• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿ.ಟಿ.ಬದನೆ ಪಲ್ಯ ತಿನ್ನಲು ಯೋಗ್ಯವೆ?

|

ಹೌದು ಎನ್ನುತ್ತಾರೆ ಕೆಲವರು. ಆದರೆ ಈ ಬಗ್ಗೆ ದೀರ್ಘಕಾಲದ ಸಂಶೋಧನೆಯಾಗಲಿ ಅಥವಾ ತಿಂದರೆ ಎನೂ ಆಗುವುದಿಲ್ಲ ಎಂಬುದಕ್ಕೆ ನಂಬಲರ್ಹ ಪುರಾವೆಗಳಾಗಲಿ ಇಲ್ಲ. ಒಂದೆರಡು ಉದಾಹರಣೆ ಗಮನಿಸಿ, ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ಬಿ.ಟಿ ಹತ್ತಿ ಬೆಳೆದ ಜಮೀನಿನಲ್ಲಿ ಕೆಲಸ ಮಾಡಿದ ರೈತರು ಚಿತ್ರವಿಚಿತ್ರ ಚರ್ಮರೋಗಗಳಿಗೆ ತುತ್ತಾದರು. ಬೆಳೆ ಕಟಾವಾದ ನಂತರ ಆ ಭೂಮಿಯಲ್ಲಿ ಮೇಯಲು ಹೋಗಿದ್ದ ಕುರಿ ಮೇಕೆಗಳಿಗೆ ಮೂತಿ ಸುತ್ತ ಗಾಯಗಳಾದವು, ಕರುಳು ತೂತಾದವು ಕೆಂಪಗೆ ಹುಚ್ಚಿಕೊಂಡು ನಾಲ್ಕೈದು ದಿನದಲ್ಲಿ ಸತ್ತೇಹೋದವು. (ಈ ಮಾಹಿತಿ ಅನೇಕ ಕಡೆ ಲಭ್ಯವಿದೆಯಾದರೂ ಇತ್ತೀಚೆಗೆ ಕುಲಾಂತರಿ ಆಹಾರದ ಅಡ್ಡಪರಿಣಾಮಗಳ ಬಗ್ಗೆ ಖ್ಯಾತ ನಿರ್ದೇಶಕ ಮಹೇಶ್ ಭಟ್ ತಯಾರಿಸಿರುವ "ಪಾಯಿಸನ್ ಆನ್ ದಿ ಪ್ಲಾಟರ್" ಚಿತ್ರದಲ್ಲಿ ಇದನ್ನು ಸೂಕ್ಷ್ಮವಾಗಿ ದಾಖಲಿಸಿದ್ದಾರೆ). ಕೆಲ ಕಾಲದ ಹಿಂದೆ ಮಾನ್ಸಾಂಟೋ ಕಂಪನಿಯ (ಬಿ.ಟಿ ಬದನೆ ಸೃಷ್ಟಿಸಿರುವ ಕಂಪನಿ ಮಹಿಕೋದ ಪಾಲುದಾರ ಕಂಪನಿ) ಲಂಡನ್ ಘಟಕದ ಕ್ಯಾಂಟೀನ್‌ನಲ್ಲಿ ಕುಲಾಂತರೀ ಆಹಾರ ನಿಷೇದಿಸಿಲು ತೀರ್ಮಾನಿಸಲಾಯಿತು.

GM food ban at Monsanto staff restaurant

21dec99 Reuters

Genetically modified food has been banned from the staff restaurant at a British office of U.S.life sciences company Monsanto Co (NYSE:MTC - news), newspapers reported on Wednesday. Monsanto is at the forefront of GM crop trials in Britain, where public opposition has prompted supermarkets to remove products with GM ingredients from their shelves.

ಅಷ್ಟೇ ಅಲ್ಲ ಜಗತ್ತಿನ 180 ದೇಶಗಳಲ್ಲಿ ಕುಲಾಂತರಿ ಆಹಾರಕ್ಕೆ ಒಂದಲ್ಲ ಒಂದು ಬಗೆಯ ನಿರ್ಬಂಧ ಹೇರಲಾಗುತ್ತಿದೆ. ಅಪಾಯದ ಅರಿವಾಗುತ್ತಿದ್ದ ಹಾಗೆ ಕೆಲವೆಡೆ ಸ್ಥಳೀಯ ಕೆಲವು ಪ್ರಾಂತಗಳು ತಮ್ಮನ್ನು "ಕುಲಾಂತರಿ ಮುಕ್ತ" ಎಂದು ಘೋಷಿಸಿಕೊಂಡಿವೆ. ಯುರೋಪಿನ 22 ದೇಶಗಳಲ್ಲಿ ಅಲ್ಲಲ್ಲಿ ಕುಲಾಂತರಿಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಬ್ರಝಿಲ್ ದೇಶಗಳಲ್ಲೂ ಕೆಲವು ರಾಜ್ಯಗಳು ಇದೀಗ ನಿರ್ಬಂಧ ಹೇರಿವೆ. ವೆನೆಝುವೆಲಾ, ಝಾಂಬಿಯಾ, ಸುಡಾನ್, ಅಂಗೋಲಾ ಮತ್ತಿತರ ದೇಶಗಳಲ್ಲಿ ಅಮೆರಿಕದ ಆಹಾರ ಪದಾರ್ಥಗಳನ್ನು ತಂದು ಸುರಿಯಲಾಗುತ್ತಿದೆ. ಅಲ್ಲೂ "ಕುಲಾಂತರಿ ಬೇಡ" ಎಂಬ ಕೂಗೆದ್ದಿದೆ. ಜಗತ್ತಿನ ಎಲ್ಲೆಡೆ ಕುಲಾಂತರಿಗೆ ಬೇಡಿಕೆ/ಮಾರುಕಟ್ಟೆ ಕುಸಿಯುತ್ತಿದೆ. ಇಟಲಿಯ ಮೂವತ್ತು ಲಕ್ಷ ನಾಗರಿಕರು ತಮ್ಮ ದೇಶಕ್ಕೆ ಕುಲಾಂತರಿ ಬೇಡ ಎಂದು 2007ರಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಫ್ರಾನ್ಸ್, ಹಂಗೆರಿ, ಇಟಲಿ, ಗ್ರೀಸ್, ಆಸ್ಟ್ರಿಯಾ, ಪೋಲಂಡ್ ಮತ್ತು ರೊಮೇನಿಯಾ ಈ ಎಲ್ಲ ರಾಷ್ಟ್ರಗಳೂ ಮೊನ್ಸಾಂಟೊ ಕಂಪನಿಯ "ಮೊನ್ 810" ತಳಿಯ ಕುಲಾಂತರಿ ಜೋಳವನ್ನು ನಿಷೇಧಿಸಿವೆ. ತಮ್ಮ ದೇಶದ ತಳಿ ವೈವಿಧ್ಯಕ್ಕೆ ಹಾಗೂ ಜನರ ಆರೋಗ್ಯಕ್ಕೆ ಈ ಜೋಳ ಧಕ್ಕೆ ತರುತ್ತದೆ ಎಂಬುದರ ಸಾಕ್ಷ್ಯಾಧಾರದ ಮೇಲೆ ಅವು ಈ ನಿರ್ಧಾರ ಕೈಗೊಂಡಿವೆ. ಯುರೋಪ್‌ನಲ್ಲಿ 175 ಪ್ರಾಂತಗಳು ಹಾಗೂ 4,500 ಮುನಿಸಿಪಾಲಿಟಿಗಳು ತಮ್ಮ ವ್ಯಾಪ್ತಿಯಲ್ಲಿ ಕುಲಾಂತರಿ ಆಹಾರಗಳಿಗೆ ನಿರ್ಬಂಧ ಹಾಕಿವೆ. ಸ್ಪೇನ್ ಒಂದರಲ್ಲೇ 50 ಮುನಿಸಿಪಾಲಿಟಿಗಳು, ಬಾಸ್ಕ್ ಪಂಚಾಯತ ಹಾಗೂ ಕ್ಯಾನರಿ ದ್ವೀಪಗಳಲ್ಲಿ ಕುಲಾಂತರಿಗೆ ಪ್ರವೇಶ ನಿಷಿದ್ಧವೆಂದು ಘೋಷಿಸಲಾಗಿದೆ. (ಮಾಹಿತಿ: ಮೈ ರೈಟ್ ಟು ಸೇಫ್ ಫುಡ್, ನಾಗೇಶ ಹೆಗಡೆ)

ಇದನ್ನು ಗಮನಿಸಿದಾಗ ಕುಲಾಂತರಿ ಬದನೆಕಾಯಿ ಸೇವಿಸುವ ಬಗ್ಗೆ ಯಾರಾದರೂ ಆತಂಕ ಪಡದೆ ಇರಲು ಸಾಧ್ಯವೆ? ಕೀಟನಾಶಕ ಗುಣವಿರುವ ಕುಲಾಂತರಿ ಬದನೆಯನ್ನು ಬೆಳೆದು ಶೋಕೇಸ್‌ಗಳಲ್ಲಿ ಇಡೋದಲ್ಲವಲ್ಲ. ನಾವೂ, ನೀವೂ ತಿನ್ನಬೇಕಲ್ಲ. ಸೇವಿಸಿದರೆ ಏನಾಗಬಹುದು? ಈ ಬಿ.ಟಿ. ಬದನೆಯನ್ನು ನಾವು ಸೇವಿಸಿದಾಗ ಅದರಲ್ಲಿರುವ ವಿಷಕಾರಿ ಜೀವಿ ಬ್ಯಾಸಿಲೆಸ್ ಥುರುಂಜೆನ್ಸಿಸ್‌ನ ತಳಿ ಸೂತ್ರ ನಮ್ಮ ದೇಹ ಸೇರುತ್ತದೆ. ನಮ್ಮ ಜೀರ್ಣಾಂಗದಲ್ಲಿರುವ ಅನೇಕ ಮಾನವೋಪಕಾರಿ ಏಕಾಣು ಜೀವಿಗಳೊಳಗೆ ಹೊರಗಿನಿಂದ ಬಂದ ಬಿ.ಟಿ. ಜೀನ್ ಮಿಲನಗೊಂಡಾಗ ಅವುಗಳಿಂದ ವಿಷಕಾರುವ ಕೆಲಸ ಆರಂಭವಾಗುತ್ತದೆ. ಅಂದರೆ ನಮ್ಮ ಹೊಟ್ಟೆಯಲ್ಲೊಂದು ನಂಜು ಉತ್ಪನ್ನ ಕೇಂದ್ರ ಆರಂಭವಾದಂತೆ ಅಂದುಕೊಳ್ಳಿ. ಕ್ರಮೇಣ ಇಲ್ಲಸಲ್ಲದ ಕಾಯಿಲೆಗಳು ಉದ್ಬವಿಸುತ್ತವೆ. ಅದು ಅಲರ್ಜಿ ಆಗಬಹುದು, ಅಜೀರ್ಣ, ಅಸಿಡಿಟಿ, ತುರಿಕೆ ಅಥವಾ ಕ್ಯಾನ್ಸರ್‌ನಂತ ಕಾಯಿಲೆಗಳೂ ಬರಬಹುದು.

ಇದು ಮನುಷ್ಯರ ಮೇಲಾಗುವ ಪರಿಣಾಮ. ಇನ್ನು ಮೈತುಂಬಾ ವಿಷ ತುಂಬಿಕೊಂಡಿರುವ ಗಿಡಗಳನ್ನು ಸಲಹುವ ಭೂಮಿಯಲ್ಲಿ ಆಗುವ ಏರುಪೇರುಗಳನ್ನು ನೀವೇ ಊಹಿಸಿಕೊಳ್ಳಿ. ಮುಖ್ಯ ಮಂತ್ರಿಗಳಿಗೊಂದು ಒನ್ ಲೈನ್ ಸುದ್ದಿ.

ಮಾನ್ಯ ಮುಖ್ಯ ಮಂತ್ರಿಗಳೆ,

ಈಗಾಗಲೇ ಕೇರಳ ಮತ್ತು ಒರಿಸ್ಸಾ ರಾಜ್ಯಗಳು ಕುಲಾಂತರಿ ತಳಿಗಳನ್ನು ತಮ್ಮ ರಾಜ್ಯದೊಳಗೆ ಬೆಳೆಯಲು ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿವೆ. ತಾವೂ ಮನಸ್ಸು ಮಾಡಿ ಕರ್ನಾಟಕವನ್ನು ಕುಲಾಂತರಿ ತಳಿಗಳ ಮುಕ್ತ ರಾಜ್ಯವನ್ನಾಗಿಸಿ. ಅಂದು ತಾವು ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದ್ದು ನೆನಪಿದ್ದರೆ ರೈತ ಸಮುದಾಯವನ್ನು ಕುಲಾಂತರಿ ತಳಿ ಎಂಬ ಮಾಟಗಾತಿಯಿಂದ ಉಳಿಸಿ.

About the author : K.N. Nagesh, The Green School, Wide Angle Communications The Volunteers (R), Bangalore.

« ಮೊದಲ ಭಾಗ : ಯಡಿಯೂರಪ್ಪನವರಿಗೆ ಬದನೆಕಾಯಿ ಮನವಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X