• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಕ್ಷಗಾನದ ತವರಲ್ಲೊಬ್ಬ ಯಕ್ಷ!

By Staff
|

*ರಘುನಾಥ ಚ.ಹ.

ದಕ್ಷಿಣಕನ್ನಡದಲ್ಲಿ ಜಾದೂ ಹುಟ್ಟು ಹಾಕಿದ ಪ್ರಥಮಿಗ ಅಂತರರಾಷ್ಟ್ರೀಯ ಖ್ಯಾತಿಯ ಪ್ರೊ.ಶಂಕರ್‌ ಹುಟ್ಟಿದ್ದು ಮೇ 5, 1951 ರಲ್ಲಿ . ಮುಂದೊಂದು ದಿನ ತಮ್ಮ ಮಗ ಅಂತರರಾಷ್ಟ್ರೀಯ ಮಟ್ಟದ ಜಾದೂಗಾರನಾಗುವ ಕನಸನ್ನೂ ತಂದೆ ಶಿಮ್ಲಡ್ಕ ಶಾಮಭಟ್ಟರು ಕಂಡಿರಲಿಲ್ಲ .

ಶಂಕರ್‌ ಮೊದಲ ಬಾರಿಗೆ ಸಾರ್ವಜನಿಕ ಜಾದೂ ಪ್ರದರ್ಶನ ನೀಡಿದಾಗ ಅವರ ವಯಸ್ಸು 14 ವರ್ಷ, 1965 ನೇ ಇಸವಿಯದು. ಅಂದಿನಿಂದ ಇಂದಿನವರೆಗೆ- ಭಾರತ ಮಾತ್ರವಲ್ಲದೆ ಮಧ್ಯ ಪ್ರಾಚ್ಯ, ಅಮೆರಿಕ, ಇಂಗ್ಲೆಂಡ್‌, ಜರ್ಮನಿ, ಸ್ವಿಟ್ಜರ್‌ಲೆಂಡ್‌ಗಳಲ್ಲೂ ಶಂಕರ್‌ ಪ್ರದರ್ಶನ ನೀಡಿದ್ದಾರೆ. ಶಂಕರ್‌ ಅವರದೀಗ ಏಕವ್ಯಕ್ತಿ ಪ್ರದರ್ಶನವಲ್ಲ . ಅದು ವರ್ಲ್ಡ್‌ ಆಫ್‌ ಮ್ಯಾಜಿಕ್‌ನ ಜಾದೂಲೋಕ! ಅಂದಾಜು 6 ಸಾವಿರ ಪ್ರದರ್ಶನಗಳನ್ನು ನೀಡಿದ ಅಗ್ಗಳಿಕೆ ಅವರದು.

ನಿಂತ ನಿಲುವಲ್ಲೇ ಸಂದರ್ಭಾನುಸಾರ ಹೊಸ ಜಾದೂಗಳನ್ನು ಸೃಷ್ಟಿಸುವುದು ಶಂಕರ್‌ ಅವರ ಇನ್ನೊಂದು ವಿಶೇಷ. ಜಾದೂ ಎಂದರೆ ಕಣ್ಕಟ್ಟಲ್ಲ ; ಅದು ಕೈ ಚಳಕ. ಜಾದೂ ಕೇವಲ ಮನರಂಜನೆಯಲ್ಲ ; ವೃತ್ತಿಯೂ ಹೌದು. ಜಾದೂ ತಂತ್ರಗಾರಿಕೆ ಮಾತ್ರವಲ್ಲ ; ವಿಜ್ಞಾನವೂ ನಿಜ ಅನ್ನುತ್ತಾರೆ ಶಂಕರ್‌. ಜಾದೂವಿನ ಮೂಲಕ ಸ್ವಯಂ ಉದ್ಯೋಗವನ್ನು ಸೃಷ್ಟಿಸುವುದು ಅವರ ಉದ್ದಿಶ್ಯ.

ಜಾದೂ ಮೂಲಕ ರೋಗಿಗಳ ಕಾಯಿಲೆಯನ್ನು ತ್ವರಿತಗತಿಯಲ್ಲಿ ಗುಣಪಡಿಸಬಹುದು ಎನ್ನುತ್ತಾರೆ ಶಂಕರ್‌. ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನೂ ನಡೆಸಿದ್ದಾರೆ. ಈ ರೀತಿಯ ಪ್ರದರ್ಶನಗಳನ್ನು - ಅಮೆರಿಕಾದ ಬ್ರಾಂಕ್ಸ್‌ ಲೆಬನನ್‌ ಸೈಕಿಕ್‌ ಆಸ್ಪತ್ರೆ, ದೆಹಲಿಯ ಗಂಗಾರಾಂ ಆಸ್ಪತ್ರೆ, ಮಂಗಳೂರಿನ ಯುನಿಟಿ ಹೆಲ್ತ್‌ ಕಾಂಪ್ಲೆಕ್ಸ್‌ , ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ನೀಡಿದ್ದಾರೆ.

ಪ್ರೊ. ಶಂಕರ್‌ ಸಿಂಡಿಕೇಟ್‌ ಬ್ಯಾಂಕ್‌ನ ಉದ್ಯೋಗಿ. ಜಾದೂಗಾರರೊಬ್ಬರಿಗೆ ಉದ್ಯೋಗ ನೀಡಿದ ಪ್ರಥಮ ಭಾರತೀಯ ಬ್ಯಾಂಕ್‌ ಎನ್ನುವ ಅಗ್ಗಳಿಕೆ ಸಿಂಡಿಕೇಟ್‌ ಬ್ಯಾಂಕ್‌ನದು. 1974 ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ಸೇರಿದ ಶಂಕರ್‌ ಅವರ ಕೆಲಸ- ಬ್ಯಾಂಕ್‌ನ ಯೋಜನೆಗಳನ್ನು ಜಾದೂ ಮೂಲಕ ಪ್ರಚುರಪಡಿಸುವುದು, ಜನಪ್ರಿಯಗೊಳಿಸುವುದು. ಅವರ ಡೆಸಿಗ್ನೇಷನ್‌- ‘ಇಂಡಸ್ಟ್ರಿಯಲ್‌ ಮೆಜೀಷಿಯನ್‌’!

ಕರ್ನಾಟಕದಲ್ಲಿ ಜಾದೂವನ್ನು ಜನಪ್ರಿಯಗೊಳಿಸುವುದು ಶಂಕರ್‌ ಅವರ ಕನಸುಗಳಲ್ಲೊಂದು. ಅದಕ್ಕೆಂದೇ ಪ್ರತಿವರ್ಷ ವಿಶ್ವದ ಖ್ಯಾತ ಜಾದೂಗಾರರನ್ನು ಉಡುಪಿಗೆ ಕರೆಸಿ ಅಂತರರಾಷ್ಟ್ರೀಯ ಜಾದೂಗಾರರ ಸಮ್ಮೇಳನ ನಡೆಸುತ್ತಾರೆ. ವಿಶ್ವ ಖ್ಯಾತ ಯಕ್ಷಿಣಿಗಾರರನ್ನು ಒಂದು ವೇದಿಕೆಯಲ್ಲಿ ಕಲೆ ಹಾಕುವುದಕ್ಕಿಂಥ ದೊಡ್ಡ ಯಕ್ಷಿಣಿ ಇನ್ನಾವುದಿದೆ?

ಮದ್ರಾಸ್‌ನ ತೆಲುಗು ಅಕಾಡೆಮಿ ತನ್ನ ಪ್ರತಿಷ್ಠಿತ ಉಗಾದಿ ಪುರಸ್ಕಾರ್‌ 2000 ಶಂಕರ್‌ಗೆ ನೀಡಿ ಗೌರವಿಸಿದೆ. ಶಂಕರ್‌ ವಿಶ್ವ ಖ್ಯಾತ ಜಾದೂಗಾರ, ನಿಜ ; ಆದರೆ, ಕರ್ನಾಟಕದಲ್ಲಿ ಮಾತ್ರ ಶಂಕರ್‌ ಅಷ್ಟು ಪ್ರಸಿದ್ಧರಲ್ಲ . ಮಾಧ್ಯಮಗಳಲ್ಲಿ ಅವರು ಮಿಂಚುವುದೂ ಇಲ್ಲ . ಏಕೆಂದರೆ ಅವರ ವಾಸ ಬೆಂಗಳೂರಿನಲ್ಲಲ್ಲ ; ಕರಾವಳಿಯಲ್ಲಿ!

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X