ಮತ್ತೆ ಹುಟ್ಟಿ-ದ ಪಟೇ-ಲ್
ಎಲ್ಲರೂ ಯಾವತ್ತಾದರೊಂದು ದಿನ ಹುಟ್ಟಿರುತ್ತಾರೆ ಎಂದು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಆದರೆ, ನಮ್ಮ ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲರು ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಹುಟ್ಟುವುದಕ್ಕಿಂತ ಒಂದು ದಿನ ಮೊದಲೇ ಹುಟ್ಟಿದರು ಎಂದರೆ ನಿಮಗೆ ಏನನಿಸುತ್ತದೆ ?
ಅಕ್ಟೋಬರ್ ಮಾಹೆಯ ಮೊದಲ ಭಾನುವಾರ ಪಟೇಲರು 70 ವರ್ಷ ತುಂಬಿದ ಹರ್ಷವನ್ನು ಸಾರ್ವಜನಿಕವಾಗಿ ಹಂಚಿಕೊಂಡರು. ಕರ್ನಾಟಕದ ಕೆಲವು ಮಾಧ್ಯಮ ವಲಯಗಳಿಗೆ ಇದೊಂದು ಬಹು ದೊಡ್ಡ ಸುದ್ದಿ ಎನಿಸಿತು. ಅವರ ದೃಶ್ಯ ಶ್ರವ್ಯ ಸಂದರ್ಶನಗಳು ರಾಜ್ಯ ಜನತೆಯ ಮುಂದೆ ಪ್ರದರ್ಶನಗೊಂಡವು.
ಅಕ್ಟೋಬರ್ 2ರ ಮುಂಜಾನೆಯ ಈ ಹೊತ್ತು ಕಳೆದು ಹೋದ ದಿನದ ಪ್ರಹಸನಗಳನ್ನು ನೆನೆಸಿಕೊಂಡರೆ ಮುಜಗರವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಥೇಟ್ ಉಮರ್ ಖಯಾಮನ ರೀತಿ ಕಾಲಹಾಕಿದ ಪಟೇಲರನ್ನು ಚನ್ನಗಿರಿಯ ಜನ ರಾಜ್ಯದ ಮತದಾರರ ಪರವಾಗಿ ಜುಬ್ಬ ಹಿಡಿದು ಕೆಳಗೆಳೆದ ಮೇಲೆ ಅವರು ನಮ್ಮ ಮುಂದೆ ಬಂದು ನಿಂತಿದ್ದು ಇದೇ ಮೊದಲ ಸಲ. ಅನಾರೋಗ್ಯ ಅವರನ್ನು ಕಾಡಿಸುತ್ತಿತ್ತು ಎನ್ನುವ ಅನುಕಂಪದ ವಿಚಾರ ಬಿಟ್ಟರೆ ಅವರನ್ನು ಬೇರೆ ಯಾವ ವಿಚಾರಗಳೂ ಕಾಡಲಿಲ್ಲ ವೇ ಎನ್ನುವ ಪ್ರಶ್ನೆಯನ್ನು ಸಮಾಜಶಾಸ್ತ್ರದಲ್ಲಿ ಆಸಕ್ತಿ ಉಳ್ಳವರು ಕೇಳುತ್ತಿದ್ದಾರೆ. ಅದು ಹೇಗೂ ಇರಲಿ, ಹುಟ್ಟುಹಬ್ಬದ ನೆಪದಲ್ಲಿ ದರ್ಶನ ಲಾಭವನ್ನು ಕೊಟ್ಟ ಪಟೇಲರಿಗೆ ಧನ್ಯವಾದಗಳನ್ನು ಹೇಳುತ್ತಾ ಅವರ ನಿನ್ನೆ ಆಡಿದ ಕೆಲವು ಅಣಿಮುತ್ತುಗಳನ್ನು ಇಲ್ಲಿ ನಿಮಗಾಗಿ ಆಯ್ದು ತಂದಿದ್ದೇವೆ.
1 ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications