ಅಮೆ-ರಿ-ಕೆ-ಯ ಅಂಗ-ಳ-ದ-ಲ್ಲಿ ಘಮ-ಘ-ಮಿ-ಸಿ-ದಹೆ-ಮ್ಮಿ-ಗೆ ಅಗ್ರ-ಹಾ-ರ-ದ ಮಲ್ಲಿ-ಗೆ
ಹೆಮ್ಮಿಗೆ ವಿ. ರಂಗಾಚಾರ್ (ಕಾವ್ಯನಾಮ ರಂಗ) ಅವರು ತ-ಲಕಾಡಿನ ಬಳಿ ಇರುವ ಹೆಮ್ಮಿಗೆ ಅಗ್ರಹಾರದಲ್ಲಿ ಹುಟ್ಟಿದರು. ಆವಾಗಿನ ಮೈಸೂರು ವಿಶ್ವವಿದ್ಯಾಲಯದ ವಿಶ್ವೇಶರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ 1951ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಪದವಿ ಪಡೆದರು. ಆಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ 2 ವರ್ಷಗಳು ಮತ್ತು ದೆಹಲಿಯ ಡಿಫೆನ್ಸ್ ಸೈನ್ಸ್ ಆರ್ಗನೈಜೇಷನ್‌ನಲ್ಲಿ 5 ವರ್ಷ ಕೆಲಸ ಮಾಡಿದರು. ಮುಂದೆ 1958ರಲ್ಲಿ ಉಚ್ಚ ಶಿಕ್ಷಣಕ್ಕೆಂದು ಅಮೆರಿಕಾಗೆ ಬಂ-ದು, ಎಂ. ಎಸ್(ಲೀಹೈ ವಿಶ್ವವಿದ್ಯಾಲಯ) ಮತ್ತು ಪಿ. ಎಚ್. ಡಿ (ಪೆನ್ಸಿಲ್ವೇನಿಯಾ ವಿ.ವಿ) ಪದವಿ ಗಳಿಸಿದರು. ಅಮೇರಿಕಾದಲ್ಲಿ ನೆಲೆಸಿರುವ ಅವರು ಆರ್. ಸಿ. ಏ ಕಾರ್ಪೋರೇಷನ್‌ನಲ್ಲಿ ಏ. ಟಿ. ಟಿ ಕಾರ್ಪೋರೇಷನ್‌ನಲ್ಲಿ ಕೆಲಸ ಮಾಡಿ ಈಗ ಮೂರು ವರ್ಷಗಳಿಂದ ನಿವೃತ್ತರಾಗಿದ್ದಾರೆ.
ರಂಗ ಅವರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಪ್ರೇಮಿಗಳು. ನೆಲದ ಕರೆ ಎಂಬ ಕವನ ಸಂಕಲನ 1974ರಲ್ಲಿಯೇ ಪ್ರಕಟವಾಗಿದೆ. ನ್ಯೂಜೆರ್ಸಿ, ಪೆನ್‌ಸಿಲ್ವೇನಿಯಾ ಮತ್ತು ಡೆಲವೇರ್ ಪ್ರದೇಶಗಳ ತ್ರಿವೇಣಿ ಕನ್ನಡ ಸಂಘಕ್ಕೆ ಅಧ್ಯಕ್ಷರಾಗಿದ್ದ ರಂಗ ಅವರಿಗೆ ವಿಜ್ಞಾನ, ಇತಿಹಾಸ ಮತ್ತು ಭಾರತೀಯ ತತ್ವ ಮೀಮಾಂಸೆಗಳಲ್ಲಿ ತುಂಬಾ ಅಭಿರುಚಿಯುಂಟು. ಪು.ತಿ.ನ ಅವರ ಮಲೆದೇಗುಲ ಎಂಬ ದೀರ್ಘ ಕವನವನ್ನು ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅದು ಈಗ ಪ್ರಕಾಶನಕ್ಕೆ ಸಿದ್ಧವಾಗಿದೆ.
ಮುಖಪುಟ / ಸಾಹಿತ್ಯ ಸೊಗಡು / ಮನೆ ಆಚೆಯ ಮನೋನಂದನ![]()
![]()












Click it and Unblock the Notifications