ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದರ್ಶ ಶಿಕ್ಷಕರೆಂದರೆ ಯಾರು? ತಲೆಯೆತ್ತಿ ನೋಡುವಂಥ ಶಿಕ್ಷಕರೇಕೆ ಹುಟ್ಟುತ್ತಿಲ್ಲ?

By Staff
|
Google Oneindia Kannada News

ಸೆಪ್ಟೆಂಬರ್ 5 ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಅಥವಾ ದಶಕಗಳ ಹಿಂದಿನ ಧೋತಿ ಉಟ್ಟಕೊಂಡು ಬರುತ್ತಿದ್ದ ಮೇಷ್ಟ್ರುಗಳ ಹೆಸರು ನೆನಪಿಗೆ ಬರುತ್ತವೆಯೇ ಹೊರತು ಇಂದಿನ ಕಾಲದ ಶಿಕ್ಷಕರು ನೆನಪಿಗೆ ಏಕೆ ಬರುತ್ತಿಲ್ಲ? ಶಿಕ್ಷಕರ ಜೀವನವಿಧಾನ, ಪಾಠ ಮಾಡುವ ಧರತಿ ಎಲ್ಲ ಬದಲಾಗಿರಬಹುದು, ಆದರೆ ಇಡೀ ನಾಡೇ ತಲೆಯೆತ್ತಿ ನೋಡುವಂಥ ಮೇಷ್ಟ್ರುಗಳೇಕೆ ಹುಟ್ಟುತ್ತಿಲ್ಲ?

* ವಿವೇಕ ಪಟಗಾರ್, ಬೆಟ್ಕುಳಿ

ಗುರು ಪರಂಪರೆಯ ನಮ್ಮ ದೇಶದಲ್ಲಿ ಗುರುಗಳು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕು ಎಂದು ಸಮಾಜ ಬಯಸುತ್ತದೆ. ಇಪ್ಪತ್ತು ವರ್ಷದ ಹಿಂದೆ ಗುರುವಿಗೆ ಅದೇ ರೀತಿಯ ಮಹತ್ವ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಬಗ್ಗೆ ಮೊದಲಿದ್ದಷ್ಟು ಗೌರವ ಸಮಾಜಕ್ಕೆ ಇಲ್ಲ ಮತ್ತು ಅದು ಕಡಿಮೆಯಾಗುತ್ತಾ ಇದೆ. ಇದು ನಿಜಕ್ಕೂ ದುರದೃಷ್ಟಕರ. ಸಮಾಜ ಸಹಾ ಹಿಂದೆ ಇದ್ದ ಗುರುವಿನಂತೆ ಈಗಿನ ಶಿಕ್ಷಕರು ಇರಬೇಕೆಂದು ಅಪೇಕ್ಷೆ ಮಾಡುವುದು ಸೂಕ್ತವಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಆಗುತ್ತಿದೆ ಅದರಂತೆ ಶಿಕ್ಷಣ ಕ್ಷೇತ್ರವೂ ಬದಲಾಗುತ್ತಾ ಇದೆ. ಅದಕ್ಕೆ ತಕ್ಕಂತೆ ಗುರುವಿನ ಕಾರ್ಯನಿರ್ವಹಣೆ ಕೂಡ ಬದಲಾಗಿದೆ.

Sarvepalli Radhakrishnan

ಹಿಂದಿನ ಗುರುಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾದರಿಯಾಗಿರುತ್ತಿದ್ದರು. ಆದರೆ ಇಂದಿನ ಕೆಲವು ಗುರುವನ್ನು ಮಾದರಿಯಾಗಿರಿಸಿಕೊಂಡರೆ ಅದಕ್ಕಿಂತ ದುರಂತ ಇನ್ನೊಂದಿರಲಿಕ್ಕಿಲ್ಲ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸಮುದಾಯ ಶಿಕ್ಷಕವರ್ಗದಿಂದ ನಿರೀಕ್ಷಿಸುವ ಅಂಶಗಳು, ಶಿಕ್ಷಕರು ಇರುವ ರೀತಿ ಈ ಬಗ್ಗೆ ಅವಲೋಕಿಸ ಬೇಕಾದ ಅಗತ್ಯವಿದೆ.

ಮಕ್ಕಳಿಗೆ ಉತ್ತಮ ನೀತಿಯನ್ನು ತಿಳಿಸಬೇಕಾದ ಎಲ್ಲರೂ ಮೊದಲು ತಾವು ವಯ್ಯಕ್ತಿಕವಾಗಿ ನೈತಿಕವಾಗಿರಬೇಕು. ಅದು ಹಿಂದಿನ ಶಿಕ್ಷಕರಲ್ಲಿ ಇತ್ತು ಅವರಿಗೆ ಸಮಾಜದ ಬಗ್ಗೆ ಗೌರವ ಇತ್ತು. ಇಂದು ಶಿಕ್ಷಕ ಹುದ್ದೆ ಕೊಡುಕೊಳ್ಳುವ ವ್ಯವಹಾರಕ್ಕೆ ಸೀಮಿತವಾಗಿದೆ. ಶಿಕ್ಷಕರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತೆ ಇರಬೇಕು. ಅದು ಉಳಿದಿವರಿಗೆ ಮಾದರಿಯಾಗಬೇಕು. ಇಂದಿನ ಶಿಕ್ಷಕರು ಹೇಳುವುದೇನು ಗೊತ್ತೆ? ಶಾಲಾ ಅವಧಿಯಲ್ಲಿ ನಾನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವೆ, ಉಳಿದ ಅವಧಿ ಅದು ನನ್ನ ವೈಯಕ್ತಿಕ. ಅದನ್ನು ಪ್ರಶ್ನಿಸುವುದಕ್ಕೆ ನೀವ್ಯಾರು ಅನ್ನುತ್ತಾರೆ! ಸಾರ್ವಜನಿಕ ವ್ಯಕ್ತಿ ಯಾರೇ ಆದರೂ ಅವರು ಮೊದಲು ವೈಯಕ್ತಿಕವಾಗಿ ನೈತಿಕರಾಗಿರಬೇಕಾದ ಅಗತ್ಯವಿದೆ. ಕಾರ್ಯನಿರ್ವಹಿಸುವ ವೇಳೆಗೆ ಮಾತ್ರ ನಾವು ಬದ್ದರಾದರೆ ಅದು ಒಂದು ವ್ಯವಹಾರವೇ ವಿನಾ ಸೇವೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಈ ರೀತಿಯ ಬದಲಾವಣೆಗಳು ಆಗುತ್ತಾ ಇದ್ದರೂ ನಮ್ಮ ದೇಶದಲ್ಲಿ ಇನ್ನೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಇದ್ದಾರೆ ಎಂಬುದು ಸಮಾಧಾನದ ಸಂಗತಿ. ಸಂಪೂರ್ಣ ಶಿಕ್ಷಣ ವ್ಯವಸ್ಥೆಯೇ ವ್ಯವಹಾರಿಕವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಶಿಕ್ಷಕರು ಯಾರು ಉತ್ತಮರು ಎಂದು ಹಿಂದಿನ ಗುರುಗಳಿಗೆ ಹೋಲಿಸಿ ಹೇಳುವುದಕ್ಕಿಂತ ಸದ್ಯದಲ್ಲಿ ಕೆಲವು ಶಿಕ್ಷಕರಲ್ಲಿ ಕಂಡು ಬರುತ್ತಿರುವ ಗುಣ ಮತ್ತು ವರ್ತನೆಗಳನ್ನು ಈ ಕೆಳಗೆ ನೀಡಲಾಗಿದೆ. ಯಾರು ಆದರ್ಶ ಉತ್ತಮ ಶಿಕ್ಷಕರು ಎಂಬುದನ್ನು ಅವರವರ ವಿವೇಚನೆಗೆ ಬಿಡಲಾಗಿದೆ.

ಯಾರು ಆದರ್ಶ ಶಿಕ್ಷಕ?

* ಶಾಲೆ ಇರುವ ಊರಿನಲ್ಲಿ ಇರುವವರು.
* ನನ್ನ ಸೇವೆ ಸರ್ಕಾರಿ ಶಾಲೆಗೆ, ನನ್ನ ಮಕ್ಕಳು ಕಾನ್ವೆಂಟಿಗೆ ಎನ್ನುವವರು.
* ಶಿಕ್ಷಕ ವೃತ್ತಿಯೊಂದೆ ಉದ್ಯೋಗ ಅಂದ್ಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿರುವರು.
* ಶಿಕ್ಷಕ ವೃತ್ತಿ ಜೊತೆಗೆ ಬಡ್ಡಿ ವ್ಯವಹಾರ, ಕಲ್ಲು ಕಣಿ, ಕಟ್ಟಿಗೆ ವ್ಯವಹಾರ, ಗುತ್ತಿಗೆ ಕಾರ್ಯ, ಹೆಂಡದ ವ್ಯಾಪಾರ ಇವೆಲ್ಲವು ಇರುವುದು.
* ಯಾವುದೇ ಯೋಜನೆಯನ್ನು ಯಶಸ್ವಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತಿಸುವರು.
* ಏನೇ ಯೋಜನೆ ಬಂದರೂ ದಾಖಲೆಯಲ್ಲಿ ಯಶಸ್ವಿಗೊಳಿಸಿ ಕೊಡುವರು.
* ದಿನನಿತ್ಯ ಅಧಿಕಾರಿಗಳ/ಜನಪ್ರತಿನಿಧಿಗಳ ಬಾಲಬಡಿಯುತ್ತಾ ಅವರ ಹಿಂದೆ ಓಡಾಡುತ್ತಿರುವರು.
* ತನ್ನ ಕಾರ್ಯದಿಂದ ಏನಾದರೂ ಪ್ರಯೋಜನ ಆಗಬೇಕು ಎಂದು ಬಯಸುವರು.
* ಪ್ರತಿ ತಿಂಗಳು ವೇತನ ಬಂದರೆ ಸಾಕು. ಯಾರು ಏನಾದರೂ ಹಾಳಾಗಿಹೋಗಲಿ ಎಂಬ ಬಾವನೆ ಇರುವವರು.
* ಶಾಲಾ ಅವಧಿಯ ಜೊತೆಗೆ ಬೇರೆ ಅವಧಿಯಲ್ಲಿಯೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಶಾಲೆಯೊಂದಿಗೆ ಇರುವರು.
* ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಂದರೂ ಮಾನಸಿಕವಾಗಿ ಶಾಲೆಯೊಂದಿಗೆ ಇರದವರು.
* ಮಕ್ಕಳ ಬಿಸಿಯೂಟ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸುವವರು.
* ಮಕ್ಕಳ ಬಿಸಿಯೂಟದೊಂದಿಗೆ ತಾವು ಹೊಟ್ಟೆ ತುಂಬ ಊಟ ಮಾಡುವವರು.
* ಶಿಕ್ಷಕರ ಬಿಸಿಯೂಟ ಯೋಜನೆ ಎಂದು ತಪ್ಪಾಗಿ ಅರ್ಥೈಸಿಕೊಂಡವರು.

English summary
Who is an ideal teacher? In the modern era it is difficult to find out says vivek Patgar on the occasion of Teacher's Day, which is birthday of Sarvepalli Radhakrishnan, first Vice-President of India and educationist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X