• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸ'ಕಾರದೊಡನೆ ಸುಂದರ ಸರಸವಾಡಿದ ಸಿಡ್ನಿಸೀತಾ

By * ಸೀತಾ ಕೇಶವ, ಸಿಡ್ನಿ
|

’ಸ’ಕಾರಕ್ಕೆ ಸಂತೃಪ್ತಿ, ಸಂತೋಷ, ಸಮೃದ್ಧಿಯಾಗಲಿ. ಸುಬ್ಬರಾಯ, ಸುವರ್ಣಮ್ಮನವರ, ಸೊಸೆಯರಾದ ಸಾವಿತ್ರಮ್ಮ, ಸುಶೀಲಮ್ಮ, ಸರೋಜಮ್ಮ, ಸುನಂದಮ್ಮ, ಸರಸಮ್ಮನವರ ಸುಕುಮಾರರಾದ ಸ್ಕಂದ, ಸಂಜಯ, ಸುನಿಲ್, ಸಂಜೀವ್, ಸುಮೇರು ಸಂಖ್ಯೆಗಳನ್ನು ಸಲೀಸಾಗಿ ಸ್ತುತಿಸುತ್ತಿದ್ದರು.

ಸಾರಂಗಪಾಣಿಯವರ ಸೌಟಿನ ಸಬ್ಬಸಿಗೆಸೊಪ್ಪಿನ ಸಾರು, ಸೌತೆಯ ಸಾಂಬಾರು, ಸಂಡಿಗೆ ಸವಿಯಲು ಸೀತಾರಾಮಯ್ಯ, ಸಾಂಬಶಿವಯ್ಯ, ಸೇತುರಾಮ್ ಸೇರಿದ್ದರು. ಸೋಮವಾರ ಸೋಮಸೂರ್ಯಾರವರ ಸುಂದರಕಾಂಡ, ಸಹಸ್ರನಾಮ ಸ್ತೋತ್ರಕ್ಕೆ ಸಾಧು, ಸಂತರುಗಳು ಸಂಕೋಚವಿಲ್ಲದೆ ಸೇರಿ ಸಂಭಾವನೆಯಿಂದ ಸಾಂಗೋಪಾಂಗವಾಗಿ ಸನ್ಮಾನಿಸಿದರು.

ಸರೋವರದಲ್ಲಿ ಸುಂಟರಗಾಳಿಯಾಗಿ ಸಿದ್ಧಾರ್ಥ, ಸೀನ, ಸಂದೀಪ, ಸುಧೀರ್ ಸುಳಿಯಲ್ಲಿ ಸಿಕ್ಕಿ ಸಾವನ್ನಪ್ಪಿದರು. ಸೂರ್ಯೋದಯದಲ್ಲಿ ಸ್ನಾನಮಾಡಿ, ಸಾಯಂ ಸಂಧ್ಯಾವಂಧನೆಯನ್ನು, ಸತ್ಯಜಿತ್, ಸತ್ಯನಾರಾಯಣ, ಸುಬ್ಬರಾಮಯ್ಯ ಸಲೀಸಾಗಿ ಸಾಗಿಸಿದರು.

ಸರ್ಕಾರದ ಸಂಚು, ಸುಲಿಗೆ, ಸಂಪತ್ತಿನಲ್ಲಿ ಸದಾನಂದಗೌಡ, ಸಿದ್ಧರಾಮಯ್ಯ ಸಮಯೋಚಿತವಾಗಿ ಸವಾಲಾಗಿ ಸಂಕಟಪಟ್ಟರು. ಸೋಮನಾಥೇಶ್ವರದ ಸೋಮನಾಥನಿಗೆ, ಸಪೋಟ, ಸೀತಾಫಲ, ಸಂಪಿಗೆ, ಸಂಜುಮಲ್ಲಿಗೆ, ಸುಗಂಧರಾಜ, ಸೂರ್ಯಕಾಂತಿಯಿಂದ ಸಮೃದ್ಧಿಪಡಿಸಿದರು. ಸ್ವೆಟರು, ಸೂಟುಹಾಕಿ ಸುಭಾಶ್, ಸುಭೋದ್, ಸಾಮ್ಯುಯಲ್ ಸಕಲೇಶಪುರ, ಸಾಗರ, ಸಂತೇಬೆನ್ನೂರಿಗೆ ಸಾಕರ್, ಸ್ವಿಮ್ಮಿಂಗ್ ಸ್ಪರ್ಧಿಸಲು ಸಾಗಿದರು.

ಸೌಭಾಗ್ಯವತಿಯಾದ ಸರೋಜಿನಿಯವರು ಸೇರಿದ್ದ ಸ್ತ್ರೀಯರಿಗೆಲ್ಲಾ ಸಂತಾನದ ಸಮಾಚಾರ ಸಾರಿದರು. ಸಾಯಂಕಾಲ ಸೌಮ್ಯ, ಸುಶ್ಮ, ಸುಲೊಚನ, ಸವಿತ, ಸುಪ್ರಿತ ಸಂಕ್ರಾಂತಿಯ ಸಂಭ್ರಮವನ್ನು ಸವಿದರು. ಸೌಂದರ್ಯರವರ ’ಸೊಸೆ’ ಸೀರಿಯಲ್ ಸ್ವಾಗತಿಸುವುದಕ್ಕೆ ಸಂಜನ, ಸುಶ್ಮಿತ, ಸಾನಿಧ್ಯ ಸೇರಿದ್ದರು.

ಸಮುದ್ರದಾಚೆಯ ಸಿಡ್ನಿಯಲ್ಲಿ ಸಚಿನ್ ಸಿಕ್ಸರಿನಿಂದ ಸೆಂಚುರಿ ಸಾರ್ಥಕವಾಯಿತು. ಸಂಗೀತ ಸಾಮ್ರಾಜ್ಯದಲ್ಲಿ ಸಾಮ್ರಾಟರಾದ ಸಾತೂರ್ ಸುಬ್ರಮಣ್ಯಮ್, ಸಂಜಯ್ ಸುಬ್ರಮಣ್ಯಮ್, ಸುಬ್ಬುಲಕ್ಷ್ಮಿ, ಸೋದರಿಯರಾದ ಸಿಕ್ಕಿಲ್ ಸಿಸ್ಟರ್ಸ್, ಸರಳಾಲಯ ಸಿಸ್ಟರ್ಸ್ ರವರ ಸಾರಂಗ, ಸರಸ್ವತಿ, ಸಾದಿಂಚನೆ, ಸರಸಿಜನಾಭ ಸೋದರಿ, ಸಭಾಪತಿ, ಸುಬ್ರಹ್ಮಣ್ಯೇನ, ಸರಸ ಸಾಮಧಾನ, ಸುಮಧುರ ಸಂಗೀತ ಸುಶ್ರಾವ್ಯವಾಗಿತ್ತು.

’ಸುಧಾ’ನಲ್ಲಿ ಸಂಪಾದಕರು ಸಮುದ್ರಮಥನ, ಸಾಹಿತ್ಯ, ಸಿನಿಮಾ, ಸ್ಪೋರ್ಟ್ಸ್ ಸುಂದರವಾಗಿ ಸುಲಲಿತವಾಗಿರಿಸುತ್ತಾರೆ. ಸಾಯಿಯವರ ಸೂಪರ್ ಸ್ಪೆಷಾಲಿಟಿನಲ್ಲಿ, ಸಿರಿಂಜ್, ಸೂಜಿ, ಸ್ಟೆತಾಸ್ಕೋಪ್, ಸ್ಟೆಬಿಲೈಸರ್ಗಳನ್ನು ಸುಂದರಿ, ಸುಗುಣ, ಸುಕನ್ಯ, ಸರಳವಾಗಿ ಸದ್ವಿನಿಯೋಗಿಸಿದರು. ಸೆಂಟರಿನಲ್ಲಿ ಸಾಯಿಸುತೆ, ಸ್ತೋತ್ರ ಸದ್ಭಕ್ತಿಯಿಂದ ಸಲ್ಲಿಸಲು ಸರಿಯಾದ ಸಮಯದಲ್ಲಿ ಸುತ್ತಮುತ್ತಲಿನವರೆಲ್ಲಾ ಸೇರುತ್ತಿದ್ದರು.

ಸತೀಸಾವಿತ್ರಿ, ಸೀತೆ, ಸುಬ್ಬಾಶಾಸ್ತ್ರಿ, ಸಾಗರ ಸಂಗಮ, ಸಾವಿರಕ್ಕೊಂದು ಸುಳ್ಳು, ಸಂಪತ್ತಿಗೆ ಸವಾಲು, ಸವಾರಿ ಸಿನಿಮಾಗಳನ್ನು ಸಂಗಂನಲ್ಲಿ ಸಿದ್ಧಪಡಿಸಿದರು. ಸದಾಶಿವನಗರ ಸಭಾ ಸಮಿತಿ ಸ್ಟಾಪ್ ಸಿಗ್ನಲ್ಲಿನಲ್ಲಿ ಸ್ಕೂಟರ್, ಸೈಕಲ್ ಸಾಲು ಸಾಲಾಗಿ ಸುತ್ತುತ್ತಿತ್ತು. ಸಜ್ಜನರಾವ್ ಸರ್ಕಲ್ಲಿನ ಸಂದಿಯಲ್ಲಿ ಸಿಡಿಕಲ, ಸೋಮಾರಿ ಸಣ್ಣಪ್ಪ ಸಗಣಿ ಸುಡುತ್ತಿದ್ದು, ಸಿಂಪಲ್, ಸಿಂಥಾಲ್, ಸಂತೂರ್ ಸೋಪಿನಿಂದ ಸ್ವಚ್ಛಗೊಳಿಸಿಕೊಂಡರು. ಸಿಲ್ಕ್ ಸೀರೆ, ಸಾಟಿನ್ ಸೆಲ್ವಾರ್, ಸೆಂಟು ಸ್ಪರ್ಶಿಸಿಕೊಂಡು, ’ಸಿಲಿಕಾನ್ ಸಿಟಿನಲ್ಲಿ’ ಸುಗಮ ಸಂಗೀತ ಸ್ಪರ್ಧೆಗೆ, ಸಾಯಿಪ್ರಿಯ, ಸಂತೋಶಿ, ಸುವರ್ಣ, ಸಿಂಧು, ಸುಜನ, ಸಾಮ್ರಾಟ್ ಸೇರಿಕೊಂಡರು.

ಸಾತಕ್ಕನವರ ಸ್ವೀಟ್ಸ್, ಸಜ್ಜಪ್ಪ, ಸಜ್ಜಿಗೆ ಸವಿಯಲು ಸಹ್ಯಾದ್ರಿಯ ಸಿಮೆಂಟ್ ಸೇತುವೆ ಸಮೀಪವಿರುವ ಸಂಕೇತಿ ಸಮುದಾಯದಲ್ಲಿ ಸದ್ವಿನಿಯೋಗಿಸಿದರು. ಸೋಫಾದಲ್ಲಿ ಸೆಲ್ವಂ, ಸೆಲರಿ ಸೂಪಿಗೆ ಸಕ್ಕರೆ ಸಿಂಪಡಿಸಿ ಸಲಕರಣೆಗಳಿಂದ ಸ್ವೀಕರಿಸಿ, ಸಾಲಮಾಡಿ ಸಂಪತ್ತು ಸಂಪಾದಿಸಿದ ಸಮೀರ್ನೊಡನೆ ಸಂತಸಪಟ್ಟರು. ಸ್ಕೂಲಿನಲ್ಲಿ ಸೋನಿ, ಸಾನ್ಯೋ, ಸ್ಯಾಮ್‌ಸಂಗ್ ಸ್ಪೀಕರ್, ಸ್ಟೀರಿಯೋಗಳನ್ನು ಸಹಪಾಟಿಗಳು, ಸೇವಕ ಸೇವಕಿಯರ ಸಹಾಯದಿಂದ ಸಲೀಸಾಗಿ ಸರಿಸಿಬಿಟ್ಟರು.

ಸಂಯುಕ್ತ ಸಂಘ ಸಂಸ್ಥೆಯಲ್ಲಿ ಸುಹಾಸಿನಿ, ಸುಮತಿ, ಸೋನಿಯ, ಸುಸಾನ್ ಸುಖ, ಸಂಪತ್ತಿನ ಸೋಜಿಗದಲ್ಲಿ ಸೇವೆಸಲ್ಲಿಸಿದರು. ಸಂತರು, ಸಂಭಾವಿತರೊಡನೆ ಸುಜಾತ ಸಹೋದರ, ಸಹೊದರಿಯರ ಸಮಾಜದಲ್ಲಿ ಸರ್ವರಿಗೂ ಸುಖಸಾರಿದರು. ಸಾವಿರಾರು ’ಸೂಬರೂಗಳು’ ಸಿಂಗಪುರ, ಸಿಯಾಟಲ್, ಸಿರಿಯಾ, ಸ್ಪೈನಲ್ಲಿ ಸಿಕ್ಕಾಪಟ್ಟೆ ಸಿಕ್ಕುತ್ತಿದ್ದುದರ ಸುದ್ದಿಯಾಯಿತು. ಸಿಂಧುಜ, ಸರಯೂ, ಸಮುದ್ಯತ, ಸುಜನ್ ಸ್ವರೂಪಾನಂದರನ್ನು, ಸಾಕ್ಸಾಫೋನ್ ಸಮಾರಂಭಕ್ಕೆ ಸ್ವಾಗತಿಸಿದರು. ಸುಬ್ರಹ್ಮಣ್ಯಸ್ವಾಮಿ ಸೀರಿಯಸ್ಸಾಗಿ ಸುಧೀಂದ್ರರೊಡನೆ ಸಂಭಾಶಿಸಿಕೊಂಡು ಸಿದ್ಧರೂಡಾಶ್ರಮದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು.

’ಸಹನಾಭವತು, ಸಹನೌಭುನತ್ತು, ಸಹವೀರ್ಯಂ ಸಮರ್ಪಯಾಮಿ" ಎಂದು ಸಾಹುಕಾರ ಸಂಕ್ರಪ್ಪನವರು ಸಿಂಹಾಸನವನ್ನೇರಿದರು. ಸ್ನೇಹ, ಸಂಬಂಧ, ಸಹಜ, ಸಮ್ಮತವೆಂದು, ಸರ್ಕಾರ ಸಮ್ಮತಿಸಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Seetha Keshava from Sydney, Australia plays with beautiful Kannada words starting from S or Sa. It is always fun playing with Kannada words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more