ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ನಂದಿನಿಗೆ ಮಾತಾಡಲು ಬಂದಿದ್ದರೆ...

By * ಚಿತ್ರ-ವರದಿ : ಚಿತ್ರದುರ್ಗ ಸಂಜೀವಮೂರ್ತಿ
|
Google Oneindia Kannada News

Nandini Cow inspects KMF Milk Booth, Bangalore
ಹಾಲಿನ ದರ 3 ರು. ಏರಿಕೆ ಎಂದು ಕರ್ನಾಟಕ ಹಾಲು ಮಹಾಮಂಡಳಿಯ ನಿರ್ದೇಶಕರಾದ ಜಿ. ಸೋಮಶೇಖರ ರೆಡ್ಡಿ ಅವರು ಪ್ರಕಟಿಸಿದಾಗ, ಹಾಲನ್ನು ಪ್ರತಿನಿತ್ಯ ಬಳಸುತ್ತಿರುವ ಲಕ್ಷಾಂತರ ಕರ್ನಾಟಕದ ಜನತೆಯ ನೆಮ್ಮದಿ ಮಾತ್ರ ಭಂಗವಾಗಿದ್ದಿಲ್ಲ, ಹಾಲು ಕರೆಯುವ ಮತ್ತು ಹಾಲಿನ ಪಾಕೀಟಿನ ಮೇಲೆ ಲಾಂಛನವಾಗಿರುವ ಕಾಮಧೇನುವಿನ ನೆಮ್ಮದಿ ಕೂಡ ಭಂಗವಾಗಿತ್ತು.

ಲೀಟರಿಗೆ ಕೇವಲ 3 ರು. ಮಾತ್ರ ಏರಿಸಲಾಗಿದೆ ಎಂದು ಘೋಷಿಸಲಾಗಿದ್ದರೂ, ಅಸಲಿಗೆ ಹಸಿರು ಮತ್ತು ಕೇಸರಿ ಪಾಕೀಟಿನಲ್ಲಿ ಬರುವ ಹಾಲಿನ ದರವನ್ನು ಲೀಟರಿಗೆ 4 ರು.ನಷ್ಟು ಏರಿಸಲಾಗಿದೆ. ಹೇಳುವವರಿಲ್ಲ ಕೇಳುವವರಿಲ್ಲ. ಜನ ಮಾತ್ರ ತೆಪ್ಪಗೆ ಹೆಚ್ಚಿನ ರೊಕ್ಕ ತೆತ್ತು ಹಾಲು ಕೊಳ್ಳುತ್ತಿದ್ದಾರೆ. ನೆಂಟರು ಬಂದರೆ ಅರ್ಧ ಲೀಟರ್ ನೀರು ಸೇರಿಸಿ ಚಹಾ ಮಾಡುತ್ತಿದ್ದಾರೆ.

ಹೋಗಲಿ, ಲೀಟರಿಗೆ ನೀಲಿ ಪಾಕೀಟಿಗೆ 24, ಹಸಿರಿಗೆ 28, ಕೇಸರಿಗೆ 30 ರು. ನೀಡುತ್ತಿದ್ದೇವಾದರೂ, ಹಾಲಿನ ಗುಣಮಟ್ಟವಾದರೂ ಉತ್ಕೃಷ್ಟವಾಗಿದೆಯಾ? ಅದೂ ಇಲ್ಲ. ಭಾರತೀಯ ಆಹಾರ ಸುರಕ್ಷಾ ಗುಣಮಟ್ಟ ಪ್ರಾಧಿಕಾರ ನಡೆಸಿರುವ ತನಿಖೆಯಿಂದ ತಿಳಿದುಬಂದಿದ್ದೇನೆಂದರೆ, ಕರ್ನಾಟಕದ ಹಾಲಿನ ಗುಣಮಟ್ಟ ಶೇ.22ರಷ್ಟು ಕಳಪೆಯಾಗಿದೆ.

ಅಲ್ಲಿಗೆ ಮುಗಿಯಿತು. ಜನ ಪೇಪರು ಓದಿದರು, ಸುದ್ದಿ ತಿಳಿದರು, ಅಲ್ಲಲ್ಲಿ ಮಾತಾಡಿಕೊಂಡು ಸುಮ್ಮನಾದರು. ಯಾರಾದರೂ ಪ್ರತಿಭಟನೆ ಮಾಡಿದರಾ? ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಂಡವರಿಗೆ ಅದಕ್ಕೆಲ್ಲಾ ಟೈಮಾದರೂ ಎಲ್ಲಿದೆ? ನೋಡುವುದನ್ನೆಲ್ಲಾ ನೋಡಿ ಕೊನೆಗೆ ಪ್ರತಿಭಟನೆಗೆಂದು ಸಾಕ್ಷಾತ್ ಬಂದಿದ್ದು ಯಾರು ಗೊತ್ತಾ?

ನನ್ ಅದರ್ ದ್ಯಾನ್ ಅವರ್ ಕಾಮಧೇನು. ನಾನು ಹಾಲನ್ನೇನೋ ಕರೆದು ಕೊಡುತ್ತೇನೆ. ಆದರೆ, ಅದರಲ್ಲಿ ಗೌಳಿ ಎಷ್ಟು ನೀರು ಸೇರಿಸುತ್ತಾನೆ, ಎಲ್ಲಿ ಪಾಶ್ಚರೀಕರಿಸಲಾಗುತ್ತದೆ, ಎಲ್ಲೆಲ್ಲಿ ಕಲಬೆರಕೆಯಾಗುತ್ತದೆ, ಯಾರ್ಯಾರು ಗೋಲ್ ಮಾಲ್ ಮಾಡುತ್ತಾರೆ ಎಂಬುದನ್ನು ತಿಳಿಯಲು ಇನ್‌ಸ್ಪೆಕ್ಷನ್ನಿಗಾಗಿ ಬಸವನಗುಡಿಯ ಪುಟ್ಟಣ್ಣ ರಸ್ತೆಯ ಒಂದು ಹಾಲಿನ ಬೂತಿಗೆ ಸ್ವತಃ ಬಂದಿದ್ದಳು ನಂದಿನಿ.

ನಮ್ಮ ನಂದಿನಿಗೇನಾದರೂ ಮಾತು ಬರುತ್ತಿದ್ದರೆ... ಏನು ಹೇಳುತ್ತಿತ್ತು? ಯಾರ್ಯಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು? ಕಾಮೆಂಟ್ ತಾಣದಲ್ಲಿ ಬರೆದು ತಿಳಿಸಿ.

English summary
Now, it is a known fact that KMF milk is adulterated in Karnataka. But, no one comes forward to protest. Recently, do you know who had come to protest and inspection? None other than the holy cow, who is the symbol of KMF milk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X