ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂ

By Super
|
Google Oneindia Kannada News

ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ(1838-1894). ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು.

'ಆನಂದಮಠ' ಕಾದಂಬರಿಯಲ್ಲಿ ಬರೆದ 'ಓ ತಾಯಿ, ಭಾರತಿಯೇ, ನಿನಗೆ ನಮನ' ಎಂದು ಸಾರುವ 'ವಂದೇ ಮಾತರಂ' ಗೀತೆಯ ಮೊದಲ ಚರಣ ರಾಷ್ಟ್ರೀಯ ಗೀತೆಯಾಗಿ ಒಪ್ಪಿಕೊಳ್ಳಲಾಗಿದೆ. ಈ ಗೀತೆಗೆ ಸಂಗೀತ ಸಂಯೋಜಿಸಿದವರು ನಮಗೆ ರಾಷ್ಟ್ರಗೀತೆ ನೀಡಿರುವ ಕವಿ ರವೀಂದ್ರನಾಥ್ ಟಾಗೋರ್.

ಒಂದಾನೊಂದು ಕಾಲದಲ್ಲಿ ವಂದೆ ಮಾತರಂ ಗೀತೆಯನ್ನು 'ಜನಗಣಮನ'ಕ್ಕೆ ಸರಿಸಮಾನ ಗೀತೆಯೆಂದು ಪರಿಗಣಿಸಲಾಗಿತ್ತು. ರಾಷ್ಟ್ರಗೀತೆ ಪಠಿಸುವಾಗಿ ವಂದೇ ಮಾತರಂ ಕೂಡ ಶಾಲಾ ಮಕ್ಕಳು ಗುನುಗುನಿಸುತ್ತಿದ್ದರು. ಆದರೆ, ಇಂದಿನ ಪೀಳಿಗೆಯ ಮಕ್ಕಳಿಗೆ ವಂದೇ ಮಾತರಂ ಇತಿಹಾಸದ ಪುಟಗಳಲ್ಲಿ ಸಂದುಹೋಗಿರುವ ಒಂದು ಗೀತೆಯಾಗಿ ಮಾತ್ರ ಉಳಿದಿದೆ. ಹಿಂದಿನದು, ಮುಂದಿನದು ಏನೇ ಇರಲಿ ಕರ್ನಾಟಕ ಸರ್ಕಾರ ವಂದೇ ಮಾತರಂ ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ಹಾಡುವುದನ್ನು ಕಡ್ಡಾಯ ಮಾಡಲು ಚಿಂತಿಸುತ್ತಿರುವುದು ಸ್ವಾಗತಾರ್ಹ.


ಕಡ್ಡಾಯ ಮಾಡುವ ಮೊದಲೇ ವಂದೇ ಮಾತರಂ ಗೀತೆಯನ್ನು ನಿಮ್ಮ ಮಕ್ಕಳಿಗೆ ಹೇಳಿಸಿಕೊಡಿ. ಕೆಳಗೆ ನೀಡಿರುವ ಕೊಂಡಿ ಕ್ಲಿಕ್ಕಿಸಿ ವಂದೇ ಮಾತರಂ ಗೀತೆಯ ಕನ್ನಡ ಭಾವಾನುವಾದವನ್ನೂ ಓದಿರಿ.

ವ೦ದೇಮಾತರ೦ ಸುಜಲಾ೦ ಸುಫಲಾ೦ ಮಲಯಜ ಶೀತಲಾ೦ ಸಸ್ಯ ಶಾಮಲಾ೦ ಮಾತರಾ೦

1. ಶುಬ್ರಜ್ಯೋತ್ಸ್ನಾ ಪುಲಕಿತ ಯಾಮೀನೀ೦
ಪುಲ್ಲಕುಸುಮಿತ ದ್ರುಮದಲ ಶೋಭಿನೀ೦
ಸುಹಾಸಿನೀ೦ ಸುಮಧುರ ಭಾಷಿಣೀ೦
ಸುಖದಾ೦ ವರದಾ೦ ಮಾತರ೦ !!

2. ಕೋಟಿ ಕೋಟಿ ಕ೦ಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭಜೈಧರ್ತಖರ ಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ ಬಹುಬಲಧಾರೀಣಿ೦
ನಮಾಮಿ ತಾರಿಣೀ೦ ಮಾತರ೦!!

3. ತುಮಿ ವಿದ್ಯ ತುಮಿ ಧರ್ಮ
ತುಮಿ ಹ್ರದಿ ತುಮಿ ಮರ್ಮ ತ್ವ೦ ಹಿ ಪ್ರಾಣಾ:
ಶರೀರೇ, ಬಾಹುತೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ ಮ೦ದಿರೇ ಮ೦ದಿರೇ!!

4.ತ್ವ೦ ಹಿ ದುರ್ಗಾ ದಶಪ್ರಹರಣ ಧಾರೀಣೀ೦
ಕಮಲಾ ಕಮಮಲದಲ ವಿಹಾರಿಣೀ ವಾಣೀವಿದ್ಯಾಯಿನಿ
ನಮಾಮಿ ತ್ಯಾ೦ ನಮಾಮಿ ಕಮಲಾ೦ ಅಮಲಾ೦
ಆತುಲಾ೦ ಸುಜಲಾ೦ ಸುಫಲಾ೦ ಮಾತರ೦!!

ಶ್ಯಾಮಲಾ೦ ಸರಲಾ೦ ಸುಸ್ಮಿತಾ೦ ಭೂಷಿತಾ೦ ಧರಣೀ೦ ಮಾತರ೦

ವ೦ದೇಮಾತರ೦ ಸುಜಲಾ೦ ಸುಫಲಾ೦ ಮಲಯಜ ಶೀತಲಾ೦ ಸಸ್ಯ ಶಾಮಲಾ೦ ಮಾತರಾ೦

ವಂದೇ ಮಾತರಂನ ಕನ್ನಡ ಭಾವಾನುವಾದ

English summary
Lyrics of Bengali poet, novelist, journalist Bankim Chandra Chattopadhyay Vande Mataram. It was written in Anandmath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X