ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ

By Staff
|
Google Oneindia Kannada News

Pu Ti Narasimhachar
ಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ದಾರ್ಶನಿಕ ಕವಿ ಡಿ ವಿ ಗುಂಡಪ್ಪ, ಪು ತಿ ನ ಅವರು ಮಾರ್ಚ್ 17 ರಂದು ಜನಿಸಿರುವುದು ವಿಶೇಷ. ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದರು. ಇವರು 'ಗೋಕುಲ ನಿರ್ಗಮನ' ಸೇರಿದಂತೆ 11 ಕವನಸಂಕಲನಗಳನ್ನು ಹೊರತಂದರು.

ಆಧ್ಯಾತ್ಮ, ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಇವರ ಕಾವ್ಯದ ಮೂಲಭೂತ ಅಂಶವಾಗಿದೆ. ಗೋಕುಲ ನಿರ್ಗಮನ ಅದ್ಭುತ ಗೀತರೂಪಕವಾಗಿ ಜನಪ್ರಿಯವಾಗಿದೆ. ಪದ್ಮಶ್ರೀ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದರೂ, ಡಿವಿಜಿ ಅವರಂತೆ ಜ್ಞಾನಪೀಠ ಪ್ರಶಸ್ತಿ ಪಡೆಯುವುದರಲ್ಲಿ ವಂಚಿತರಾದವರು. ಇವರ ಹುಟ್ಟುಹಬ್ಬದ ನೆನಪಿಗೆ ಒಂದು ಗೀತ ಸಾಹಿತ್ಯ

ರಚನೆ: ಪು.ತಿ.ನ
ಆಲ್ಬಂ: ಸ್ವರ ಮಾಧುರಿ ಭಾಗ 1 - ಷಡ್ಜ
ಸಂಗೀತ: ಸಿ.ಅಶ್ವಥ್
ಗಾಯನ: ಎಂ.ಎಸ್.ಶೀಲ, ಕೆ.ಎಸ್.ಸುರೇಖ

ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ |
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ ||

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆರೆದೆದೆಯೋಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ ||

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ|
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ ||

ಕಡಗ ಕಂಕಣ ಕಿಣಿಕಿಣಿಯೆನೆ,
ಅಡಿಗೆ ಇರುಳೆ ಝಣರೆನೆ |
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ ||

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ |
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ ||

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ |
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ ||

ಪೂರಕ ಓದಿಗೆ:ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X