ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಕಾಲದ ಬೆಂಗಳೂರು ಸಿನಿಮಾ ಥಿಯೇಟರ್

By * ಇ ಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Pather Panchali in Bangalore cinema theaters
ಆಗೆಲ್ಲ ತಮಿಳು ಸಿನಿಮಾಗಳೇ ಬಹಳ ಥಿಯೇಟರ‍್ನಲ್ಲಿ ತೊರಿಸೋವ್ರು. ಮಿನರ್ವದಲ್ಲಿ ಮೂರು ಆಟ ತಮಿಳು ಬೆಳಿಗ್ಗೆ ಮಾತ್ರ ಸತ್ಯಜಿತ್ ರೇ ಅವರ ಬೆಂಗಾಲಿ ಚಿತ್ರವನ್ನು ತೋರಿಸುತ್ತಿದ್ದರು! ವಿಖ್ಯಾತ "ಪಥೇರ್ ಪಂಚಾಲಿ", ಅಪರಾಜಿತೊ. ಅಪೂರ್ವಸಂಸಾರ್, ಇವೆಲ್ಲ ನೋಡಲು ಸಿಕ್ಕಿದ್ದು ಬೆಂಗಳೂರಿನವರಿಗೆ ಸ್ವರ್ಗವೇ ಸರಿ. ಇದು ರಸಗುಲ್ಲಾದಷ್ಟೆ ಫೇಮಸ್" ಆಗಿತ್ತು.

ಅಲ್ಲಿಂದ ಒಂದು 200 ಮೀಟರ್ ಲಾಲ್ ಭಾಗಿಗೆ ಹೋಗುವ ಓಣಿಯೊಳಗೆ ಓಡಿದರೆ ಸಿಕ್ಕುತ್ತಿತ್ತು, ಮಾವಲ್ಲಿ ಟಿಫನ್ ರೂಮ್ಸ್ ಉರುಫ್ ಎಮ್. ಟಿ. ಆರ್.

ಓಣಿಯಿಂದ ಶುರುವಾದ ಎಮ್. ಟಿ. ಆರ್. ಲಾಲ್ ಭಾಗ್ ಹತ್ತಿರುವ ಮೈನ್ ರೋಡಿಗೆ ಹೋಗಿ, ಪ್ರಪಂಚದೆಲ್ಲಾ ಕಡೆ ಹೆಸರುವಾಸಿಯಾಗಿದೆ. ಅವರು ಮಾಡುವ ಚಟ್ಣಿ, ಸಾಂಬಾರ್ ಪುಡಿಗಳಿಂದಲೇ ಭಾರತದ ಅದರಲ್ಲೂ ಬೆಂಗಳೂರಿನ ವಿದ್ಯಾರ್ಥಿಗಳು ವಿದೇಶದಲ್ಲಿ ಜೀವನ ಮಾಡುತ್ತಾ ವ್ಯಾಸಂಗ ಮಾಡಿ ಒಳ್ಳೇ ಅಡುಗೆ ಭಟ್ಟರಾಗಿದ್ದಾರೆ!.

ಮುಂದಿನ ಸ್ಟಾಪೇ" ಭಾರತ್ ಟಾಕೀಸ್ ನಲ್ಲಿ. ಕಂಟ್ರುಮೆಂಟಿಗೆ ಹೋಗದೆ ಇಂಗ್ಲಿಷ್ ಸಿನಿಮಾ ನೋಡಬೇಕೆಂದರೆ ಬರೀ ಭಾರತ್ ಅಥವ ಚಿಕ್ಕಪೇಟೆಯಲ್ಲಿರುವ ವಿಜಯಲಕ್ಷ್ಮಿ ಚಿತ್ರಮಂದಿರಗಳೆರಡೇ! ಸ್ಪಾರ‍್ಟಾಕಸ್, ರೋಬ್ ಇವೆಲ್ಲವೂ ಭಾರತ್ ನಲ್ಲಿ ಬಂದಿತ್ತು.

ಅಷ್ಟು ಹೊತ್ತಿಗೆ ಬಸ್ಸಿಗೆ ಟಿಕೆಟ್ "ಚೆಕಿಂಗ್" ಶುರುವಾಗಿ ಒಂದು ಅರ್ಧ ಗಂಟೆ ಬಸ್ಸನ್ನು ನಿಂತಲ್ಲೇ ಕೊಳೆಹಾಕಿ ಬಿಡುತ್ತಿದ್ದರು. ಡ್ರೈವರ್ ಗಣೇಶ ಬೀಡಿ ಹಚ್ಚಿ ತನ್ನನ್ನು ತಾನೆ ಕನ್ನಡೀಲಿ ನೋಡಿಕೊಳ್ಳುವ ಸಮಯ!

ಶಿವಾಜಿ ಟಾಕೀಸ್ ಗೊತ್ತಾ:ಬೆಂಗಳೂರನ್ನು ಸಿನಿಮಾ ಥೀಯೇಟರ್‌ಗಳಿಗಾಗಿ ಮಾಡಿಸಿದೆಂದಿತ್ತು. ಮುಂದಿನ ಸ್ಟಾಪ್ "ಶಿವಾಜಿ" ಟಾಕೀಸ್. ಬೆಂಗಳೂರಿನಲ್ಲಿ ಆ ಕಾಲದಲ್ಲಿ ಕುದುರೆಯ ಮೇಲೆ ಕೂತ ಶಿವಾಜಿ ಸ್ಟ್ಯಾಚು ಇತ್ತೆಂದರೆ ಆಶ್ಚರ್ಯವೇ! ಇದು ಬಾಳ್ ಠಾಕ್ರೆಗೋ ಇಲ್ಲಾ ರಾಜ್ ಠಾಕ್ರೆಗೋ ಗೊತ್ತಾಗಿದ್ದಿದ್ದರೆ ಶಿವಸೇನೆ ಬೆಂಗಳೂರಿನಲ್ಲೇ ಶುರು ಮಾಡುತ್ತಿದ್ದರೇನೋ!

ಆಗ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳು ಅಪರೂಪವಾಗಿದ್ದ ಕಾಲ. "ಬೇಡರ ಕಣಪ್ಪ", ರತ್ನಗಿರಿರಹಸ್ಯ" ( "ಅಮರ ಮಧುರ ಪ್ರೇಮ" ಹಾಡು ಈಗಲೂ ಫೇಮಸ್) ಸ್ಕೂಲ್ ಮಾಸ್ಟರ್" ನಂತಹ ಸಿನಿಮಾಗಳು ಯಾವಾಗಲೋ ಒಮ್ಮೊಮ್ಮೆ ಬರುತ್ತಿತ್ತು. ಆಗ ಮುಖ್ಯತಹ ಬರುತ್ತಿದ್ದ ಪಿಕ್ಚರ್ ಗಳು ಹಿಂದಿ, ತೆಲುಗು, ತಮಿಳು. ಇಂಗ್ಲಿಷ್.. ಶಿವಾಜಿ ಯಲ್ಲಿ ತೋರಿಸುತ್ತಿದ್ದಿದ್ದು ಎಲ್ಲಾ ತಮಿಳೇ! ಎಮ್. ಜಿ.ಆರ್. ಮತ್ತು ನಂಬಿಯಾರ್ ಫೈಟಿಂಗ್ ನೋಡುವುದಕ್ಕೇ ಅರ್ಧ ಥೀಯೇಟರ್ ಕಾಯ್ದು ಕೂತಿರುತ್ತಿತ್ತು. ಶಿವಾಜಿ ಗಣೇಷನ್ ಒಳ್ಳೇ ಆಕ್ಟರ್. ಆದರೆ ಅವನ ಪಿಕ್ಚರ‍್ಗೆ ಹೋದವರು ಅತ್ತು ಅತ್ತು ಕಣ್ಣು ಕೆಂಪಗೆ ಮಾಡಿಕೊಂಡು ಎರಡು, ಮೂರು ಕರ‍್ಚೀಫ್ ಒದ್ದೆ ಮಾಡಿಕೊಂಡು ಹೊರಗೆ ಬರುತ್ತಿದ್ದರು!

ಇಷ್ಟೆಲ್ಲಾ ಆಗುವ ಹೊತ್ತಿಗೆ ನಮ್ಮ ಬಸ್ ಟೌನ್ ಹಾಲ್ ಬಂದು ಸೇರಿತು.

ಒಂದು ಪರ್ವ ದಾಟಿದಂತೆ.

ಪರ್ವ, ದಾಟು ಅಂದರೆ ಜ್ಞಾಪಕಕ್ಕೆ ಬರುವುದು ಎಸ್. ಎಲ್. ಬಿ. ಅವರ ಪುಸ್ತಕಗಳು.

ಆಗ ಭೈರಪ್ಪನವರ ಕಾಸಿಕ್ಸ್ನಲ್ಲಿ ಸೇರುವ "ದಾಟು", ಪರ್ವ ಬರೆದಿದ್ದರೋ ಖಚಿತವಾಗಿ ಗೊತ್ತಿಲ್ಲ. ತರಾಸುರವರ "ಹಂಸಗೀತೆ", ಚಿತ್ರದುರ್ಗದ ಇತಿಹಾಸ ಹೇಳುವ "ರಕ್ತರಾತ್ರಿ", ತಿರುಗು ಬಾಣ, ಹೊಸಹಗಲು; ನಾಗರಹಾವು; ತ್ರಿವೇಣಿ ಯವರ "ಬೆಕ್ಕಿನ ಕಣ್ಣು", "ಹಣ್ಣೆಲೆ ಚಿಗುರಿದಾಗ", ಅ.ನ. ಕೃ. ಅವರ "ಸಂಧ್ಯಾರಾಗ, ಉದಯರಾಗ" ಗಳ ಕಾಲ. ಪ್ರಜಾಮತ ಮತ್ತು ಇಲ್ಲಸ್ಟರೇಟೆಡ್ ವೀಕ್ಲಿ" ಸುಮಾರು ಒಂದೇ ಸೈಜಿನಲ್ಲಿ ಬರೋದು.
ವೀಕ್ಲಿಯಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳ ಫೊಟೊ ಅವರಿಗೆ ಮಕ್ಕಳಾದ ಮೇಲೆ ಬರುತ್ತಿತ್ತು!

ಮಕ್ಕಳಿಗೆ ಚಂದಮಾಮ ಮತ್ತು ಬಾಲಮಿತ್ರ; ವಯಸ್ಕರಿಗೆ ರಾಶಿಯವರ ಬ್ರೈನ್ ಟಾನಿಕ್ - ಕೊರವಂಜಿ.

ನಾನು ನಮ್ಮ ಬಸ್ಸಿನ ತರಹ ಎಲ್ಲೆಲ್ಲೊ ಹೊರಟುಹೋದೆ. ಕ್ಷಮಿಸಿ. [ಬೆಂಗಳೂರು]

English summary
Minerva talkies, which in those days mostly showed Tamil pictures for three shows and wore a culturally superior hat with Bengali movies and that too only Satyajit Ray for the morning shows another theater ‘Bharath’ Vijalakshmi in Chikkapete showed English movies. Shivaji’ theater, the abode of Tamil films. Kannada films very rarely seen in Bangalore Cinema Theaters in those days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X