• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೌನ್ ಹಾಲ್ ನಿಂದ ಮಹಾರಾಣೀಸ್ ಕಾಲೇಜ್ ವರೆಗೆ

By * ಇ ಆರ್ ರಾಮಚಂದ್ರನ್, ಮೈಸೂರು
|

ಪುಟ್ಟಣ್ಣಶೆಟ್ಟಿ ಟೌನ್ ಹಾಲ್ ನಲ್ಲಿ ರಾಜ್ಯದ ಬಹುತೇಕ ಸಮಾರಂಭಗಳು ನಡೆಯುತ್ತಿದ್ದವು. ನಿಜಲಿಂಗಪ್ಪ. ಬಿ.ಡಿ. ಜತ್ತಿ, ಕೆಂಗಲ್ ಹನುಮಂತಯ್ಯ ಮುಂತಾದ ದಿಗ್ಗಜರು ಅನೇಕ ಕಾರ್ಯಕ್ರಮಕ್ಕೆ ಅಲ್ಲಿಗೆ ಬರುತ್ತಿದ್ದರು. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾದಾಗಲೇ ವಿಧಾನಸೌಧವನ್ನು ಕಟ್ಟಿಸಿದ್ದು. ಖುದ್ದಾಗಿ ಅವರೇ ಆಗಾಗ್ಗೆ ಬಂದು ಉಸ್ತುವಾರಿ ಮಾಡುತ್ತಿದ್ದರು. ರಾಜ್ಯದ ಜೈಲಿನಿಂದ ಕಳ್ಳರನ್ನು ಕರೆಸಿ ಅವರ ಕೈಲಿ ಕಲ್ಲನ್ನು ಒಡೆಸುತ್ತಿದ್ದರು; ಒಂದು ಸರ್ತಿ ಇದ್ದಕ್ಕಿದ್ದಂತೆ ಕಲ್ಲು ಹೊಡೆಯುತ್ತಿದ್ದ ಕೂಲಿಯೊಬ್ಬನು ಕೆಂಗಲ್ರಿಗೆ ಕಪಾಳ ಮೋಕ್ಷಮಾಡಿದನೆಂದು ಒಂದು ವದಂತಿಯಿದೆ! ಎಷ್ಟು ನಿಜವೋ, ಸುಳ್ಳೋ ಯಾರಿಗೂ ಖಚಿತವಾಗಿ ಗೊತ್ತಿಲ್ಲ!

ಟೌನ್ ಹಾಲ್ಗೆ ಮುಂಚೆ ಬರುವ ರವೀಂದ್ರ ಕಲಾಕ್ಷೇತ್ರ ಆಗ ಇನ್ನು ಕಟ್ಟಿರಲಿಲ್ಲ. ರವಿ ಕಲಾವಿದರು, ಪ್ರಭಾತ್ ಕಲಾವಿದರ ನಾಟಕ, ಬ್ಯಾಲೆ ಗಳು ಟೌನ್ ಹಾಲಿನಲ್ಲೆ ನಡೆಯುತ್ತಿದ್ದವು.

ಟೌನ್ ಹಾಲ್ ಎದುರಿನ ರಾಜಾ ಸೈಕಲ್ ಮಾರ್ಟ್ ನಿಂದಲೇ ಬೆಂಗಳೂರಿನ ಅರ್ಧಕ್ಕರ್ಧ ಸೈಕಲ್ಗಳು ಸಪ್ಲೈಯಾಗುತ್ತಿತ್ತು ಅಂದರೆ ಅತಿಶಯೋಕ್ತಿಯಲ್ಲ. ಮಿಕ್ಕರ್ಧ ಜನಗಳು ಬಾಡಿಗೆ ಸೈಕಲ್ನಿಂದ ಜೀವನ ಸಾಗಿಸುತ್ತಿದ್ದರು.

ಸಿಲ್ವರ್ ಜೂಬಿಲಿ ಪಾರ್ಕ ರಸ್ತೆ ಮತ್ತು ನರಸಿಂಹರಾಜಾ ರಸ್ತೆಗಳು ಸಿಟಿ ಮಾರ್ಕೆಟ್ಗೆ ಅವಳಿ ಜವಳಿ ರಸ್ತೆಗಳ ತರಹಾ! ಒಂದನ್ನು ಬಿಟ್ಟು ಇನ್ನೊಂದು ವಿಷಯ ಮಾತನಾಡಕ್ಕೆ ಆಗಲ್ಲ.

ಅಲ್ಲಿಂದ ನಮ್ಮ ಬಸ್ ಯುನೈಟೆಡ್ ಮಿಷನ್ ಸ್ಕೂಲ್ ನ ದಾಟಿ ಜಾರ್ಜ್ ಓಕ್ಸ್ ಬಿಲ್ಡಿಂಗ್ ಮತ್ತು ಬೆಂಗಳೂರಿನ ಪಿತಾಮಹ ಕೆಂಪೇಗೌಡನ ಆಫೀಸಿನ ಮುಂದೆ ಹೋಗಿ ಪೋಲೀಸ್ ಕಮಿಷನರ್ ಆಫೀಸ್ ಮುಂದೆ ನಿಂತು ಸುಧಾಕರಿಸಿಕೊಳ್ಳುತ್ತೆ. ಬೆಂಗಳೂರು ಬೆಳದಂತೆ, ಬ.ಎಮ್. ಸಿ. ಈಗ ಬಿ.ಬಿ. ಎಮ್. ಪಿ ಯಾಗಿದೆ. ಇನ್ನೂ ಮುಂದೆ ಎಷ್ಟು ಅಕ್ಷರ ಬೆಳೆಯುತ್ತೋ ದೇವರಿಗೇ ಮತ್ತು ನಮ್ಮ ಕಾರ್ಪೊರೇಟರಸ್ಸ್ಗೇ ಗೊತ್ತು!

ಇಂಜಿನಿಯರಿಂಗ್ ಕಾಲೇಜ್ ಸ್ಟಾಪ್ :ವೈ.ಎಮ್. ಸಿ.ಎ. ದಾಟಿ ಬಸ್ಸ್ ಈಗ ಗವರ್ನಮೆಂಟ್ ಇಂಜಿನಿಯರಿಂಗ್ ಕಾಲೇಜಿಗೆ ಬಂದಾಗ, ಸುಮಾರು ವಿದ್ಯಾರ್ಥಿಗಳು ಇಳಿಯುವರು. ಒಂದಿಷ್ಟು ಹುಡುಗರು ಯು.ಸಿ.ಇ. ( ಈಗ ಯು.ವಿ.ಸಿ.ಇ.), ಗೆ, ಮತ್ತಿನ್ನಷ್ಟು ಜಯಚಾಮರಾಜೇಂದ್ರ ಪಾಲಿಟೆಚ್ನಿಕ್ ಇನ್ಸ್ಟಿಟ್ಯೂಟಿಗೆ ಹೋಗುವರು. ಏನೂ ಕೆಲಸವಿಲ್ಲದಿದ್ದವರ ಕೆಲಸ ಕಬ್ಬನ್ ಪಾರ್ಕಗೆ ಹೋಗಿ ಅಲ್ಲಿ ಓಡಾಡಿ ಕಳ್ಳೆಕಾಯಿ ತಿಂದು ಮರದ ಕೆಳಗೆ ಮಲಗೋದು!

ಭಾನುವಾರವಾದರೆ ಇಲ್ಲಿ ವಿಪರೀತ ರಷ್! ಅಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ "ಆರ್ಕೆಷ್ಟ್ರಾ"ದ ಹಾಡು ಕೇಳುವುದಕ್ಕೆ ಅರ್ಧ ಬೆಂಗಳೂರೇ ಇಲ್ಲಿ ಸೇರುತ್ತಿತ್ತು.

ಬಸ್ಸ್ ಈ ಸರ್ಕಲ್ಗೆ ಬರುವಾಗ ಬೆಳಗ್ಗೆ ನಟರಾಜಾ ಸರ್ವೀಸ್ ನಲ್ಲಿ ಹೊರಟ ಅಠಾರಾ ಕಛೇರಿಯ ಗುಂಪು ಏದುಸುರು ಬಿಡುತ್ತಾ ಇಲ್ಲಿಗೆ ಬರುತ್ತಿರುವುದನ್ನು ಕಾಣಬಹುದು!

ಆಹಾ ಬಂತು ನೋಡಿ ಸ್ಟಾಪ್: ನೆಕ್ಸ್ಟ್ ಸ್ಟಾಪ್ ಬರುವುದರಲ್ಲಿ ಬಸ್ಸಿನಲ್ಲಿ ಗುಸ ಗುಸ ಮಾತು ಶುರು. ಎಲ್ಲರ ಕಣ್ಣು ಇಳಿಯುವವರ ಮೇಲೆ! ಮಹಾರಾಣಿ ಕಾಲೇಜ್ ಸ್ಟಾಪ್ ನಲ್ಲಿ ಇಳಿಯುವುದಕ್ಕೆ ಹುಡುಗಿಯರೆಲ್ಲಾ ರೆಡಿಯಾಗುತ್ತಿದ್ದರು. ಸೀರೆಯುಟ್ಟು ಕೈಯಲ್ಲಿ ಟಿಫನ್ ಕ್ಯಾರಿಯರ್, ಇನ್ನೊಂದು ಕೈಯಲ್ಲಿ ಪುಸ್ತಕಗಳು; ಇವೆಲ್ಲವನ್ನೂ "ಬಾಲೆನ್ಸ್" ಮಾಡುತ್ತಾ ಬ್ಯಾಲೆ ಡ್ಯಾನ್ಸರ್ಸ್ ತರಹ ಇಳಿಯುತ್ತಿದ್ದರು.

ಬೆಂಗಳೂರಿನಲ್ಲಿ ಆಗ ಮುಖ್ಯತಹ ಹುಡುಗಿಯರ ಕಾಲೇಜ್ ಇದ್ದದ್ದು ಎರಡೇ; ಮಹಾರಾಣೀಸ್ ಕಾಲೇಜ್ ಮತ್ತು ಮೌಂಟ್ ಕಾರ್ಮೆಲ್ ಕಾಲೇಜ್. ವಿಜಯ ಕಾಲೇಜ್ ಆವಾಗ ತಾನೆ ಶುರುವಾಗಿತ್ತು.

ಆವಾಗಲೇ ಬ್ರಿಟ್ಟೋ ಸಿಸ್ಟರ್ಸ್ ಹಾಕಿಯಲ್ಲಿ ಭಾರತದ ಪರವಾಗಿ ಆಡಿ, ಶಾಂತ ರಂಗಸ್ವಾಮಿ ಕ್ರಿಕೆಟ್ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ಟೀಮಿಗೆ ಕ್ಯಾಪ್ಟನ್ ಆಗಿ ಪ್ರಸಿದ್ಧಿಯಾಗಿದ್ದರು. ಮುಕ್ಕಾಲುವಾಸಿ ಹುಡುಗಿಯರು "ಬಾಲ್ ಬ್ಯಾಡ್ಮಿಂಟನ್" ಆಡುತ್ತಿದ್ದರು. ಬಹಳಷ್ಟು ಹುಡುಗಿಯರ ಹವ್ಯಾಸ ಕರ್ನಾಟಕದ ಶೈಲಿಯ ಸಂಗೀತ, ದಕ್ಷಿಣ ಭಾರತದ ಹಿಂದಿ ಕ್ಲಾಸಿನಲ್ಲಿ ಪ್ರಥಮ, ಮಧ್ಯಮ ಕಲಿತು ಹಿಂದಿ ಹಾಡುಗಳನ್ನು ಸೊಗಸಾಗಿ ಹಾಡುವುದು.

ನಾವು ಮಹಾರಾಣಿ ಕಾಲೇಜ್ ಸ್ಟಾಪ್ ಬಂದ ಸಂಭ್ರಮದಲ್ಲಿ ನಮ್ಮ ಪ್ರಯಾಣ ಶುರುವಾಗಿ ಒಂದು ಗಂಟೆಯಾಯಿತು ಅಂತ ನಮಗೆ ಮರತೇಹೋಗಿದೆ! ನಮ್ಮ ಬಸ್ ಸೆಂಟ್ರಲ್ ಜೈಲನ್ನು ದಾಟಿ, ಅದೇ ಹೆಸರಿನ ಸೆಂಟ್ರಲ್ ಕಾಲೇಜ್(!) ಮುಂದೆ ಹೋಗಿ, ಲಾ ಕಾಲೇಜ್ ಮುಂದಿನ ಸ್ಟಾಪ್‌ಗೆ ಬಂದಾಗಲೇ ಮುಂದಿನ ಕರೀಕೋಟ್ ಲಾಯರಿಗಳು ಇಳಿಯುವುದು. [ಬೆಂಗಳೂರು]

English summary
Bangalore Nostalgic Trip Down the Memory Lane: BTS Route No 11 bus entered Puttanna Shetty Town Hall, a marvellous building where most major functions and felicitations took place. Kengal Hanumanthaiah was seen often here before he started planning the construction of Vidhana Soudha. Silver Jubilee Park Road and Narasimha Raja Road, George Oaks building, Cubbon Park, Mount Carmel, Maharani’s college were prominent places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more