• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಧನಕೇರಿ ಸಂಸ್ಥೆಯಿಂದ ಹುತಾತ್ಮ ಯೋಧರಿಗಾಗಿ ಗಾಯನ ನಮನ

|

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಸಂಸ್ಥೆ ಹಲವು ಸಾಹಿತ್ಯದ ಕೆಲಸಗಳಲ್ಲಿ ತೊಡಗಿರುವ ಸಂಘಟನೆ. ಈ ಮೊದಲು ಎರಡು ಭಾವಗೀತೆಯ ಧ್ವನಿಸುರುಳಿಗಳನ್ನು, ಭಾವಗೀತಾಲೋಕಕ್ಕೆ ನೀಡಿ, ಲತಾ ಹಂಸಲೇಖ, ಎಂ.ಡಿ. ಪಲ್ಲವಿ, ಮಂಗಳರವಿ, ಶ್ರೀರಕ್ಷಾ ಅರವಿಂದ್, ಶ್ವೇತರಂತಹ ದಿಗ್ಗಜರು ಹಾಡಿದ ಗೀತೆಗಳು ಗುನುಗುವ ಬೆನ್ನೆಲ್ಲೇ, ಹೊಸದೊಂದು ಪ್ರಯತ್ನವಾಗಿ ಯೋಧರ ಬಗೆಗಿನ ಭಾವಗೀತೆಗಳ ಧ್ವನಿಸುರುಳಿ ಹೊರ ತರುವ ಸಾಹಸಕ್ಕೆ ಕೈ ಹಾಕಿದೆ.

ಈ ಮೂಲಕ ಮಡಿದ ಯೋಧರಿಗಾಗಿ ಗಾಯನ ನಮನ ಮಾಡುತ್ತಾ, ಯೋಧರ ನೋವು ನಲಿವುಗಳ ಭಾವ ಸಿಂಚನದೊಂದಿಗೆ ದೇಶ ಪ್ರೇಮಿಗಳ ಹೃದಯ ಅರಳಿಸುವ, ಯೋಧರ ತ್ಯಾಗಕ್ಕೆ ನಮನ ಸಲ್ಲಿಸುವ, ಆತ್ಮಸ್ಥೈರ್ಯ ತುಂಬುವ ಸಣ್ಣ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಹುತಾತ್ಮ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿ ಕಣ್ಣೀರಿಟ್ಟ ತಂಗಿ

ಈ ಧ್ವನಿ ಸುರುಳಿಯಲ್ಲಿ, ಯೋಧನ ದೇಶಭಕ್ತಿ, ತಾಯಿ ಹಾಗು ಯೋಧ ಮಗನ ಬಾಂಧವ್ಯ, ಸೈನಿಕ ಪತಿಯನ್ನು ಯುದ್ಧಕ್ಕೆ ಕಳುಹಿಸಿ ವಿರಹ ವೇದನೆ ಅನುಭವಿಸುತ್ತಿರುವ ಪತ್ನಿಯ ಅಳಲು ಹೀಗೆ ಯೋಧನ ಜೀವನದ ಹಲವು ಕೋನಗಳನ್ನು ಒಳಗೊಂಡ ಹಾಡುಗಳಿರುತ್ತವೆ.

ಸಾಧನಕೇರಿಯ ಅಧ್ಯಕ್ಷರಾದ ವತ್ಸಲ ಸುರೇಶ್, ಆಸ್ಟ್ರೇಲಿಯಾದ ಕೃಷ್ಣಪ್ರಸಾದ್, ಡಾ. ಶಿವಕುಮಾರ್ ಮಾಲಿ ಪಾಟೀಲ್ ಗಂಗಾವತಿ, ಪ್ರಸಾದ್ ನಾಯ್ಕ್ ದೆಹಲಿ, ಶಿವಾನಂದ್ ಬಡಿಗೇರ್ ಬೆಂಗಳೂರು, ಪಾಲಾಕ್ಷ ಹಾಗಲವಾಡಿ ಗುಬ್ಬಿ ತಮ್ಮದೇ ವಿಶಿಷ್ಟ ರೀತಿಯಲ್ಲಿ ಸಾಹಿತ್ಯದ ಅಣಿಮುತ್ತುಗಳನ್ನು ಪೋಣಿಸಿದ್ದಾರೆ. ಸಾಧನಕೇರಿಯ ವತ್ಸಲರವರು ಅದರ ಉಸ್ತುವಾರಿಯನ್ನು ವಹಿಸಿರುತ್ತಾರೆ.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ: ಕಾಡುವ ಆ ಎರಡು ಘಟನೆಗಳು

"ಮೂಡಲ್ ಕುಣಿಗಲ್ ಕೆರೆ" ಚಿತ್ರಗೀತೆಯ ಖ್ಯಾತಿ, ಅಮೆರಿಕಾ ನಿವಾಸಿ ರಾಮ್ ಪ್ರಸಾದ್ ರವರ ರಾಗ ಸಂಯೋಜನೆಯಲ್ಲಿ, ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ವಾದ್ಯ ಸಂಯೋಜನೆಯಲ್ಲಿ ಈ ಗೀತೆಗಳು ಅಮೋಘವಾಗಿ ಮೂಡಿ ಬರಲಿವೆ.

ರತ್ನಮಾಲಾ ಪ್ರಕಾಶ್, ಸುಪ್ರಿಯಾ ಆಚಾರ್ಯ, ಗುರುರಾಜ್ ಹೊಸಕೋಟೆ, ಚಿನ್ಮಯಿ ಅತ್ರೇಯಸ್, ಆಸ್ಟ್ರೇಲಿಯಾದ ಪುಷ್ಪ ಜಗದೀಶ್, ಅಮೆರಿಕಾದ ರಾಮ್ ಪ್ರಸಾದ್, ಸೌಮ್ಯಶ್ರೀ, ಸುಮೇಧ, ಸೋಮ ಶೇಖರ್ ಹೀಗೆ ಹೊರದೇಶದ ಕನ್ನಡಿಗರು ಸಹ ಪಾಲ್ಗೊಳ್ಳಲಿದ್ದಾರೆ.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

ಧ್ವನಿಸುರುಳಿಯ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲು ಸಾಧನಕೇರಿ ಸನ್ನದ್ಧವಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ರಮೇಶ್ ಅರವಿಂದ್, ಚಕ್ರವರ್ತಿ ಸೂಲಿಬೆಲೆ, ದಲಿತ ಕವಿ ಸಿದ್ದಲಿಂಗಯ್ಯ ನವರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಕನ್ನಡ ಚಿತ್ರರಂಗದ ಹಲವು ಮೇರು ನಟರು ಧ್ವನಿಸುರುಳಿಯ ಬಗ್ಗೆ ಮಾತನಾಡಿ ಸಾಧನಕೇರಿಯನ್ನು ಪ್ರೊತ್ಸಾಹಿಸಿ, ಯೋಧರಿಗೊಂದು ನಮನ ಸಲ್ಲಿಸಲಿರುವುದು ನಮ್ಮ ಸುಕೃತ. ಇದಕ್ಕೆಲ್ಲ ಮುಖ್ಯ ಕಾರಣ ರಾಂಪ್ರಸಾದ್. ಅವರಿಗೆ ಸಾಧನಕೇರಿ ಅಭಾರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಯೋಧ ಧ್ವನಿಸುರುಳಿ ಸದ್ದು ಮಾಡಲಿದೆ. ಏಕ ಕಾಲದಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾದಲ್ಲಿ ಧ್ವನಿಸುರುಳಿ ಬಿಡುಗಡೆಯಾಗುತ್ತಲಿರುವುದು ವಿಶೇಷ.

English summary
Sadhanakeri Literary and Cultural Foundation is bringing out Kannada Music album to remember Indian martyrs, who have sacrificed their life for the country. Ram Prasad from USA has given music to this unique album.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X