ಶಂಕರಗೌಡ ಪ್ರತಿಷ್ಠಾನದ ಪ್ರಶಸ್ತಿ
ಮಂಡ್ಯ : ಕೆ.ವಿ. ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯಮಟ್ಟದ ರಂಗಭೂಮಿ ಹಾಗೂ ಸಮಾಜ ಸೇವಾ ಪ್ರಶಸ್ತಿ ನೀಡುತ್ತಿದ್ದು, ಈ ಸಾಲಿನ ರಂಗಭೂಮಿ ಪ್ರಶಸ್ತಿಗೆ ನಾಟಕಕಾರ ಹಾಗೂ ರಂಗ ನಿರ್ದೇಶಕ ಏಣಗಿ ಬಾಳಪ್ಪ ಅವರನ್ನೂ, ಸಮಾಜ ಸೇವಾ ಪ್ರಶಸ್ತಿಗೆ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರನ್ನೂ ಅಯ್ಕೆ ಮಾಡಿದೆ.
ಜಿಲ್ಲಾ ಮಟ್ಟದ ರಂಗಭೂಮಿ ಪ್ರಶಸ್ತಿಗೆ ತಬಲಾ ವಾದಕ ವಿ.ಎಂ. ಗುರುಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿದ್ದಾರೆ. ತಲಾ 15 ಸಾವಿರ ರು. ನಗದು ಹಾಗೂ ಫಲಕವನ್ನು ಪ್ರಶಸ್ತಿ ಒಳಗೊಂಡಿದೆ. ಶಂಕರ ಗೌಡರ ಜನ್ಮ ದಿನವಾದ ಜುಲೈ 15ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications