ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಬ್ಬ ಫುಟ್‌ಬಾಲ್‌ ದ್ರೋಣ : ಈತನಲ್ಲಿ ತರಪೇತಿ ಉಚಿತ !

By Staff
|
Google Oneindia Kannada News

*ಡಿ.ರಾಮರಾಜ್‌

Thyagaran (seated) being honoured by Karnatakas Minister for Civil Aviation and Infrastructure T John (right), while Bangalore mayor Chandrasekhar looks onಆರ್‌.ಸಿ.ಪ್ರಕಾಶ್‌ (ಪ್ರಸ್ತುತ ಮಹೀಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ), ನೋಯೆಲ್‌ ವಿಲ್ಸನ್‌ (ಚರ್ಚಿಲ್‌ ಸೋದರರು), ಕಾರ್ಲ್‌ಟನ್‌ ಚಾಪ್‌ಮನ್‌, ಸುರೇಶ್‌, ನಿಕ್ಸನ್‌, ಶಾಂತ ಕುಮಾರ್‌, ಆ್ಯಂಡ್ರೂ ಲೂಯಿಸ್‌, ತಿರುನವಕರಸು, ಸತೀಶ್‌ ಹಾಗೂ ಮಾರ್ಕ್‌. ಇವರೆಲ್ಲರನ್ನು ಸೇರಿಸಿದರೆ ಒಂದು ಕನಸಿನ ಫುಟ್‌ಬಾಲ್‌ ತಂಡವಾದೀತು. ಒಂದಿಲ್ಲೊಂದು ಅವಧಿಯಲ್ಲಿ ದೇಶಕ್ಕಾಗಿ ಕಾಲ್ಚೆಂಡಿನಾಟ ಆಡಿದ ದಿಗ್ಗಜರು ಇವರು.

ಈ ಎಲ್ಲರ ವಿಷಯದಲ್ಲಿ ಸಾಮಾನ್ಯವಾದದ್ದೇನು?
ಕಾಲ್ಚೆಂಡಿನಾಟದಲ್ಲಿ ಗಗನ ಚುಂಬಿ ಸಾಧನೆಯ ಕನಸು ಹೊತ್ತ ಇವರೆಲ್ಲಾ ಬೆಂಗಳೂರಿನ ಆಸ್ಟಿನ್‌ ಟೌನ್‌ನ ಮೂಲೆಯಲ್ಲಿ ಸಿ.ತ್ಯಾಗರಾಜನ್‌ ಅವರ ಗರಡಿಯಲ್ಲೇ ಪಳಗಿದ್ದು. ನಂದನ್‌ ಫುಟ್‌ಬಾಲ್‌ ಕೋಚಿಂಗ್‌ ಕ್ಯಾಂಪ್‌ ಹೆಸರಿನಲ್ಲಿ ಈ ತ್ಯಾಗರಾಜನ್‌ ಕಳೆದ 23 ವರ್ಷಗಳಿಂದ ಉಚಿತ ಫುಟ್‌ಬಾಲ್‌ ತರಪೇತಿ ಕೊಡುತ್ತಾ ಬಂದಿದ್ದಾರೆ.

ಯಾರೀ ತ್ಯಾಗರಾಜನ್‌?
ಹಾಕಿ ಬಗ್ಗೆ ಪ್ರೀತಿ ಇರುವವರಿಗೆ ದಿವಂಗತ ಸಿ.ದೇಶಮುಖ್‌ ಹೆಸರು ನೆನಪಿದ್ದೇ ಇರುತ್ತದೆ. ಭಾರತ ಹಾಕಿ ತಂಡದ ಗೋಲ್‌ ಕೀಪರ್‌ ಆಗಿ ದೇಶಮುಖ್‌ ಹೆಸರು ಮಾಡಿದ್ದವರು. ತ್ಯಾಗರಾಜನ್‌ ಅವರ ಸೋದರ. ಕಳೆದ 23 ವರ್ಷಗಳಿಂದ ನಂದನ್‌ ಕ್ಯಾಂಪ್‌ನ ಬೆನ್ನುಲುಬಾಗಿ ನಿಂತಿರುವ ತ್ಯಾಗರಾಜನ್‌ 8 ರಿಂದ 18 ವಯೋಮಿತಿಯ ಡಜನ್ನುಗಟ್ಟಲೆ ಹುಡುಗರಿಗೆ ಕಾಲ್ಕೆಂಡಿನಾಟದ ಕೈಚಳಕ ಮನದಟ್ಟು ಮಾಡಿಸಿದ್ದಾರೆ.

ಫುಟ್‌ಬಾಲ್‌ಗೂ ತ್ಯಾಗರಾಜ್‌ಗೂ ನಂಟು ಅಂಟಿದ್ದು ಹೇಗೆ? ಅವರ ಮಾತಲ್ಲೇ ಕೇಳಿ...
ನನ್ನ ಕುಟುಂಬದಲ್ಲಿ ನಾನು ಚಿಕ್ಕವನಾಗಿದ್ದಾಗಲಿಂದಲೂ ಸ್ಪೋರ್ಟ್ಸ್‌ ಅಂದರೆ ಎಲ್ಲರಿಗೂ ಇಷ್ಟ. ಅದೇ ವಾತಾವರಣದಲ್ಲಿ ಬೆಳೆದ ನನಗೂ ಸಹಜವಾಗೇ ಆಟದ ಬಗ್ಗೆ ಕುತೂಹಲ ಇತ್ತು. ಅಣ್ಣ ದೇಶಮುಖ್‌ ಸಾಧನೆ ಕಂಡ ಮೇಲಂತೂ ನಾನು ಹಾಗೂ ನನ್ನ ಕಸಿನ್ಸ್‌ ಆಟ ಅಂದರೆ ಬಾಯಿ ಬಿಡುತ್ತಿದ್ದೆವು. ನನ್ನ ಆಸಕ್ತಿ ಫುಟ್‌ಬಾಲ್‌ಗೆ ತಿರುಗಿತು. ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್‌ ತಂಡದಲ್ಲಿ ಫುಟ್‌ಬಾಲ್‌ ಆಡಿದೆ. ದಿನಗಳೆದಂತೆ ಫುಟ್‌ಬಾಲ್‌ ತರಪೇತಿ ಕೊಡುವ ಆಸೆ ಮೊಳೆಯಿತು. ಈ ಕ್ಯಾಂಪ್‌ ಶುರು ಮಾಡಿದೆ.

ನನ್ನ ಪ್ರಕಾರ ದೇಶದ ಬೆಸ್ಟ್‌ ನ್ಯಾಷನಲ್‌ ಗೋಲ್‌ ಕೀಪರ್‌ಗಳ ಪೈಕಿ ನಂದನ್‌ ಒಬ್ಬರು. ಆ ಕಾರಣಕ್ಕೇ ಅವರ ಹೆಸರಲ್ಲೇ ಕ್ಯಾಂಪ್‌ ಶುರು ಮಾಡಿದ್ದು. ಬೆಂಗಳೂರಿನ ಶಾಲಾ ಮಕ್ಕಳಿಗೆ ಹಾಗೂ ಸ್ಪೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾದ ಜೂನಿಯರ್‌ ಫುಟ್‌ಬಾಲರ್‌ಗಳಿಗೆ ನಾನು ನಿರಂತವಾಗಿ ತರಪೇತಿ ನೀಡುತ್ತೇನೆ. ನನ್ನ ಬಳಿ ಕಲಿತ ಆಟಗಾರರು ಸಾಧನೆ ಮಾಡಿದ್ದಾರೆ ಅನ್ನೋದೇ ನನಗೆ ಸಿಕ್ಕಿರುವ ದೊಡ್ಡ ಬಹುಮಾನ.

ನನ್ನ ಬಳಿ ಯಾವತ್ತೂ 100 ಹುಡುಗರು ತರಪೇತಿ ಪಡೆಯುತ್ತಾರೆ. ಅವರಲ್ಲಿ ಅನೇಕರು ಪ್ರತಿಷ್ಠಿತ ಕ್ಲಬ್‌ಗಳಿಗೆ ಆಡಿ ಹೆಸರು ಮಾಡಿದ್ದಾರೆ. ಕಳೆದ 23 ವರ್ಷಗಳಿಂದ ಸಮರ್ಥವಾಗಿ ಕ್ಯಾಂಪ್‌ ನಡೆಸಿಕೊಂಡು ಬಂದಿದ್ದೇನೆ; ಅದೂ ಉಚಿತವಾಗಿ ತರಪೇತಿ ಕೊಡುತ್ತಾ. ಅದೇ ನನಗೆ ಹೆಮ್ಮೆ ಎನಿಸುತ್ತದೆ.

ಆಟಕ್ಕಾಗಿ ಕೆಲಸದಿಂದ ಸ್ವಯಂ ನಿವೃತ್ತಿ
ಕೆಲವರು ಆಟ ಆಡೋಕೆ, ಆ ಮೂಲಕ ದುಡ್ಡು ಮಾಡೋಕೆ ಕೆಲಸ ಬಿಡಬಹುದು. ಆದರೆ ತ್ಯಾಗರಾಜನ್‌ ಹುಡುಗರಿಗೆ ಹೆಚ್ಚು ತರಪೇತಿ ಕೊಡಬೇಕು ಅನ್ನುವ ಕಾರಣಕ್ಕೆ ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದರು. ಚಿಕ್ಕಾಸಿನ ನೆರವೂ ಇಲ್ಲದೆ ಉಚಿತವಾಗಿ 23 ವರ್ಷಗಳ ಕಾಲ ತರಪೇತಿ ಕೊಡೋದು ಹುಡುಗಾಟವೇ?

ಅಂತೂ ಇಂತು, ನಮ್ಮ ಬೆಂಗಳೂರು ನಗರ ಪಾಲಿಕೆಗೆ ಇವರ ಸಾಧನೆ ಗಮನಕ್ಕೆ ಬಂತು. ಕಳೆದ ಏಪ್ರಿಲ್‌ನಲ್ಲಿ ಇವರಿಗೆ ಮೇಯರ್‌ ಚಂದ್ರಶೇಖರ್‌ ಕೆಂಪೇಗೌಡ ಪ್ರಶಸ್ತಿ ಕೊಟ್ಟು ಗೌರವಿಸಿದರು.

ನೀವೂ ಫುಟ್‌ಬಾಲ್‌ ತರಪೇತಿ ಪಡೀಬೇಕೆ? ಆಸ್ಟಿನ್‌ ಟೌನ್‌ನಲ್ಲಿ ನಿಂತು ಕೂಗು ಹಾಕಿ. ತ್ಯಾಗರಾಜನ್‌ ಬರುತ್ತಾರೆ !

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X