• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1

By Staff
|

ಜಲಕೃಷಿ ಅಥವಾ Hydroponics ಬಗ್ಗೆ ಸರ್ಕಾರಿ ಸ್ವಾಮ್ಯದ ಪರಿಸರ ಸಂಸ್ಥೆ EMPRIನಲ್ಲಿನ ಗೆಳೆಯ ರವೀಂದ್ರ ಹೇಳಿದಾಗ ನಾನು ಮೊದಲು ಆತ aquatics plants ಬಗ್ಗೆ ಹೇಳುತ್ತಿದ್ದಾನೆ ಎಂದು ತಿಳಿದಿದ್ದೆ. ಆದರೆ ಜಲಕೃಷಿಯ ಸರಳತೆ, ಸಮೃದ್ಧತೆ, ಸದುಪಯೋಗದ ಬಗ್ಗೆ ಅರಿವಾದಂತೆ ಇದು ಬರೀ ಪ್ರಾಯೋಗಿಕ ಕೃಷಿಯಷ್ಟೇ ಅಲ್ಲ. ಪ್ರಯೋಜನಕಾರಿ ಕೂಡ ಹೌದು ಎನಿಸಿತು. ಜಲಕೃಷಿಯನ್ನು ನಮ್ಮ ನಾಡಿಗೆ ಪರಿಚಯಿಸಿದ ಕೀರ್ತಿ ರಿಟೈಡ್ ಲೆ.ಕ ಸಿವಿ ಪ್ರಕಾಶ್ ಅವರಿಗೆ ಸಲ್ಲಬೇಕು. ಬನ್ನಿ ಈ ಕುತೂಹಲಕಾರಿ ಕೈತೋಟದ ಬಗ್ಗೆ ಅವರೊಡನೆ ಮಾತಾಡೋಣ.

*ಮಲೆನಾಡಿಗ

*ಪೇಟ್ ಬರೋ ಪ್ರಾಜೆಕ್ಟ್ ಎಂಬ ಹೊಟ್ಟೆ ತುಂಬಿಸೋ ಯೋಜನೆ ಆರಂಭಿಸಿದ್ದೀರಲ್ಲ ಎದು ಹೆಸರಿಗೆ ತಕ್ಕಂತೆ ಶ್ರೀಸಾಮಾನ್ಯರ ಹೊಟ್ಟೆ ತುಂಬಿಸುತ್ತದೆಯೇ?

ಖಂಡಿತಾ, ಪೇಟ್ ಬರೋ ಪ್ರಾಜೆಕ್ಟ್ ನ ಕಾಸೆಪ್ಟ್ ಇರೋದು ಮೈಕ್ರೊ ಫೈನಾನ್ಸ್ ಮೇಲೆ. ಇದಕ್ಕಿಂತ ಮುಖ್ಯವಾಗಿ ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಜನರಿಗೆ ಆತ್ಮವಿಶ್ವಾಸ ಮೂಡಿಸುವುದು ಇದರ ಉದ್ದೇಶ. ಒಂದು ದಿನ ನಾನು ಬಾಂಗ್ಲಾದೇಶದ ಮಹಮ್ಮದ್ ಯೂನಸ್ ಅವರ "ಬ್ಯಾಂಕರ್ಸ್ ಟು ಪೂರ್" ಪುಸ್ತಕ ಓದುತ್ತಿದ್ದೆ. ತಂತ್ರಜ್ಞಾನದ ಸಹಾಯದಿಂದ ಆರ್ಥಿಕವಾಗಿ ದುರ್ಬಲವಾದ ವರ್ಗಕ್ಕೆ ಬೆಂಬಲ ನೀಡಿ ಅವರ ಏಳಿಗೆ ಮಾಡುವುದು ಸಾಧ್ಯ ಎಂದು ಮನವರಿಕೆ ಆಯಿತು. ಅಂದೇ ನಾನು ಈ ಜಲಕೃಷಿಯನ್ನು ಪೂರ್ಣ ಪ್ರಮಾಣವಾಗಿ ಮಾಡುವ ಬಗ್ಗೆ ನಿರ್ಧಾರ ಮಾಡಿದೆ. ಜನವರಿ 16, 2009 ರಲ್ಲಿ ಹೈಡ್ರೋ ಫೋನಿಕ್ಸ್ ಕಾರ್ಯಾಗಾರ ಪ್ರಾರಂಭಿಸಿ ಕೆಲವರಿಗೆ ತರಬೇತಿ ನೀಡಿದೆವು. ನನ್ನ ಯೋಜನೆಗೆ ಪೆಗ್ಗಿ ಬ್ರಾಡ್ಲೆ, ಅಂಡ್ರ್ಯೂ ಹಾಗೂ ಸಂಗೀತಾ ಭೋಜಪ್ಪ ಅವರ ಸಹಕಾರ ದೊರೆಯಿತು.

*ಹೈಡ್ರೋಪೋನಿಕ್ಸ್ (ಜಲಕೃಷಿ)ಆಧಾರಿತ ಪೇಟ್ ಬರೋ ಬಗ್ಗೆ ಸ್ವಲ್ಪ ವಿಸ್ತಾರವಾಗಿ ಹೇಳ್ತೀರಾ?

ಮೊದಲೇ ಹೇಳಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸುಲಭವಾಗಿ ಕೃಷಿ ಮೂಲಕ ಒಂದಿಷ್ಟು ಹಣ ಗಳಿಕೆಯ ಮಾರ್ಗ ಹೇಳಿಕೊಡುವುದು. ಅಫ್ ಕೋರ್ಸ್ ಮಾರುಕಟ್ಟೆಯಲ್ಲಿ ನೀವು ಮಾರೋ ತರಕಾರಿ ಹೇಗಿದೆ ಅಂತಾ ಜನ ನೋಡುತ್ತಾರೆ ಹೊರತು, ಎಲ್ಲಿ ಬೆಳೆದದ್ದು, ಹೇಗೆ ಬೆಳೆದದ್ದು ಎಂದೆಲ್ಲಾ ಜನ ಪ್ರಶ್ನಿಸಲ್ಲ. ಹಾಗಾಂತ ಜಲಕೃಷಿ ಏನು ವಾಮಮಾರ್ಗವಲ್ಲ. ಸಹಜವಾಗಿ ಸಸಿ ಬೆಳೆದು ಫಲ ಕೊಡುವ ಕಾಯಕವೇ. ಪೇಟ್ ಬರೋ ಹೆಸರೇ ಹೇಳುವಂತೆ ಆಹಾರ ಧಾನ್ಯ ಉತ್ಪಾದನೆ, ಹಣಗಳಿಕೆಯಲ್ಲಿ ಸ್ವಾವಲಂಬನೆ ಗಳಿಸುವುದು. ಮುಂಬರುವ ದಶಕಗಳಲ್ಲಿ ಭಾರತದಲ್ಲಿ ಎಂದೂ ಆಹಾರ ಕ್ಷಾಮ ತಲೆದೋರದಂತೆ ಮಾಡುವ ಸಣ್ಣ ಪ್ರಯತ್ನ.

*ದೈನಂದಿನ ಬಳಕೆಯ ತರಕಾರಿ, ಸೊಪ್ಪು, ಹಣ್ಣುಗಳನ್ನು ಬೆಳೆಯಲು ಸಾಮಾನ್ಯ ವರ್ಗಕ್ಕೆ ಮೊಟ್ಟಮೊದಲ ಪ್ರಾಬ್ಲಂ ಅಂದ್ರೆ ಸಾಕಷ್ಟು ಭೂಮಿ ಸಿಗದಿರುವುದು. ಎರಡನೆಯದು ಅದಕ್ಕೆ ಬೇಕಾದ ಪೂರಕ ಆರ್ಥಿಕ ನೆರವು. ಜಲಕೃಷಿಯ ಮೂಲಕ ಇರುವ ಸಣ್ಣ ಜಾಗದಲ್ಲೇ ಹೆಚ್ಚಿನ ಪ್ರಮಾಣದ ಬೆಳೆ ತೆಗೆಯುವ ಮಾರ್ಗವನ್ನು ತೋರಿಸುವುದು.

*ಸುಮಾರು 20 ಚ.ಅ ಜಾಗದಲ್ಲಿ ಐದಾರು ಜನರಿರುವ ಕುಟುಂಬಕ್ಕೆ ಜಲಕೃಷಿ ಮಾಡಲು ತಗಲುವ ವೆಚ್ಚ ಸುಮಾರು ಐದರಿಂದ ಹತ್ತು ಸಾವಿರ ಆದ್ರೆ ಏನಿಲ್ಲವೆಂದರೂ 2 ಕೆಜಿಯಷ್ಟು ರಾಸಾಯನಿಕ ಮುಕ್ತ ಆಹಾರವನ್ನು ಪ್ರತಿದಿನ ಪಡೆಯಬಹುದು ಎಂದರೆ ನಂಬಲೇ ಬೇಕು.

*ಜಲಕೃಷಿ ಮಾಡಲು ಬೇಸಾಯದ ಬಗ್ಗೆ ಪೂರ್ವ ಜ್ಞಾನ ಅಥವಾ ವಿಶೇಷ ಓದಿನ ಅಗತ್ಯವಿಲ್ಲ. ತಂತ್ರಜ್ಞಾನ ಬಳಕೆ ಸಾಮಾನ್ಯರಿಗೆ ತಲುಪುವ ಉದ್ದೇಶ ಇದರಿಂದಲೆ ಸಾಧ್ಯ.

*ಜಲಕೃಷಿ ಎಂದರೆ ಪೂರ್ಣವಾಗಿ ನೀರಿನಲ್ಲೇ ಬೆಳೆಯಬಲ್ಲ ಸಸ್ಯಗಳು ಮಾತ್ರ ಎಂಬ ಕಲ್ಪನೆ ಬೇಡ. ಇಲ್ಲಿ ಅತಿ ಅಲ್ಪ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುತ್ತೇವೆ. ಖನಿಜಯುಕ್ತ ನೀರನ್ನು ಸಸಿಗೆ ಬೇಕಾದ ಪ್ರಮಾಣದಲ್ಲಿ ಹಾಕುತ್ತೇವೆ. ಹೆಚ್ಚಾದ ನೀರನ್ನು ಪುನರ್ಬಳಕೆ ಮಾಡಿ, ನೀರನ್ನು ಉಳಿಸಲಾಗುತ್ತದೆ.

*ರಾಸಾಯನಿಕ ಮುಕ್ತ ಆಹಾರ, ಖನಿಜಯುಕ್ತ, ಪೌಷ್ಟಿಕ ಆಹಾರ ಪೂರೈಸಿ, ಜನರ ಆರೋಗ್ಯ ಸುಧಾರಣೆ, ಜೀವಿತಾವಧಿ ಹೆಚ್ಚಳ, ದೃಢಕಾಯರನ್ನಾಗಿಸಲು ಮನೆಯಂಗಳದಲ್ಲಿ ಬೆಳೆದ ಬೆಳೆಯೇ ಸಾಕು ಎಂಬುದರ ಮನವರಿಕೆ ಮಾಡುವುದು.

*ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸಬಲರಾದರೆ, ನಗರಕ್ಕೆ ವಲಸೆ ಬರುವುದು ತಪ್ಪುತ್ತದೆ. ಸ್ವಾವಲಂಬಿ ಬದುಕನ್ನು ಕಲಿಸಿ, ಜನರಿಗೆ ದೊರೆಯುವಂತೆ ಮಾಡುವುದು ಜಲಕೃಷಿಯ ಉದ್ದೇಶ.

*ದೈನಂದಿನ ಆಹಾರಕ್ಕಾಗಿ ಇನ್ನೊಬ್ಬರ ಮುಂದೆ ಕೈ ಚಾಚುವಂಥ ದೃಶ್ಯ ಕಣ್ಮರೆಯಾಗಿಸುವುದು. ಹೊರ ಪ್ರದೇಶದಿಂದ ಆಮದಾಗುವ ಪ್ರಮಾಣವನ್ನು ತಕ್ಕಿಸಿ, ರಫ್ತು ಪ್ರಮಾಣವನ್ನು ಹೆಚ್ಚಿಸುವುದು. ಇದರಿಂದ ಆಹಾರ ಕೊರತೆ ಅಥವಾ ಹೆಚ್ಚಳದಿಂದ ಉಂಟಾಗುವ ಧರಣಿ, ಪ್ರತಿಭಟನೆಗಳು ಇಲ್ಲವಾದಂತಾಗುತ್ತದೆ.

*ಜಲಕೃಷಿಯಿಂದ ಬೆಳೆಯುವ ಬೆಳೆಯು ಖನಿಜಯುಕ್ತವಾಗಿದ್ದು, ಸಣ್ಣ ಪ್ರಮಾಣದ ವೈರಾಣುಗಳಿಂದನೂ ಮುಕ್ತವಾಗಿರುತ್ತದೆ.

*ನೀವು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ಇತರೆ ತರಕಾರಿ, ಸೊಪ್ಪು ಮಾರುವಂತೆ ಮಾರಾಟ ಮಾಡಬಹುದು.

*ರಫ್ತು ಪ್ರಮಾಣ ದಕ್ಕಿದರೆ ಆಹಾರ ಧಾನ್ಯಗಳ ಸಾಗಾಣಿಕೆಗಾಗಿ ಓಡಾಡುವ ವಾಹನಗಳ ದಟ್ಟಣೆ ಕಮ್ಮಿಯಾಗುತ್ತದೆ. ಇದರಿಂದ ವಾತಾವರಣ ಕಲುಷಿತಗೊಳ್ಳುವುದು ನಿಲ್ಲುತ್ತದೆ.

*ನೋಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ಅವರ ಮೈಕ್ರೋ ಬ್ಯಾಕಿಂಗ್ ತತ್ವದಡಿಯಲ್ಲಿ ಅಗತ್ಯವಿರುವವರಿಗೆ ಸಹಾಯ ಧನದ ಸಹಕಾರ ನೀಡಿ, ಸ್ವಾವಲಂಬಿಗಳಾಗುವಂತೆ ಉತ್ತೇಜಿಸಬಹುದು.

ಸರಳೀಕೃತ ಹೈಡ್ರೋಪೋನಿಕ್ಸ್

ಇದು ಮೊದಲಿಗೆ ಪ್ರಾರಂಭವಾಗಿದ್ದು, ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ನಂತರ ಯುರೋಪ್, ಮಧ್ಯಪ್ರಾಚ್ಯಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಬಳಸಲ್ಪಡುತ್ತಿರುವ ಕೃಷಿ ತಂತ್ರಜ್ಞಾನ. ನಗರ ಪ್ರದೇಶಗಳಲ್ಲಿ ಹೆಚ್ಚು ಹೊಂದುತ್ತದೆ.

*ಮಣ್ಣು,ಭೂಮಿಯ ನೆರವಿಲ್ಲದೆ ಸಸಿಗಳನ್ನು ಬೆಳೆಸುವುದು. ಆ ಮೂಲಕ ಮಣ್ಣಿನಿಂದ ಅಂಟಬಹುದಾದ ಸಣ್ಣ ಪ್ರಮಾಣದ ಕಲ್ಮಶವನ್ನೂ ಸಸಿಗೆ ತಗುಲದಂತೆ ಮಾಡಲಾಗುವುದು. ಕಡಿಮೆ ಪ್ರಮಾಣದ ಜಾಗದ ಅವಶ್ಯಕತೆ.

*ಜಲ ಶೇಖರಿತ ಸಣ್ಣ ಕುಂಡಗಳು, ಒಡೆದ ತಂಪು ಪಾನೀಯಗಳ ಬಾಟಲ್..ಇತ್ಯಾದಿ ಬಳಕೆ. ಜಲಕೃಷಿ ಮೂಲಕ ಟೊಮಾಟೊ, ಕ್ಯಾರೆಟ್, ಹುರುಳಿಕಾಯಿ, ಮೂಲಂಗಿ, ತರಾತರದ ಸೊಪ್ಪುಗಳು, ಸುಗಂಧಭರಿತ ಸಸ್ಯಗಳು, ಔಷಧಿ ಸಸ್ಯಗಳು, ಲೇಟ್ಯೂಸ್, ಧಾನ್ಯಗಳು, ಹೂ ಗಿಡಗಳು ಬದನೆ ..ಹೀಗೆ ಪಟ್ಟೆ ಬೆಳೆಯುತ್ತದೆ.

*ನಗರಗಳಲ್ಲಿ ರೂಫ್ ಟಾಪ್ ಗಾರ್ಡನ್ ಗಳು ಸಾಮಾನ್ಯ. ಮೇಲ್ಛಾವಣಿ ಇರಲಿ, ವರಾಂಡ, ಪೊರ್ಟಿಕೋ ಇರಲಿ ಜಾಗ ಎಲ್ಲೇ ಇರಲಿ ಸಣ್ಣ ಜಾಗದಲ್ಲೇ ಕೃಷಿಗೆ ಕೈ ಹಾಕಬಹುದು. ಅಲಂಕಾರಿಕ ಕೈತೋಟಗಳನ್ನು ಹಣ ತರುವ ಕೃಷಿತೋಟದಂತೆ ಮಾರ್ಪಾಡಿಸಬಹುದು.

*ಜಲಕೃಷಿಯಲ್ಲಿ ನೀರು ಅಲ್ಪಪ್ರಮಾಣದಲ್ಲಿ ಬಳಸಲಾಗುತ್ತದೆ ಹಾಗೂ ಬಳಸಿದ ನೀರನ್ನು ಮತ್ತೆ ಬಳಸಲ್ಪಡುವುದರಿಂದ ಪರಿಸರ ಸ್ಣೇಹಿ, ಕಲುಷಿತ ಮುಕ್ತ ಎನ್ನಬಹುದು. ಸಾಮಾನ್ಯ ಕೃಷಿಯಲ್ಲಿ ಆಗುವ ನೀರಿನ ಕೊರತೆ, ವಿದ್ಯುತ್ ಕೊರತೆ ಬಾಧೆ ಇಲ್ಲಿ ಆಗುವುದಿಲ್ಲ.

*ಸಹಜವಾಗಿ ಬೆಳೆವ ಸಸಿಗಳಿಗೆ ಕಾಯಿಲೆ ಕಸಾಲೆ ತಗುಲುವುದು ಅಪರೂಪ, ಕಳೆ ಅಂತೂ ಬಾಧಿಸುವುದಿಲ್ಲ. ಎಲ್ಲಕ್ಕೂ ನೈಸರ್ಗಿಕವಾಗಿ ಪರಿಹಾರ ಪಡೆಯಲಾಗುತ್ತದೆ.

*ಗೃಹಿಣಿಯರು, ಮನೆಗೆಲಸದವರು, ಮಕ್ಕಳು, ನಿವೃತ್ತರು, ಹೀಗೆ ಯಾರು ಬೇಕಾದರೂ ಇದನ್ನು ಪ್ರಾರಂಭಿಸಬಹುದು. ತಂತ್ರಜ್ಞಾನದ ನೆರವು ಸ್ವಾವಲಂಬನೆಯ ಮಂತ್ರ ಜಪಿಸಿದರೆ ಸಾಕು.

* ತೇವದ ವಾತಾವರಣದಲ್ಲಿ ಹೆಚ್ಚಾಗಿ ಬೆಳೆವ ಲೆಟ್ಯೂಸ್ ಸೊಪ್ಪನ್ನುಬೆಂಗಳೂರಿನ ಹವಾಮಾನ(ಎಲ್ಲಾ ಋತುಗಳಲ್ಲಿ) ದಲ್ಲಿ ಈ ವಿಧಾನ ಬಳಸಿ ಬೆಳಸಿ ಸವಾಲೆಸೆದಿದ್ದಾರೆ ಪ್ರಕಾಶ್.

*ಜಲಕೃಷಿಗೆ ಖರ್ಚು ವೆಚ್ಚ

20 ಚ.ಅ ಕೈತೋಟದಲ್ಲಿ 2 ಕೆಜಿಯಷ್ಟು ರಾಸಯಾನಿಕ ಮುಕ್ತ ಆಹಾರ ಪಡೆಯಲು ಸುಮಾರು 110-120 ಡಾಲರ್ ಸಾಕು. ಭಾರತದಲ್ಲಾದರೆ 10 ಸಾವಿರ ದಿಂದ 20 ಸಾವಿರದಷ್ಟು ಹಣವಿದ್ದರೆ ಕೈತೋಟ ನಿರ್ಮಿಸಿ, ನಿರ್ವಾಹಣೆ ಮಾಡಿ ಫಲ ಉಣ್ಣಲು ಸಾಕಾಗುತ್ತದೆ.

*ತಾರಸಿಯ ಮೇಲೆ ಮಾಡುವ ಈ ಕೈತೋಟದ ಸಂರಕ್ಷಣೆ ಹೇಗೆ?

ಹೆಚ್ಚೇನೂ ಬೇಕಿಲ್ಲ. ಅಧಿಕವಾಗಿ ಸೂರ್ಯನ ಬಿಸಿಲು ತಾಗದಂತೆ ಎಳೆ ಸಸಿಗಳನ್ನು ರಕ್ಷಿಸಬೇಕು. ಅದಕ್ಕೆ ನೆರಳಾಗಲು ಬಲೆ ಇದ್ದರೆ ಆಯ್ತು. ಮಳೆಯಿಂದ ರಕ್ಷಿಸಲು ಪಾಲಿಥಿನ್ ಶೀಟ್ ಬಳಸಬಹುದು.

ಜಲಕೃಷಿಕ ಲೆ. ಕ. ಸಿವಿ ಪ್ರಕಾಶ್ ಮಾತುಕತೆ ಮುಂದಿನ ಭಾಗಕ್ಕೆ>>

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X