• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಲ್ಲಿಕಟ್ಟಿನಿಂದ ನಾವು ಕಲಿತಿದ್ದೇನು? ರವಿಶಂಕರ್ ಗುರೂಜಿ ಬರೆಯುತ್ತಾರೆ

By ಶ್ರೀ ಶ್ರೀ ರವಿಶಂಕರ್ ಗುರೂಜಿ
|

ತಮಿಳುನಾಡಿನಲ್ಲಿ ಪೊಂಗಲ್ ಭಾಗವಾಗಿ ಆಡಲಾಗುವ, ಮದವೇರಿದ ಗೂಳಿಯನ್ನು ಕಟ್ಟಿಹಾಕುವ 'ಜಲ್ಲಿಕಟ್ಟು' ಕ್ರೀಡೆಗೆ ಅವಕಾಶ ಮಾಡಿಕೊಡಬೇಕೆಂದು ಭಾರೀ ಪ್ರತಿಭಟನೆಗಳು ನಡೆದಿದ್ದಾಗ, ತಮಿಳರ ಸಂಸ್ಕೃತಿಯ ಭಾಗವಾಗಿರುವ ಜಲ್ಲಿಕಟ್ಟಿಗೆ ಭಾರೀ ಬೆಂಬಲ ನೀಡಿದವರಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡ ಒಬ್ಬರು.

ಜಲ್ಲಿಕಟ್ಟು ಪ್ರತಿಭಟನೆಯಿಂದ ತಮಿಳುನಾಡಿನಲ್ಲಿ ಭಾರೀ ನಷ್ಟಗಳಾದರೂ ಕಡೆಗೆ ಜನರ ಹೋರಾಟವೇ ಗೆದ್ದಿತು, ಸುಪ್ರೀಂ ಕೋರ್ಟ್ ತಣ್ಣಗೆ ಕೂಡಬೇಕಾಯಿತು. ಈ ಹೋರಾಟದಿಂದ ಪ್ರೇರೇಪಣೆ ಪಡೆದ ಕರ್ನಾಟಕದ ಕರಾವಳಿಯ ಜನತೆ ಕೂಡ, ಎತ್ತಿನ ಓಟದ ಪಂದ್ಯವಾದ 'ಕಂಬಳ'ಕ್ಕೂ ಅವಕಾಶ ಮಾಡಿಕೊಡಬೇಕು, ಕರ್ನಾಟಕ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಹೋರಾಟ ನಡೆಸಿತು. ಸದ್ಯಕ್ಕೆ ಆ ಹೋರಾಟ ತಣ್ಣಗಾಗಿದೆ.

ಆದರೆ, ಈ ಜಲ್ಲಿಕಟ್ಟು ಕ್ರೀಡೆಯಿಂದ ಕರ್ನಾಟಕ ಕಲಿಯಬೇಕಾಗಿರುವುದೇನು, ಯಾಕೆ ಈ ಕ್ರೀಡೆಗಳೆರಡು ತಮಿಳುನಾಡು ಮತ್ತು ಕರ್ನಾಟಕದ ಪಾಲಿಗೆ ಮಹತ್ವದ್ದಾಗಿವೆ, ಈ ಸಂಸ್ಕೃತಿಯನ್ನು ಜೀವಂತವಾಗಿಡಬೇಕಾದರೆ ಇಲ್ಲಿನ ಜನತೆ ಏನು ಮಾಡಬೇಕು ಎಂಬುದನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಅವರು, ಏಳು ಹಂತಗಳಲ್ಲಿ ಅತ್ಯಂತ ಸರಳವಾಗಿ ಈ ಲೇಖನದಲ್ಲಿ ವಿವರಿಸಿದ್ದಾರೆ.

ಪಶುತ್ವದ ಶಕ್ತಿಯನ್ನು ನಿಯಂತ್ರಿಸುವುದು ಮುಖ್ಯ!

ಪಶುತ್ವದ ಶಕ್ತಿಯನ್ನು ನಿಯಂತ್ರಿಸುವುದು ಮುಖ್ಯ!

ಮರೀನಾ ಸ್ಪ್ರಿಂಗ್ಸ್ ನಂತಹ ಸ್ವಯಂಪ್ರೇರಿತ ಮತ್ತು ಪ್ರಾಮಾಣಿಕವಾದ ಸಾರ್ವಜನಿಕ ಚಳವಳಿಯು ಸ್ವಾರ್ಥದ ಉದ್ದೇಶವನ್ನು ಹೊಂದಿದ್ದ ಜನರು ಮತ್ತು ಸಂಘಗಳು ಒಳನುಸುಳಿ ದಾರಿತಪ್ಪಿಸುವ ಮೂಲಕ ಮುಕ್ತಾಯವಾಯಿತು ಎಂಬುದು ದುರದೃಷ್ಟಕರ. ಚೆನ್ನೈನಲ್ಲಿ ನಡೆದ ಈ ಘಟನೆಯು ನಮ್ಮನ್ನು ಎಚ್ಚರಿಸಿ ಸಾರ್ವಜನಿಕ ಭಾವಾತಿರೇಕವನ್ನು ರಚನಾತ್ಮಕವಾಗಿ ನಿಭಾಯಿಸುವ ಪಾಠವನ್ನು ಕಲಿಸಬೇಕು.

ಸರಿಯಾದ ಮುಕ್ತಾಯವು ಮಹತ್ವಪೂರ್ಣ

ಸರಿಯಾದ ಮುಕ್ತಾಯವು ಮಹತ್ವಪೂರ್ಣ

ಜಲ್ಲಿಕಟ್ಟುವಿನ ನಿಷೇಧಾಜ್ಞೆಯನ್ನು ಹಿಂಪಡೆಯಲು ಅಧಿಕಾರಿಗಳನ್ನು ಒತ್ತಾಯಿಸುವಲ್ಲಿ ಯಶಸ್ವಿಯಾದ ಬಹುತೇಕ ಪ್ರತಿಭಟನಾಕಾರರಿಗೆ ತಮ್ಮ ಸಂತೋಷವನ್ನು ಹೇಗೆ ನಿಭಾಯಿಸುವುದೆಂಬ ತಿಳಿವಳಿಕೆ ಇರಲಿಲ್ಲ. ಪ್ರತಿಭಟನೆಗಳಿಗೆ ಕೂಡ ಸರಿಯಾದ ಬೀಳ್ಕೊಡುಗೆ ಅಗತ್ಯವಾದುದು. ಇಲ್ಲದಿದ್ದರೆ ಜನತೆಯ ಮತ್ತೇರಿದ ಸ್ಥಿತಿ ಮತ್ತು ಅತ್ಯುತ್ಸಾಹವು ಸುಲಭವಾಗಿ ತಪ್ಪು ದಿಕ್ಕಿನಲ್ಲಿ ಹರಿದು ಹೋಗಬಹುದು.

ಒಂದು ಭರ್ಜರಿಯಾದ ಸಂಭ್ರಮಾಚರಣೆಯು ಇದ್ದಿದ್ದರೆ

ಒಂದು ಭರ್ಜರಿಯಾದ ಸಂಭ್ರಮಾಚರಣೆಯು ಇದ್ದಿದ್ದರೆ

ಶಾಂತಿಯುತವಾದ ಈ ಚಳವಳಿಯ ಯಶಸ್ಸನ್ನು ಆಚರಿಸಲು ಕೊನೆಯಲ್ಲಿ ಒಂದು ಭರ್ಜರಿಯಾದ ಸಂಭ್ರಮಾಚರಣೆಯು ಇದ್ದಿದ್ದರೆ ಕಿಡಿಗೇಡಿಗಳು ಯುವಕರ ಚಂಚಲತೆಯನ್ನು ದುರುಪಯೋಗಪಡಿಸಿಕೊಳ್ಳುವ ಮುನ್ನವೇ ಪ್ರತಿಭಟನಾಕಾರರು ಆ ಸ್ಥಳದಿಂದ ಹೊರಟಿರುತ್ತಿದ್ದರು. ಸಾಂಸ್ಕೃತಿಕ ಕಲೆ, ಸಾಮುದಾಯಿಕ ಸಂಭ್ರಮ ಮತ್ತು ಸತ್ಸಂಗಗಳಿಂದ ಕೂಡಿದ ಒಂದು ಭರ್ಜರಿ ಕಾರ್ಯಕ್ರಮವು ಸಾಮೂಹಿಕ ಶಕ್ತಿಯನ್ನು ಸಂಪನ್ನಗೊಳಿಸುವ ಸಕಾರಾತ್ಮಕ ಮಾರ್ಗವಾಗಿ ಮಾರ್ಪಡುತ್ತಿತ್ತು.

ನಮ್ಮ ಸಂಸ್ಕೃತಿ ಇಂದಿಗೂ ಜೀವಂತ

ನಮ್ಮ ಸಂಸ್ಕೃತಿ ಇಂದಿಗೂ ಜೀವಂತ

ಜಲ್ಲಿಕಟ್ಟು ಆಂದೋಲನವು ಒಂದು ಚಾರಿತ್ರಿಕ ಘಟನೆಯಾಗಿತ್ತು. ಇದು ಸ್ವಾಭಿಮಾನ ಮತ್ತು ಪ್ರಾಚೀನ ಕ್ರೀಡೆಯನ್ನು ಕಾಪಾಡುವ ಸದುದ್ದೇಶವನ್ನು ಹೊಂದಿದ್ದ ಬಹುತೇಕವಾಗಿ ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಶಾಂತಿಯುತವಾದ ಆಂದೋಲನವಾಗಿತ್ತು. ಯಾವುದೇ ಸಂಘಟಿತ ಸಿದ್ಧತೆಯಿಲ್ಲದೆ ಕೆಲವೇ ದಿನಗಳಲ್ಲಿ ಅವರ ಸಂಖ್ಯೆ ಒಂದು ಲಕ್ಷಕ್ಕೂ ಮೀರಿ ಬೆಳೆದಿದ್ದು ಪ್ರಶಂಸನೀಯ. ತಮ್ಮ ಸಂಸ್ಕೃತಿಯ ಬಗೆಗಿನ ಈ ರೀತಿಯ ಅಭಿಮಾನವು ನಮ್ಮ ಯುವಜನತೆ ದೇಶದ ಪರಂಪರೆಗೆ ಇಂದಿಗೂ ಮಹತ್ವವನ್ನು ನೀಡುತ್ತಾರೆ ಎಂಬುದರ ಸಕಾರಾತ್ಮಕ ಸೂಚನೆ.

ಶೌರ್ಯ ಮತ್ತು ಉತ್ಸಾಹವನ್ನು ಕುದುರಿಸುತ್ತದೆ

ಶೌರ್ಯ ಮತ್ತು ಉತ್ಸಾಹವನ್ನು ಕುದುರಿಸುತ್ತದೆ

ಜಲ್ಲಿಕಟ್ಟು ಮತ್ತು ತಮಿಳು ಅಭಿಮಾನಕ್ಕೆ ಸಂಬಂಧಿಸಿದ ಒಂದು ಹಾಡು ಯೂಟ್ಯೂಬ್ ನಲ್ಲಿ ಮಿಲಿಯಗಟ್ಟಲೆ ವೀಕ್ಷಣೆಯನ್ನು ಪಡೆಯಿತು ಎಂದು ನಾವು ಕೇಳಿರುವೆವು. ಯುವಜನತೆಯು ತಮ್ಮ ಪ್ರಾಚೀನ ಸಂಸ್ಕೃತಿಯಲ್ಲಿ ಅಭಿಮಾನವನ್ನು ಹೊಂದಿದಾಗ, ಅದನ್ನು ತಮ್ಮ ಅಸ್ತಿತ್ವದ ಭಾಗವನ್ನಾಗಿ ಗುರುತಿಸಿಕೊಂಡಾಗ ಅದು ಅವರ ಜೀವನಕ್ಕೆ ಆಳವನ್ನು ನೀಡುತ್ತದೆ ಹಾಗೂ ಅತ್ಯವಶ್ಯಕವಾದ ಶೌರ್ಯ ಮತ್ತು ಉತ್ಸಾಹವನ್ನು ಕುದುರಿಸುತ್ತದೆ. ಜಲ್ಲಿಕಟ್ಟುವಿನ ಮೇಲಿನ ನಿಷೇಧಾಜ್ಞೆಯ ವಿರುದ್ಧದ ಹೋರಾಟವು ಬೆಂಬಲ ಕೃಷಿ, ಅಂತರ್ಜಲ ಹಾನಿ, ಪರಿಸರ ಮಾಲಿನ್ಯ ಮುಂತಾದ ಉನ್ನತ ಧ್ಯೇಯಗಳನ್ನು ಒಳಗೊಂಡಿದ್ದು ಆಶ್ಚರ್ಯವೇನಲ್ಲ.

ಸಮಾಜವಿರೋಧಿ ಗುಂಪುಗಳ ಬಗ್ಗೆ ಎಚ್ಚರ ವಹಿಸಿ

ಸಮಾಜವಿರೋಧಿ ಗುಂಪುಗಳ ಬಗ್ಗೆ ಎಚ್ಚರ ವಹಿಸಿ

ಭಾವನಾತ್ಮಕವಾಗಿ ಹುರಿದುಂಬಿದ ಸಾವಿರಾರು ಜನರು ಒಗ್ಗೂಡಿದಾಗ ಆ ಗುಂಪು ವೀರತನದ ಬಲವಾಗಿ ಮಾರ್ಪಡುತ್ತದೆ. ಈ ಉದ್ರೇಕದ ಶೌರ್ಯದಲ್ಲಿ ವಾಸ್ತವ ಮತ್ತು ಸಾಮಾನ್ಯ ಜ್ಞಾನದ ಅರಿವು ಕಳೆದುಹೋಗುವುದು ಸುಲಭ. ಇದರಿಂದ ಸ್ವಾರ್ಥೋದ್ದೇಶದ ಜನರಿಗೆ ಈ ಭಾವವೋದ್ವೇಗಗಳನ್ನು ದುರುಪಯೋಗಪಡಿಸಿಕೊಳ್ಳಲು ಸುಲಭವಾದ ಅವಕಾಶ ದೊರೆಯುತ್ತದೆ.

ವಿವೇಕ, ಸಹನೆ, ನಿಷ್ಠೆ ಮತ್ತು ದೂರದೃಷ್ಟಿ

ವಿವೇಕ, ಸಹನೆ, ನಿಷ್ಠೆ ಮತ್ತು ದೂರದೃಷ್ಟಿ

ನಮಗೆ ಇದರ ಅರಿವಿತ್ತು. ಆದ್ದರಿಂದ ನಾವು ಪುನಃ ಪುನಃ ಸಾರ್ವಜನಿಕರಿಗೆ ಜಾಗರೂಕವಾಗಿರುವ ಎಚ್ಚರಿಕೆಯನ್ನು ನೀಡಿದ್ದೆವು. ಸಾಮಾಜಿಕ ನ್ಯಾಯಕ್ಕಾಗಿ ಮಾಡುವ ಹೋರಾಟಗಳನ್ನು ಧ್ವಂಸ ಮನೋಭಾವದ ಸಮೂಹಗಳಿಂದ ವಿವೇಕ, ಸಹನೆ, ನಿಷ್ಠೆ ಮತ್ತು ದೂರದೃಷ್ಟಿಯ ಮೂಲಕ ಕಾಪಾಡಬೇಕೆಂದು ಚೆನ್ನೈನ ಪ್ರಸಂಗವು ತೋರಿಸಿಕೊಟ್ಟಿದೆ.

ಹೋರಿಯನ್ನು ಪಳಗಿಸುವುದು ಹೇಗೆ?

ಹೋರಿಯನ್ನು ಪಳಗಿಸುವುದು ಹೇಗೆ?

ಆಂದೋಲನದ ಎಲ್ಲ ಜನರು ಕಿಡಿಗೇಡಿಗಳನ್ನು ದೂರವಿಟ್ಟಿದ್ದರು. ಪೊಲೀಸರ ಕ್ರಮವನ್ನು ನಿವಾರಿಸಬಹುದಾಗಿತ್ತಾದರೂ ಅದು ಅಗತ್ಯವಾಯಿತು. ತಮಿಳುನಾಡಿನ ಸರ್ಕಾರವು ಜಲ್ಲಿಕಟ್ಟುವಿನ ಪರವಾಗಿ ಹೊಸ ಕಾನೂನು ಜಾರಿಗೊಳಿಸಿದ ನಂತರ ನಾವು ಈಗ ಸಾಂಸ್ಕೃತಿಕ ಹೋರಿ ಪಳಗಿದ ಕ್ರೀಡೆಯನ್ನು ಸುರಕ್ಷಿತವಾಗಿ ಮತ್ತು ಸರಿಯಾದ ಮನೋಭಾವದಿಂದ ಆಚರಿಸುವೆಡೆಗೆ ಗಮನವನ್ನು ಹರಿಸಬೇಕು. ಸರ್ಕಾರವು ಸಿಸಿಟಿವಿ ಕಾವಲು, ಹೋರಿಗಳ ವೈದ್ಯಕೀಯ ಪರೀಕ್ಷೆ ಮುಂತಾದ ಕಠಿಣವಾದ ನಿಯಮಗಳನ್ನು ಜಾರಿಗೊಳಿಸಿದೆ. ಗಾಯಗಳನ್ನು ತಪ್ಪಿಸಲು ಹೆಚ್ಚು ಮುಂಜಾಗ್ರತೆಯನ್ನು ವಹಿಸಬೇಕು.

ನಮ್ಮದು ಕೃಷಿ ಪ್ರಧಾನವಾದ ಸಂಸ್ಕೃತಿ

ನಮ್ಮದು ಕೃಷಿ ಪ್ರಧಾನವಾದ ಸಂಸ್ಕೃತಿ

ಸಂಸ್ಕೃತಿ, ಮಾನವ ಸುರಕ್ಷತೆ ಮತ್ತು ಪ್ರಾಣಿಯ ಆರೈಕೆಯ ನಡುವೆ ಸಮತೋಲನವನ್ನು ಸಾಧಿಸಬೇಕು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪೊಂಗಲ್ ಆಚರಣೆಯ ಒಂದು ಪ್ರಾಚೀನ ಭಾಗ. ನಮ್ಮದು ಕೃಷಿ ಪ್ರಧಾನವಾದ ಸಂಸ್ಕೃತಿ. ಹೊಲವನ್ನು ಉಳುವಲ್ಲಿ ಸಹಾಯ ಮಾಡುವ ಎತ್ತುಗಳನ್ನು ರೈತನ ಜೀವನಾಡಿಯಾಗಿ ಪರಿಗಣಿಸಲಾಗಿದೆ. ಕುಟುಂಬದ ಭಾಗವೆಂಬ ಭಾವದಿಂದ ಅವುಗಳಿಗೆ ಮಾನ್ಯತೆ ಮತ್ತು ಆರಾಧನೆಯಿದೆ. ಅಭಿಮಾನ ಮತ್ತು ಮಾನ್ಯತೆಯ ಸಂಕೇತವಾಗಿರುವ ಜಲ್ಲಿಕಟ್ಟು ಕಳೆದ ಕೆಲವು ವರ್ಷಗಳಿಂದ ಅಳಿದುಹೋಗುತ್ತಿರುವ ಸ್ಥಳೀಯ ಹೋರಿಗಳನ್ನು ಪೋಷಿಸಿ ಬೆಳೆಸುವ ಪ್ರೇರಣೆಯನ್ನು ರೈತನಿಗೆ ನೀಡುತ್ತದೆ.

ಒಲಿಂಪಿಕ್ ದಾಖಲೆಗಿಂತ ವೇಗ!

ಒಲಿಂಪಿಕ್ ದಾಖಲೆಗಿಂತ ವೇಗ!

ಕಾನೂನನ್ನು ಮುರಿದು ಪ್ರಾಣಿಗಳೆಡೆಗೆ ಕ್ರೂರವಾಗಿ ವರ್ತಿಸಿದ ಕೆಲವು ಜನರ ಘಟನೆಗಳಾಗಿದ್ದರೂ ಜಲ್ಲಿಕಟ್ಟುವಿನಂತಹ ಕ್ರೀಡೆಗಳು ಮೃಗ ಕ್ರೌರ್ಯ ಅಥವಾ ಜನಹಾನಿಯನ್ನು

ಬೆಂಬಲಿಸುವುದಿಲ್ಲ. ಬದಲಾಗಿ, ಇಂತಹ ಕ್ರೀಡೆಗಳು ಪ್ರತಿಭೆ, ಏಕಾಗ್ರತೆ, ದೈಹಿಕ ಸಾಮರ್ಥ್ಯ, ಸಹನೆ ಮುಂತಾದ ಕೌಶಲ್ಯಗಳ ಪರೀಕ್ಷೆ. ಇದನ್ನು ಹೋಲುವ ಕರ್ನಾಟಕದ ದಕ್ಷಿಣ

ಕನ್ನಡದ ಕ್ರೀಡೆ, ಕಂಬಳದಲ್ಲಿ ಆಟಗಾರರು 13.5 ಸೆಕೆಂಡುಗಳಲ್ಲಿ 145 ಮೀಟರ್ ಗಳ ಅಂತರವನ್ನು ಬರಿಗಾಲಿನಲ್ಲಿ ಕೋಣಕ್ಕೆ ಕಟ್ಟಿದ ಹಗ್ಗವನ್ನು ಹಿಡಿದು ಓಡುತ್ತಾರೆ! ಇದರ

ಅರ್ಥ ಅವರು 9.31 ಸೆಕೆಂಡುಗಳಲ್ಲಿ 100 ಮೀಟರ್ ಓಡಿದ್ದಾರೆ. ಒಲಿಂಪಿಕ್ ದಾಖಲೆಗಿಂತ ವೇಗ! ಈ ರೀತಿಯ ಕ್ರೀಡೆಗಳನ್ನು ನಿಷೇಧಿಸುವುದರಿಂದ ಗ್ರಾಮೀಣ ಯುವಕರ ಪ್ರತಿಭೆಗಳನ್ನು ನಿಗ್ರಹಿಸಿದಂತಾಗುತ್ತದೆ.

ಜಲ್ಲಿಕಟ್ಟುವಿನ ಎಲ್ಲೆಯನ್ನು ಮೀರಿ

ಜಲ್ಲಿಕಟ್ಟುವಿನ ಎಲ್ಲೆಯನ್ನು ಮೀರಿ

ದುರದೃಷ್ಟಕರವೆಂದರೆ ಈ ಎಲ್ಲ ಸಾಂಸ್ಕೃತಿಕ ಆಯಾಮಗಳು ನ್ಯಾಯಾಲಯದ ಮುಂದೆ ಸರಿಯಾಗಿ ಮಂಡನೆಯಾಗಿಲ್ಲ. ಪರಿಣಾಮವಾಗಿ, ಈ ರೀತಿಯ ಕ್ರೀಡೆಗಳ ಮೇಲೆ ಪ್ರಾಣಿ ಕ್ರೌರ್ಯದ ಆರೋಪದ ಮೇರೆಗೆ ನಿಷೇಧವನ್ನು ಹೇರಲಾಗಿದೆ. ಕ್ರಾಂತಿಕಾರಿಗಳು ನಿಜವಾಗಿಯೂ ತಮ್ಮ ಪಶುಪ್ರೇಮವನ್ನು ತೋರಬೇಕೆಂದಿದ್ದರೆ, ಅವರು ಮೊದಲು ಕಸಾಯಿಖಾನೆಗಳನ್ನು ನಿಷೇಧ ಮಾಡುವ ಆಗ್ರಹವನ್ನು ಮಾಡಬೇಕು. ಜಲ್ಲಿಕಟ್ಟು ನಡೆಸುವಾಗ ಸುರಕ್ಷತೆ ಮತ್ತು ಭದ್ರತೆಗಾಗಿ ಸೂಚಿಸಿರುವ ಎಲ್ಲ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಿ ಉಲ್ಲಂಘಿಸುವವರನ್ನು ಶಿಕ್ಷಿಸಿ ನಿಷೇಧಿಸಬೇಕು, ಇಡೀ ಕ್ರೀಡೆಯನ್ನಲ್ಲ.

English summary
What Karnataka should learn from Jallikattu protest and the game? Art of Living Sri Sri Ravishankar Guruji explains in 7 steps, why Kambala is significant for Karnataka people to keep our culture alive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more