ಸಾಹಿತ್ಯ-ರಾಜಕಾರಣ ; ಎರಡುದೋಣಿ ಪಯಣದಲಿ ಗೆದ್ದ ಮೊಯಿಲಿ
*ವಿಶ್ವನಾಥ್ ಹುಲಿಕಲ್
ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಮೌಲ್ಯಾಧಾರಿತ ರಾಜಕಾರದಲ್ಲಿ ನಂಬುಗೆ ಇಟ್ಟವರು, ಅನೇಕ ಮಹತ್ತರ ಪ್ರಶಸ್ತಿಗಳ ಪುರಸ್ಕೃತರು, ಸಜ್ಜನಿಕೆಯೇ ಮೂರ್ತಿವೆತ್ತಂತಿರುವವರು, ಮೃದುಭಾಷಿಗಳು, ಅಮಿತ ಜೀವನ ಶ್ರದ್ಧೆ ಉಳ್ಳವರು, ಹಿರಿಯರನ್ನು ಮತ್ತು ಪಂಡಿತರನ್ನು ತುಂಬಾ ಗೌರವದಿಂದ ಕಾಣುವವರು ಎಂ.ವೀರಪ್ಪ ಮೊಯ್ಲಿಯವರು.
ವೀರಪ್ಪ ಮೊಯಿಲಿಯವರು ಜನವರಿ 12, 1940 ರಂದು ಜನಿಸಿದರು. ತಂದೆ ತಿಮ್ಮಯ್ಯ ಮೊಯಿಲಿ, ತಾಯಿ ಪೂವಮ್ಮ . ಮೊಯಿಲಿ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮೂಬಿದರಿಯಲ್ಲಿ ನಡೆಯಿತು. 1962 ರಲ್ಲಿ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಪದವೀಧರರಾದ ಮೊಯಿಲಿ, ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಮೊಯಿಲಿ ಅವರ ಪತ್ನಿ ಮಾಲತಿ. ಇವರ ಸುಖೂ ಮತ್ತು ಸಂತೃಪ್ತ ಕುಟುಂಬದಲ್ಲಿ ಮಕ್ಕಳಾದ ರಶ್ಮಿ, ಸುಷ್ಮ , ಹಂಸ ಮತ್ತು ಹರ್ಷ ಸೇರಿದ್ದಾರೆ.
ಕಾರ್ಕಳ, ಮಂಗಳೂರು, ಮತ್ತು ಬೆಂದಗಳೂರಿನ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ನಂತರ, ಮೊಯಲಿ ಅವರು 1968 ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರಾದರು. ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬುಗೆಯಿಟ್ಟ ಅವರು ಇಂದಿನವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು - ಇಂದಿನ ಪಕ್ತಾಂರ ಯುಗದಲ್ಲಿ - ತಮ್ಮ ಅಚಲ ನಿಷ್ಠೆಯನ್ನು ಮೆರೆದಿದ್ದಾರೆ. ಸತತವಾಗಿ ಆರು ಅವಧಿಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ (1972-82) ಅಗ್ಗಳಿಕೆ ಅವರದು.
ಸಣ್ಣ ಪ್ರಮಾಣದ ಕೈಗಾರಿಕೆ (1974-77), ಹಣಕಾಸು ಮತ್ತು ಯೋಜನೆ (1980-82), ಕಾನೂನು, ಯುವಜನ ಸೇವೆ, ಸಂಸ್ಕೃತಿ, ವಾರ್ತೆ, ಸಂಸದೀಯ ವ್ಯವಹಾರ ಹಾಗೂ ಶಿಕ್ಷಣ (1989-92) ಖಾತೆಗಳನ್ನು ಮೊಯಿಲಿ ಸಚಿವರಾಗಿ ನಿರ್ವಹಿಸಿದ್ದಾರೆ. ಕರ್ನಾಟಕ ಮತದಾರರು ತಮ್ಮ ಕಾಂಗ್ರೆಸ್ ನಿಷ್ಠೆಯನ್ನು ಬದಲಾಯಿಸಿದಾಗ, ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದರು (1983-85). ಇದುವರೆಗಿನ ತಮ್ಮ ರಾಜಕೀಯ ಜೀವನದ ಎಲ್ಲ ಸಾಧನೆಗಳಿಗೆ ಕಳಸವಿಟ್ಟಂತೆ, ವೀರಪ್ಪ ಮೊಯಿಲಿಯವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಿ (1992-94) ಸೇವೆ ಸಲ್ಲಿಸಿ, ಜನರ ಮೆಚ್ಚುಗೆ, ಅಭಿಮಾನ ಮತ್ತು ಪ್ರೀತಿಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಮೊಯಿಲಿ ಅವರು ಕರ್ನಾಟಕ ರಾಜ್ಯ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೊಯಿಲಿಯವರು ರಾಜ್ಯಕ್ಕೆ ್ಫಸಲ್ಲಿಸಿರುವ ಅಮೋಘ ಸೇವೆಯನ್ನು ಗುರ್ತಿಸಿ, ಅವರಿಗೆ ಸಂದ ಪ್ರಶಸ್ತಿಗಳು ಹಲವು. ಅವುಗಳಲ್ಲಿ ಪ್ರಮುಖವಾದವುಗಳು : ಅಲ್ ಅಮೀನ್ ಪ್ರಥಮ ಸದ್ಭಾವನಾ ಪ್ರಶಸ್ತಿ (2000), ಹಿಂದುಳಿದ, ಶೋಷಿತ ಮತ್ತು ಅಲ್ಪ ಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ಇವರ ಕೊಡುಗೆಯನ್ನು ಗುರುತಿಸಿ ನೀಡಿದ ದೇವರಾಜ ಅರಸ್ ಪ್ರಶಸ್ತಿ (2001), ಆರ್ಯಭಟ ಪ್ರಶಸ್ತಿ (2001) ಹಾಗೂ ಗೊರೂರು ಪ್ರತಿಷ್ಠಾನದಿಂದ ಡಾ। ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ (2002).
ಸಾಹಿತ್ಯಿಕ ಕೊಡುಗೆ :
ನುರಿತ ರಾಜಕಾರಣಿ, ಸಮರ್ಥ ಆಡಳಿತಗಾರರಾಗಿರುವಂತೆ ಮೊಯಿಲಿ ಕವಿ ಹೃದಯವನ್ನೂ ಹೊಂದಿದ್ದಾರೆ. ಅವರು ಸ್ವತಃ ಕವಿ ಮತ್ತು ಸಾಹಿತಿ. ಅವರು ‘ಹಾಲುಜೇನು’, ‘ಮತ್ತೆ ನಡೆಯಲಿ ಸಮರ’, ‘ಯಕ್ಷಪ್ರಶ್ನೆ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ನಾಟಕಗಳೆಂದರೆ ‘ಮಿಲನ’, ‘ಪರಾಜಿತ ಮತ್ತು ಪ್ರೇಮವೆಂದರೆ’. ‘ಕೊಟ್ಟ’, ‘ಸಾಗರದೀಪ’, ‘ಸುಳಿಗಾಳಿ’, ‘ತೆಂಬೆರೆ’ ಅವರ ಕಾದಂಬರಿಗಳು. ಇವುಗಳಲ್ಲಿ ‘ಸಾಗರದೀಪ’ ಹಾಗೂ ‘ಸುಳಿಗಾಳಿಗಳು’ ಕನ್ನಡ ಚಲನಚಿತ್ರಗಳಾಗಿ ಪ್ರದಧಿರ್ಶಿತವಾದರೆ, ‘ಕೊಟ್ಟ’ ಹಾಗೂ ‘ತೆಂಬೆರೆ’ಗಳು ತಮಿಳು, ಹಿಂದಿ ಭಾಷೆಗೆ ಅನುವಾದವಾಗಿವೆ. ಎಂ.ಎಸ್. ಸತ್ಯು ಅವರ ನಿರ್ದೇಶನದಲ್ಲಿ ಕೊಟ್ಟ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ದೂರದರ್ಶನದಲ್ಲಿ ಟೆಲಿ-ಫಿಲ್ಮ್ ಆಗಿ ಬಿತ್ತರಗೊಂಡಿದೆ. ಅವರು ಇಂಗ್ಲೀಷಿನಲ್ಲಿ Musings on Indiaಎಂಬ ಲೇಖನ ಸಂಕಲವನ್ನು ಬರೆದಿದ್ದಾರೆ.
ಶ್ರೀ ರಾಮಾಯಣ ಮಹಾನ್ವೇಷಣಂ ಎಂಬ ಮಹಾಕಾವ್ಯದ ಮೊದಲ ಎರಡು ಸೋಪಾನ (ಸಂಪುಟ)ಗಳನ್ನು ಇತ್ತೀಚೆಗೆ ಮೊಯ್ಲಿ ಇತ್ತೀಚೆಗೆ ರಚಿಸಿದ್ದಾರೆ. ಈ ಕೃತಿಯು ಪಂಡಿತರುಗಳಿಂದ ಈ ಸಹಸ್ರಮಾನ ವರ್ಷದ ಮಹಾಕಾವ್ಯ ಎಂಬ ಮೆಚ್ಚುಗೆಗೆ ಒಳಗಾಗಿದೆ. ಈ ್ಫಸೋಪಾನಗಳು ಈಗಾಗಲೇ ಹಿಂದಿಗೆ ಅನುವಾದವಾಗುತ್ತಿವೆ. ಮುಂದಿನ ಎರಡು ವರ್ಷಗಳಲ್ಲಿ , ಉಳಿದ ಮೂರು ಸಂಪುಟಗಳನ್ನು ಬರೆಯುವ ಮಹತ್ವಾಕಾಂಕ್ಷೆಯನ್ನು ಮೊಯ್ಲಿ ಹೊಂದಿದ್ದಾರೆ.
ಮೊಯಿಲಿ ಪತ್ರಿಕೋದ್ಯಮದಲ್ಲೂ ನುರಿತವರು. ಫ್ರಂಟ್ಲೈನ್, ಸತ್ಯಮ್ ಆನ್ಲೈನ್, ಡೆಕ್ಕನ್ ಹೆರಾಲ್ಡ್ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಿರುತ್ತಾರೆ.
ಹಿಂದುಳಿದ ವರ್ಗದವರ ಅಭ್ಯುದಯಕ್ಕಾಗಿ ಮಾಡಿದ ಸಾಧನೆಗಳು:
- ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ವರ್ಗದವರಿಗಾಗಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದುದು
- ಚಿನ್ನಪ್ಪರೆಡ್ಡಿ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತಂದಿರುವುದು.
- ಇಂದಿನ ಸಿ.ಇ.ಟಿ. ವ್ಯವಸ್ಥೆಯ ಮೂಲಕ ರಾಜ್ಯದಲ್ಲಿ ವೃತ್ತಿ ಪರ ಶಿಕ್ಷಣಕ್ಕೆ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಜಾರಿಗೊಳಿಸಿದ ಕೀರ್ತಿ.
- ಡಿ. ದೇವರಾಜ ಅರಸ್ ಸಂಶೋಧನಾ ಸಂಸ್ಥೆಯ ಸ್ಥಾಪನೆ.
- ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಸ್ಥಾಪನೆ.
- ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷ ನಿರ್ದೇಶನಾಲಯದ ಸ್ಥಾಪನೆ.
- ಲಿಡ್ಕರ್ ನಿಗಮದ ಸ್ಥಾಪನೆ.
- ರಾಜ್ಯದಲ್ಲಿ ‘ಬೆಳ್ಳಿ ಬೆಳಕು’ ಎಂಬ ಯೋಜನೆಯ ಜಾರಿ.
- ಕಿಸಾನ್ ಸಭಾ ಟ್ರಸ್ಟ್ ಸ್ಥಾಪನೆ.
- ಭೂ ಸುಧಾರಣೆ ಕಾಯ್ದೆಯ ಅನ್ವಯ ಉಳುವವನಿಗೇ ಜಮೀನನ್ನು ಕೊಡುವ ಪ್ರಯತ್ನ .
- ಮಹಾತ್ಮಾ ಗಾಂಧೀ ವಸತಿ ಪ್ರೌಢ ಶಾಲೆಗಳ ಸ್ಥಾಪನೆ.
- ವಿವಿಧ ಸಾಮಾಜಿಕ ಕಲ್ಯಾಣ ಚಟುವಟಿಕೆಗಳನ್ನು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ನಡೆಸುತ್ತಿರುವುದು.
- ರಾಜ್ಯಾದ್ಯಂತ ಹಿಂದುಳಿದ ಅನಕ್ಷರಸ್ಥರ ಉದ್ದಾರಕ್ಕಾಗಿ ಸಾಕ್ಷರತಾ ಕಾರ್ಯಕ್ರಮವನ್ನು ಜಾರಿಗೊಳಿಸಿದುದು.
- ಪ್ರಾಥಮಿಕ ಶಾಲೆಯ 4ನೆಯ ತರಗತಿಯವರೆಗೆ ಕನ್ನಡವನ್ನು ಏಕೈಕ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೊಳಿಸಿದುದು.
- ಕುವೆಂಪು ವಿಶ್ವವಿದ್ಯಾಲಯದ ಸ್ಥಾಪನೆ .
- ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪಡಿಸಿದುದು.
- ಚಾಮರಾಜೇಂದ್ರ ದರ್ಶಕ ಕಲೆಗಳ ಅಕಾಡೆಮಿ ಸ್ಥಾಪನೆ.
- ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಡಾ।। ಬಿ.ಆರ್. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆ .
- ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯಕ್ಕೆ ಅನುದಾನ.
- ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ನಿಗಮದ ಸ್ಥಾಪನೆ.
- ಕನ್ನಡ ಚಲನಚಿತ್ರಗಳಿಗೆ ಶೇ. 50 ತೆರಿಗೆ ವಿನಾಯಿತಿ.
- ಕೃಷ್ಣ ಜಲಭಾಗ್ಯ ನಿಗಮದ ಸ್ಥಾಪನೆ.
- ದೇವನಹಳ್ಳಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯ ಬಗ್ಗೆ ಪರಿಕಲ್ಪನೆ.
- ತುಳು, ಕೊಂಕಣಿ, ಕೊಡವ ಮತ್ತು ಶಿಲ್ಪಕಲೆ ಅಕಾಡೆಮಿಗಳ ಸ್ಥಾಪನೆ.
- ಲೋಕ್ ಅದಾಲತ್ ಅನ್ನು ಜಾರಿಗೊಳಿಸಿದುದು.
- ವೈಟ್ಫೀಲ್ಡ್ನಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆ.
ಸಾಮಾಜ ಕಲ್ಯಾಣ ಚಟುವಟಿಕೆಗಳು :
ಕನ್ನಡ ಮತ್ತು ಶಿಕ್ಷಣ ರಂಗದ ಸಾಧನೆಗಳು :
ಮತ್ತಿತರ ಸಾಧನೆಗಳು :
ಮೊಯ್ಲಿ ಸಂಚಯ
ವೀರಪ್ಪ ಮೊಯಿಲಿಗೆ ದೇವರಾಜ ಅರಸು ಪ್ರಶಸ್ತಿ
ತೆರಿಗೆ ಸುಧಾರಣೆಯ ಜೊತೆಗೆ ಕಾವ್ಯ ಕನ್ನಿಕೆಯ ಆರಾಧನೆ
ಮೊಯಿಲಿ ಅವರ ರಾಮಾಯಣ ಮಹಾನ್ವೇಶಣಂ
ವೀರಪ್ಪ ಮೊಯ್ಲಿಗೆ ಅಂಬೇಡ್ಕರ್ ಪ್ರಶಸ್ತಿ
ಕೆಸಿಎ ಸಮುದಾಯದ ಜೊತೆ ಮೇ 27 ರಂದು ವೀರಪ್ಪ ಮೊಯ್ಲಿ
ಮುಖಪುಟ / ಸಾಹಿತ್ಯ ಸೊಗಡು