• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧಾರ್ವಾಡ

By *ಮೃತ್ಯುಂಜಯ ಕಲ್ಮಠ, ಮುಂಡರಗಿ
|

living legend gangubai hanagalಧಾರವಾಡ, ಸೆ. 22 : ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರ ಧಾರವಾಡದ ಸ್ವಗೃಹವನ್ನು ರಾಜ್ಯ ಸರ್ಕಾರ 25 ಲಕ್ಷ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ವಸ್ತು ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ. ಮಂಗಳವಾರ (ಸೆ.23) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಹಿಂದೂಸ್ತಾನಿ ಸಂಗೀತದ ಮೇರು ಗಾಯಕಿಯ ಮನೆಯಲ್ಲಿ ಅವರು ಬಳಸುತ್ತಿದ್ದ, ಬಳಸುವ ಅನೇಕಾನೇಕ ಸಂಗೀತ ವಾದ್ಯಗಳು ಮತ್ತು ಗಂಗೂಬಾಯಿ ಅವರಿಗೆ ಪ್ರಿಯವಾದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುವ ಈ ಸ್ವರ ಸುಧಾಲಯದ ಉದ್ಘಾಟನೆಗೆ ಈ ಭಾಗದ ಸಂಗೀತ ಪ್ರಿಯರು ಮತ್ತು ಗಂಗೂಬಾಯಿ ಅವರ ಶಿಷ್ಯರು, ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ಗಂಗೂಬಾಯಿ ಹಾನಗಲ್ 1913 ಮಾರ್ಚ್ 5 ರಂದು ಹಾವೇರಿ ಜಿಲ್ಲೆಯ ಹಾನಗಲ್ಲಿನಲ್ಲಿ ಜನಿಸಿದರು. ಆದರೆ ಬಾಲ್ಯ, ಬೆಳೆದಿದ್ದೆಲ್ಲ ಧಾರವಾಡದಲ್ಲಿ. ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ಇಯತ್ತೆಯವರೆಗೆ ನಡೆಯಿತು.

ಗಂಗೂಬಾಯಿಯವರು ಸಂಗೀತ ಕಚೇರಿಗಳಿಗಾಗಿ ಭಾರತದ ಉದ್ದಗಲದಲ್ಲೆಲ್ಲ ಸುತ್ತಿದ್ದಾರೆ. ಎಲ್ಲೆಡೆಗೂ ಶ್ರೋತೃಗಳ ಮನಸ್ಸನ್ನು ಗೆದ್ದಿದ್ದಾರೆ. ಅಲ್ಲದೆ 1958ರಲ್ಲಿ ನೇಪಾಳ,ಪಾಕಿಸ್ತಾನ, ಅಮೇರಿಕಾ, ಕೆನಡಾ, ಜರ್ಮನಿ, ಫ್ರಾನ್ಸ್ ದೇಶಗಳಿಗೂ ಪ್ರಯಾಣಿಸಿ ಭಾರತೀಯ ಸಂಗೀತದ ಸವಿಯನ್ನು ಉಣಬಡಿಸಿದ್ದಾರೆ. ಗುರುಗಳಾದ ಸವಾಯಿ ಗಂಧರ್ವರ ಹೆಸರಿನಲ್ಲಿ ಕುಂದಗೋಳದಲ್ಲಿ ಪ್ರತಿವರ್ಷ "ಸಂಗೀತೋತ್ಸವ" ನಡೆಸುತ್ತಿದ್ದಾರೆ.

ಗಂಗೂಬಾಯಿಯವರ ಹಾಡುಗಾರಿಕೆಯನ್ನು ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ ಬಡೆ ಗುಲಾಮ್ ಅಲಿ ಖಾನ್, ಉಸ್ತಾದ ಫಯಾಜ್ ಖಾನ್, ಪಂಡಿತ ಓಂಕಾರನಾಥ್, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮೊದಲಾದವರು ಮೆಚ್ಚಿಕೊಂಡಿದ್ದರು. ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರ ಪ್ರೋತ್ಸಾಹದಿಂದಲೇ ಗಂಗೂಬಾಯಿಯವರು ಕೊಲ್ಕತ್ತಾದಲ್ಲಿಯ ಅಖಿಲ ಭಾರತ ಸಂಗೀತ ಸಮ್ಮೇಳನಕ್ಕೆ ಹೋಗಿ ಬಂದರು. ಗಾನಮುದ್ರಿಕೆ ಹಾಗು ಆಕಾಶವಾಣಿ ಕಾರ್ಯಕ್ರಮಗಳಲ್ಲದೆ, ಗಂಗೂಬಾಯಿಯವರು ಮುಂಬಯಿಯಲ್ಲಿಯ ಅನೇಕ ಸಂಗೀತ ಕಚೇರಿಗಳಲ್ಲಿ ಸಹ ಭಾಗವಹಿಸಿದ್ದಾರೆ.

ಗಂಗೂಬಾಯಿ ಹಾನಗಲ್ಲರಿಗೆ ಲಭಿಸಿರುವ ಪ್ರಶಸ್ತಿಗಳು ಕೆಳಗಿನಂತಿವೆ.

* 1962—ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

* 1971—ಪದ್ಮಭೂಷಣ ಪ್ರಶಸ್ತಿ

* 1973—ಕೇಂದ್ರ ಸಂಗೀತ ನಾಟಕ ಅಕಾಡೆಮಿ

* 1984—ಮಧ್ಯಪ್ರದೇಶ ಸರಕಾರದಿಂದ ತಾನಸೇನ ಪ್ರಶಸ್ತಿ

* 1987—ರೂಹೆ ಘಜಲ್ ಪ್ರಶಸ್ತಿ

* 1989—ಹಫೀಝ ಅಲಿಖಾನ ಪ್ರಶಸ್ತಿ

* 1990—ಭುವಾಲಿಕಾ ಪ್ರಶಸ್ತಿ

* 1992—ಕರ್ನಾಟಕ ಸರಕಾರದಿಂದ ಕನಕ-ಪುರಂದರ ಪ್ರಶಸ್ತಿ

* 1993—ಸುಜನ ಗೌರವ ಪುರಸ್ಕಾರ

* 1993—ಗೋದಾವರಿ ಪ್ರಶಸ್ತಿ

* 1993—ಅಸ್ಸಾಮ ಸರಕಾರದಿಂದ ಶ್ರೀಮಂತ ಶಂಕರದೇವ ಪ್ರಶಸ್ತಿ

* 1994-95—ಸಂಗೀತರತ್ನ ಟಿ.ಚೌಡಯ್ಯ ಸ್ಮಾರಕ ರಾಷ್ಟ್ರ ಪ್ರಶಸ್ತಿ

* 1997—ದೀನಾನಾಥ ಮಂಗೇಶಕರ ಪ್ರಶಸ್ತಿ

* 1997—ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿ

* 1997—ವರದರಾಜ ಆದ್ಯ ಪ್ರಶಸ್ತಿ

* 1998—ಮಾಣಿಕರತ್ನ ಪ್ರಶಸ್ತಿ

* 2000—ಎಸ್.ಆರ್.ಪಾಟೀಲ ಪ್ರತಿಷ್ಠಾನ ಪ್ರಶಸ್ತಿ

* 2000—ಆಚಾರ್ಯ ಪಂಡಿತ ರಾಮನಾರಾಯಣ ಪ್ರತಿಷ್ಠಾನ ಪ್ರಶಸ್ತಿ

* ಬೇಗಮ್ ಅಖ್ತರ ಪ್ರಶಸ್ತಿ

* ಕಾಶೀ ನಾಗರೀ ಪ್ರಚಾರಕೀ ಸಭಾ ಪ್ರಶಸ್ತಿ

ಡಾಕ್ಟರೇಟ್/ಪದವಿ

* 1978—ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್

* 1995— ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ

* 1998—ದೆಹಲಿ ವಿಶ್ವವಿದ್ಯಾಲಯದ ಡಾಕ್ಟರೇಟ್

* ಗುಲಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್

* ಪ್ರಯಾಗ ಸಂಗೀತ ಸಮಿತಿಯ ಪದವಿ

* ಗಂಧರ್ವ ಮಹಾವಿದ್ಯಾಲಯದ ಮಹಾಮಹೋಪಾಧ್ಯಾಯ ಪದವಿ

ಬಿರುದುಗಳು

* 1948— ಬನಾರಸದಲ್ಲಿ ಭಾರತೀಕಂಠ ಬಿರುದು

* 1969—ಪ್ರಯಾಗದಲ್ಲಿ ಸ್ವರಶಿರೋಮಣಿ ಬಿರುದು.

* ಗಾಯನ ಸಮಾಜ, ಬೆಂಗಳೂರು ನೀಡಿದ ಸಂಗೀತ ಕಲಾರತ್ನ ಬಿರುದು

* ತ್ಯಾಗರಾಜ ಉತ್ಸವ ಸಮಿತಿ, ತಿರುಪತಿ ನೀಡಿದ ಸಪ್ತಗಿರಿ ಸಂಗೀತ ವಿದ್ವನ್ಮಣಿ ಬಿರುದು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X