• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟೀಫನ್‌ ಹಾಕಿಂಗ್‌ ಅರ್ಥಾತ್‌ ಭರವಸೆ

By Staff
|

ಭೌತ ಶಾಸ್ತ್ರದಲ್ಲಿ ಐಸಾಕ್‌ ನ್ಯೂಟನ್‌ನ ನಂತರ ಹೆಸರು ಮಾಡಿದ್ದು ಸ್ಟೀಫನ್‌ ಹಾಕಿಂಗ್‌. ಗಾಲಿ ಕುರ್ಚಿಯಲ್ಲಿ ದ್ದುಕೊಂಡು ಕಂಪ್ಯೂಟರ್‌ ಸ್ವಿಚ್‌ಗಳ ಮೂಲಕವೇ ಹುಟ್ಟಿಕೊಂಡ ಅವರ ಸೃಜನ ಶೀಲತೆ, ಸಾಧನೆ ದೇಶ ಕಾಲಗಳ ಗಡಿ ದಾಟಿದೆ.

ಗೆಲಿಲಿಯೋ ಹುಟ್ಟಿ ಸರಿಯಾಗಿ 300 ವರ್ಷಗಳ ನಂತರ, ಜನವರಿ 8, 1942ರಲ್ಲಿ ಹಾಕಿಂಗ್‌ ಹುಟ್ಟಿದರು, ಲಂಡನ್‌ನಲ್ಲಿ . ಬೆಳೆದದ್ದು ಸೈಂಟ್‌ ಆಲ್ಬನ್ಸ್‌ ನಗರದಲ್ಲಿ . ವಿದ್ಯಾಭ್ಯಾಸ ಸೈಂಟ್‌ ಆಲ್ಬನ್ಸ್‌ ಶಾಲೆ, ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯಗಳಲ್ಲಿ ನಡೆಯಿತು. ಎಲ್ಲ ಮನೆಯಲ್ಲಿಯೂ ಇದ್ದಂತೆ ಸ್ಟೀಫನ್‌ ಅವರ ತಂದೆಗೆ ಮಗ ಡಾಕ್ಟರಾಗಲಿ ಎಂದಾಸೆ. ಸ್ಟೀಫನ್‌ರಿಗೆ ಗಣಿತವೆಂದರೆ ಪ್ರೀತಿ. ಕಾಲೇಜಿನಲ್ಲಿ ಅಧ್ಯಯನಕ್ಕೆ ಅವಕಾಶ ಸಿಕ್ಕಿದ್ದು, ಗಣಿತ ಶಾಸ್ತ್ರ ದಲ್ಲೇ. ನಂತರ ಕೇಂಬ್ರಿಡ್ಜ್‌ನಲ್ಲಿ ಕಾಸ್ಮೋಲಜಿ ವಿಷಯದ ಮೇಲೆ ಅಧ್ಯಯನ ಆರಂಭಿಸಿದರು. ಸ್ಟೀಫನ್‌ರ ಅಧ್ಯಯನಕ್ಕೆ ಕೇಂಬ್ರಿಡ್ಜ್‌ ನಿಮಿತ್ತ ಮಾತ್ರ. ಬದುಕಿನ ತುಂಬಾ ತೊಡರುಗಳ ಗೊಡವೆ ಇಲ್ಲದೆ ಅಧ್ಯಯನ ಮಾಡಿದವರು. ಪಿಎಚ್‌ಡಿ ಮುಗಿಸಿದ ನಂತರ ಆನ್ವಯಿಕ ಗಣಿತ ಶಾಸ್ತ್ರದ ಉಪನ್ಯಾಸಕರಾಗಿ ಸ್ವಲ್ಪ ಸಮಯ ಕೆಲಸ ಮಾಡಿದರು.

ವಿಶ್ವ ನಿಂತಿರುವುದು ವೈಜ್ಞಾನಿಕ ತಳಹದಿಯ ಮೇಲೆ : ಹಾಕಿಂಗ್ಸ್‌ ವಿಶ್ವವನ್ನು ನಿಯಂತ್ರಿಸುವ ಶಕ್ತಿ ಮೂಲದ ಅನ್ವೇಷಣೆಗಾಗಿ ತಡಕಾಡಿದವರು. ಕ್ವಾಂಟಮ್‌ ಥಿಯರಿಯ ಬಗ್ಗೆ ಅವರು ನಡೆಸಿರುವ ಹೆಚ್ಚುವರಿ ಅಧ್ಯಯನ 20 ನೇ ಶತಮಾನದ ಮಹತ್ವದ ಸಂಶೋಧನೆಗಳಲ್ಲಿ ಒಂದು. ಸಂಭಾವ್ಯ ಸಮಯವೊಂದರಲ್ಲಿ ವಿಶ್ವಕ್ಕೊಂದು ಚೌಕಟ್ಟು ಇರುವುದಿಲ್ಲ . ಅಂತೆಯೇ ವೈಜ್ಞಾನಿಕ ನಿಯಮಗಳ ಪ್ರಕಾರವೇ ವಿಶ್ವದ ಸೃಷ್ಟಿಯಾಗಿದೆ ಎಂದು ಹಾಕಿಂಗ್‌ ಹೇಳಿದ್ದಾರೆ.

ತಮ್ಮ ಅನುಭವವನ್ನು ಪುಸ್ತಕ ರೂಪದಲ್ಲಿ ತೆರೆದಿಡುವುದರಲ್ಲೂ ಹಾಕಿಂಗ್‌ ಹಿಂದೆ ಬಿದ್ದಿಲ್ಲ . ಮೂರು ನೂರು ವರ್ಷಗಳ ಗ್ರಾವಿಟಿ ಹಾಗೂ ಐನ್‌ಸ್ಟೀನ್‌ ಶತಮಾನದ ಸರ್ವೆ ಬಗೆಗಿನ ಪುಸ್ತಕಗಳನ್ನು ಡಬ್ಲ್ಯು. ಇಸ್ರೇಲ್‌ ಜೊತೆಗೂಡಿ ಪುಸ್ತಕ ರಚಿಸಿದ್ದಾರೆ. ಹಾಕಿಂಗ್‌ರ ಎ ಬ್ರೀಫ್‌ ಹಿಸ್ಟರಿ ಆಫ್‌ ಟೈಂ ಪುಸ್ತಕ ಅಪಾರ ಜನಪ್ರಿಯತೆ ಗಳಿಸಿತ್ತು . ಅವರ ಇತ್ತೀಚಿನ ಕೃತಿ ಬ್ಲಾಕ್‌ ಹೋಲ್ಸ್‌ ಮತ್ತು ಬೇಬಿ ಯೂನಿವರ್ಸಸ್‌ ಇತರೆ ಪ್ರಬಂಧಗಳು ಕೂಡ ಮಾರುಕಟ್ಟೆಯಲ್ಲಿ ಮುಂದಿದೆ. ರಾಯಲ್‌ ಸೊಸೈಟಿ ಸದಸ್ಯತ್ವ, ಯುಎಸ್‌ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸದಸ್ಯತ್ವ ಸೇರಿದಂತೆ ಅನೇಕ ಉನ್ನತ ಗೌರವಗಳು ಅವರಿಗೆ ಸಂದಿವೆ. 12 ಗೌರವ ಪದವಿಗಳು ಅವರಿಗೆ ದೊರೆತಿವೆ.

ಯಾವುದಕ್ಕೂ ವಿಷಾದವಿಲ್ಲ , ಬಂದದ್ದನ್ನು ಅಂತೆಯೇ ಸ್ವೀಕರಿಸುವೆ : ವಿಶ್ವದ ಅತ್ಯಂತ ಪ್ರತಿಭಾವಂತ ವಿಜ್ಞಾನಿಗಳಲ್ಲಿ ಒಬ್ಬರಾದ ಹಾಕಿಂಗ್‌ ತಮ್ಮನ್ನು ಕಿತ್ತು ತಿನ್ನುತ್ತಿರುವ ಕಾಯಿಲೆಯ ಬಗ್ಗೆ ಏನನ್ನಬಹುದು? ನನಗೆ ಹೆಚ್ಚೇನೂ ಅನ್ನಿಸುತ್ತಿಲ್ಲ . ಮಾಮೂಲಿ ಜೀವನದಂತೆಯೇ ಬದುಕಲು ಪ್ರಯತ್ನಿಸುತ್ತೇನೆ. ನನ್ನ ಪರಿಸ್ಥಿತಿಯ ಬಗ್ಗೆ ಯೋಚನೆಯಾಗಲೀ ವಿಷಾದವಾಗಲೀ ಇಲ್ಲ .

ಆಕ್ಸ್‌ಫರ್ಡ್‌ನಲ್ಲಿ ಓದುತ್ತಿದ್ದ ಸಮಯ. 21 ನೆಯ ಹುಟ್ಟುಹಬ್ಬವನ್ನು ಆಗಷ್ಟೇ ಆಚರಿಸಿದ್ದೆ. ಆಗ ಆಸ್ಪತ್ರೆಯ ಮೆಟ್ಟಿಲನ್ನು ಪದೇ ಪದೇ ಹತ್ತುವಂತಾಯಿತು. ಎಲ್ಲಾ ವಿಧದ ಪರೀಕ್ಷೆಗಳಿಗೂ ಒಳಗಾದೆ. ಆದರೆ, ವೈದ್ಯರು ಕಾಯಿಲೆಯ ಬಗ್ಗೆ ಏನನ್ನೂ ಹೇಳಲಿಲ್ಲ . ನಾನು ಕೇಳಲಿಕ್ಕೂ ಹೋಗಲಿಲ್ಲ . ಆಸ್ಪತ್ರೆಯಲ್ಲಿ ಕಣ್ಣೆದುರೇ ಹುಡುಗನೊಬ್ಬ ಲ್ಯುಕೇಮಿಯಾಕ್ಕೆ ಬಲಿಯಾದ. ನನ್ನ ದೇಹಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತು- ಈ ರೀತಿ ತಮ್ಮ ಕಾಯಿಲೆಯ ಬದುಕನ್ನು ಹೇಳಿಕೊಳ್ಳುವ ಹಾಕಿಂಗ್‌ ಪೂರ್ಣ ಹಾಸಿಗೆ ಹಿಡಿದದ್ದು 1974 ರಲ್ಲಿ .

ಪ್ರಸ್ತುತ ಹಾಕಿಂಗ್‌ ಗಾಲಿ ಕುರ್ಚಿಯಲ್ಲಿ ಕುಳಿತೇ ಕ್ರಿಯಾಶಾಲರಾಗಿದ್ದಾರೆ. ತಮ್ಮ ಬದುಕಿನ ಸಹ್ಯತೆಗೆ ಮೂವರು ಮಕ್ಕಳು ಹಾಗೂ ಓರ್ವ ಮೊಮ್ಮಗು ಸಹಕಾರಿ ಅನ್ನುವ ಹಾಕಿಂಗ್‌, ತಮ್ಮ ನೆರವಿಗೆ ಬಂದಿರುವ ಎಲ್ಲಾ ಸಂಘಟನೆಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಜೀವನದಲ್ಲಿ ಭರವಸೆ ಕಳೆದುಕೊಳ್ಳಬಾರದು ಅನ್ನುವವರಿಗೆ ನಾನು ಉದಾಹರಣೆ ಅನ್ನುತ್ತಾರೆ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more