ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!

|
Google Oneindia Kannada News

Flood affected Tinthini village, Gulbarga
ಸಂತ್ರಸ್ತರಿಗೆ ಬೇಕಿರುವುದು:

ಇವರಿಗೆ ನಮ್ಮ ಹಣದ ಅವಶ್ಯಕತೆಗಿಂತಲೂ, ಬದುಕಲು ಶಾಶ್ವತವಾಗಿ ಆಸರೆ ಬೇಕಾಗಿದೆ. ಈಗಾಗಲೇ ಬಟ್ಟೆ, ಹಾಸು ಹೊದಿಕೆಗಳು, ಪಾತ್ರೆಗಳು ಬಂದಿದ್ದರೂ ಅವರ ಮುಂದಿನ ಜೀವನ ನಡೆಸಲು,

1. ಶಾಶ್ವತವಾದ ಮನೆ.
2. ಬೇಸಾಯ ಮಾಡಲು ಹಸುಗಳು. ಹಾಗು,
3. ತಮ್ಮ ಜಮಿನುಗಳಿಗೆ ಪಂಪ್ ಸೆಟ್ ಸೌಲಭ್ಯ ಬೇಕಾಗಿದೆ.

ಅಲ್ಲಿನ ಸ್ವಯಂಸೇವಾ ತಂಡದಿಂದ ದೊರಕಬಹುದಾದ ಸಹಾಯಗಳು:

ಕಳೆದ ಬಾರಿಯ ರಾಜ್ಯೋತ್ಸವದ ಪ್ರಯುಕ್ತ ನಾವು ವನವಾಸಿ ಕಲ್ಯಾಣ ಸಂಘದವರು ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಸಣ್ಣ ಗ್ರಂಥಾಲಯ ನಿರ್ಮಿಸುವ ಉದ್ದೇಶದಿಂದ ಕಂಪ್ಯೂಟರ್ ಹಾಗು ಪುಸ್ತಕಗಳನ್ನು ಹಂಚಿದ್ದೆವು. ಇದೆ ಸಂಘದವರು ನಮಗೆ ಕೆಳಗಿನ ಅಂಶಗಳಲ್ಲಿ ಸಹಾಯ ಮಾಡಲು ತಯಾರಿದ್ದಾರೆ.

1. ಪ್ರವಾಹದಿಂದ ಮನೆ ಕಳೆದುಕೊಂಡವರನ್ನು ಗುರುತಿಸಲು
2. ಹೊಸ ಮನೆಗಳ ನಿರ್ಮಾಣಕ್ಕೆ ಸ್ಥಳ ಹುಡುಕಲು
3. ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲು ಸ್ಥಳೀಯ ಸಹಾಯ
4. ಸ್ಥಳೀಯ ಕಟ್ಟಡ ನಿರ್ಮಾಣಗಾರರ ಸಂಪರ್ಕ ಪಡೆಯಲು ಮತ್ತು ಮನೆ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಹೊಂದಿಸಲು
5. ಅಲ್ಲಿನ ನಿರ್ಮಾಣ ಕೆಲಸಗಳ ಬಗ್ಗೆ ನಿಯತವಾಗಿ ಮಾಹಿತಿ ಪಡೆಯಲು.

ಆದರೆ, ಈ ಕೆಲಸ ಮಾಡಿಸುವ ಕಂಪನಿಗಳು/ವ್ಯಕ್ತಿಗಳು ತಮ್ಮ ಕಡೆಯಿಂದ ಒಬ್ಬ ನಂಬಿಕಸ್ಥ ನಿರ್ವಾಹಕರನ್ನು ನೇಮಿಸಿ, ಅವರ ಮುಖಾಂತರವೇ ಹಣಕಾಸಿನ ವ್ಯವಹಾರವನ್ನು ನಡೆಸಬೇಕು. ಇದರಿಂದ ಮೂರನೇ ವ್ಯಕ್ತಿಯ ಪ್ರವೇಶ ತಪ್ಪುತ್ತದೆ ಹಾಗು ಆಷ್ಟು ಹಣ ನಿಜವಾಗಿ ಅವಶ್ಯಕತೆ ಇರುವವರಿಗೆ ತಲುಪುವಂತೆ ನೋಡಿಕೊಳ್ಳಬಹುದು.

ವೈಯಕ್ತಿಕ ಸಹಾಯ ಮಾಡುವವರು - ಮನೆಗಳನ್ನು ಪರಿಶೀಲಿಸಲು, ಕಟ್ಟಡ ನಿರ್ಮಾಣಕ್ಕೆ ಯೋಜನೆ ಮಾಡಲು, ನಿರ್ಮಾಣ ಕಾರ್ಯದ ಮಾಹಿತಿ/ಮೇಲ್ವಿಚಾರಣೆ ಮಾಡಲು, ಸಹಕರಿಸಬಹುದು.

ಮುಂದೆ ಓದಿ : ಮಧ್ಯವರ್ತಿಗಳ ತಡೆ ಹೇಗೆ ಸಾಧ್ಯ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X