ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೂವರೆ ವರ್ಷದ ಈ ಪೋರನಿಗೆ ಕಂಪ್ಯೂಟರ್‌ ಕರಗತ

By Staff
|
Google Oneindia Kannada News

ಬೆಂಗಳೂರು : ಇವಎರಡು ವರ್ಷ ಎರಡು ತಿಂಗಳ ಪೋರ, ಹೆಸರು ಮೊಹಮ್ಮದ್‌ ಸ್ವರೂಪ. ಹರಳು ಹುರಿದಂತೆ ಮಾತನಾಡುತ್ತಾನೆ. ಜಗತ್ತಿನ 50 ರಾಷ್ಟ್ರಗಳ ಧ್ವಜಗಳನ್ನು ಗುರ್ತಿಸುತ್ತಾನೆ. ಕೇವಲ ಒಂದು ವರ್ಷ ನಾಲ್ಕು ತಿಂಗಳಿನವನಾಗಿದ್ದಾಗಲೇ ಒಂದೇ ದಿನದಲ್ಲಿ ಇಂಗ್ಲಿಷ್‌ ಅಕ್ಷರ ಹಾಗೂ ಪದಗಳನ್ನು ಕಲಿತು ಒಪ್ಪಿಸಿದ ಖ್ಯಾತಿ ಈ ಪೋರನದು.

ಈತನ ತಂದೆ ರಫೀಕ್‌, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶೆರವೂರಿನಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು. ತಾಯಿ ಆಸಿಕ. ಈತನ ಹಾಗೂ ಕುಟುಂಬದ ವಿವರ ತಿಳಿಸುವ ವೈಬ್‌ಸೈಟ್‌ ಶುಕ್ರವಾರ ಬೆಂಗಳೂರಿನಲ್ಲಿ ಉದ್ಘಾಟನೆಯಾಯಿತು. ಈ ವೆಬ್‌ ಸೈಟನ್ನು ಮೂಡಬಿದರೆಯ ಆಳ್ವ ಶಿಕ್ಷಣ ಸಂಸ್ಥೆಯ ಡಾ. ಮೋಹನ್‌ ಆಳ್ವ ಉದ್ಘಾಟಿಸಿದರು. ಮಂಗಳೂರಿನ ಶ್ರೀಗುರು ಇನ್‌ಫೋಟೆಕ್‌ ಸಂಸ್ಥೆ ಈ ವೆಬ್‌ಸೈಟನ್ನು ಸಿದ್ಧಗೊಳಿಸಿದೆ.

ಅದ್ಬುತ ಜ್ಞಾಪಕ ಶಕ್ತಿ ಪಡೆದಿರುವ ಸ್ವರೂಪನಿಗೆ ಸಾಮಾನ್ಯ ಜ್ಞಾನ, ಚೆಸ್‌, ಚಿತ್ರ ಬಿಡಿಸುವುದು ಎಲ್ಲ ಗೊತ್ತು. ಕಂಪ್ಯೂಟರ್‌ನಲ್ಲಿ ಚಿತ್ರ ಬಿಡಿಸುವುದು, ಇ-ಮೇಲ್‌ ಕಳಿಸುವುದು, ಫೋಟೋ ಸ್ಕ್ಯಾನಿಂಗ್‌ ಕರತಲಾಮಲಕ. ಈ ಪುಟಾಣಿಯ ಪ್ರತಿಭೆ ಕಂಡ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಈತನಿಗೆ ಕಂಪ್ಯೂಟರ್‌ನ್ನು ಈ ಹಿಂದೆ ಉಡುಗೊರೆಯಾಗಿ ನೀಡಿದ್ದರು.

ಬೆಳೆವ ಸಿರಿ ಮೊಳಕೆಯಲ್ಲಿ : ಕಂಪ್ಯೂಟರ್‌ನ್ನು ಯಾರ ಸಹಾಯವೂ ಇಲ್ಲದೆ ಬಳಸುವ ಸ್ವರೂಪ್‌, ಭೂಪಟ ನೋಡಿಯೇ ರಾಷ್ಟ್ರಗಳ ಹೆಸರನ್ನು ಗುರುತಿಸುತ್ತಾನೆ. ಪೋಷಕರೊಂದಿಗೆ ಹೊರಗೆ ಹೋದಾಗ ಸಿಕ್ಕ, ಸಿಕ್ಕ ಬೋರ್ಡ್‌ಗಳನ್ನು ಪಟಪಟನೆ ಓದುವ ಮೂಲಕ ತಂದೆಯನ್ನು ಅಚ್ಚರಿಗೊಳಿಸಿದ. ಎರಡನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹೊತ್ತಿಗೆ ಸಾವಿರ ಪದಗಳನ್ನು ಓದುತ್ತಿದ್ದ, 5000ಸಾವಿರ ಪದಗಳ ಅರ್ಥ ಹೇಳುತ್ತಿದ್ದ. ಕಂಡ ಕಂಡದ್ದನ್ನೆಲ್ಲಾ ಹೋಲಿಸುವುದು, ಸಂಬಂಧ ಕಲ್ಪಿಸುವುದು, ವಿಶ್ಲೇಷಿಸುವುದನ್ನು ಕರಗತ ಮಾಡಿಕೊಂಡ ಎಂದು ಅವನ ತಂದೆ ವಿವರಿಸುತ್ತಾರೆ.

ಈಗ ಆತನಿಗೆ ವಾಹನಗಳ ಬಿಡಿಭಾಗಗಳು, ಖಗೋಳಶಾಸ್ತ್ರ, ಮಾನವ ಶರೀರಶಾಸ್ತ್ರದ ಬಗೆಗೂ ತಿಳಿವಳಿಕೆ ಇದೆ. ಕನ್ನಡ, ಇಂಗ್ಲಿಷ್‌ ಹಾಗೂ ಮಲೆಯಾಳಂನಲ್ಲಿ ಮಾತನಾಡಬಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X