ಎ.ಎನ್‌. ಮೂರ್ತಿರಾಯರ ದೇವರು

(ಇನ್ಫೋ ವಿಶೇ-ಷ)

A.N. Murthy Raoಬೆಂಗಳೂರು: ದೇವ-ರೆಂ-ದ-ರೆ ಏನು ? ದೈವ-ತ್ವ-ದ ಪರಿ-ಕ-ಲ್ಪ-ನೆ ಎಂಥಾ-ದ್ದು ? ಆಸ್ತಿ-ಕ-ರು ಈ ಕುರಿ-ತು ತಾಸು-ಗ-ಟ್ಟ-ಲೆ ಹೇಳ-ಲು ಶಕ್ತ-ರಾ-ದ-ರೂ, ದೇವ-ರ ಅಸ್ತಿ-ತ್ವ-ವ-ನ್ನೇ ನಿರಾ-ಕ-ರಿ--ಸು-ವ ಮೂಲ-ಕ ಪ್ರಸಿ-ದ್ಧ-ರಾ-ಗಿ-ರು-ವ ಪ್ರಸಿ-ದ್ಧ ಲಲಿ--ತ ಪ್ರಬಂ-ಧ-ಕಾ-ರ, ಪಂಪ ಪ್ರಶ-ಸ್ತಿ ವಿಜೇ-ತ ಸಾಹಿ-ತಿ, ಶತಾ-ಯು-ಷಿ ಎ.ಎನ್‌. ಮೂರ್ತಿ-ರಾ-ವ್‌ ಅವ-ರ ಪ್ರಕಾ-ರ- ಒಳ್ಳೆಯತನದ ಕಲ್ಪನೆಯೇ ದೇವರು.

ಅವರು ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡುತ್ತಿದ್ದರು.

ಮನೆಯಂಗಳದಲ್ಲಿ ಮಾತುಕತೆ ಹಿರಿಯರೊಂದಿನ ಮಾಸಿಕ ಸಂವಾದ ಕಾರ್ಯಕ್ರಮ. ಈ ಸರಣಿ ಕಾರ್ಯಕ್ರಮದ ಪ್ರಥಮ ಅತಿಥಿಯಾಗಿ ಬಂದಿದ್ದ ಮೂರ್ತಿರಾಯರು ಗಂಟೆಗಟ್ಟಲೆ ದೇವರ ಬಗ್ಗೆ ಮಾತನಾಡಿದರು. ಮಾತನಾಡಿದರು ಎನ್ನುವುದಕ್ಕಿಂತ ನಾಸ್ತಿಕವಾದಿಯ ಬಗ್ಗೆ ಅಲ್ಲಿ ಸೇರಿದ್ದವರ ಮನಸ್ಸಿನಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

82ರ ವಯಸ್ಸಿನ ರಂಗಭೂಮಿಯ ಕಲಾವಿದರೊಬ್ಬರು ನಾನು ನಿಮ್ಮಷ್ಟೇ ವರ್ಷ ಬದುಕಲು ನಿಮ್ಮಾಶೀರ್ವಾದ ಬೇಕು ಎಂದು ಕೇಳಿದಾಗ ರಾಯರು, ದೇವರು ನಿಮ್ಮನ್ನು ಸುಖವಾಗಿಟ್ಟಿರಲಿ ಎಂದದ್ದು ಕೇಳಿ ಸಭೆಯಲ್ಲಿದ್ದವರೆಲ್ಲ ಒಂದು ಕ್ಷಣ ಬೆರಗಾದರು.

ನಿಮ್ಮೆದುರು ದೇವರು ಬಂದರೇ ? : ದೇವರು ಎಲ್ಲರಿಗೂ ತಂದೆ. ಎಲ್ಲರಿಗೂ ಬುದ್ಧಿ ಕೊಟ್ಟ ನೀನು ನನಗೇಕೆ ದೇವರಿಲ್ಲ ಎಂಬ ಬುದ್ಧಿ ಕೊಟ್ಟೆ ಎಂದು ಕೇಳುತ್ತೇನೆ ಎಂದು ಸಭೆ-ಯಿಂ-ದ ತೂರಿ-ಬಂ-ದ ಪ್ರಶ್ನೆ-ಯಾಂ-ದ-ಕ್ಕೆ ಮೂರ್ತಿ-ರಾ-ಯ-ರು ಹೇಳಿದರು. ಸರಿಯಪ್ಪಾ ದೇವರಿಲ್ಲದೇ ಇದ್ದರೆ ಬೇರೊಂದು ಅಗೋಚರ ಶಕ್ತಿ ಉಂಟೇ ಎಂಬ ಪ್ರಶ್ನೆಗೆ ದೇವರಿದ್ದರೂ ಇಲ್ಲದಿದ್ದರೂ ವ್ಯಕ್ತಿಗೆ ಉತ್ತಮ ನಡವಳಿಕೆ ಬೇಕು. ಒಳ್ಳೆಯತನಕ್ಕಿಂತ ದೊಡ್ಡ ದೇವರುಂಟೇ ಎಂದು ರಾಯರು ಮರು ಪ್ರಶ್ನೆ ಹಾಕಿದರು.

ಸಾಹಿತ್ಯದ ಕುರಿತೂ ಪ್ರಶ್ನೆ--ಗ-ಳು ಹರಿ-ದಾ-ಡಿ-ದ-ವು. ಪ್ರಬಂಧ ಪ್ರಕಾರದ ಬಗೆಗೇಕೆ ಒಲವು ಎಂಬ ಪ್ರಶ್ನೆಗೆ, ಪ್ರಬಂಧ ಬರೆಯುವಾಗ ಯಾರಿಗೂ ಉತ್ತರ ನೀಡಬೇಕಾದ ಅಗತ್ಯವಿಲ್ಲ. ಅನಿಸಿದ್ದನ್ನು ಹಾಗೆಯೇ ಬರೆಯಲು ಒಳ್ಳೆಯ ಪ್ರಕಾರ ಎನಿಸಿತು ಎಂದು ಉತ್ತರಿಸಿದರು. ಕೊನೆಗೆ ಮೂರ್ತಿರಾಯರು ನೂರು ವಸಂತ ಕಂಡ ಆರೋಗ್ಯದ ಗುಟ್ಟೆೇನು ಎಂಬ ಪ್ರಶ್ನೆಗೆ ಮನಸ್ಸು ಚೆನ್ನಾಗಿರುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ -ಕ-ನ್ನ-ಡ ಅಭಿ-ವೃ-ದ್ಧಿ ಪ್ರಾ-ಧಿ-ಕಾ-ರ-ದ ಬರಗೂರು ರಾಮಚಂದ್ರಪ್ಪ , ಕನ್ನಡ ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಭಾಗವಹಿಸಿದ್ದರು.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+