ಮಲ್ಲಿಕಾರ್ಜುನ ಮನ್ಸೂರ್‌ : ಜಗದ ಚಿಂತೆಯ ಕಳಚಿದ ಗಾಯಕ

ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತ ರತ್ನಗಳೆಲ್ಲಾ ಧಾರವಾಡವನ್ನೇ ಪ್ರೀತಿಸಿದ್ದೆನಿಸುತ್ತದೆ. ಯಾಕೆಂದರೆ ಹಿಂದೂ-ಸ್ಥಾನಿ ಸಂಗೀತ ವಲಯಗಳಲ್ಲಿ ಪಂಚಾಕ್ಷರಿ ಗವಾಯಿ, ಸಾವಾಯಿ ಗಂಧರ್ವ, ಸಿತಾರ ರತ್ನ ರಹಿಮ್‌ ಖಾನ್‌ ಮಲ್ಲಿಕಾರ್ಜುನ ಮನ್ಸೂರ್‌, ಗಂಗೂಬಾಯಿ ಹಾನಗಲ್‌, ಬಸವರಾಜ ರಾಜಗುರು, ಕುಮಾರ ಗಂಧರ್ವ, ಭೀಮಸೇನ ಜೋಶಿ, ಮೊದಲಾದವರ ಹೆಸರುಗಳು ಮನಃಪಟಲದ ಮೇಲೆ ಮಿಂಚುತ್ತದೆ. ಈ ಕೊಡುಗೆಯಲ್ಲಿ ವಿಭಜನೆ ಪೂರ್ವ ಧಾರವಾಡ ಜಿಲ್ಲೆಯದ್ದು ಸಿಂಹ ಪಾಲು.

ಮಲ್ಲಿಕಾರ್ಜುನ ಮನ್ಸೂರ್‌ ನಮ್ಮ-ನ್ನ-ಗ-ಲಿ ಎಂಟು ವರ್ಷಗಳು ಸಂ-ದಿ-ವೆ. ಆದರೆ ಸಂಗೀತದ ರಾಗ, ಲಯ, ತಾಳಗಳಲ್ಲಿ ಅವರು ಕೆತ್ತಿರುವ ಛಾಪು, ಚೇತನ ಅವರ ಶಿಷ್ಯ ಪರಂಪರೆಯ ಮೂಲಕ ಇವತ್ತಿನ ಸಂಗೀತ ಪ್ರಿಯರ ತಟ್ಟುತ್ತವೆ... ಸಂತೈಸುತ್ತವೆ.

ಬಾಲ್ಯ : ಧಾರವಾಡದ ಪುಟ್ಟ ಹಳ್ಳಿ ಮನಸೂರದಲ್ಲಿ ಮಲ್ಲಿಕಾರ್ಜುನರು 1910ರ ಡಿಸೆಂಬರ್‌ 31 ರಂದು ಬದುಕಿನ ಮೊದಲ ಸೂರ್ಯೋದಯ ಕಂಡರು. ಐದನೇ ವಯಸ್ಸಿಗೆ ಭೀಮರಾಯಪ್ಪ ಮತ್ತು ನೀಲಮ್ಮ ದಂಪತಿ ಈ ಮಗುವನ್ನು ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಹುಡುಗನ ಮನಸ್ಸಿನ ತುಂಬಾ ಅಮ್ಮನ ಜೋಗುಳ ಹಾಡುಗಳ ಗುಂಗು... ಗುನುಗು...

ಹುಡುಗನ ಆಸಕ್ತಿಗೆ ಹಿರಿಯರು ಗದರಲಿಲ್ಲ. ನೀಲಕಂಠಬುವಾ ಮೀರಜಕರರು ಹಿಂದೂ---ಸ್ಥಾನೀ ಸಂಗೀತದ ಆಲಾಪನೆಯ ಮೊದಲ ಪಾಠ ಮಾಡಿದರು. ಗುರುಗಳ ಬಳಿ ಸಂಗೀತವನ್ನು ಮೊಗೆ ಮೊಗೆದು ಕುಡಿದ ಮನ್ಸೂರರ ಹೆಸರು ಧಾರವಾಡ, ಕರ್ನಾಟಕ, ಭಾರತವನ್ನು ದಾಟಿ ಮೊಳಗಲಾರಂಭಿಸಿತು. ಅವರ ಹಾಡಿನ ಕ್ಯಾಸೆಟ್‌ಗಳು ಲಂಡನ್‌ನ ಸಂಗೀತ ಪ್ರಿಯನೊಬ್ಬನ ಮನೆಯಲ್ಲಿ , ಅಮೆರಿಕಾದ ಅಭಿಮಾನಿಯಾಬ್ಬನ ಬಳಿಯಿರುವ ಪುಟ್ಟ ವಾಕ್‌ಮನ್‌ನಲ್ಲಿ ಕೇಳಿ ಬರುತ್ತದೆ. ಉತ್ತರ ಭಾರತದ ಹಿಂದೂಸ್ಥಾನೀ ಸಂಗೀತ ಪ್ರಿಯರು ಮನ್ಸೂರರ ಹೆಸರೆಂದರೆ ಕಣ್ಣರಳಿಸುತ್ತಾರೆ.

ಹೆಸರು, ಕೀರ್ತಿಗಳು ಮನ್ಸೂರರ ವಿದ್ಯಾಭ್ಯಾಸಕ್ಕೆ ಪೂರ್ಣವಿರಾಮ ಕೊಡಲಿಲ್ಲ. ಜೈಪುರ ಘರಾಣಿಯ ಪ್ರವರ್ತಕರ ಅಲ್ಲಾದಿಯಾಖಾನ್‌ರ ಪುತ್ರ ಮಂಜೆಖಾನರಲ್ಲಿ ವಿದ್ಯಾಭ್ಯಾಸ, ಬುರ್ಜಿಖಾನರಲ್ಲಿ ವಿದ್ಯಾಭ್ಯಾಸ ... ಹೀಗೆ ಮನ್ಸೂರರು, ಕಂಡ ಸಂಗೀತ ದಿಗ್ಗಜರು ಕೈಯಲ್ಲಿ ಹಾಕುವ ತಾಳಗಳ ಏರಿಳಿತಗಳಿಂದ ಹಿಡಿದು, ರೆಪ್ಪೆ ಬಡಿತಗಳ ಸೂಕ್ಷ್ಮತೆಯವರೆಗೆ ಎಲ್ಲವನ್ನೂ ಎದೆಯಲ್ಲಿ ತುಂಬಿಕೊಂಡು ಶಾರದೆಯನ್ನು ಪೂಜಿಸಿದವರು. ಅವರಿಲ್ಲದ ಎಂಟು ವರ್ಷಗಳಲ್ಲಿ ಅವರ ಸಂಗೀತ ಚೇತನ ಇಂದಿಗೂ ನಾಡು ನುಡಿಯೆಂಬ ಸೀಮೆಯಿಲ್ಲದೆ ಗುನುಗುನಿಸುತ್ತಿದೆ.

ಪ್ರಶಸ್ತಿಗಳು

1962 - ಕರ್ನಾಟಕ ರಾಜ್ಯ ಸಂಗೀತ, ನೃತ್ಯ ಅಕಾಡೆಮಿ ಪ್ರಶಸ್ತಿ

1968 - ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

1970- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

1975- ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್‌

1981- ಮಧ್ಯ ಪ್ರದೇಶದ ಕಾಳಿದಾಸ ಸಮ್ಮಾನ ಪ್ರಶಸ್ತಿ

1991- ಹಾಫೀಜ್‌ ಆಲಿಖಾನ್‌ ಪ್ರಶಸ್ತಿ

1992- ಪದ್ಮಭೂಷಣ

(ಹುಬ್ಬಳ್ಳಿ ಪ್ರತಿನಿಧಿಯಿಂದ)

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+