ಹತ್ತು ಚೆಲ್ಲಿ ನೂರು ಗಳಿಸಿರುವ ಏಕೈಕ ಎನ್‌ಆರ್‌ಐ ಖೋಸ್ಲ

ನ್ಯೂಯಾರ್ಕ್‌ : ಭಾರತೀಯ ಮೂಲದ ವಿನೋದ್‌ ಖೋಸ್ಲ ಯಶಸ್ವಿ ವೆಂಚರ್‌ ಕ್ಯಾಪಿಟಲಿಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೆ ಯಾವ ವೆಂಚರ್‌ ಕ್ಯಾಪಿಟಲಿಸ್ಟ್‌ ಸಹ ಖೋಸ್ಲರಷ್ಟು ಯಶಸ್ವಿಯಾಗಿಲ್ಲ ಅನ್ನುತ್ತದೆ ಫಾರ್‌ಚೂನ್‌ ನಿಯತಕಾಲಿಕ ಸಮೂಹದ ‘ವ್ಯಾಲಿ ಟಾಕ್‌’ ಆನ್‌ಲೈನ್‌ ಸಂಚಿಕೆ.

ಕ್ಲೀನರ್‌ ಪರ್ಕಿನ್ಸ್‌ ಕಾಫೀಲ್ಡ್‌ ಅಂಡ್‌ ಬಯರ್ಸ್‌ (ಕೆಪಿಸಿಬಿ) ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಯ ಒಡೆಯ ವಿನೋದ್‌ ಉದ್ಯಮಿಯಾಗಿ 5 ವರ್ಷಗಳಷ್ಟೇ ಕಳೆದಿವೆ. ಈವತ್ತು ಆತನ ಸಹ ನೌಕರರು, ಈ ಕ್ಷೇತ್ರದಲ್ಲಿ ವಿನೋದ್‌ನಷ್ಟು ಭಾರೀ ಹಣ ಯಾರೂ ಮಾಡಲಿಲ್ಲ ಅನ್ನುತ್ತಿದ್ದಾರೆ. ಅನೇಕ ಇಂಡಿಯನ್‌ ಅಮೆರಿಕನ್‌ ಉದ್ದಿಮೆಗಳೂ ಸೇರಿದಂತೆ ಹಲವಾರು ಕಡೆ ಹಣ ಚೆಲ್ಲಿರುವ ವಿನೋದ್‌ಗೆ ಭವಿಷ್ಯತ್ತಿನ ಅವಿಭಾಜ್ಯ ಅಂಗವಾಗಲಿದೆ ಎನ್ನಲಾಗುತ್ತಿರುವ ಇಂಟರ್‌ನೆಟ್‌ನ ಮೂಲಭೂತ ಸೌಕರ್ಯ ತಂತ್ರಜ್ಞಾನ ಸಾಕಷ್ಟು ಹಣ ಮಾಡಿಕೊಡುತ್ತಿದೆ. ಈ ಕ್ಷೇತ್ರದಲ್ಲಂತೂ ವಿನೋದ್‌ ಬಿಟ್ಟರೆ ಈವರೆಗೆ ಯಾರೂ ಈ ಪಾಟಿ ಯಶಸ್ವಿಯಾಗಿಲ್ಲ ಅನ್ನುತ್ತದೆ ವ್ಯಾಲಿ ಟಾಕ್‌.

ಇಂಡಿಯನ್‌ ಅಮೆರಿಕನ್ನರು ಕಟ್ಟಿದ ಸಂಸ್ಥೆಗಳು ದಾಖಲೆ ಮೊತ್ತಕ್ಕೆ ಬಿಕರಿಯಾಗಿರುವ ಅನೇಕ ಉದಾಹರಣೆಗಳಿವೆ. ಪ್ರದೀಪ್‌ ಸಿಂಧು ಕಟ್ಟಿದ ಜ್ಯುನಿಪೆರ್‌ ನೆಟ್‌ವರ್ಕ್ಸ್‌ ಅನ್ನು ಸಿಸ್ಕೋ ಎಂಬ ಕಂಪನಿ 700 ಕೋಟಿ ಡಾಲರ್‌ಗಳಿಗೆ ಕೊಂಡುಕೊಂಡಿತು. ಇದೇ ರೀತಿ ಸಿಯಾರ ಸಿಸ್ಟಂಸ್‌ ಎಂಬ ಸಂಸ್ಥೆ ರೆಡ್‌ಬ್ಯಾಕ್‌ ನೆಟ್‌ವರ್ಕ್ಸ್‌ಗೆ ದಾಖಲೆ 10.3 ಶತಕೋಟಿ ಡಾಲರ್‌ಗಳಿಗೆ ಬಿಕರಿಯಾಯಿತು.

ಐದೇ ವರ್ಷದಲ್ಲಿ ಬದಲಾದ ಸ್ಥಿತಿ : ವ್ಯಾಲೆ ಟ್ಯಾಕ್‌ನ ಅಂದಾಜಿನ ಪ್ರಕಾರ, ಖೋಸ್ಲ ಮತ್ತು ಆತನ 10 ಜೊತೆಗಾರರು (ಕೆಪಿಸಿಬಿ ಕಟ್ಟಿದವರು) 500 ಕೋಟಿ ಡಾಲರ್‌ ಹಣ ಮಾಡುತ್ತಿದ್ದಾರೆ. ಜ್ಯುನಿಪೆರ್‌ ನೆಟ್‌ವರ್ಕ್ಸ್‌ ಒಂದರಲ್ಲೇ ಕೆಪಿಸಿಬಿಯ ಸ್ಟಾಕ್‌ ಒಡೆತನ 800 ಕೋಟಿ ಡಾಲರ್‌ಗಳಷ್ಟಿದೆ. ನಾಲ್ಕೈದು ವರ್ಷಗಳ ಅಲ್ಪಾವಧಿಯಲ್ಲಿ ಇಷ್ಟೊಂದು ಹಣ ಗಳಿಸುವುದು ಸಾಧನೆಯೇ ಸರಿ. 1996ರಲ್ಲಿ ಪ್ರದೀಪ್‌ ಸಿಂಧು ಖೋಸ್ಲಾ ಕಚೇರಿಗೆ ಹೋದಾಗ ಆತ ಕೊಟ್ಟದ್ದು ಕೆಲವೇ ಲಕ್ಷ ಡಾಲರ್‌ಗಳು. ನಂತರ 400 ಕೋಟಿ ಡಾಲರ್‌ಗಳ ಧನ ಸಹಾಯ ಮಾಡಿದ ಖೋಸ್ಲಾ, ಜ್ಯುನಿಪೆರ್‌ ನೆಟ್‌ವರ್ಕ್ಸ್‌ ಬೆಳೆಯಲು ಕಾರಣರಾದರು.

ಸಾರ್ವಜನಿಕ ಮಾರುಕಟ್ಟೆಯಲ್ಲಿ ನಾವು ಎಷ್ಟು ಕಾಲ ಉಳಿಯುತ್ತೇವೆ ಅನ್ನೋದು ಮುಖ್ಯ. ದೊಡ್ಡ ದೊಡ್ಡ ಉದ್ದಿಮೆಗಳನ್ನು ಬೆಳೆಸುವುದೇ ನನ್ನ ಗುರಿ. ಈ ನಿಟ್ಟಿನಲ್ಲಿ ಲಾಭಕ್ಕೆ ಎರಡನೇ ಆದ್ಯತೆ ಎಂದು ವ್ಯಾಲಿ ಟಾಕ್‌ಗೆ ಖೋಸ್ಲ ಹೇಳಿದ್ದಾರೆ. ಅಂದರೆ ಖೋಸ್ಲ ಜಯಭೇರಿ ಮುಂದುವರಿಯುವುದು ಖಚಿತ. ಯಾಕೆಂದರೆ ಮಾರುಕಟ್ಟೆಯಲ್ಲಿ ದೀರ್ಘಕಾಲ ಉಳಿಯುವ ಲೆಕ್ಕಾಚಾರದಲ್ಲೇ ಅವರು ಹೆಜ್ಜೆ ಇಡುತ್ತಿದ್ದಾರೆ.

(ಐಎ-ಎ-ನ್‌ಎ-ಸ್‌)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+