ.

ಶ್ರೀನಿವಾಸ್‌ ಅವರ ಇನ್ನೊಂದು ಕೃತಿ ‘ನಡೆ’ ಪೂರ್ವ-ಪಶ್ಚಿಮದ ಸಾಂಸ್ಕೃತಿಕ ಸಂಘರ್ಷವನ್ನು ವಸ್ತುವಾಗುಳ್ಳ ಕಾದಂಬರಿ.

ಸಿನಿಮಾ ನಿರ್ದೇಶನದ ಬಗ್ಗೆ ಪುಸ್ತಕ ಬರೆದಿರುವ ಶ್ರೀನಿವಾಸ್‌ ಮತ್ತೆ ಸಿನಿಮಾ ಮಾಡುತ್ತಾರಾ ? ಯಾರಿಗೆ ಗೊತ್ತು - ಮತ್ತೆ ಅಮೆರಿಕೆ ವಿಮಾನ ಹತ್ತುವ ಮುನ್ನ ಪುಸ್ತಕದ ಥಿಯರಿ ಪ್ರಾತ್ಯಕ್ಷಿಕೆಗೆ ಬರುವ ಪ್ರಯತ್ನಗಳು ನಡೆದರೂ ನಡೆದಾವು!

ಮುಖಪುಟ / ಸಾಹಿತ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more