ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಲೋಟ ಕುಡಿಯುವ ನೀರು

By * ಶಿಲ್ಪಾ, ಬೆಂಗಳೂರು
|
Google Oneindia Kannada News

Chandrika
ಶಾಲಾಮಕ್ಕಳಿಗೆ ಮಧ್ಯಾನ್ಹದ ಬಿಸಿಯೂಟ ಯೋಜನೆಯನ್ನು ಸರಕಾರ ಜಾರಿಗೆ ತಂದಿದೆಯಷ್ಟೆ. ಆದರೆ ಊಟದ ನಂತರ ಮಕ್ಕಳಿಗೆ ಆಹಾರಕ್ಕಿಂತ ಮಿಗಿಲಾದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹೊಣೆ ಯಾರದ್ದು? ಸ್ವಪ್ರೇರಣೆಯಿಂದ ಶಾಲಾಮಕ್ಕಳಿಗೆ ಶುದ್ಧನೀರು ಒದಗಿಸುವ ಚಳವಳಿಯನ್ನು ಹಮ್ಮಿಕೊಂಡಿರುವ ಮಹಿಳೆ, ಬಸವನಗುಡಿಯ ಸಮಾಜ ಸೇವಕಿ ಚಂದ್ರಿಕಾ ಅಕ್ನೂರ್. ಅವರಿಗೆ ನಿಮ್ಮ ಬೆಂಬಲ ಬೇಕಾಗಿದೆ-ಸಂಪಾದಕ

Society, my dear, is like salt water, good to swim in but hard to swallow - Arthur Stringer

"ಹುಟ್ಟಿದ್ದು ಮೈಸೂರು, ಆದ ರೆ ಹತ್ತನೇ ತರಗತಿ ತನಕ ಓದುತ್ತಾ ಬೆಳದದ್ದು ಕನಕಪುರದಲ್ಲಿ. ಅಪ್ಪ ಡಿ.ವಿ.ವೆಂಕಟ ಸುಬ್ಬರಾವ್ ಶಿಕ್ಷಕರು. ಅವರಿಗೆ ವಿದ್ಯಾದಾನದ ಮುಂದೆ ಎಲ್ಲವು ನಗಣ್ಯ. ಮಳೆಗಾಳಿ, ಆರೋಗ್ಯ, ಅನಾರೋಗ್ಯ ಎಂತಹ ಮನಸ್ಥಿತಿ ಇರಲಿ ಅವರು ತಪ್ಪದೆ ಮಕ್ಕಳ ಸರ್ವತೋಮುಖ ಬೆಳವಣಿಗೆಯತ್ತ ಗಮನ ನೆಟ್ಟಿದ್ದರು.ಅಮ್ಮ ವೇದಮ್ಮ ಸಹ ಅಪ್ಪನಿಗೆ ಸೂಕ್ತ ಸಂಗಾತಿ .ಇವೆಲ್ಲ ಅಂಶ ನನ್ನ ಮನದ ಮೇಲೆ ಸಾಕಷ್ಟು ಪರಿಣಾಮ ಬೀರಿತು" ಹೀಗೆ ಮಾತಿಗೆ ಶುರು ಹಚ್ಚಿದರು ಚಂದ್ರಿಕಾ ಅಕ್ನೂರ್ ಕೃಷ್ಣ ಮೂರ್ತಿ.

ಬದುಕು ಕೈಗೆಟುಕಿತು ಎಂದತಕ್ಷಣ ಸಮಾಜಕ್ಕೆ ಏನಾದರು ಸಣ್ಣ ಸೇವೆ ಮಾಡಲೇ ಬೇಕು ಅನ್ನುವ ಹಂಬಲ ಸರ್ವರಲ್ಲೂ ಇರುತ್ತದೆ, ಆದರೆ ಬಹಳಷ್ಟು ಮಂದಿ ಯಾವ ರೀತಿ ತಮ್ಮ ಆಸೆಯನ್ನು ಪೂರೈಸಿಕೊಳ್ಳ ಬೇಕು ಎಂದುತಿಳಿಯದ ಮನಸ್ಥಿತಿಯಲ್ಲಿ ಇರ್ತಾರೆ.ಇದು ಒಂದರ್ಥದಲ್ಲಿ ಸಮಾಜದ ಅತ್ಯಂತ ಖೇದಕರ ಸಂಗತಿ. ಆ ಸಂಗತಿಯತ್ತ ನಮ್ಮ ಗಮನ ಬೇಡ. ಅನುಕೂಲಸ್ಥ ಮನೆಯಿಂದ ಅನುಕೂಲಸ್ಥರ ಮನೆಗೆ ಸೇರಿದ ಚಂದ್ರಿಕಾ ಸಮಾಜಮುಖಿ ವ್ಯಕ್ತಿತ್ವಕ್ಕೆ ತಾನು ಬಯಸಿದ್ದು ಸಮಾಜಕ್ಕೆ ಕೊಡಲು ಸಾಧ್ಯ ಆಗ್ತಾ ಇಲ್ವಲ್ಲ ಅನ್ನುವ ಬೇಸರ.ಆದರೆ ಅದಕ್ಕೂ ಸಮಯ ಕೂಡಿ ಬಂತು.

ಎರಡು ಮಕ್ಕಳ ತಾಯಿ ಆದ ಬಳಿಕ ಆಕೆಯ ಕನಸು ಪೂರೈಸುವ ಕಾಲ ಮತ್ತು ಅವಕಾಶ ಕೂಡಿ ಬಂತು. ಸಂಪ್ರದಾಯಸ್ಥ ಮಡಿ ವಾತಾವರಣದ , ಅದೂ ಬೆಂಗಳೂರು ನಗರದ ಹೃದಯಭಾಗ ಗಾಂಧೀ ಬಜಾರ್ ನಲ್ಲಿ ಇರುವ ಅಕ್ನೂರ್ ರಾಯರ ಮಠದ ಸಂಸ್ಥಾಪಕರಾದ ಅನಂತ ಸ್ವಾಮಿ ರಾವ್ ಅವರ ಸೊಸೆ ಸಮಾಜ ಸೇವೆಯತ್ತ ಗಮನ ಹರಿಸುವ ವಿಷ್ಯ ಅಷ್ಟು ಸರಳ ಆಗಿರಲಿಲ್ಲ. ಆದ್ರೆ ಸೊಸೆಯ ಈ ಸಮಾಜಮುಖಿ ಗುಣವು ಮಾವನವರಲ್ಲಿ ಹೆಮ್ಮೆ ಉಂಟು ಮಾಡಿತು. ಒಳ್ಳೆ ಮಾವ.

ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಚಂದ್ರಿಕಾ ಆರಂಭದ ಹಂತದಲ್ಲಿ ಇಬ್ಬರು ಬಡ ಮಕ್ಕಳನ್ನು ದತ್ತು ತೆಗೆದು ಕೊಂಡರು. ಅವರನ್ನು ಚೆನ್ನಾಗಿ ಸಾಕಿ ಸಲುಹಿದರು. ಈಗ ಆ ಇಬ್ಬರು ಓದಿ ತಮ್ಮ ಕಾಲು ಮೇಲೆ ತಾವು ನಿಂತಿದ್ದಾರೆ. ಇವರ ಈ ಕೆಲಸ ಅಷ್ಟಕ್ಕೇ ಮುಗಿಯಲಿಲ್ಲ,ಇಂತಹ ಅನೇಕ ಮಕ್ಕಳನ್ನು ದತ್ತು ತೆಗೆದು ಕೊಂಡು ಅವರ ಯಶಸ್ಸಿನತ್ತ ಗಮನ ಹರಿಸಿದರು. ಈಗ ಚಂದ್ರಿಕಾ ಇಂತಹ ಇಪ್ಪತ್ತೇಳು ಮಕ್ಕಳ ತಾಯಿ.(ಯಾವುದೇ ಜಾತಿ ಬೇಧ ಇಲ್ಲ ಎನ್ನುವುದು ಇಲ್ಲಿ ಗಮನಾರ್ಹ)ಯಾರೆಷ್ಟೇ ಅನುಕೂಲ ಸ್ಥಿತಿಯಲ್ಲಿ ಇದ್ದರೂ ಹಣಕಾಸಿನ ವ್ಯವಸ್ಥೆಯ ವಿಷಯಕ್ಕೆ ಸಂಬಂಧ ಪಟ್ಟಂತೆ ಕೆಲವು ದೊಂಬರಾಟ ಮಾಡಬೇಕಾಗುತ್ತದೆ.
ಚಂದ್ರಿಕಾ ತಮ್ಮ ಕನಸಿನ ಸಾಕಾರಕ್ಕಾಗಿ ಯಾರ ಮುಂದು ಕೈ ಚಾಚಲಿಲ್ಲ, ಬದಲಿಗೆ ತಮಗೆ ಬರುವ ಸಾರಿನಪುಡಿ , ಹುಳಿಪುಡಿ....! ಮಾರಿ ಬಂದ ಹಣವನ್ನು ಮಕ್ಕಳ ಯಶಸ್ಸಿಗೆ ವಿನಿಯೋಗಿಸಿದರು, ಈ ಹೊಸ ಕೆಲಸ ಆರಂಭ ಮಾಡಿದಾಗ ಆಪ್ತೇಷ್ಟರಿಂದ ಟೀಕೆ,ಟಿಪ್ಪಣಿ.

ಆದರೆ ಈ ಹೆಣ್ಣುಮಗಳು ಅದ್ಯಾವುದಕ್ಕೂ ಧೃತಿಗೆಡಲಿಲ್ಲ. ಪತಿ ಕೃಷ್ಣಮೂರ್ತಿ ಪತ್ನಿಯ ಬೆಂಬಲಕ್ಕೆ ನಿಂತರು.ಈ ಕೆಲಸ ಅವರ ಎಲ್ಲ ಜೀವನ್ಮುಖಿ ಕೆಲಸಗಳಿಗೆ ಉತ್ತಮ ಸಂಪನ್ಮೂಲನವಾಗಿ ನಿಂತಿತು. ಕಳೆದ ಕೆಲವು ವರ್ಷಗಳಿಂದ ಡಾ.ನಂದಿನಿ (ಗೈನಕಾಲಜಿಸ್ಟ್ ) ತಮ್ಮ ಕೈಲಾದ ಸಹಾಯ ಚಂದ್ರಿಕಾಗೆ ನೀಡುತ್ತಿದ್ದಾರೆ. ಜೊತೆಗೆ ಮಗ, ಮಗಳು ಸಹ ಅಮ್ಮನ ಕೆಲಸಕ್ಕೆ ಬೆನ್ನೆಲುಬಾಗಿದ್ದಾರೆ. ಹನುಮಂತ ನಗರದ ಸುಂಕೇನ ಹಳ್ಳಿ ಸರ್ಕಾರಿ ಶಾಲೆಯ ಕಾರ್ಯಕಾರಿ ಸಮಿತಿಯ ಸದಸ್ಯೆ ಆಗಿರುವ ಈಕೆ ಅಲ್ಲಿಯೂ ಅನೇಕ ಉಪಯುಕ್ತ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.

ಇಷ್ಟೆಲ್ಲಾ ಕಾರ್ಯಗಳ ನಡುವೆ 'ಸ್ಪೂರ್ತಿ ಮಹಿಳಾ ಸಮಾಜದ'ವೈ ಸ್ ಪ್ರೆಸಿಡೆ೦ಟ್ .ರೋಟರಿ ಕ್ಲಬ್ನ ಸದಸ್ಯೆ. ಈಗ ಮತ್ತೊಬ್ಬ ರೋಟರಿಯನ್ ಆಗಿರುವ ವಾಸುಕಿ ಅವರ ಜೊತೆ ಕೂಡಿ,ಸರ್ಕಾರಿ ಶಾಲೆಯ ಮಕ್ಕಳಿಗಾಗಿ ವಾಟರ್ ಪ್ಯುರಿಫೈಯರ್ ಟ್ಯಾಂಕ್ ನೀಡುವ ಒಂದು ಚಳವಳಿಯನ್ನೇ ಕೈಗೆತ್ತಿಕೊಂಡಿದ್ದಾರೆ.

ಈಗಾಗಲೇ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರುನೀಡಿರುವ ಚಂದ್ರಿಕಾ ಹಾಗೂ ಟೀಮ್ ಅವರು ನಿಮ್ಮಲ್ಲಿ ಕೆಳುವುದಿಷ್ಟೇ.ಈಗ ಅನೇಕರು ವಿದೇಶವು ಸೇರಿದಂತೆ ಮೂಲ ಬೇರುಗಳನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ಬಂದು ನೆಲೆಸಿದ್ದಾರೆ. ಅವರಿಗೆ ತಕ್ಕ ಮಟ್ಟಿಗೆ ಅನುಕೂಲಕರ ಸ್ಥಿತಿಯು ಇರುತ್ತದೆ ಎಂದು ಭಾವಿಸೋಣ. ಆದರೆ ಮನದ ಯಾವುದೋ ಒಂದು ಮೂಲೆಯಲ್ಲಿ ತಾವು ಓದಿದ ಶಾಲೆಗೆ ಏನಾದರು ಮಾಡಬೇಕು ಅನ್ನುವ ಆಸೆ ಅನೇಕರಿಗೆ ಇರುತ್ತದೆ. ಅಂತಹವರು ಈ ವಾಟರ್ ಟ್ಯಾಂಕ್ ನೀಡುವ ಪ್ರೀತಿಯತ್ತ ಸಹಾಯ ಹಸ್ತ ನೀಡದರೆ ಸಾಕು.(ಬೆಲೆ 4,000 ರೂ.)

ದಾನಿಗಳು ಇಷ್ಟಪಡುವ ಶಾಲೆ ಕರ್ನಾಟಕದ ಯಾವುದೇ ಮೂಲೆಯಲ್ಲಿರಲಿ, ಅಲ್ಲಿಗೆ ಈ ವಾಟರ್ ಟ್ಯಾಂಕ್ ತಲುಪಿಸುವ ವ್ಯವಸ್ಥೆಯನ್ನು ಚಂದ್ರಿಕಾ ಮಾಡುತ್ತಾರೆ. ಈಗಾಗಲೇ ಅನೇಕ ಆಸಕ್ತರು ಈ ಸೇವೆ ಮಾಡಲು ಮುಂದಾಗಿದ್ದಾರೆ. ಈ ಕೆಲಸದಲ್ಲಿ ನಿಮ್ಮ ಹನಿಯು ಸೇರಲಿ ಎನ್ನುವ ಅರಿಕೆ ಆ ಹೆಣ್ಣು ಮಗಳದು. ನಮ್ಮ ಸಮಾಜದಲ್ಲಿ ಕೆಲವರು ಒಂದು ಪೈಸೆಯಷ್ಟು ಸೇವೆಮಾಡಿ ನೂರು ಪೈಸೆಯಷ್ಟು ಹೊಗಳಿಕೆ ನಿರೀಕ್ಷೆ ಪಡ್ತಾರೆ,ಒಂದಷ್ಟು ಜನ ಮೌನವಾಗಿ ಸಾವಿರಪಟ್ಟು ಸೇವೆ ಮಾಡ್ತಾನೆ ಇರ್ತಾರೆ, ಅದು ಅವರ ವಿಶೇಷತೆ, ಅಂತಹವರ ಸಾಲಿಗೆ ಚಂದ್ರಿಕಾ ಸೇರ್ತಾರೆ.ಅವರ ಜೊತೆ ಸಹೃದಯರು ಕೈ ಸೇರಿಸಿದರೆ,ಒಂದಷ್ಟು ಮಕ್ಕಳ ಶುದ್ಧ ನೀರು ಕುಡಿಯಬಹುದು.

ಹೆಚ್ಚಿನಮಾಹಿತಿಗಾಗಿ ಅವರಿಗೊಂದು ಇಮೇಲ್ ಮಾಡಿ,ವಿವರಗಳನ್ನು ಪಡೆಯಿರಿ. ನೀವು ಕೊಡಮಾಡುವ ಕುಡಿಯುವ ನೀರು ಸೇವೆಯು ಅದನ್ನು ಕಾಯುತ್ತಿರುವ ಮಕ್ಕಳನ್ನು ತಲಪುತ್ತದೆ, ಚಿಂತೆಬೇಡ. [email protected]
ಹಲೋ : 080-6596 8343, +91 99863 90357

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X