ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವು ಪಾಲನೆಯಿಂದ ಭೂಮಿಯ ಫಲವತ್ತತೆ

By * ಶಶಾಂಕ ಹತ್ವಾರ್, ಚನ್ನೇನಹಳ್ಳಿ
|
Google Oneindia Kannada News

Kamadhenu
ಬೆಳಿಗ್ಗೆ ಎದ್ದು ಸುಮಾರು ಜನ ಇನ್ನೂ ಸರಿಯಾಗಿ ಕಣ್ಣೇ ಬಿಟ್ಟಿರುವುದಿಲ್ಲ. ಆಗಲೇ ಬೇಕು ಬೆಡ್ ಕಾಫಿ. ಕೆಲವರಿಗಂತೂ ಅಟ್ಲೀಸ್ಟ್ ಒಂದು ಕಾಫಿ ಅಥವಾ ಒಂದು ಟೀ ಇಲ್ಲದಿದ್ರೆ ಆ ದಿನ ಅವರ ಪಾಲಿಗೆ ನರಕಸದೃಶ. ಇವೆಲ್ಲ ಸಾಮಾನ್ಯವಾಗಿ ದೊಡ್ಡವರ ವಿಷಯ. ಹಾಗೆಯೇ ನಮ್ಮಂಥ ಮಕ್ಕಳ ಉತ್ತಮ ಬೆಳವಣಿಗೆಗೆ ದಿನಕ್ಕೆ ಒಂದು ಲೋಟ ಹಾಲು ಅಗತ್ಯ. ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಗೂ ಹಾಲು ಅತ್ಯಗತ್ಯ. ಫೆಟ್ವಿಕ್ ಹುಣ್ಣು, ಕೊಲೋನ್, ಚರ್ಮದ ಕ್ಯಾನ್ಸರ್‌ಗಳನ್ನು ಕಡಿಮೆ ಮಾಡುವುದಲ್ಲದೇ ದೇಹಕ್ಕೆ ಬೇಕಾದ ಪೊಟ್ಯಾಶಿಯಂ, ವಿಟಮಿನ್ ಎ, ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಕೆ, ಕ್ಯಾಲ್ಸಿಯಂ, ಫಾಸ್ಫೊರಸ್, ಸೋಡಿಯಂ ಇತ್ಯಾದಿ ರಾಸಾಯನಿಕಗಳನ್ನು ನಮ್ಮ ದೇಹಕ್ಕೆ ಒದಗಿಸುವುದು ಹಾಲು. ಮೇದೋಜೀರಕ ಗ್ರಂಥಿಗಳಲ್ಲಿ ಇನ್ಸುಲಿನ್ನನ್ನು ಸಮನ್ವಯಗೊಳಿಸಲು ಅಗತ್ಯವಿರುವ ಜಿಂಕ್‌ನ ಆಗರ ಈ ಹಾಲು.

ಅಬ್ಬಬ್ಬಾ! ಇಷ್ಟೆಲ್ಲಾ ಒಳ್ಳೇ ಅಂಶಗಳು ಹಾಲಲ್ಲೇ ಇವೆ ಅಂದ್ಮೇಲೆ ಪ್ರತಿಯೊಬ್ಬ ವ್ಯಕ್ತಿಯೂ ಹಾಲನ್ನು ಕುಡಿಯಲೇಬೇಕು ಅನ್ನೋದ್ರಲ್ಲಿ ತಪ್ಪಿಲ್ಲ. ಇಷ್ಟೆಲ್ಲಾ ಗುಣಗಳಿರುವ 1 ಲೀಟರ್ ಹಾಲು ಬೇಕಾದರೆ ಏನ್ಮಾಡ್ಬೇಕು? ಅಂತ ಪ್ರಶ್ನೆ ಬಂದ್ರೆ "ಅದೇನ್ಮಹಾ! ಬರೀ ಹದಿನೆಂಟು ರೂಪಾಯಿ ಬಿಸಾಕಿದ್ರೆ ಡೈರೀಲಿ ಸಿಗತ್ತಪ್ಪಾ" ಅಂತ ಉತ್ತರ ಕೊಡ್ತೀರಾ. ಕೊಡ್ಬಹುದು. ಆದ್ರೆ ಉತ್ತರ ಸರಿ, ಮಾರ್ಕ್ಸ್ ಸೊನ್ನೆ! ಯಾಕೆಂದ್ರೆ ಹಾಲು ಕೊಡುವ ಹಸುವನ್ನೇ ನಾವು ಉಳಿಸ್ತಿಲ್ಲವಲ್ಲಾ. ಹಸುವೇ ಇಲ್ಲವಾದ ಮೇಲೆ ಎಲ್ಲಿಂದ ಹಾಲು? ಇನ್ನೆಲ್ಲಿಂದ ಡೈರಿ? ಆದ್ರೂ ಒಂದು ಸ್ವಾರಸ್ಯ ಗೊತ್ತಾ? ಜಗತ್ತಿನ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ನಮ್ಮ ಭಾರತಕ್ಕೇ ಕಂಡ್ರೀ! ಏನಿದು ವಿಪರ್ಯಾಸ ಅಂತೀರಾ? ನಾವು ಹಸುಗಳನ್ನು ಬರೀ ಹಾಲು ಕೊಡೋ ಯಂತ್ರ ಎಂದುಕೊಂಡಿದ್ದೇವೆ. ಅದಕ್ಕೇ ನಂ.1. ಹೀಗಾಗಿ ಹಾಲುಕರೆಯುವ ಮಿಷೆನ್ ಹಾಕಿ ರಕ್ತವನ್ನೂ ಹಿಂಡಿ, ಹಿಂಡಿ ಬಿಳಿ ದ್ರವದ ರೀತಿಯಲ್ಲಿ ಹೊರಹಾಕಿ ಹಾಲು ಅಂತಾ ಇದೀವಿ. ಆದ್ರೆ ಒಂದು ವಿಷಯ ಜ್ಞಾಪಕದಲ್ಲಿರಲಿ ಬೆಳ್ಳಗಿದ್ದದ್ದೆಲ್ಲಾ ಹಾಲಲ್ಲ.

ಗೋಮಯ:

ಎಲ್ಲರೂ ಹೇಳೋ ಹಾಗೆ ಭಾರತ ಕೃಷಿ ಪ್ರಧಾನ ದೇಶ. ಈ ಪ್ರಧಾನತೆ ಹೀಗೇ ಉಳಿಬೇಕಾದರೆ ಸರಿಯಾದ ಕೃಷಿ ವಿಧಾನ ಬೇಕು. ಯಾಕೆಂದರೆ ಈ ಕೃಷಿಯಲ್ಲಿ ಅಭಿವೃದ್ಧಿಯಾಗಬೇಕಾದರೆ ಚೆನ್ನಾಗಿ ಬೆಳೆ ಬೆಳೆದಿರಬೇಕು. ಬೆಳೆ ಬೆಳೆಯಲು ನೀರು ನೆಲ ಚೆನ್ನಾಗಿರಬೇಕು. ನೆಲ ಫಲವತ್ತಾಗಿರಬೇಕಾದರೆ ಗೊಬ್ಬರವನ್ನು ಸರಿಯಾಗಿ ಹಾಕಬೇಕು. ಸಮಸ್ಯೆ ಇರೋದೇ ಇಲ್ಲಿ. ಯಾವ ಗೊಬ್ಬರ ಹಾಕಬೇಕು ಅಂತ. ರಾಸಾಯನಿಕ ಗೊಬ್ಬರ ಹಾಕಿದರೆ ಇಳುವರಿ ಚೆನ್ನಾಗಿರುತ್ತೆ. ತುಂಬಾ ಬೆಳೆ ಬೇಗ ಬೆಳೆಯುತ್ತದೆ. ಇದೇ ತುಂಬಾ ಒಳ್ಳೇದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಈ ರಾಸಾಯನಿಕ ಗೊಬ್ಬರ ಒಂಥರಾ ಸ್ಲೋ ಪಾಯಿಸನ್. ಇದು ನಮ್ಮ ನೆಲವನ್ನು ಬಂಜೆ ಮಾಡಿಬಿಡುತ್ತದೆ. ಮುಂದಿನ ದಿನಗಳಲ್ಲಿ ನಮ್ಮದು ಕೃಷಿ ಪ್ರಧಾನ ದೇಶ ಅಂತ ಹೇಳಿಕೊಳ್ಳೋಕೇ ಆಗೋದಿಲ್ಲ. ಅದಕ್ಕೋಸ್ಕರವೇ ಸಾವಯವ ಕೃಷಿ ವಿಧಾನವೇ ಬಳಸಿ ಅಂತ ಹಳ್ಳಿಗಳನ್ನೇ ನೋಡದ ಜನ ಸಹ ಹೇಳುತ್ತಿದ್ದಾರೆ.

ಸಾವಯವ ಕೃಷಿ ಅನ್ನೋದಕ್ಕೆ ಪರ್ಯಾಯ ಪದ ಅಂದರೆ ಗೋ ಆಧಾರಿತ ಕೃಷಿ. ಹೈನುಗಾರಿಕೆ ಕೃಷಿಯಲ್ಲಿನ ಉಪಕಸುಬಲ್ಲ. ಗೋವಿನಿಂದಲೇ ಸಾವಯವ ಕೃಷಿ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಗಣಿ ಅತ್ಯಗತ್ಯ. 1 ಗ್ರಾಂ. ಸಗಣಿಯಲ್ಲಿ 300 ರಿಂದ 500 ಕೋಟಿ ಉಪಯುಕ್ತ ಜೀವಾಣುಗಳಿವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟ ಅಂಶ. ಸಗಣಿಯಲ್ಲಿ ಸಸ್ಯ ಪೋಷಕಾಂಶಗಳಾದ ರಂಜಕ ಹಾಗೂ ಪೊಟಾಶ್‌ಗಳನ್ನು ಸಸ್ಯಗಳಿಗೆ ಒದಗಿಸುವ ಕಾರ್ಯ ನಡೆಯುತ್ತದೆ. ಹೀಗಾಗಿ ಭೂಮಿ ಫಲವತ್ತಾಗುತ್ತದೆ.

ಇಷ್ಟೇ ಅಲ್ಲದೆ ಸಗಣಿಯಿಂದ ಗೊಬ್ಬರ ಅನಿಲ ಸ್ಥಾವರಗಳ ಮೂಲಕ ಅಡುಗೆ ಅನಿಲವನ್ನು ಪಡೆಯಬಹುದು. ಇಲ್ಲಿ ಉತ್ಪತ್ತಿಯಾಗುವ ಮೀಥೇನ್ ಅನಿಲವನ್ನು ಸಿಲೆಂಡರ್‌ಗಳಲ್ಲಿ ತುಂಬಿಸಿ ವಾಹನಗಳಿಗೆ, ಸ್ಟೌಗಳಿಗೆ ಉಪಯೋಗಿಸಬಹುದು. ಕ್ಯಾಲಿಫೋರ್ನಿಯಾದಲ್ಲಿನ ಇನ್‌ಲ್ಯಾಂಡ್ ಎನರ್ಜಿ ಕಾರ್ಪೋರೇಷನ್ ಎಂಬ ಸಂಸ್ಥೆ ಸಗಣಿಯಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ಲಾಭದಾಯಕವಾಗಿ ಉದ್ಯಮವನ್ನು ನಡೆಸುತ್ತಿದೆ.

ಮುಂದೆ ಓದಿ : ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗೋಮೂತ್ರ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X