• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಮನ ಪ್ರತಿಭೆಯ ವಾದಿರಾಜ್‌

By Staff
|

ಅಪ್ಪ , ಅಮ್ಮ ಜಗಳದಲಿ ಕೂಸು ಬಡವಾಯ್ತು ಗೀತೆ ಕೇಳಿದೊಡನೆ ವಾದಿರಾಜ್‌ ನೆನಪಿಗೆ ಬರುತ್ತಾರೆ. ಕಪ್ಪು - ಬಿಳುಪು ಚಿತ್ರಗಳ ಕಾಲದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹ ರಾಜು, ಬಾಲಕೃಷ್ಣ, ದ್ವಾರಕೀಶ್‌ ಮೊದಲಾದ ಹಾಸ್ಯ ನಟರ ಸಾಲಿನಲ್ಲಿ ತಮ್ಮದೇ ಛಾಪು ಮೂಡಿಸಿದ ವಾದಿರಾಜ್‌ ಕೇವಲ ನಟರಷ್ಟೇ ಅಲ್ಲ, ನಿರ್ಮಾಪಕ, ನಿರ್ದೇಶಕ, ಸಾಹಿತಿ.. ಒಟ್ಟಿನಲ್ಲಿ ಬಹುಮುಖ ಪ್ರತಿಭೆ.

ಉಪಾಧ್ಯಾಯ ಶ್ರೀನಿವಾಸ ವಾದಿರಾಜ್‌ ಜನಿಸಿದ್ದು 3-1-27ರಲ್ಲಿ. ಉಡುಪಿ ಜಿಲ್ಲೆಯ ಪಣಿಯಾಡಿ ಇವರ ಹುಟ್ಟೂರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ವಾದಿರಾಜ್‌ರಿಗೆ ಹೆಚ್ಚು ಅನ್ವಯಿಸುತ್ತದೆ.

ವಾದಿರಾಜ್‌ ಚಲನಚಿತ್ರಗಳ ಅಭಿನಯದಿಂದ ಕನ್ನಡಿಗರಿಗೆ ಸುಪರಿಚಿತರಾದರೂ, 1500ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಹಿರಿಮೆ ಇವರದು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಾದಿರಾಜ್‌ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ರಾಷ್ಟ್ರದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. 1962ರಲ್ಲಿ ವಾದಿರಾಜ್‌ ಕತೆ, ಚಿತ್ರಕತೆ ಬರೆದು ನಿರ್ಮಿಸಿದ ಪ್ರಥಮ ಚಿತ್ರ ನಂದಾದೀಪ ಇಂದಿಗೂ ಕನ್ನಡಿಗರ ಮನದಲ್ಲಿ ಹಚ್ಚ ಹಸುರಾಗಿದೆ. ಕಿವುಡು, ಮೂಕ ಮಕ್ಕಳ ಬವಣೆಯನ್ನು ಆಧರಿಸಿ ಇವರ ನಾಂದಿ ಚಿತ್ರ ಕ್ರಾಂತಿಯನ್ನೇ ಮಾಡಿತ್ತು. ನಂದಾದೀಪ, ಸೀತಾ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದ ಕೀರ್ತಿಯೂ ವಾದಿರಾಜರದು.

68ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಲನಚಿತ್ರ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಪುರಸ್ಕೃತರಾಗಿದ್ದ ವಾದಿರಾಜರನ್ನು ದಕ್ಷಿಣ ಕನ್ನಡ ಕನ್ನಡಿಗರ ಬಳಗವೂ ಸನ್ಮಾನಿಸುತ್ತಿದೆ. (ಭಾರ್ಗವ ಪ್ರಶಸ್ತಿ, 2001) ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ನಾಯಕಿಯಾಗಿ ಮೆರೆದ ಹರಿಣಿಯವರ ಸೋದರರಾದ ವಾದಿರಾಜ್‌ರಿಗೆ ಪ್ರತಿಷ್ಠಿತ ಡಾ. ರಾಜ್‌ಕುಮಾರ್‌ ಪ್ರಶಸ್ತಿಯೂ ಲಭಿಸಿದೆ.

ಸುಮಾರು 14 ಚಲನಚಿತ್ರ ನಿರ್ಮಿಸಿರುವ ವಾದಿರಾಜ್‌, ನಿರ್ದೇಶಕರಾಗಿ ಹಲವು ಡಾಕ್ಯುಮೆಂಟರಿ, ಟೆಲಿ ಸಿನಿಮಾಗಳನ್ನೂ ರಚಿಸಿದ್ದಾರೆ. ಚಲನಚಿತ್ರೋದ್ಯಮದ ಆರಂಭದ ದಿನಗಳಿಂದಲೇ ಕಲಾಸೇವೆ ಮಾಡುತ್ತಿರುವ ವಾದಿರಾಜ್‌ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಖ್ಯಾತನಾಮರ ಸಾಲಿನಲ್ಲಿ ಸೇರುವ ವಾಮನ ಪ್ರತಿಭೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X