• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಪದ, ಸಾಂಸ್ಕೃತಿಕ ಕ್ಷೇತ್ರದ ಹರಿಕಾರ ಸಿಂಪಿ ಲಿಂಗಣ್ಣ

By Staff
|

ಉತ್ತರ ಕರ್ನಾಟಕದ ಉದ್ಧಾಮ ಸಾಹಿತಿಗಳಲ್ಲಿ ಒಬ್ಬರಾದ ಸಿಂಪಿ ಲಿಂಗಣ್ಣ ಬೆಡಗಿನ ನುಡಿಕಾರ, ಹಾಸ್ಯಯೋಗಿ ಎಂದೇ ಸುಪ್ರಸಿದ್ಧರಾಗಿದ್ದವರು. ತಮ್ಮ ಬದುಕಿನುದ್ದಕ್ಕೂ ಹಲವು ಪ್ರಥಮ ದಾಖಲೆಗಳನ್ನು ದಾಖಲಿಸಿದ ಕನ್ನಡ ಜನಪದ ಮತ್ತು ಸಾಂಸ್ಕೃತಿಕ ಜಗತ್ತಿನ ಈ ಹಿರಿಯ ಚೇತನ ನಮ್ಮನ್ನಗಲಿ ಮೇ 5ಕ್ಕೆ 8 ವರ್ಷಗಳೇ ತುಂಬುತ್ತಿವೆ.

ಉತ್ತರ ಕರ್ನಾಟಕದ ಗಂಡುಮೆಟ್ಟಿನ ಕನ್ನಡ ಭಾಷೆಯನ್ನು ವಿಶಾಲ ಕರ್ನಾಟಕಕ್ಕೆ ಪರಿಚಯಿಸಿದ ಲಿಂಗಣ್ಣನವರು ಮಹಾತ್ಮಗಾಂಧಿ ಹಾಗೂ ಅರವಿಂದರಿಂದ ಪ್ರಭಾವಿತರಾಗಿ ತಮ್ಮ ಲೇಖನಗಳ ಮೂಲಕ ಸಮಾಜವನ್ನು ತಿದ್ದುವ ಕ್ರಾಂತಿಯೋಗಿಯಾಗಿ ದುಡಿದವರು.

1905 ರ ಫೆಬ್ರವರಿಯಲ್ಲಿ ಬಿಜಾಪುರ ಜಿಲ್ಲೆಯ ಚಡಚಣದಲ್ಲಿ ಜನಿಸಿದ ನಾಗಪ್ಪ ಶಿವಯೋಗಿ ಸಿಂಪಿಯವರು ಭರತ ಎಂಬ ಕಾವ್ಯನಾಮದಿಂದ ಸಾಹಿತ್ಯರಂಗವನ್ನು ಪ್ರವೇಶಿಸಿದರೂ, ಸಿಂಪಿ ಲಿಂಗಣ್ಣ ಎಂಬುದೇ ಅವರ ಕಾವ್ಯನಾಮವಾಗಿ ಪ್ರಸಿದ್ಧಿ ಪಡೆಯಿತು.

ಪ್ರೊ. ವಾಲಿಯವರು ಸಿಂಪಿ ಲಿಂಗಣ್ಣನವರ ಬದುಕು ಬರಹ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್‌ ಪಡೆದಿದ್ದಾರೆ ಎಂದರೆ, ಇವರ ಸಾಹಿತ್ಯ ಕೊಡುಗೆ ಎಷ್ಟು ಅಮೂಲ್ಯ ಎಂದು ವೇದ್ಯವಾಗುತ್ತದೆ. ಶಿಕ್ಷಕ ವೃತ್ತಿಯನ್ನು ತಮ್ಮ ಜೀವನೋಪಾಯಕ್ಕೆ ಸಿಂಪಿಯವರು ಆಯ್ಕೆ ಮಾಡಿಕೊಂಡರೂ, ಆದರ್ಶ ಶಿಕ್ಷಕ ಪ್ರಶಸ್ತಿ ಇವರ ಸೇವೆಯನ್ನು ಗುರುತಿಸಿದರೂ, ಸಿಂಪಿಯವರು ತಮ್ಮ ಬದುಕನ್ನು ಸಾಹಿತ್ಯ ಸರಸ್ವತಿಯ ಆರಾಧನೆಗೇ ಮುಡಿಪಾಗಿಟ್ಟಿದ್ದರು.

ಪ್ರಬಂಧ, ಲಘು ಹಾಸ್ಯ ಬರಹ, ನಾಟಕ, ಜನಪದ ಸಾಹಿತ್ಯ ಸಂಪಾದನೆ ಕ್ಷೇತ್ರದಲ್ಲಿ ಇವರು ನೀಡಿರುವ ಕೊಡುಗೆ ಅನನ್ಯ. ಜನಪದ ಹಾಗೂ ಸಾಂಸ್ಕೃತಿಕ ಜಗತ್ತಿನ ಹರಿಕಾರರಾಗಿದ್ದ ಸಿಂಪಿಯವರ ಸಾಹಿತ್ಯಕ್ಕೆ ಪ್ರಶಸ್ತಿ, ಪುರಸ್ಕಾರಗಳ ಅತಿದೊಡ್ಡ ಮಾಲೆಯೇ ಅಲಂಕರಿಸಿದೆ.

ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಸಿಂಪಿ ಲಿಂಗಣ್ಣನವರು ಜೀವನಚರಿತ್ರೆ, ಕಾದಂಬರಿ, ಕವನ, ಪ್ರಬಂಧ, ಗದ್ಯಕಾವ್ಯ, ರೂಪಕ, ಮಕ್ಕಳ ಪುಸ್ತಕ, ಹರಟೆ ಹಾಗೂ ಪತ್ರಿಕೆಯ ಅಂಕಣಕಾರರಾಗಿಯೂ ಜನಮನಗೆದ್ದಿದ್ದರು.

ಗರತಿಯ ಬಾಳ ಸಂಹಿತೆ, ತಲೆಮಾರಿನ ಹಿಂದೆ, ಅಸ್ತವ್ಯಸ್ತ, ಧರ್ಮಸಭೆ, ಆಹಾರ ಸಮಸ್ಯೆ, ಕುಟುಂಬ ಯೋಜನೆ, ಕೃತಿಚೌರ್ಯ, ದೇಶಭಕ್ತಿ ಗೀತೆಗಳು, ನಾಮದೇವ, ಭಗವಾನ್‌ ಬುದ್ಧ, ಅಂದಚೆಂದ ಮೊದಲಾದವು ಇವರ ಪ್ರಮುಖ ಕೃತಿಗಳು.

1956ರಲ್ಲಿ ಮುಂಬಯಿ ಸರಕಾರ ಸಿಂಪಿಯವರ ಸ್ವರ್ಗದೋಲೆಗಳು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಗರತಿಯ ಬಾಳು ಕೃತಿ ಮೈಸೂರು ಸರಕಾರದ ಪ್ರಶಸ್ತಿಗೆ ಪಾತ್ರವಾಗಿತ್ತು. ನೂರು ಗಡಿಗೆ ಒಂದು ಬಡಿಗೆ, ನಾಟ್ಯ ಸಾಧನೆ, ಶ್ರುತಾಶ್ರುತ ಕೃತಿಗಳು ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತವಾಗಿದ್ದವು.

ಕರ್ನಾಟಕ ಜಾನಪದ ಟ್ರಸ್ಟ್‌ ಸನ್ಮಾನ, ಗುಲ್ಬರ್ಗಾ ವಿ.ವಿ. ಗೌರವ ಡಾಕ್ಟರೇಟ್‌, ಕನ್ನಡ ಸಾಹಿತ್ಯ ಪರಿಷತ್‌ ಗೌರವ ಸದಸ್ಯತ್ವ, ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸಿಂಪಿ ಲಿಂಗಣ್ಣನವರನ್ನು ಕೊಪ್ಪಳದಲ್ಲಿ ಜರುಗಿದ 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅವರ ಸಾಹಿತ್ಯ ಸೇವೆಗೆ ಅತ್ಯಮೂಲ್ಯವಾದ ಗೌರವ ನೀಡಿ ಗೌರವಿಸಲಾಗಿತ್ತು.

ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಮರುವರ್ಷವೇ ಅಂದರೆ, 1993ರ ಮೇ 5ರಂದು ತಮ್ಮ 89ನೇ ವಯಸ್ಸಿನಲ್ಲಿ ಸಿಂಪಿ ಲಿಂಗಣ್ಣನವರು ನಮ್ಮೆಲ್ಲರನ್ನೂ ಅಗಲಿದರೂ, ಅವರ ವೈವಿಧ್ಯಪೂರ್ಣ ಕೃತಿಗಳು ಇಂದೂ ನಿತ್ಯನೂತನವಾಗಿ, ಕನ್ನಡ ಸಾಹಿತ್ಯಪ್ರಿಯರ ಮನದಾಳದಲ್ಲಿ ಹಚ್ಚ ಹಸುರಾಗಿವೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X