ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಫುರ್ತಡೊಸ್ ಪಿಯಾನೋ ಶೋ ರೂಂ

By Staff
|
Google Oneindia Kannada News


ಲೂಯಿ ಬ್ಯಾಂಕ್ಸ್, ಬೆಂಗಳೂರು, ಜ.31 : ಬೆಂಗಳೂರಿನ ಸಂಗೀತಪ್ರಿಯರಿಗೊಂದು ಸಂತಸದ ಸುದ್ದಿ. ಭಾರತದ ಖ್ಯಾತ ಸಂಗೀತ ಸಾಧನಗಳ ಬೃಹತ್ ಮಳಿಗೆ ಇಲ್ಲಿ ಆರಂಭಗೊಂಡಿದೆ. ಖ್ಯಾತ ಜಾಜ್ ಕಲಾವಿದ ಲೂಯಿ ಬ್ಯಾಂಕ್ಸ್ ಅವರು ಪಿಯಾನೋ ಮಳಿಗೆಯನ್ನು ಗಾಂಧೀನಗರದಲ್ಲಿ ಬುಧವಾರ ಉದ್ಘಾಟಿಸಿದರು.

ಈ ಶೋರೂಂನಲ್ಲಿ ಪ್ರಪಂಚದ ಅತ್ಯುತ್ತಮ ಬ್ರ್ಯಾಂಡ್‌ ಪಿಯಾನೋಗಳು ಮಾತ್ರವಲ್ಲದೆ ಎಲ್ಲ ಬಗೆಯ ಸಂಗೀತ ಕುರಿತು ಪುಸ್ತಕಗಳು ಲಭ್ಯವಿವೆ. ಪ್ರಮುಖ ಬ್ರ್ಯಾಂಡ್‌ಗಳಾದ ಸ್ಟಿನ್ ವೇ ಆಂಡ್ ಸನ್ಸ್, ಬೊಸ್ಟನ್, ಇಸ್ಸೆಕ್ಸ್, ಯಮಹ, ಬಿ. ಸ್ಟೇಯ್ನರ್, ರಿತ್ಮುಲರ್, ಪರ್ಲ್ ರಿವರ್ ಮತ್ತು ವಿಸ್ಕೌಂಟ್ ಸಾಮಾಗ್ರಿಗಳು ಇಲ್ಲಿ ಸಿಗುತ್ತವೆ.

1865ರಲ್ಲಿ ಪ್ರಾರಂಭವಾದ ಫುರ್ತಡೊಸ್ ಕಂಪನಿ ಕಳೆದ ಹಲವು ವರ್ಷಗಳಿಂದ ದೇಶಾದ್ಯಂತ ಸಂಗೀತೊಪಕರಣಗಳನ್ನು ಖರೀದಿಸಿ ಅವುಗಳನ್ನು ವಿವಿಧೆಡೆ ವಿತರಿಸುವಂತಹ ಕಾರ್ಯವನ್ನು ಮಾಡುತ್ತ ಬಂದಿದೆ. ಪುರ್ತಡೊಸ್ ಇನ್ನೆರಡು ಸಂಗೀತ ಸಂಸ್ಥೆಗಳಾದ ಮ್ಯೂಸಿ ಮ್ಯೂಸಿಕಲ್ ಮತ್ತು ಪೇಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಈ ಕಂಪನಿಗಳು ಜಂಟಿಯಾಗಿ ಈಗಾಗಲೇ ಪುಣೆಯಲ್ಲಿ ಮತ್ತು ಮಂಗಳೂರಿನಲ್ಲಿ ಸಂಗೀತದ ಮಳಿಗೆಗಳನ್ನು ಪ್ರಾರಂಭಿಸಿವೆ.

ಭಾರತೀಯ ಸಂಗೀತ ಮಾರುಕಟ್ಟೆಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಪುರ್ತಡೋಸ್ ಪ್ರಪಂಚದ ಉತ್ತಮ ಗುಣಮಟ್ಟದ ಸಂಗೀತದ ಸಾಮಾಗ್ರಿಗಳನ್ನು ಕಡಿಮೆ ಬೆಲೆಗೆ ಒದಗಿಸುವುದಲ್ಲದೇ ಪ್ರದರ್ಶನ, ವರ್ಕ್ ಶಾಪ್, ಕಲಾವಿದರ ಬೇಟಿ ಮುಂತಾದ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ. ಮಾರ್ಚ್ 15ರವರೆಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಪೀಯಾನೋಗಳನ್ನು ಮಾರಾಟಮಾಡಲಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X