• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಷರಮಾಲೆಯ 'ಅ'ಕಾರದ ವರ್ಣನೆಯೇ 'ಅಕ್ಷರ'

By Prasad
|

ಈ ಹಿಂದೆ 'ಮ'ಕಾರದ ಮುಗಿಯದ ಮಮಕಾರ' ಓದಿ, ಆನಂದಿಸಿ, ಅಭಿಪ್ರಾಯ ತಿಳಿಸಿ, ಬೇರೆ ಅಕ್ಷರಗಳಿಗೂ ಪ್ರಯತ್ನಿಸಿ ಎಂದು, ಉತ್ತೇಜನ ಮತ್ತು ಹುರಿದುಂಬಿಸಿದಕ್ಕೆ ಧನ್ಯವಾದಗಳು. ಇದನ್ನೂ ಓದಿ ಆನಂದಿಸುವಿರೆಂದು ನಂಬಿರುವೆನು.

* ಸೀತಾ ಕೇಶವ, ಆಸ್ಟ್ರೇಲಿಯಾ

ಅಕ್ಷರಮಾಲೆಯಲ್ಲಿ "ಅ" "ಆ" ಅಕ್ಷರ. ಅಮ್ಮ, ಅಪ್ಪ, ಅಣ್ಣ, ಅಕ್ಕ, ಅಜ್ಜ, ಅಜ್ಜಿ, ಅಬ್ಬಾ, ಅಯ್ಯೋ, ಆಹಾ ಅನ್ನುತ್ತ ಅಲಂಕರಿಸಿದೆಂದು ಅರಕಲಗೂಡಿನ ಅನಂತರಾಮಯ್ಯ ಅಖಿಲಾಂಡಮ್ಮನವರಿಗೆ ಆಗಾಗ್ಗೆ ಆದೇಶಿಸುತ್ತಿದ್ದರು. ಅತ್ತೆ ಅನಸೂಯಮ್ಮ ಆಧುನಿಕ ಆಭರಣದಲ್ಲಿ ಅವರ ಆತ್ಮೀಯರಾದ ಅಲಮೇಲು ಅಯ್ಯಂಗಾರ್, ಅರುಂಧತಿ, ಅಭಿರಾಮಿ, ಆನಂದಮ್ಮ, ಆಂಡಾಳಮ್ಮರೊಡನೆ, ಅಪಸ್ವರದಲ್ಲಿದ್ದ ಅಯಿಗಿರಿನಂದಿನಿ, ಆದಿತ್ಯಹೃದಯ, ಅನ್ನಪೂರ್ಣಾಷ್ಟಕ, ಅಮರಕೋಶವನ್ನು, ಅರಳೀಕಟ್ಟೇಯಲ್ಲಿದ್ದು ಆಲಿಸುತ್ತಿದ್ದರು.

ಅದಾದನಂತರ ಆಗಸ್ಟ್, ಅಕ್ಟೋಬರ್ ನಲ್ಲಿ ಅಮಾವಾಸ್ಯೆ, ಆಷಾಡ, ಆಷ್ವಯುಜವೆಂದು ಅನಂತಮೂರ್ತಿಯವರು ಅನಾಥಾಶ್ರಮದ ಆಮಂತ್ರಣವನ್ನು ಅಮೋದಿಸಿದರು.

ಅಖಿಲನ ಅಣ್ಣ ಆದಿತ್ಯ ಆಂಬೊಡೆ, ಅವಲಕ್ಕಿ ಅಗಿಯುತ್ತಾ ಆಗಮಿಸಿ ಅಮೇರಿಕಾ, ಆಸ್ಟ್ರೇಲಿಯಾ, ಅಡಿಲೇಡ್, ಅಟ್ಲಾಂಟಾ, ಅರ್ಜೆಂಟೇನಿಯಾ, ಅಬೂಧಾಬಿ ಅಲೆದಾಡುತ್ತಿದ್ದಾಗ ಅಗ್ರಗಾಮಿಗಳು ಅಲ್ಲಿಯ ಆಕೃತಿ, ಅಪರಂಜಿ ಅಪಹರಿಸಿದ್ದು ಅಪರೂಪವಾಗಿತ್ತೆಂದ.

ಅಮೂಲ್ ಅಮೃತದಂತಹ ಅನೀಶ ಅಂಬೆಗಾಲಿಡುವುದನ್ನ, ಅವಿನಾಶ್, ಅಶ್ವಿನ್, ಅಶ್ವತ್ಥ, ಅಖಿಲೇಶ್, ಅನೂಪ್, ಅಪೇಕ್ಷ, ಅಚಲ ಆನಂದಿಸಿ ಅವರವರ ಅಮ್ಮನೊಡನೆ ಅಕ್ಷರಾಭ್ಯಾಸಕ್ಕೆ ಆಗಮಿಸಿದರು.

ಅಬಲಾಶ್ರಮದಲ್ಲಿ ಆಮಂತ್ರಿಸಿದ ಅಲತ್ತೂರ್, ಅರಿಯಾಕುಡಿ, ಅರುಣ, ಆರಭಿ, ಅಠಾಣ, ಅಮೃತವರ್ಶಿನಿಯ ಆರೋಹಣ, ಅವರೋಹಣ ಆರಂಭಿಸಿ, ಅನ್ನಪೂರ್ಣೆ, ಅಖಿಲಾಂಡೇಶ್ವರಿ, ಅನುಪಮಗುಣಾಂಬುದಿ, ಅಲಕಲಲ್ಲ, ಅನ್ನಮಾಚಾರ್ಯರ ಆದಿವೋ ಅಲ್ಲದಿವೋ, ಅರುಣಾಚಲದ ಆಲಾಪನೆಯನ್ನು ಅತಿಥಿ ಅಭ್ಯಾಗತರುಗೆಲ್ಲ ಆನಂದವುಂಟುಮಾಡಿದರು.

ಅರಮನೆಯ ಅಂಬಾರಿ ಆನೆ ಅಬ್ಬರಿಸುತ್ತಾ, ಆಕಳಿಸುತ್ತಾ, ಅಲ್ಲಿಂದಿಲ್ಲಿಗೆ ಅಲೆಯುತ್ತಿದ್ದನ್ನ ಆಂಜನಪ್ಪನವರು ಆಕ್ಷೇಪಿಸಿದರು. ಅರಣ್ಯದಲ್ಲಿ ಆಡು, ಆಮೆ, ಅಳಿಲು, ಆಳದ ಅಡಿಯಲ್ಲಿ ಅಡವಿಕೊಂಡವು. ಅಜಾಲಿಯ, ಆರ್ಕಿಡ್, ಅಮೃತಬಳ್ಳಿ ಅಂಗಡಿಯಲ್ಲಿಟ್ಟಿದ್ದನ್ನು ಅಂಗವಿಕಲರು ಅತ್ಯುತ್ತಮವೆಂದರು.

ಆಶ್ರಮದ ಆಲದಮರ, ಅಶ್ವತ್ಥಕಟ್ಟೆ ಆವರಣದಲ್ಲಿ ಅದ್ವೈತ, ಅಹಿಂಸಾ, ಅಧರ್ಮ, ಅಲ್ಲಮಪ್ರಭು, ಅಶ್ವತ್ಥಾಮ, ಅಂಗೀರಸ, ಆರ್ಕಿಮಿಡೀಸ್, ಆಟಂಬಾಂಬ್, ಆಯುಧಗಳು, ಅಂಡಮಾನ್, ಆದಿನಿವಾಸಿಗಳು ಅಪರಿಚಿತರೆಂದು ಅನಂತರ ಅಯೋಧ್ಯೆಯ ಅರಚುತನ ಅಕ್ಷ್ಯಮ್ಯ ಅಪರಾಧವೆಂದು ಅಲೆಕ್ಸಾಂಡರ್, ಅಕ್ಬರ್, ಅಬ್ದುಲ್, ಅಬ್ರಹಾಮ್ ಆಡಿದರು.

ಅಂಬೇಡ್ಕರ್, ಅಣ್ಣಾಮಲೈನಲ್ಲಿ ಅಲೋಪತಿ, ಆರ್ಕಿಟೆಕ್ಚರ್, ಆಟೋಮೊಬೈಲ್, ಅಗ್ರಿಕಲ್ಚರ್ ಅಳವಡಿಸಿಕೊಳ್ಳಲು ಆಂಥೋನಿ, ಆದಿವೇಲು, ಅಭಿಮನ್ಯು, ಅಭಿಲಾಶ್, ಆರ್ಮುಗಂ, ಆಂಜನೇಯುಲು ಅರ್ಜಿಹಾಕಿದರು.

ಆಸ್ಪತ್ರೆಯಲ್ಲಿ ಆರೋಗ್ಯ, ಅನಾರೋಗ್ಯ, ಅಲರ್ಜಿ, ಆಪರೇಶನ್, ಅನಸ್ಥೀಸಿಯ, ಆಮ್ಲಜನಕ, ಅನಾಸಿನ್, ಆಸ್ಪ್ರೊ, ಆತಂಕವನ್ನು ಅಮರನಾಥರು ಅಚ್ಚುಕಟ್ಟಾಗಿ ಅಳವಡಿಸಿದರು.

ಆಯುರ್ಧಾಮದಲ್ಲಿ ಆಯುರ್ವೇದದ ಅನೇಕ ಅಮೂಲ್ಯವಾದ, ಅರಳೆಲೆ, ಅಮೃತಬಳ್ಳಿ, ಅಡಿಕೆ, ಅಳಲೇಕಾಯಿ, ಅರಿಶಿಣ, ಆಲೂಗೆಡ್ಡೆ, ಅನಾನಸ್, ಆಪಲ್, ಅಂಜೂರ ಅಜೀರ್ಣಕ್ಕೆ ಅನುಕೂಲವೆಂದು ಆಚಾರ್ಯ ಅಚಲೇಂದ್ರ ಅಧ್ಯಯನಕ್ಕೆ ಅನುಕರಿಸಿದರು.

ಅನಿಲ್, ಅಗರ್ಕರ್, ಆಂಡ್ರೆ ಅಗಸಿ, ಆನ್ಡ್ರು, ಆಡಂ, ಅಮರನಾಥ್ ಅಜೇಯರೆಂದು ಅಂಪೈರ್ ಅಭಿನಂದಿಸಿದರು.

ಅಮರಶಿಲ್ಪಿ, ಅಮ್ಮ, ಆಪ್ತರಕ್ಷಕ, ಆಪ್ತಮಿತ್ರ, ಅರುಣೋದಯ, ಅನುರಾಗ, ಅಮರ್, ಅಕ್ಭರ್, ಆಂಥೋನಿಯನ್ನು ಅರಸೀಕೆರೆ, ಆಗುಂಬೆ, ಆನೆಕಲ್ಲು, ಅಜ್ಜಂಪುರ, ಅಲಹಾಬಾದ್, ಅಹಮದಾಬಾದ್ನವರು ಅನಿರೀಕ್ಷಿತವಾಗಿ ಆರೋಪಿಸಿದರು.

ಅಲಕಾನಂದ, ಅಮರಾವತಿ, ಅರ್ಕಾವತಿ ಅಣೆಕಟ್ಟೆಯಲ್ಲಿ ಅತಿಯಾಗಿ ಆಗುತ್ತಿದ್ದ ಅಡಚಣೆಯನ್ನು ಅನಂತಯ್ಯನವರು ಅಲ್ಲಗೆಳೆದರು.

ಅಭಯ್ ಆಟೋನಲ್ಲಿ ಅಲೆದೆಲೆದು, ಅಲೆದಾಡಿಕೊಂಡು ಆಫೀಸಿಗೆ ಅಡ್ಡಾಡುತ್ತಾ, ಅಂಜುತ್ತಾ, ಅಳುಕುತ್ತಾ ಆಂಬುಲೆನ್ಸನಲ್ಲಿ ಆಗಮಿಸಿದ. ಅಡ್ಡದಾರಿಯಲ್ಲಿ ಅಪೂರ್ವ ಅಂಜುಬುರುಕನಂತೆ ಅವಿತುಕೊಂಡಿದ್ದನ್ನ ಅಮ್ಮಯ್ಯ ಅನುಮಾನಿಸಿ ಆರ್ಭಟಿಸಿಬಿಟ್ಟರು. ಅಂಬುಜಮ್ಮ ಅಚ್ಚುಮೆಚ್ಚಿನ ಅಂಜಲಿ, ಅಂಕಿತ, ಅನನ್ಯ, ಅಕ್ಷಂತ್, ಅಮೂದ್, ಆರಿದ್ರ, ಅನಿತರನ್ನ ಅಪ್ಪಿ, ಆಲಂಗಿಸಿ ಅಂಕಿ, ಅಂಕಗಣಿತ, ಆಲ್ಜೀಬ್ರ ಅದ್ಭುತವಾಗಿ ಅವಲೋಕಿಸಿದರು.

ಆಂಧ್ರದಲ್ಲಿ ಅಪರಾಹ್ನ ಆಯೋಗ, ಆಸ್ಥಿವಂತರು, ಅನಾವಶ್ಯಕವಾಗಿ ಆಂಧೋಲನಕ್ಕೆ ಅಡಿಯಿಟ್ಟರು. ಅಕ್ಷಯಧಾಮಕ್ಕೂ ಅಜ್ಜ, ಅಜ್ಜಿ ಆಗಮಿಸಿ ಅಕ್ಷಯಪಾತ್ರಕ್ಕೂ ಅನ್ನದಾನದ ಅನುಕೂಲಕ್ಕೂ ಅನುವಾಗಿ ಆಯುಷ್ಮಂತರಾಗಿರೆಂದು ಆಶೀರ್ವದಿಸಿದರು. "ಆಪತ್ಕಾಲಕ್ಕೆ ಆಗುವವನೇ ಅಗ್ರಗಣ್ಯ".

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Garland of Kannada Words : Most beautiful proper nouns, verbs, adverbs, adjectives beginning from the alphabet A. ಅಂದರೆ "ಅ". A compilation of words by Seetha Keshava in Sydney. You too can weave a garland of words all begins from one single alphabet, e.g. : Ka (ಕ).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more