ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟಪ್ಪ ಅಲ್ಲ ಇದು ಕನ್ನಡ ಸಂಕಟಪ್ಪ ಗ್ಯಾಲರಿ

By Prasad
|
Google Oneindia Kannada News

Funny Kannada boards
"ಅಶ್ವತ್ವ ವೃಕ್ಷದ ಎದುರು ಮೂತ್ರ ಶಂಕೆ ಮಾಡಬಾರದು", "ಸ್ವಾಗತ ಹೋಟೆಲ : ಊಟ, ಸವತಿ ದೊರೆಯುತ್ತದೆ", "ತಂದೆ ತಾಯಿಯವರ ಆಶಿರ್ವಾದ : ಬಾಡಿಗಿಗೆಗೆ ದೊರೆಯುತ್ತದೆ", "ಗೋಡೆಗೆ ಹುಚ್ಚೆ ಮಡುವವರು ಹಂದಿ ನಾಯಿಗಳು"!

ಈ ಬಗೆಯ ಕನ್ನಡ ಗೋಡೆ ಬರಹ, ಕನ್ನಡ ಫಲಕಗಳನ್ನು ನೋಡಿದರೆ ಏನು ಅನ್ನಿಸುತ್ತದೆ? ನಗುವುದೋ ಅಳುವುದೋ ನೀವೇ ಹೇಳಿ. ವ್ಯಾಕರಣ, ಕಾಗುಣಿತ ಶುದ್ಧಿಗಿಂತ ಆ ಬರಹದ ಹಿಂದಿನ ಭಾವವನ್ನು ಒಪ್ಪಿಕೊಳ್ಳುವುದೋ? ಅಥವಾ ಮುಗುಳ್ನಗೆ ಉಕ್ಕಿಸುವ ತಮಾಷೆಯ ಬರಹಗಳನ್ನು ಸುಮ್ಮನೆ ಒಮ್ಮೆ ಓದಿ ನಕ್ಕುಬಿಡುವುದೋ?

ಇಂತಹ ಬರಹಗಳು ಗಲ್ಲಿಗಲ್ಲಿಗಳಲ್ಲಿ, ಊರುಊರುಗಳಲ್ಲಿ ಸಿಗುತ್ತವೆ. ಕನ್ನಡ ಬರೆಯಲು ಬರದ ಬೇರೆ ರಾಜ್ಯಗಳಲ್ಲಿ ಅಲ್ಲ ಕರ್ನಾಟಕದಲ್ಲಿಯೂ ಕಾಣಸಿಗುತ್ತವೆ. ಕೆಲವು ಕೆಣಕುತ್ತವೆ, ಕೆಲವು ಕಿಚಾಯಿಸುತ್ತವೆ, ಕೆಲ ಬರಹಗಳಲ್ಲಿನ ಅರ್ಥ ಹುಡುಕಲು ಹೊರಟರೆ ತಲೆ ಕೆಟ್ಟು ಚಿತ್ರಾನ್ನವಾಗಿರುತ್ತದೆ.

ಇಲ್ಲಿ ಇದೇ ರೀತಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ವಿವಿಧ ಊರುಗಳಲ್ಲಿ ಬರೆದ ತಮಾಷೆಯ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆದ ಗೋಡೆ ಬರಹಗಳನ್ನು, ಫಲಕಗಳ ಚಿತ್ರಗಳನ್ನು ಸಂಗ್ರಹಿಸಿ ನಮ್ಮ ಓದುಗರೊಬ್ಬರು ಕಳಿಸಿದ್ದಾರೆ. ಅವುಗಳ ಚಿತ್ರಸಂಪುಟ ಇಲ್ಲಿದೆ ನೋಡಿ. ಸರಣಿ ಈಮೇಲ್ ಮುಖಾಂತರ ಅನೇಕ ಸ್ನೇಹಿತರಿಗೆ ಇವು ತಲುಪಿರಬಹುದು. ಆದರೆ, ಇಂತಹ ಬರಹಗಳ ಚಿತ್ರಗಳನ್ನು ತೆಗೆದು, ಸಂಗ್ರಹಿಸಿದ ವ್ಯಕ್ತಿಗೆ ಅವರ ಹಾಸ್ಯಪ್ರಜ್ಞೆಗೆ ನಮೋನ್ನಮಃ.

ಆಶ್ಚರ್ಯದ ಸಂಗತಿಯೆಂದರೆ, ಇಂತಹ ಸಾಕಷ್ಟು ಕಾಗುಣಿತ ತಪ್ಪುಗಳನ್ನು ಕಂಡರೂ ನಕ್ಕು ಸುಮ್ಮನಾಗುತ್ತೇವೆಯೇ ಹೊರತು, ತಿದ್ದುಪಡಿ ಮಾಡಿಸಲು, ತಿದ್ದಿಕೊಳ್ಳಲು ಸಲಹೆ ನೀಡುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಯ್ಯ ಎಂದು ಕೆಲವರಿಗೆ ಹೇಳಿದರೆ ಕೆಲವರು ಸಿಡಿದೇಳಬಹುದು, ಕೋಪಿಸಿಕೊಳ್ಳಬಹುದು. ಆದರೆ, ಈ ಮೂಲಕವಾದರೂ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರೆ ತಪ್ಪೇನೂ ಇಲ್ಲವಲ್ಲ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X