ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿ ಸೋಜಿಗ : ಯಮನವ್ವ ಆಹಾರ ಸೇವಿಸಿ 20 ವರ್ಷವಾಯಿತು!

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Woman fasting from 20 years
ಆರೋಗ್ಯ ಚೆನ್ನಾಗಿರಲೆಂದು ಉಪವಾಸ ಮಾಡುವವರಿದ್ದಾರೆ, ದೇವರು ಮೆಚ್ಚುವನೆಂದು ಉಪವಾಸ ಮಾಡುವವರಿದ್ದಾರೆ, ಒಳ್ಳೆ ಗಂಡ ಅಥವಾ ಹೆಂಡತಿ ಸಿಗಲೆಂದು ಉಪವಾಸ ಮಾಡುವವರಿದ್ದಾರೆ, ಉಪವಾಸದ ನೆಪಹೇಳಿ ದಿನವಿಡೀ ಅನ್ನಬಿಟ್ಟು ಉಳಿದೆಲ್ಲ ಆಹಾರ ಸೇವಿಸುವವರಿದ್ದಾರೆ, ವಿನಾಕಾರಣ ಉಪವಾಸ ಮಾಡುವವರಿದ್ದಾರೆ, ಭ್ರಷ್ಟಾಚಾರ ತೊಲಗಲೆಂದು ಜನರಿಗಾಗಿ ದೇಶಕ್ಕಾಗಿ ಅಣ್ಣಾರಂಥವರು ಉಪವಾಸ ಕೂಡುವವರಿದ್ದಾರೆ...

ಒಂದು ದಿನ, ಎರಡು ದಿನ... ಒಂದು ವಾರ... ಎಂಟನೇ ದಿನಕ್ಕೆ ದೇಹ ಕೇಳಬೇಕಲ್ಲ. ಅಣ್ಣಾ ಹಜಾರೆ ಉಪವಾಸ ಕುಳಿತಾಗ ಅವರ ಜೀವಕ್ಕೆ ಏನಾದರೂ ಹೆಚ್ಚೂಕಡಿಮೆ ಆದೀತೆಂದು ಅವರ ಆಗ್ರಹಳನೇಕನ್ನು ಒಪ್ಪಿಕೊಂಡು ಉಪವಾಸ ಮುರಿಯುವಂತೆ ಮಾಡಿತ್ತು. ಆದರೆ ಇಲ್ಲೊಬ್ಬಳಿದ್ದಾಳೆ ನೋಡಿ, ಒಂದೆರಡು ದಿನವಲ್ಲ ಕಳೆದ 20 ವರ್ಷಗಳಿಂದ ಅನ್ನಾಹಾರ ಸೇವಿಸದೆ ಉಪವಾಸ ಮಾಡುತ್ತಿದ್ದಾಳೆ. ನಂಬಲು ಅಸಾಧ್ಯವಾದರೂ ಇದು ನಿಜ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅಮ್ಮಾಪೂರ (ಎಸ್ ಕೆ) ಗ್ರಾಮದ ಹೊರವಲಯದಲ್ಲಿ ಚಿಕ್ಕದೊಂದು ಮನೆ ಮಾಡಿಕೊಂಡು ಒಂದು ಕೃಷಿಕ ಕುಟುಂಬ ಜೀವನ ನಡೆಸುತ್ತಿದೆ. ಆ ಮನೆಯ ಯಮನವ್ವ (55) ಕಳೆದ 20 ವರ್ಷಗಳಿಂದ ಆಹಾರವನ್ನು ತ್ಯಜಿಸಿದ್ದರೂ ಗಟ್ಟಿಮುಟ್ಟಾಗಿದ್ದಾಳೆ. ನೀರು ಮತ್ತು ಚಹಾ ಹೊರತಾಗಿ ಏನನ್ನೂ ಸೇವಿಸುವುದಿಲ್ಲ.

ಎಲ್ಲವೂ ಚೆನ್ನಾಗೇ ಇತ್ತು... : ಮೊದಲು ಎಲ್ಲರ ಹಾಗೇ ಚೆನ್ನಾಗಿ ಊಟ ಮಾಡುತ್ತಿದ್ದಳು. ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕೊನೆಯ ಮಗುವಿಗೆ ಜನ್ಮ ನೀಡುವಾಗ ಆರೋಗ್ಯದಲ್ಲಿ ತೊಂದರೆಯಾಗಿ ಆಗಿನಿಂದ ಆಹಾರ ಬಿಟ್ಟವಳು ಈವರೆಗೂ ಮುಟ್ಟಿಲ್ಲ ಅಂತಾಳೆ ಯಮನವ್ವ. ಎಲ್ಲರ ಹಾಗೆ ಮನೆಯಲ್ಲಿ ಒಬ್ಬಳೆ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಮನೆಯವರ ಒತ್ತಾಯಕ್ಕೆ ಒಂದೆರಡು ಬಾರಿ ಆಹಾರ ಸೇವನೆ ಮಾಡಲು ಪ್ರಯತ್ನ ಮಾಡಿದ್ದಾಳೆ. ಆದರೆ ಆಹಾರ ಸೇವನೆ ಮಾಡಿದ ನಂತರ ವಾಂತಿಯಾಗುತ್ತಿತ್ತು. ಈ ಬಗ್ಗೆ ಹಲವು ವೈದ್ಯರನ್ನು ಸಂಪರ್ಕಿಸಿದ್ದಾಳೆ. ಆದರೆ ಪರಿಹಾರ ಮಾತ್ರ ದೊರೆತಿಲ್ಲ.

ಈ ಯಮನವ್ವ ದಿನಕ್ಕೆ 4 ರಿಂದ 5 ಬಾರಿ ನೀರು ಮತ್ತು ಚಹಾ ಸೇವನೆ ಮಾಡುತ್ತಾಳೆ ಅದನ್ನು ಬಿಟ್ಟು ಬೇರೆ ಏನನ್ನೂ ಸೇವನೆ ಮಾಡುವುದಿಲ್ಲ. ಊಟ ಬಿಟ್ಟರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾಮಾನ್ಯ ಮಹಿಳೆಯಂತೆ ಓಡಾಡಿಕೊಂಡಿದ್ದಾಳೆ. ಇಂದೊಂದು ವಿಜ್ಞಾನ ಲೋಕಕ್ಕೆ ಸವಾಲಾಗಿದೆ ಎಂದರೆ ತಪ್ಪಾಗುವುದಿಲ್ಲ.

English summary
We have heard and seen people fasting for various reasons. Some for themselves, some for the public welfare. But, here is a woman in Yadgir district has not had food for the past 20 years. Believe it or not, but it is true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X