• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರಾಶೆಯ ಕೂಪದಲ್ಲಿ ಬೆಳಗಿದ ಲಕ್ಷ್ಮಣ್‌

By Staff
|

*ವಿಘ್ನೕಶ್ವರ ಕುಂದಾಪುರ

V.V.S. Laxman1999ರ ಡಿಸೆಂಬರ್‌ನಲ್ಲಿ ಸಿಡ್ನಿಯಲ್ಲಿ ಇದೇ ವಿವಿಎಸ್‌ ಲಕ್ಷ್ಮಣ್‌ ನಮಗೆ ತಲೆನೋವಾಗಿದ್ದರು. ಈಗಲೂ ಅದೇ ಸೂಚನೆಗಳನ್ನು ಕೊಟ್ಟಿದ್ದಾರೆ. ಮಂಗಳವಾರ, ಎರಡನೇ ಟೆಸ್ಟ್‌ನ ಮೂರನೇ ದಿನದಾಟ ಮುಗಿದ ನಂತರ ಆಸ್ಟ್ರೇಲಿಯಾದ ಮೆಕ್‌ ಗ್ರಾತ್‌ ಹೇಳಿದ್ದ ಮಾತಿದು. ಆದದ್ದೂ ಅವರು ಹೇಳಿದಂತೆಯೇ. ಲಕ್ಷ್ಮಣ್‌ ಆಸ್ಟ್ರೇಲಿಯಾದ ಎಲ್ಲಾ ಬೌಲರ್‌ಗಳಿಗೂ ಗಂಜಿ ಕುಡಿಸಿದರು. ಔಟ್‌ ಮಾಡಿದ ಖುಷಿ ಅನುಭವಿಸುವುದನ್ನೇ ಇತ್ತೀಚೆಗೆ ಅಭ್ಯಾಸ ಮಾಡಿಕೊಂಡಿದ್ದ ಕಾಂಗರೂಗಳಿಗೆ ಹೊಡೆತದ ಬಿಸಿಯನ್ನು ಮುಟ್ಟಿಸಿದ್ದಾರೆ ಲಕ್ಷ್ಮಣ್‌. ಅವರೀಗ ಭಾರತದ ಟೆಸ್ಟ್‌ ಬ್ಯಾಟಿಂಗ್‌ ದಿಗ್ಗಜ!

ಸುನಿಲ್‌ ಗವಾಸ್ಕರ್‌ (236) , ವಿನೂ ಮಂಕಡ್‌ (231), ವಿನೋದ್‌ ಕಾಂಬ್ಳಿ (227). ಭಾರತದ ಪರ ಟೆಸ್ಟಿನ ಇನ್ನಿಂಗ್ಸೊಂದರಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದವರ ಯಾದಿಯ ಈ ಹೆಸರುಗಳೆಲ್ಲಾ ಈಗ ಲಕ್ಷ್ಮಣ್‌ ಹೆಸರ ಕೆಳಗೆ. ದೇಶೀ ಮೊದಲ ದರ್ಜೆ ಕ್ರಿಕೆಟ್ಟಿನಲ್ಲಿ ದ್ವಿಶತಕಗಳನ್ನು, ಅಷ್ಟೇ ಏಕೆ, ತ್ರಿಶತಕಗಳನ್ನು ನೀರು ಕುಡಿದಂತೆ ಗಳಿಸಿರುವ ಲಕ್ಷ್ಮಣ್‌ ಈಗ ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲೂ ಅದೇ ಆಟದ ಮೊನಚನ್ನ ಕಂಡುಕೊಂಡಿದ್ದಾರೆ. ಬರೀ ಫಸ್ಟ್‌ ಕ್ಲಾಸ್‌ ಕ್ರಿಕೆಟ್ಟಿಗಷ್ಟೇ ಲಕ್ಷ್ಮಣ್‌ ಲಾಯಕ್ಕು ಅನ್ನುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

ಫ್ಲಾಷ್‌ ಬ್ಯಾಕ್‌ : ಈ ವರ್ಷ ಜನವರಿ ತಿಂಗಳಲ್ಲಿ , ಇದೇ ದ್ರಾವಿಡ್‌- ಲಕ್ಷ್ಮಣ್‌ ಜೋಡಿ ದುಲಿಪ್‌ ಟ್ರೋಫಿಯಲ್ಲಿ ದಕ್ಷಿಣ ವಲಯದ ಪರ 3ನೇ ವಿಕೆಟ್‌ಗೆ ದಾಖಲೆ 409 ರನ್‌ ಕಲೆ ಹಾಕಿ ಪಶ್ಚಿಮ ವಲಯದ ಬೌಲರ್‌ಗಳನ್ನು ಅಯ್ಯೋ ಅನ್ನಿಸಿದ್ದರು. 1999ರಲ್ಲಿ ಸಿಡ್ನಿಯ ಮೊದಲ ಟೆಸ್ಟ್‌ನಲ್ಲಿ ಭಾರತದ ಪರ ಅತ್ಯುತ್ತಮವಾಗಿ ಆಡಿದ ಏಕೈಕ ಆಟಗಾರ ಎಂಬ ಗೌರವಕ್ಕೆ ಪಾತ್ರರಾದ ಲಕ್ಷ್ಮಣ್‌ (ಆಗ ಗಳಿಸಿದ್ದು 167), ಕಳೆದ ವರ್ಷ ರಣಜಿಯಲ್ಲಿ ಹೈದರಾಬಾದ್‌ ಪರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕದ ವಿರುದ್ಧ 346 ರನ್‌ ಸಿಡಿಸಿದ್ದರು. 1997-98ರಲ್ಲಿ ಬಿಹಾರ ವಿರುದ್ಧ 301ರನ್‌ ಚಚ್ಚಿದ್ದರು.

ದ್ರಾವಿಡ್‌ ಹಾಗೂ ಲಕ್ಷ್ಮಣ್‌ ಇಬ್ಬರೂ ಅಂತರರಾಷ್ಟ್ರೀಯ ಪಂದ್ಯಕ್ಕೆ ತುರುಸಿನ ಪೋಟಿಯಲ್ಲೇ ಕಾಲಿಟ್ಟರು. ಈ ಪೈಕಿ ಕಲೆಗಾರ ದ್ರಾವಿಡ್‌ ಮಿಂಚಿದರು. ಲಕ್ಷ್ಮಣ್‌ ಒಂದು ಪಂದ್ಯ ಆಡಿದರೆ, ಇನ್ನು ಐದು ಪಂದ್ಯ ಠುಸ್ಸು. ಆದರೆ ಮೊದಲ ದರ್ಜೆ ಕ್ರಿಕೆಟ್‌ನಲ್ಲಿ ಎರಡೂ ಕೈಲಿ ರನ್‌ ದೋಚುತ್ತಿದ್ದರು. ಈವರೆಗೆ 81 ಮೊದಲ ದರ್ಜೆ ಪಂದ್ಯಗಳಲ್ಲಿ 6781 ರನ್‌ (56.5 ಸರಾಸರಿ) ಗಳಿಸಿರುವ ಲಕ್ಷ್ಮಣ್‌, 23 ಶತಕ ಹಾಗೂ 23 ಐವತ್ತು ಗಳನ್ನು ದಾಖಲಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್ಟಿನಲ್ಲಿ 20 ಪಂದ್ಯಗಳಲ್ಲಿ (ಪ್ರಸಕ್ತ ಟೂರ್ನಿ ಹೊರತುಪಡಿಸಿ) 27.06ರ ಸರಾಸರಿಯಲ್ಲಿ ಒಂದು ಶತಕ ಸೇರಿದಂತೆ 860 ರನ್‌ ಗಳಿಸಿದ್ದಾರೆ. ಆದರೆ ಈಗ ಈ ದಾಖಲೆ ಬಲವಾಗಿದೆ, ಕಳೆಗಟ್ಟಿದೆ.

ಲಕ್ಷ್ಮಣ್‌ ಮಾತಾಡುತ್ತಿದ್ದಾರೆ....

ಎಡರಿ- ತೊಡರಿ ಜಾಗೆ ಕಂಡುಕೊಂಡ ಲಕ್ಷ್ಮಣ್‌ರ ಸ್ಫೂರ್ತಿ ವಗೈರೆಗಳನ್ನು ಅವರ ಮಾತುಗಳಲ್ಲೇ ಕೇಳಿ-

  • ನನಗೆ ಅಜರ್‌ ಸ್ಫೂರ್ತಿ. ನಾನು 16 ವರ್ಷದೊಳಗಿನವರ ತಂಡಕ್ಕೆ ಆಡುತ್ತಿದ್ದಾಗ ಅವರ ಆಟದಿಂದ ಸಾಕಷ್ಟು ಪ್ರಭಾವಿತನಾಗಿದ್ದೆ
  • ನನ್ನ ಹಾಗೂ ಅಜರ್‌ ಶೈಲಿಯಲ್ಲಿ ಸಾಮ್ಯತೆ ಇದೆ ಎಂದವರಿದ್ದಾರೆ. ಅದನ್ನು ನಾನು ಒಪ್ಪುವುದಿಲ್ಲ. ಅಜರ್‌ ವಾಸ್‌ ಡಿಫರೆಂಟ್‌
  • ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಆಗಾಗ ಸ್ಥಾನ ಕಳೆದುಕೊಳ್ಳಲು ನನ್ನ ಅಸ್ಥಿರ ಆಟವೇ ಕಾರಣ. ಹಾಗಂತ ಹತಾಶನಾಗದೆ ದೇಶೀ ಕ್ರಿಕೆಟ್ಟಿನಲ್ಲಿ ಕೈಮೀರಿ ಆಡಿದ್ದು ನನಗೆ ಸ್ವಯಂ ಭರವಸೆ ಹುಟ್ಟಲು ಕಾರಣವಾಯಿತು
  • ಸಿಡ್ನಿಯಂಥ ಹೊರ ನೆಲದಲ್ಲಿ ನನಗೆ ಒಳ್ಳೆ ಅವಕಾಶ ಸಿಕ್ಕಿತ್ತು. ಅಲ್ಲಿ ಆರಂಭಿಕ ಆಟಗಾರನಾಗಿ ಆಡುವ ಅವಕಾಶ ಸಿಕ್ಕಿದ್ದು ನನಗೆ ಸಾಕಷ್ಟು ನೆರವಾಯಿತು
  • ಜವಾಬ್ದಾರಿ ಇರುವ ಸ್ಥಾನ 3ನೇ ಆಟಗಾರನ ಜಾಗೆ. ಹೈದರಾಬಾದಿನ ಪರ ನಾನು ಬಹುತೇಕ ಆಡುವುದು ಇದೇ ಸ್ಥಾನದಲ್ಲಿ. ಕಾಂಗರೂಗಳ ಪರ ಆಡಲು ಅದೇ ಸ್ಥಾನಕ್ಕೆ ಬಡ್ತಿ ಸಿಕ್ಕಿದ್ದು ನನಗೆ ಬೋನಸ್‌ ಸಿಕ್ಕಂತಾಯಿತು
  • ಈಡನ್‌ ಗಾರ್ಡನ್ಸ್‌ ಪಿಚ್‌ ಬ್ಯಾಟಿಂಗ್‌ಗೆ ಬಲು ಚೆನ್ನು. ಆಸ್ಟ್ರೇಲಿಯಾದವರ ಚಾಕಚಕ್ಯತೆಗೆ ಮನಸ್ಸನ್ನು ಅತ್ತಿತ್ತ ಆಡಿಸದೆ, ಭಯ ಬೀಳದೆ ಏಕಚಿತ್ತ ಕಾಯ್ದುಕೊಳ್ಳುವುದು ಮುಖ್ಯವಾಗಿತ್ತು. ಬಹುಶಃ ನಾನು- ದ್ರಾವಿಡ್‌ ಮಾಡಿದ್ದು ಅದನ್ನೇ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more