ಹರಿಹರಪ್ರಿಯರಿಗೆ ಕುವೆಂಪು ಪ್ರಶಸ್ತಿ

ಬೆಂಗಳೂರು : ನಗರದ ಕುವೆಂಪು ಕಲಾನಿಕೇತನ ಈ ವರ್ಷದಿಂದ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಪ್ರಥಮ ಪ್ರಶಸ್ತಿ ವಿಮರ್ಶಕ ಹರಿಹರ ಪ್ರಿಯ ಅವರಿಗೆ ಸಿಕ್ಕಿದೆ.

ಕುವೆಂಪು ಕಲಾ ನಿಕೇತನ ಹೊರಡಿಸಿರುವ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಪ್ರಶಸ್ತಿ ಇಪ್ಪತ್ತೆೈದು ಸಾವಿರ ರುಪಾಯಿ ನಗದನ್ನು ಒಳಗೊಂಡಿದೆ. 50ರ ಆಸುಪಾಸಿನ ಹರಿಹರಪ್ರಿಯ 36 ಕೃತಿಗಳನ್ನು ರಚಿಸಿದ್ದು, ಕುವೆಂಪು ಒಲವು ನಿಲುವು ಅವರಿಗೆ ಹೆಸರು ತಂದುಕೊಟ್ಟ ವಿಮರ್ಶಾ ಕೃತಿ. ಇವರಿಗೆ ಈಗಾಗಲೇ ಕಾವ್ಯಾನಂದ ಪುರಸ್ಕಾರ, ವರ್ಧಮಾನ ಪೀಠ ಪ್ರಶಸ್ತಿ, ದೇಜಗೌ ಪ್ರಶಸ್ತಿ ಹಾಗೂ ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿಗಳು ಸಂದಿವೆ. ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿಯೂ ಹರಿಹರ ಪ್ರಿಯರಿಗೆ ಸಿಕ್ಕಿದೆ.

ಹರಿಹರಪ್ರಿಯರ ಸಾಹಿತ್ಯ ಸೇವೆ, ಪುಸ್ತ ಕ ಪ್ರೇಮ, ಭಾಷಣ ಹಾಗೂ ಕನ್ನಡ ಪರ ಹೋರಾಟಗಳನ್ನು ಪರಿಗಣಿಸಿ, ಇವರಿಗೆ 2000ನೇ ಸಾಲಿನ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+